ಕೋಲಾರ ಜಿಲ್ಲಾ ಎನ್ ಎಸ್ ಯು ಐ ನೂತನ ಅಧ್ಯಕ್ಷರಾಗಿ ನಿಹಾಲ್ ತರೀನ್ ರವರನ್ನು ಆಯ್ಕೆ ಮಾಡಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಜ್ಯ ಅಧ್ಯಕ್ಷರಾದ ಕೀರ್ತಿ ಗಣೇಶ್ ರವರು ಆಯ್ಕೆ ಮಾಡಿ ಆದೇಶ ಮಾಡಿದ್ದಾರೆ.
ವಿದ್ಯಾರ್ಥಿಗಳನ್ನು ಸಂಘಟನೆ ಮಾಡಬೇಕು ಜಿಲ್ಲೆಯಾದ್ಯಂತ ಎನ್ ಎಸ್ ಯು ಐ ಸಂಘಟನೆಯನ್ನು ಬಲಪಡಿಸಬೇಕು, ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದ್ದಾರೆ.
ನನಗೆ ಎನ್ ಎಸ್ ಯು ಐ ಅಧ್ಯಕ್ಷ ಸ್ಥಾನ ನೀಡಿದ ರಾಜ್ಯ ಅಧ್ಯಕ್ಷರಾದ ಕೀರ್ತಿ ಗಣೇಶ್, ಹಾಗೂ ಕೋಲಾರ ಜಿಲ್ಲಾ ಎನ್ ಎಸ್ ಯು ಐ ಮಾಜಿ ಅಧ್ಯಕ್ಷರಾದ ಭರತ್ ರಾಯ್ ರವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ರಾಜ್ಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗಿ ಕೋಲಾರ ಜಿಲ್ಲೆಯಲ್ಲಿ ಬಲಿಷ್ಠವಾಗಿ ಸಂಘಟನೆ ಕಟ್ಟುವ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷವನ್ನು 2028 ರಲ್ಲಿಯು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಬರುವ ಕಾಲೇಜು ಮಟ್ಟದ ಚುನಾವಣೆ ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ರಾಜ್ಯ ಅಧ್ಯಕ್ಷರಾದ ಕೀರ್ತಿ ಗಣೇಶ್ ರವರ ನೇತೃತ್ವದಲ್ಲಿ ಕೆಲಸ ಮಾಡುತ್ತೇನೆ.
ಕಳೆದ ಬಾರಿಯೂ ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷರಾಗಿದ್ದ ಭರತ್ ಅಣ್ಣನವರು ಹಾಗೂ ರಿಯಾಜ್ ಗೋರು ಉಪಾಧ್ಯಕ್ಷ ರಾಗಿದ್ದ ಸಂದರ್ಭದಲ್ಲಿ ನಾನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ, ನನ್ನ ತಂದೆಯಾದ ದಿವಂಗತ ಮುಶೀರ್ ರವರು ಸಹ ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ ನಾನು ತಂದೆಯಂತೆ ಎಲ್ಲಾ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ.
ಇದನ್ನು ಓದಿದ್ದೀರಾ..?ಕೋಲಾರ | ಸುಳ್ಳು ಹೇಳುವವರ ಬಾಯಿ ಲೌಡ್ ಸ್ಪೀಕರ್ ಆಗಿದೆ, ಸತ್ಯ ಹೇಳುವವರ ಬಾಯಿಗೆ ಲಕ್ವಾ ಹೊಡೆದಿದೆ : ರಮೇಶ್ ಕುಮಾರ್
ನನಗೆ ಕೋಲಾರ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಸ್ಥಾನ ಲಭಿಸಿದಕ್ಕೆ ಕೋಲಾರ ಜನಪ್ರಿಯ ಶಾಸಕರಾದ ಕೋತ್ತೂರ್ ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಅನೀಲ್ ಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಂಗಾರಪೇಟೆ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ಶಾಸಕರಾದ ನಂಜೆಗೌಡ, ಕೆಜಿಎಫ್ ಶಾಸಕಿ ರೂಪ ಶಶೀಧರ್, ಆದಿನಾರಾಯಣ, ಮುರಳಿಗೌಡ, ಸೈಯದ್ ಅಪ್ಸರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಫೈರೋಜ್ ಖಾನ್, ಅಂಬರೀಶ್, ಭರತ್ ರಾಯ್ , ತೌಕೀರ್ ಅಹ್ಮದ್, ರಾಜ್ಯ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ಕೇಶವ್, ದಿನೇನ್, ಸೈಯದ್ ಆಫ್ರಿದ್, ರಿಯಾಜ್ ಗೋರು, ಎಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.




