ಬೆಂಗಳೂರು ಮತ್ತು ಬೆಳಗಾವಿ ನಡುವೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ (SWR) ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
Train on Demand (TOD) ಮಾದರಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT), ಬೆಂಗಳೂರು-ಬೆಳಗಾವಿ ನಡುವೆ 06551/06552 ಸಂಖ್ಯೆಯ ವಿಶೇಷ ರೈಲು ಆ.20ರಿಂದ ಸಂಚರಿಸಲಿದ್ದು, ಒಟ್ಟು ನಾಲ್ಕು ಟ್ರಿಪ್‌ಗಳನ್ನು ಪೂರ್ಣಗೊಳಿಸಲಿದೆ.
06551 SMVT ಬೆಂಗಳೂರು-ಬೆಳಗಾವಿ ವಿಶೇಷ ರೈಲು ಆ.20 (ಗುರುವಾರ) ಮತ್ತು ಆ.22 (ಶನಿವಾರ) ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.
06552 ಬೆಳಗಾವಿ-SMVT ಬೆಂಗಳೂರು ವಿಶೇಷ ರೈಲು ಆ.21 (ಶುಕ್ರವಾರ) ಮತ್ತು ಆ.23 (ಭಾನುವಾರ) ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಮುಂಜಾನೆ 5 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.
ವಿಶೇಷ ರೈಲು ಎಲೆಕ್ಟಿಕ್ ಇಂಜಿನ್ ಮೂಲಕ ಸಂಚರಿಸಲಿದ್ದು, ಬೆಂಗಳೂರು-ಬೆಳಗಾವಿ ನಡುವೆ ಪ್ರಯಾಣಿಸುವವರಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ದೊರೆಯಲಿದೆ.



