ಗಾಳಿಪಟದ ಮಾಂಜಾ ದಾರ ಬೈಕ್ ಚಲಾಯಿಸುತ್ತಿದ್ದ ಯುವಕನ ಕೊರಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ನಗರದ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಮೇಲ್ಲೇತುವೆಯಲ್ಲಿ ನಡೆದಿದೆ.
ಮಹಾಂತೇಶ ನಗರದ ದ್ರುವಾ ಸಂತೋಷ ಕರ್ಜಗಿ (19) ಮೃತಪಟ್ಟ ಯುವಕ.
ರಾಷ್ಟ್ರೀಯ ಹೆದ್ದಾರಿ ಬಳಿಯ ಬ್ರಿಡ್ಜ್ ಕಡೆಯಿಂದ ಪಲ್ಸರ್ ಬೈಕ್‌ನಲ್ಲಿ ಮಹಾಂತೇಶ ನಗರದ ಕಡೆಗೆ ತೆರಳುತ್ತಿದ್ದ ವೇಳೆ ದ್ರುವಾ ಅವರ ಕೊರಳಿಗೆ ಮಾಂಜಾ ದಾರ ಸಿಲುಕಿಕೊಂಡಿದೆ. ದಾರ ಕುತ್ತಿಗೆಗೆ ಬಿಗಿಯಾಗಿ ಸಿಲುಕಿಕೊಂಡ ಪರಿಣಾಮ ತೀವ್ರ ರಕ್ತಸ್ರಾವವಾಗಿ, ಬೈಕ್ ಮೇಲೆಯೇ ಕುಳಿತಿದ್ದ ಸ್ಥಿತಿಯಲ್ಲಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯ ಕುರಿತು ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



