ಬೆಳಗಾವಿ | ಚರಕ ಕೇವಲ ನೂಲು ತೆಗೆಯುವ ಸಾಧನವಾಗಿರಲಿಲ್ಲ ಸ್ವಾವಲಂಬನೆಯ ಸಂಕೇತವಾಗಿತ್ತು

Date:

ಜಗತ್ತು ಗುರಿಯಿಲ್ಲದ ನಾಗಾಲೋಟದಲ್ಲಿ ಓಡುತ್ತಿದೆ. ನಿನ್ನೆ ಹೊಸತಾಗಿದ್ದ ತಂತ್ರಜ್ಞಾನ ಇಂದು ಹಳೆಯದಾಗಿ ಕಾಣುತ್ತಿದೆ. ಬೆರಳ ತುದಿಯಲ್ಲೇ ಜಗತ್ತು ತೆರೆದುಕೊಳ್ಳುತ್ತಿದೆ. ಆದರೆ ಮತ್ತೊಂದೆಡೆ ಮಾನವನ ಮಹತ್ವಾಕಾಂಕ್ಷೆ ಮತ್ತು ದುರಾಸೆಯಿಂದ ಜೀವಸಂಕುಲವೇ ಅಪಾಯ ಎದುರಿಸುತ್ತಿದೆ.( ಚರಕ )

- Advertisement -

ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ದೇಶಗಳು ಸಂಪತ್ತು ಮತ್ತು ಅಧಿಕಾರಕ್ಕಾಗಿ ಬಡಿದಾಡುತ್ತಿವೆ. ಮಾನವಕುಲವನ್ನು ರಕ್ಷಿಸಬೇಕಾದ ಧರ್ಮಗಳು ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕುತ್ತಿವೆ. ಹಣದ ಹಿಂದೆ ಓಡುವ ಬದುಕಿನಲ್ಲಿ ಮಾನವೀಯ ಸಂಬಂಧಗಳೂ ದುರ್ಬಲವಾಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ರಾಜಕೀಯದಲ್ಲಿ ಮಹಿಳೆಯರ ಮೇಲೆ ಗಂಡಾಳ್ವಿಕೆಯ ಸಾಂಸ್ಕೃತಿಕ ರಾಜಕಾರಣ

ರಾಜಕೀಯದ ಮೇಲೆ ಪುರುಷ ಪ್ರಧಾನ ಹಿಡಿತ ಹೇಗೆ ನಿರ್ಮಾಣವಾಯಿತು? ರಾಜಕೀಯವೆಂದರೆ, ಜನರ ಬದುಕಿನ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಾರ್ವಜನಿಕ ಕ್ಷೇತ್ರ. ಆದರೆ ಶತಮಾನಗಳ ಕಾಲ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಅದನ್ನು...

ಸಾಫ್ಟ್‌ವೇರ್ ಕೈಗೊಂಬೆಯಾದ ಚುನಾವಣಾ ವ್ಯವಸ್ಥೆ: ದೆಹಲಿಯಿಂದಲೇ ಇಡೀ ದೇಶದ...

ತಂತ್ರಜ್ಞಾನವು ಚುನಾವಣಾ ಪ್ರಕ್ರಿಯೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಇರಬೇಕೇ ವಿನಃ, ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು ಅಲ್ಲ. ಒಬ್ಬ ಐಟಿ ಅಧಿಕಾರಿಯ ವಿವೇಚನಾರಹಿತ ನಿರ್ಧಾರಗಳು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಸಾಂಸ್ಥಿಕ ಮೌನವು ಇಡೀ ಚುನಾವಣಾ...

ಇಂತಹ ವಿರೋಧಾಭಾಸಗಳ ನಡುವೆ ಮತ್ತೊಮ್ಮೆ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬ ಬಂದಿದೆ.

ಆದರೆ ಭಾಪು, ವಿಪರ್ಯಾಸವೆಂದರೆ ಇಂದು ಕೆಲವರಿಗೆ ನಿಮ್ಮ ವಿಚಾರಗಳು ಅಸಂಗತವಾಗಿ ಕಾಣುತ್ತಿವೆ. ಕೆಲವರು ಸ್ವಾತಂತ್ರ್ಯ ಹೋರಾಟದಲ್ಲಿನ ನಿಮ್ಮ ಪಾತ್ರವನ್ನೇ ಕಡಿಮೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇಂದಿನ ಹಲವು ಸಮಸ್ಯೆಗಳಿಗೆ ನಿಮ್ಮನ್ನೇ ಕಾರಣವೆಂದು ಹೇಳುತ್ತಿದ್ದಾರೆ.

ಆದರೆ ಗಾಂಧೀಜಿಯವರನ್ನು ಕೇವಲ ಸ್ವಾತಂತ್ರ್ಯ ಹೋರಾಟಗಾರರೆಂದು ನೋಡುವುದು ಅವರ ವ್ಯಕ್ತಿತ್ವವನ್ನು ಸೀಮಿತಗೊಳಿಸಿದಂತಾಗುತ್ತದೆ. ಅವರು ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ, ಮಾನವತಾವಾದಿ ಮತ್ತು ಅಹಿಂಸೆಯ ಪ್ರತಿಪಾದಕರಾಗಿದ್ದರು.

‘ಕಣ್ಣಿಗೆ ಕಣ್ಣು’ ಎಂಬ ನೀತಿಯಿಂದ ಜಗತ್ತೇ ಕುರುಡಾಗುತ್ತದೆ ಎಂದು ಗಾಂಧೀಜಿ ಎಚ್ಚರಿಸಿದ್ದರು. ಇಂದು ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಿದೆ. ಮಧ್ಯಪ್ರಾಚ್ಯದಲ್ಲೂ ಸಂಘರ್ಷಗಳು ನಡೆಯುತ್ತಿವೆ. ಆಯುಧಗಳು ಹೆಚ್ಚಾದರೂ ಶಾಂತಿ ದೂರವಾಗುತ್ತಿರುವುದನ್ನು ಜಗತ್ತು ಕಾಣುತ್ತಿದೆ.

‘ಪ್ರಕೃತಿ ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬಲ್ಲದು; ದುರಾಸೆಯನ್ನಲ್ಲ’ ಎಂಬ ಗಾಂಧೀಜಿಯವರ ಚಿಂತನೆ ಇಂದು ಹೆಚ್ಚು ಪ್ರಸ್ತುತವಾಗಿದೆ. ಅರಣ್ಯನಾಶ, ಗಣಿಗಾರಿಕೆ, ಮರಳು ದಂಧೆ, ಮಿತಿಮೀರಿದ ನಗರೀಕರಣ ಸೇರಿದಂತೆ ಹಲವು ಕಾರಣಗಳಿಂದ ಪರಿಸರದ ಸಮತೋಲನ ಹದಗೆಡುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಬರದಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದೆ.

ಆರ್ಥಿಕ ಅಭಿವೃದ್ಧಿಯ ನಡುವೆಯೂ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾವಲಂಬನೆ, ಸರಳತೆ ಮತ್ತು ದುಡಿಯುವ ಕೈಗಳ ಘನತೆಯನ್ನು ಸಾರಿದ ಗಾಂಧೀಜಿಯವರ ವಿಚಾರಗಳು ಮತ್ತೆ ನೆನಪಾಗುತ್ತವೆ.

ಚರಕ ಕೇವಲ ನೂಲು ತೆಗೆಯುವ ಸಾಧನವಾಗಿರಲಿಲ್ಲ. ಅದು ಸ್ವಾವಲಂಬನೆಯ ಸಂಕೇತವಾಗಿತ್ತು. ಕೋಟ್ಯಂತರ ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿತು. ಸ್ವದೇಶಿ ಚಿಂತನೆ ಬೆಳೆಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಒಗ್ಗೂಡಿಸುವ ಸಂಕೇತವಾಯಿತು.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಭೇದಭಾವದ ವಿರುದ್ಧ ಗಾಂಧೀಜಿ ನಿರಂತರವಾಗಿ ಹೋರಾಡಿದರು. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಸಾಮರಸ್ಯ ಇರಬೇಕು ಎಂಬುದನ್ನು ಪ್ರತಿಪಾದಿಸಿದರು.

ಸತ್ಯ, ಅಹಿಂಸೆ, ಸರಳತೆ, ಸ್ವಾವಲಂಬನೆ ಮತ್ತು ಮಾನವೀಯತೆ ಎಂಬ ಮೌಲ್ಯಗಳು ಇಂದಿಗೂ ಅಗತ್ಯವಾಗಿವೆ. ಗಾಂಧೀಜಿಯವರ ವಿಚಾರಗಳು ಭಾರತವನ್ನು ದಾಟಿ ವಿಶ್ವದ ಹಲವು ನಾಯಕರಿಗೂ ಸ್ಫೂರ್ತಿಯಾಗಿವೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಆಲ್ಬರ್ಟ್‌ ಐನ್‌ಸ್ಟೀನ್, ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ಮಹನೀಯರು ಗಾಂಧೀಜಿಯವರಿಂದ ಪ್ರೇರಣೆ ಪಡೆದಿದ್ದಾರೆ.

ಸಮಾಜದ ಸಾಮರಸ್ಯಕ್ಕಾಗಿ ಕೊನೆಯುಸಿರಿನವರೆಗೂ ದುಡಿದ ಗಾಂಧೀಜಿ, ಅದೇ ಸಮಾಜದ ದ್ವೇಷಕ್ಕೆ ಬಲಿಯಾದರು. ಜಗತ್ತಿನ ಹಲವು ಭಾಗಗಳಲ್ಲಿ ಗೌರವ ಪಡೆದ ಅವರು ತಮ್ಮದೇ ದೇಶದಲ್ಲಿ ಟೀಕೆಗೂ ಗುರಿಯಾಗುತ್ತಿರುವುದು ವಿಪರ್ಯಾಸ.

ಗಾಂಧೀಜಿಯವರ ಬಗ್ಗೆ ತಿಳಿಯದೆ, ಅವರ ಚರಿತ್ರೆಯನ್ನು ಅಧ್ಯಯನ ಮಾಡದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಮತ್ತು ಅಪಪ್ರಚಾರ ಹರಡುವುದು ಸರಿಯಲ್ಲ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಹರಿದಾಡುವ ಪ್ರತಿಯೊಂದು ಮಾಹಿತಿಯನ್ನೂ ಸತ್ಯವೆಂದು ನಂಬುವ ಬದಲು ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ.

ಗಾಂಧೀಜಿಯವರ ವಿಚಾರಗಳನ್ನು ಒಪ್ಪುವುದು ಅಥವಾ ಒಪ್ಪದಿರುವುದು ಬೇರೆ ವಿಚಾರ. ಆದರೆ ಅವರ ಜೀವನ, ಹೋರಾಟ ಮತ್ತು ಚಿಂತನೆಗಳನ್ನು ತಿಳಿದುಕೊಂಡು ಮಾತನಾಡುವುದು ಸಮಾಜದ ಜವಾಬ್ದಾರಿ.

ಗಾಂಧೀಜಿ ನಮ್ಮ ನಡುವೆ ದೈಹಿಕವಾಗಿ ಇಲ್ಲದಿದ್ದರೂ ಅವರ ವಿಚಾರಗಳು ಇನ್ನೂ ಜೀವಂತವಾಗಿವೆ.

ಗಾಂಧೀಜಿ ನಿಧನರಾದ ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ:

“ನಮ್ಮ ನಡುವಿದ್ದ ದೀಪವಿಂದು ಆರಿತು ಎಂದು ಹೇಳಿದ್ದೆ. ಆದರೆ ಈಗ ಅನಿಸುತ್ತಿದೆ-ಆ ದೀಪ ಆರಿಲ್ಲ, ಆರುವುದೂ ಇಲ್ಲ. ಅದು ನಿರಂತರ ಬೆಳಗುತ್ತಿರುತ್ತದೆ. ನಮ್ಮೆಲ್ಲರನ್ನೂ ನ್ಯಾಯಮಾರ್ಗದಲ್ಲಿ ನಡೆಯಲು ದಾರಿ ತೋರುತ್ತಲೇ ಇರುತ್ತದೆ.”

ಬರಹ: ಶ್ರೀಕಂಟದತ್ತ ಹೆಚ್ ಎಸ್

ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮಾಂಜಾ ದಾರಕ್ಕೆ ಸಿಲುಕಿ ಬೈಕ್ ಸವಾರ ಸಾವು

ಗಾಳಿಪಟದ ಮಾಂಜಾ ದಾರ ಬೈಕ್‌ ಚಲಾಯಿಸುತ್ತಿದ್ದ ಯುವಕನ ಕೊರಳಿಗೆ ಸಿಲುಕಿ ಸ್ಥಳದಲ್ಲೇ...

ಬೆಳಗಾವಿ | ಇನ್‌ಸ್ಟಾಗ್ರಾಂ ಹನಿಟ್ರ್ಯಾಪ್ ಮೂಲಕ ಯುವಕನ ಕೊಲೆ: ನಾಲ್ವರ ಬಂಧನ

ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದ್ದು, ಹಳೆ ಹಣಕಾಸಿನ...

ಬೆಳಗಾವಿ | ಮತಕಳ್ಳತನ ಆರೋಪಕ್ಕೆ ಸಾಕ್ಷ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ: ಜಗದೀಶ್ ಶೆಟ್ಟರ್

ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು...