ಭಾಲ್ಕಿ | ಯುವ ಸಮೂಹ ರಕ್ತದಾನಕ್ಕೆ ಮುಂದಾಗಿ : ಸಚಿವ ಈಶ್ವರ ಖಂಡ್ರೆ

Date:

ರಕ್ತ ಕೊಡಲು ಯಾರು ಹೆದರಬಾರದು. ಅರ್ಹ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು
ಸ್ವಇಚ್ಛೆ, ಧೈರ್ಯದಿಂದ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹೇಳಿದರು.

- Advertisement -

ಭಾಲ್ಕಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ʼಇಂದಿನ ದಿನಮಾನಗಳಲ್ಲಿ ಎಲ್ಲಾ ರಕ್ತ ಗುಂಪಿನ ಅಗತ್ಯ ಹೆಚ್ಚಾಗಿದೆ. ಆದ್ದರಿಂದ ಅರ್ಹ ಯುವಕರು ಹಾಗೂ ಯುವತಿಯರು ಸ್ವಇಚ್ಛೆಯಿಂದ ಮತ್ತು ಧೈರ್ಯದಿಂದ ರಕ್ತದಾನ ಮಾಡಲು ಮುಂದಾಗಬೇಕುʼ ಎಂದು ಸಲಹೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ʼಯುವಕರು ರಕ್ತದಾನ ಮಾಡಿದರೆ ಅವರ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಅಪಘಾತಗಳು ಸಂಭವಿಸಿದಾಗ ಇನ್ನೊಬ್ಬರ ಜೀವ ಉಳಿಸಲು ರಕ್ತದ ಸಂಗ್ರಹಣೆ ಅತ್ಯಗತ್ಯವಾಗುತ್ತದೆ. ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕುʼ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ಸಾಗರ ಖಂಡ್ರೆ ಅವರು ಮಾತನಾಡಿ, ʼಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಆಯೋಜಿಸಲಾದ ಈ ರಕ್ತದಾನ ಶಿಬಿರಕ್ಕೆ ಅಂಬೇಡ್ಕರ್ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸ್ವಯಂಪ್ರೇರಣೆಯಿಂದ ಆಗಮಿಸಿರುವುದು ಸಂತೋಷಕರ ಸಂಗತಿʼ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಕೆಕೆಆರ್‌ಟಿಸಿ ಅಧ್ಯಕ್ಷ ವಿಲಾಸ ಮೋರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಣ, ಸಿಎಮ್‌ಒ ಡಾ.ಅಬ್ದುಲ್ ಖಾದರ, ಪ್ರಮುಖರಾದ ಓಂಕಾರ ಮೋರೆ, ಸಂಜೀವಕುಮಾರ ಬಾವಿಕಟ್ಟೆ, ಮಾರುತಿ ಭಾವಿಕಟ್ಟೆ, ಕೈಲಾಸ ಭಾವಿಕಟ್ಟೆ, ಸುರೇಶ ಸುತಾರ, ಪ್ರದೀಪ ಗುಪ್ತಾ, ಸತೀಶ ಮೇತ್ರೆ, ಸತೀಶ ಮೂಲಗೆ, ರಾಜಕುಮಾರ ಬೌದ್ಧೆ, ನಾರಾಯಣ ಮೋರೆ, ಯುವರಾಜ ಕುಂದೆ, ಸಂಜು ಲಾಮಲೆ, ರಾಜಕುಮಾರ ಮೋರೆ, ಅಶೋಕ ಗಾಯಕವಾಡ, ಸುನೀಲ ವಾಂಜರೆ, ಪ್ರಶಾಂತ ಕೋಟಗೆರಾ, ಜೈಪಾಲ ಬೋರಳೆ, ಮಾರುತಿ ಭಂಗಾರೆ, ಶಿವಾನಂದ ಭಂಗಾರೆ, ಶೀಲವಂತ ಭಂಡಾರೆ, ರಾಜಕುಮಾರ ಚೆಲ್ವಾ, ತುಕಾರಾಮ ದೊಡ್ಡಿ, ರತನ ಭಂಗಾರೆ, ಮಹೇಶ ಕೂಡ್ಲಿ, ಲೋಕೇಶ ಅಂಬಾಸಾಂಗವಿ, ವಿಜಯಕುಮಾರ ಸುಬೇದಾರ, ಲೋಕೇಶ ಕಂಬಳೆ, ಪ್ರೇಮಚಂದ್ ಭಂಡಾರೆ, ಪ್ರೇಮ ಮಾನೆ, ಸಂತೋಷ, ದತ್ತ ಬೋಡಕೆ, ವಿನೋಧ ಲಖಣಗಾಂವ, ಅನೀಲ ಡಾವರಗಾಂವ, ಉದಯ ಕಳಸದಾಳ, ಕಿರಣ ಗಾಯಕವಾಡ, ಸತೀಶ ಗಾಯಕವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ದೇಶದ ಸರ್ವತೋಮುಖ ಅಭಿವೃದ್ಧಿಗೆ ಬುನಾದಿ ಹಾಕಿದವರು ಅಂಬೇಡ್ಕರ್‌ : ಸಚಿವ ಈಶ್ವರ ಖಂಡ್ರೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಬೆಳೆಸಿಕೊಳ್ಳಲಿ ಕರೆ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ...

ಹುಮನಾಬಾದ್‌ | ಪಶು ಇಲಾಖೆ ವಾಹನ ನಿರ್ವಹಣೆ ವೆಚ್ಚದಲ್ಲಿ ಅಕ್ರಮ ಆರೋಪ: ತನಿಖೆಗೆ ಭೀಮರೆಡ್ಡಿ ಆಗ್ರಹ

ಹುಮನಾಬಾದ್ ತಾಲ್ಲೂಕಿನ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸರ್ಕಾರದಿಂದ ಒದಗಿಸಿರುವ...

ಬೀದರ್‌ | ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ, ಕಾಂಗ್ರೆಸ್ : ಆಪ್ ಶಾಸಕ ಅನಿಲ್ ಝಾ

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ....

ಬೀದರ್‌ | ಯುವ ಪೀಳಿಗೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲಿ: ಮುಬಾಶಿರ್ ಸಿಂಧೆ

ಯುವ ಪೀಳಿಗೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು...