ಇರಾನ್ ಈಗ ಅಮೇರಿಕೆಯ ಮೇಲೆ ನಿರ್ಬಂಧ ಹೇರುತ್ತಿದೆ

Date:

ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಸೈಮನ್ ಜಾನ್ಸನ್ ಇತ್ತೀಚೆಗೆ ಪ್ರಾಜೆಕ್ಟ್ ಸಿಂಡಿಕೇಟ್‌ನಲ್ಲಿ ಒಂದು ಕುತೂಹಲಕಾರಿಯಾದ ಲೇಖನ ಬರೆದಿದ್ದಾರೆ. ಅದರಲ್ಲಿ ಅವರು ಇರಾನ್ ಈಗ ಅಮೇರಿಕೆಯ ಮೇಲೆ ನಿರ್ಬಂಧ ಹೇರುತ್ತಿದೆ ಎಂದು ಬರೆದಿದ್ದಾರೆ. “ಅಂತರರಾಷ್ಟ್ರೀಯ ನಿರ್ಬಂಧಗಳ (Sanctions) ಮುಖ್ಯ ಉದ್ದೇಶವೇ ಎದುರಾಳಿ ದೇಶಕ್ಕೆ ಆರ್ಥಿಕವಾಗಿ ಪೆಟ್ಟು ಕೊಡುವುದು. ಅಮೆರಿಕದ ವಿಷಯಕ್ಕೆ ಬಂದರೆ. ಅವರು ಬೇರೆ ದೇಶಗಳ ಆಸ್ತಿಗಳನ್ನು ಜಪ್ತಿ ಮಾಡುವ ಮೂಲಕ ಅಥವಾ ನಿರ್ದಿಷ್ಟ ದೇಶಗಳ ಜೊತೆಗಿನ ವ್ಯವಹಾರಗಳನ್ನು ನಿಷೇಧಿಸುವ ಮೂಲಕ ಇದನ್ನು ಮಾಡುತ್ತಾರೆ. ಹೆಚ್ಚಾಗಿ ಆಯಾ ದೇಶದ ಆಡಳಿತಕ್ಕೆ ಹತ್ತಿರವಿರುವ ವ್ಯಕ್ತಿಗಳನ್ನು ಅಥವಾ ಸಂಸ್ಥೆಗಳನ್ನು ಇವರು ಗುರಿಯಾಗಿಸುತ್ತಾರೆ. ಜಾಗತಿಕವಾಗಿ ‘ಡಾಲರ್ ವ್ಯವಸ್ಥೆಗೆ ಇರುವ ಅಗಾಧ ಶಕ್ತಿಯಿಂದಾಗಿ, ಅಮೆರಿಕ ಹೇರುವ ನಿರ್ಬಂಧಗಳಿಗೆ ಜಗತ್ತಿನಾದ್ಯಂತ ಎಲ್ಲರೂ ಹೆದರುತ್ತಾರೆ.” ಎಂದು ಬರೆಯುತ್ತಾ ಸೈಮನ್ ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ; ಇಂದು ಅಮೇರಿಕೆ ಪೆಟ್ಟು ತಿನ್ನುವ ಸ್ಥಿತಿಯಲ್ಲಿ ಸಿಲುಕಿದೆ.” ಎನ್ನುತ್ತಾರೆ.

- Advertisement -
unnamed file 1 1

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಸೈಮನ್ ಹೇಳುವಂತೆ “ಇರಾನ್ ಈಗ ಅಮೆರಿಕಕ್ಕೆ ಅತಿ ದೊಡ್ಡ ಪೆಟ್ಟು ನೀಡಿದೆ. ಅಮೆರಿಕದ ಪರವಾಗಿರುವ ಪರ್ಷಿಯನ್ ಕೊಲ್ಲಿಯ ದೇಶಗಳ ತೈಲ ಪೂರೈಕೆಯನ್ನು ಹಾರ್ಮುಜ್ ಜಲಸಂದಿಯಲ್ಲಿ ತಡೆಹಿಡಿದಿದೆ. ಆ ಮೂಲಕ ಇರಾನ್ ಆಮೆರಿಕದ ಮೇಲೆ ಅಘೋಷಿತ ನಿರ್ಬಂಧಗಳನ್ನು ಹೇರಿದೆ. ಆದರೆ ಇರಾನ್ ತನ್ನ ತೈಲವನ್ನು ಚೀನಾಗೆ ಮಾತ್ರ ಯಾವುದೇ ಅಡೆತಡೆಯಿಲ್ಲದೆ ಕಳಿಸುತ್ತಿದೆ. ಒಂದು ವೇಳೆ ಇರಾನಿನ ಈ ನಡೆ ಹೀಗೆಯೇ ಮುಂದುವರಿದರೆ, ಇದರಿಂದ ಸಾಮಾನ್ಯ ಅಮೆರಿಕನ್ನರಿಗೆ ಆರ್ಥಿಕವಾಗಿ ದೊಡ್ಡ ಹೊರೆಯಾಗುತ್ತದೆ. ಇದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ಮೇಲೂ ಪರಿಣಾಮ ಆಗುತ್ತದೆ. ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಪ್ರಬಲ ಪರಿಣಾಮ ಉಂಟುಮಾಡಬಹುದು.”

ಸೈಮನ್ ತಮ್ಮ ಲೇಖನದಲ್ಲಿ “ಸಾಮಾನ್ಯವಾಗಿ ಅಮೆರಿಕವು ಪರ್ಷಿಯನ್ ಕೊಲ್ಲಿಯ ದೇಶಗಳಿಂದ ನೇರವಾಗಿ ಹೆಚ್ಚು ತೈಲ ಖರೀದಿಸುವುದಿಲ್ಲ. ಆ ಭಾಗದ ಹೆಚ್ಚಿನ ತೈಲ ಏಷ್ಯಾಕ್ಕೆ ಮತ್ತು ರಷ್ಯಾ-ಉಕ್ರೇನ್ ಯುದ್ಧದ ನಂತರ ಯುರೋಪ್‌ಗೆ ರಫ್ತಾಗುತ್ತಿದೆ.”

ಆದರೂ “ಜಾಗತಿಕ ತೈಲ ಮಾರುಕಟ್ಟೆ ಎಷ್ಟು ಬೆಸೆದುಕೊಂಡಿದೆ ಎಂದರೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಕಚ್ಚಾ ತೈಲದ (Brent crude) ಬೆಲೆ ವ್ಯತ್ಯಾಸವಾದರೂ ಅದರ ಬಿಸಿ ಉತ್ತರ ಅಮೆರಿಕಾದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ತಕ್ಷಣ ತಟ್ಟುತ್ತದೆ. ಅಮೆರಿಕದ ಇಂಧನ ಮಾಹಿತಿ ಸಂಸ್ಥೆಯ (EIA) ಅಂಕಿಅಂಶಗಳ ಪ್ರಕಾರ, ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಶುರು ಮಾಡಿದಾಗಿನಿಂದ, ಡೀಸೆಲ್ ಬೆಲೆ ಪ್ರತಿ ಗ್ಯಾಲನ್‌ಗೆ ಸುಮಾರು ಒಂದು ಡಾಲರ್ ಹೆಚ್ಚಿದೆ. ಈಗ ಅದು ಐದು ಡಾಲರ್ ಗಡಿ ದಾಟಿದೆ.” ಎಂದು ಬರೆಯುತ್ತಾರೆ.

ಅಷ್ಟೇ ಅಲ್ಲ “ಇಂಧನ ಬೆಲೆ ಏರಿಕೆಯ ಬಿಸಿ ಪ್ರತಿಯೊಬ್ಬ ವಾಹನ ಬಳಸುವವರಿಗೆಲ್ಲಾ ನೇರವಾಗಿ ತಟ್ಟುತ್ತದೆ. ಮಾರುಕಟ್ಟೆ ಸಮೀಕ್ಷೆಗಳ ಪ್ರಕಾರ, ಟ್ರಂಪ್ ಅವರ ಹೆಚ್ಚಿನ ಬೆಂಬಲಿಗರು ದೊಡ್ಡ ಪಿಕಪ್ ವಾಹನಗಳನ್ನು (Full-size pickups) ಬಳಸುತ್ತಾರೆ. ಹಾಗಾಗಿ ಅವರಿಗೆ ಇದು ನೇರ ಹೊಡೆತ. ಇತ್ತ ಡೀಸೆಲ್ ಮತ್ತು ರಸಗೊಬ್ಬರ ಬೆಲೆ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ಇಂಧನದ ಬೆಲೆಯೂ ಗಗನಕ್ಕೇರಿರುವುದರಿಂದ ವಿಮಾನ ಪ್ರಯಾಣ ದರಗಳು ಏರಿಕೆಯಾಗುತ್ತಿವೆ. ಈ ಸಾಗಣೆ ವೆಚ್ಚದ ಏರಿಕೆ ಕೇವಲ ವಾಹನಗಳಿಗೆ ಸೀಮಿತವಾಗಿಲ್ಲ; ಇದರಿಂದ ಆಹಾರ ಪದಾರ್ಥಗಳು ಮತ್ತು ದಿನಬಳಕೆಯ ವಸ್ತುಗಳ ಬೆಲೆಗಳು ಏರುತ್ತವೆ. ಇದರಿಂದ ಜನರ ಒಟ್ಟಾರೆ ಜೀವನಮಟ್ಟ ಕುಸಿಯುತ್ತದೆ.”

03cli fuel efficiency 01 fhlw articleLarge v2

ಹಲವರು ಈಗಾಗಲೇ ಗುರುತಿಸಿರುವಂತೆ ಸೈಮನ್ ಕೂಡ ಹಣಕಾಸು ಮಾರುಕಟ್ಟೆಯ ಮೇಲೆ ಇದರಿಂದ ಆಗುವ ಗಂಭೀರವಾದ ಪರಿಣಾಮಗಳನ್ನು ಗುರುತಿಸುತ್ತಾರೆ. “ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿರುವಾಗ, ಆಮೆರಿಕದ ‘ಫೆಡರಲ್ ರಿಸರ್ವ್’ಗೆ ಬಡ್ಡಿ ದರಗಳನ್ನು ಇಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಒಂದು ವೇಳೆ ಅವರಿಗೆ ಈ ಹಣದುಬ್ಬರದ ಒತ್ತಡವನ್ನು ತಡೆಯಲು ಸಾಧ್ಯವಾಗದೇ ಹೋದರೆ, ಪರಿಸ್ಥಿತಿ 1970ರ ದಶಕದ ಆರ್ಥಿಕ ದುರಂತದ ಹಾದಿ ಹಿಡಿಯಬಹುದು. ಅಂದು ಆರ್ಥರ್ ಬರ್ನ್ಸ್ ಅವರು ಫೆಡ್ ಅಧ್ಯಕ್ಷರಾಗಿದ್ದಾಗ ಕೈಗೊಂಡ ತಪ್ಪು ನಿರ್ಧಾರಗಳಿಂದಾಗಿ ಅಮೆರಿಕ ಭೀಕರ ಹಣದುಬ್ಬರ ಮತ್ತು ಆರ್ಥಿಕ ಸ್ಥಗಿತಕ್ಕೆ ಸಿಲುಕಿತ್ತು.

ಸದ್ಯಕ್ಕೆ ಕೆಲವು ಪರ್ಯಾಯ ದಾರಿಗಳಿವೆ. ಈ ಇಂಧನ ಸಂಬಂಧಿ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಸ್ವಲ್ಪ ತಣ್ಣಗಾಗಿಸುವ (De-escalate) ಸೂಚನೆಯನ್ನು ಟ್ರಂಪ್ ನೀಡುತ್ತಿದ್ದಾರೆ. ಆದರೆ ಇರಾನ್ ಹೇರಿರುವ ಈ ‘ಅಘೋಷಿತ ನಿರ್ಬಂಧಗಳು ಮುಂದುವರಿಯಬೇಕೆಂದರೆ, ಆದು ‘ಹಾರ್ಮುಜ್ ಜಲಸಂಧಿ’ಯಲ್ಲಿ ಹಡಗುಗಳಿಗೆ ಬೆದರಿಕೆ ಹಾಕುತ್ತಿದ್ದರೆ ಸಾಕು. ಟ್ರಂಪ್ ಅವರು “ನಾವು ಗೆದ್ದೆವು” ಎಂದು ಘೋಷಿಸಿ ಮಿಸೈಲ್ ದಾಳಿಗಳನ್ನು ನಿಲ್ಲಿಸಬಹುದು. ಆದರೆ ಇದರಿಂದ ಇಸ್ರೇಲ್-ಇರಾನ್ ಸಂಘರ್ಷ ನಿಲ್ಲುತ್ತದೆಯೇ? ಅಥವಾ ಪರ್ಷಿಯನ್ ಕೊಲ್ಲಿಯಲ್ಲಿ ಹಡಗುಗಳ ಸಂಚಾರ ಮತ್ತೆ ಮೊದಲಿನಂತೆ ಸುರಕ್ಷಿತವಾಗುತ್ತದೆಯೇ? ಎಂಬ ಅನುಮಾನವನ್ನು ಸೈಮನ್ ವ್ಯಕ್ತಪಡಿಸಿದ್ದಾರೆ.

ಸೈಮನ್ ಹೇಳುವಂತೆ ಇರಾನಿಗೆ ಇನ್ನೂ ಒಂದು ಅನುಕೂಲ ಇದೆ. “ಇರಾನಿಗೆ ತನ್ನ ಸ್ವಂತ ಶಕ್ತಿಯ ಜೊತೆಗೆ ರಷ್ಯಾದ ಬೆಂಬಲವೂ ದೊಡ್ಡದಾಗಿದೆ. ವರದಿಗಳ ಪ್ರಕಾರ ಅಮೆರಿಕದ ಆಸ್ತಿಗಳ ಮೇಲೆ ದಾಳಿ ಮಾಡಲು ಬೇಕಾದ ಮಾಹಿತಿ ಮತ್ತು ಡೋನ್ ತಂತ್ರಜ್ಞಾನವನ್ನು ನೀಡಿ ರಷ್ಯಾ ಇರಾನನ್ನು ಹುರಿದುಂಬಿಸುತ್ತಿದೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳನ್ನು ದುರ್ಬಲಗೊಳಿಸುವುದು ರಷ್ಯಾದ ಉದ್ದೇಶ. ಜೊತೆಗೆ ತೈಲ ಬೆಲೆ ಏರಿಕೆಯಾದರೆ ರಷ್ಯಾಗೆ ಭರ್ಜರಿ ಲಾಭ. ಇರಾನ್ ಜೊತೆಗಿನ ಸಂಘರ್ಷ ಹೆಚ್ಚಾದಂತೆ, ಅಮೆರಿಕವು ರಷ್ಯಾದ ತೈಲದ ಮೇಲಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುತ್ತಾ ಬಂದಿದೆ. ಈ ಸಂಘರ್ಷ ಮುಂದುವರಿದರೆ ತಮಗೆ ಇನ್ನೂ ಹೆಚ್ಚಿನ ರಿಯಾಯಿತಿ ಸಿಗಬಹುದು ಎಂಬುದು ರಷ್ಯಾದ ಲೆಕ್ಕಾಚಾರ.” ರಷ್ಯಾಕ್ಕೆ ಆರ್ಥಿಕವಾಗಿ ಅನುಕೂಲವಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

Galeeva july 23

ಬೂಕಿಂಗ್ಸ್ ಇನ್‌ ಸ್ಟಿಟ್ಯೂಷನ್‌ನ ರಾಬಿನ್ ಜೆ. ಬೂಕ್ಸ್ ಅವರು ಇರಾನ್ ತೈಲದ ಮೇಲೆ ಸಂಪೂರ್ಣ ನಿರ್ಬಂಧ ಹೇರಲು ಸಲಹೆ ನೀಡುತ್ತಿದ್ದಾರೆ. ವೆನೆಜುವೆಲಾದಲ್ಲಿ ಮಾಡಿದಂತೆ ಅಮೆರಿಕ ಈಗ ಇರಾನ್‌ ರಹಸ್ಯ ನೌಕೆಗಳನ್ನು (Shadow fleet) ತಡೆಯಲು ಸಿದ್ಧವಿರುವುದರಿಂದ ಇದು ಸಾಧ್ಯವೂ ಇದೆ. ಈ ಆಲೋಚನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಏಕೆಂದರೆ ಇದು ಚೀನಾಕ್ಕೆ ಹೋಗುವ ತೈಲವನ್ನು ತಡೆಯುತ್ತದೆ. ಆಗ ಚೀನಾ ಕೂಡ ಈ ಸಮಸ್ಯೆಯನ್ನು ಬಗೆಹರಿಸಲು ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತದೆ. ಆದರೆ ಚೀನಾ ಈಗಾಗಲೇ ಸುಮಾರು 100 ದಿನಗಳಿಗಾಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಂಡಿದೆ.

ಸೈಮನ್ ಗುರುತಿಸುವಂತೆ “ಈಗ ನಿಜವಾದ ಪ್ರಶ್ನೆ ಎಂದರೆ ಯಾರು ಆರ್ಥಿಕ ಬಿಕ್ಕಟ್ಟನ್ನು ಹೆಚ್ಚು ದಿನ ತಡೆದುಕೊಳ್ಳಬಲ್ಲರು ಎಂಬುದು. ತೀವ್ರ ದಮನಕಾರಿ ಆಡಳಿತವಿರುವ ಇಸ್ಲಾಮಿಕ್ ರಿಪಬ್ಲಿಕ್ಕೋ ಅಥವಾ ಚುನಾವಣಾ ಪ್ರಜಾಪ್ರಭುತ್ವ ಇರುವ ಅಮೇರಿಕೆಯೊ?”

ಇನ್ನು ವೈಟ್ ಹೌಸ್‌ನಲ್ಲಿ ನಡೆಯುತ್ತಿರುವ ವಿಚಿತ್ರ ಚರ್ಚೆಗಳನ್ನು ಸೈಮನ್ ಉಲ್ಲೇಖಿಸುತ್ತಾರೆ. “ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿನ ಮಾಜಿ ಸ್ಪೀಕರ್ ನ್ಯೂಟ್ ಗಿಂಗ್ರಿಚ್ ಅವರು “ಒಂದು ಡಜನ್ ಅಣುಬಾಂಬ್ ಸ್ಫೋಟಿಸಿ” ಹೊಸ ಕಾಲುವೆಯನ್ನೇ ಅಗೆಯಲು ಬಯಸುತ್ತಿದ್ದಾರೆ! ಇಂತಹ ವಿಚಿತ್ರ ನಿರ್ಮಾಣ ಪದ್ಧತಿ ಸಾಧ್ಯವೇ ಇಲ್ಲದಿದ್ದರೂ (ಇದು ನಿಕಿತಾ ಕ್ರುಶ್ಚವ್‌ ಅವರ ಹಳೆಯ ಹುಚ್ಚು ಪ್ಲಾನ್‌ಗಳನ್ನು ನೆನಪಿಸುತ್ತದೆ), ಹಾರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ಅಗೆಯುವ ಯಾವುದೇ ಕಾಲುವೆಯ ಮೇಲೂ ಇರಾನ್ ಸುಲಭವಾಗಿ ಕ್ಷಿಪಣಿ ದಾಳಿಮಾಡಬಹುದು. ಏಕೆಂದರೆ ಇರಾನಿನ ಕ್ಷಿಪಣೆಗಳು ಸೌದಿ ಅರೇಬಿಯಾದ ಕೆಂಪು ಸಮುದ್ರದವರೆಗೂ ತಲುಪಬಲ್ಲವು.

ಜಲಸಂಧಿಯನ್ನು ಮತ್ತೆ ತೆರೆಯಲು ಉಕ್ರೇನ್‌ನ ಡೋನ್ ನಿರೋಧಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಒಳ್ಳೆಯ ಆಲೋಚನೆ. ಆದರೆ ರಷ್ಯಾ ಅಂತಹ ತಜ್ಞರನ್ನು ಉಕ್ರೇನ್‌ನಲ್ಲೇ ಇರುವಂತೆ ನೋಡಿಕೊಳ್ಳುತ್ತದೆ. ತೈಲ ಬೆಲೆ ಏರಿಕೆಯಿಂದ ಬರುವ ಹೆಚ್ಚಿನ ಹಣವನ್ನು ರಷ್ಯಾ ಉಕ್ರೇನ್ ಮೇಲೆ ಇನ್ನೂ ಹೆಚ್ಚಿನ ಡೋನ್ ಮತ್ತು ಮಿಸೈಲ್ ದಾಳಿ ಮಾಡಲು ಬಳಸಿಕೊಳ್ಳುತ್ತದೆ.

ಸೈಮನ್ ಸಲಹೆ ನೀಡುವಂತೆ “ಅಮೆರಿಕ ಮತ್ತು ನ್ಯಾಟೋ (NATO) ದೇಶಗಳು ತಮ್ಮ ಡೋನ್ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಂಐಟಿಯ (MIT) ಪ್ರಯಾರಿಟಿ ಟೆಕ್ನಾಲಜಿ ಗ್ರೂಪ್ ಈಗಾಗಲೇ ಕೆಲಸ ಮಾಡುತ್ತಿದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರಿಂದ ಅಮೆರಿಕ ಮತ್ತು ಯುರೋಪ್‌ನಲ್ಲಿ ಉತ್ಪಾದನಾ ವಲಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಮತ್ತು ಪೂರೈಕೆ ಸರಪಳಿಯನ್ನು ಬಲಗೊಳ್ಳುತ್ತವೆ”

ಸೈಮನ್ ಗುರುತಿಸುವಂತೆ “ಈ ಎಲ್ಲಾ ಕ್ರಮಗಳು ಕಾರ್ಯರೂಪಕ್ಕೆ ಬರುವುದಕ್ಕೆ ಸಮಯ ಬೇಕು. ಅಮೆರಿಕದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದೆ. ನವೆಂಬ‌ರ್ ಚುನಾವಣೆ ಹತ್ತಿರ ಬರುತ್ತಿದೆ. ಅದರಿಂದ ಸಮಯ ತಮ್ಮ ಪರವಾಗಿದೆ ಎಂದು ಇರಾನ್ ನಾಯಕರು ನಂಬಿದ್ದಾರೆ.”

ChatGPT Image Jan 14 2026 05 19 46 PM 2

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್‌ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್‌ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್‌ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

https://Lokayatha.com

lokayatha logo 220x67 1
lokayatha.com
Website |  + posts

ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

lokayatha.com
lokayatha.comhttps://lokayatha.com/
ಅರ್ಥಶಾಸ್ತ್ರವನ್ನು ಕುರಿತು ಪ್ರಕಟವಾಗಿರುವ ಬರಹಗಳು ಇಲ್ಲವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್ಥಿಕ ಬೆಳವಣಿಗೆ: ಟ್ರಂಪೋನಾಮಿಕ್ಸ್‌ ವೈಫಲ್ಯ

ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕೂ ಹೆಚ್ಚು...

ಯುದ್ಧದ ಆರ್ಥಿಕ ಮತ್ತು ರಾಜಕೀಯ ತಲ್ಲಣಗಳು

ಅಲೆಕ್ಸಾಂಡರ್ ಪೋಪ್ ಅವರು ಹೇಳಿದ್ದು ಸರಿ. "ತಪ್ಪು ಮಾಡುವುದು ಮನುಷ್ಯ ಸಹಜ...

ಕನಿಷ್ಠ ಕೂಲಿ ಖಾತ್ರಿಗೆ ಕಳೆದು ಹೋದ ಅವಕಾಶ

ಕಳೆದ ಕೆಲವು ತಿಂಗಳುಗಳಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

ಸೀಬೇ ನಿನ್ನಂಡ್ರೆ ನಂಗ್ಟಲು ಇಷ್ಟ

ನಾನು ಸಾಹಸದ ಕಥೆಗಳನ್ನೇ ಓದುತ್ತಾ ಪಟ್ಟಣದಲ್ಲಿ ಬೆಳೆದ ಹುಡುಗ. ನನಗೆ ಮರ...