“ಕಟ್ಟಡ ಕಾರ್ಮಿಕರ ಜೊತೆ ನಾವಿದ್ದೇವೆ. ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ಹೇಳಿದರು. ತಾವು ಕಾರ್ಯನಿರ್ವಹಿಸುವ ಕಾರ್ಯದಲ್ಲಿ ಸುರಕ್ಷತೆಯನ್ನು ಕಾಯ್ದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೃಷ್ಣಗೌಡ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಗದಗ ಪಟ್ಟಣದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘ ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಡಿ.ಸಿ.ಮಿಲ್ ಕಂಪೌಂಡ ಹಳೇ ಕೋರ್ಟ ಹತ್ತಿರದ ಕೆ. ಎಚ್. ಪಾಟೀಲ ನಗರದಲ್ಲಿರುವ ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಗರದ ಭೂಮರಡ್ಡಿ ಸರ್ಕಲ್‌ದಲ್ಲಿರುವ ಪಂಡಿತ ಪುಟ್ಟರಾಜ ಗವಾಯಿಗಳರವರ ಪುತ್ಥಳಿಗೆ ಕೃಷ್ಣಗೌಡ ಪಾಟೀಲ ಹಾಗೂ ಮಾಬುಖಾನ ಪಠಾಣ ಅಧ್ಯಕ್ಷರು ಕಟ್ಟಡ ನಿರ್ಮಾಣ ಕಾರ್ಮಿಕರ ಮಹಾಸಂಘ ಸೇರಿದಂತೆ ಡಾ. ಪುಟ್ಟರಾಜ ಗವಾಯಿಗಳ ಪುತ್ಥಳಿಗೆ ಪುಷ್ಪಾರ್ಪಣೆಗೈದರು. ಕಟ್ಟಡ ಕಾರ್ಮಿಕರು ಭೂಮರಡ್ಡಿ ಸರ್ಕಲ್‌ದಿಂದ ಕಟ್ಟಡ ಕಾರ್ಮಿಕರ ಕಚೇರಿವರೆಗೆ ಪಾದಯಾತ್ರೆಯ ಚಾಲನೆ ನೀಡಿ ಕೃಷ್ಣಗೌಡ ಪಾಟೀಲ ಅವರು ಮಾತನಾಡಿದರು.
ನಂತರ ಮಾಬುಸಾಬ ಪಠಾಣರವರು ಮಾತನಾಡಿ, “ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು. ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಗದಗ ಜಿಲ್ಲೆಯಲ್ಲಿ ಸುಸಜ್ಜಿತ ಕಾರ್ಮಿಕರ ಮಕ್ಕಳ ವಸತಿ ಶಾಲೆ ಮಂಜೂರಾಗಿದ್ದು, ತಮ್ಮ ಮಕ್ಕಳನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದರು.
ಈ ಸಂದರ್ಭದಲ್ಲಿ ಚನ್ನವೀರಗೌಡ ಕೆ. ಪಾಟೀಲ, ಚಾಂದಸಾಬ ಅಬ್ಬಿಗೇರಿ, ಅಲ್ತಾಪಅಹ್ಮದ ಕೊಪ್ಪಳ, ಕಲ್ಲೇಶಪ್ಪ ಕುಡಗುಂಟಿ, ಮೈನುದ್ದೀನ, ಅಡಿವೆಪ್ಪ ಚಲವಾದಿ, ಚಾಂದಸಾಬ ಸೊಲ್ಲಾಪೂರ, ಮಹಮ್ಮದ ಹಳ್ಳಿಕೇರಿ, ಆಸೀಫ ಮನ್ಸೂರಿ, ನೂರಅಹ್ಮದ ಬಳ್ಳಾರಿ ಸೇರಿದಂತೆ ಕಟ್ಟಡ ಕಾರ್ಮಿಕರ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಮಿಕರು ಸಂಘದ ಸರ್ವ ಪದಾಧಿಕಾರಿಗಳು, ಉಪಸ್ಥಿತರಿದ್ದರು.




