ಅಕ್ಕಿ ವ್ಯಾಪಾರಿಯಿಂದ ಗುರುವಾರ ₹20 ಸಾವಿರ ಲಂಚ ಪಡೆಯುವಾಗ ಕಲಬುರಗಿ ಜಿಲ್ಲೆಯ ಯಡ್ರಾಮಿಯ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ಎಂ.ಮುದರೆಡ್ಡಿ ಹಾಗೂ ಕಾನ್‌ಸ್ಟೆಬಲ್ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಯಡ್ರಾಮಿ ಪಟ್ಟಣದ ಅಕ್ಕಿ ವ್ಯಾಪಾರಿ ಆನಂದ ಕುಸ್ತಿ ಅವರಿಂದ ಜೂನ್ 12ರಂದು ಪೊಲೀಸರು ಯುಪಿಐ ಮೂಲಕ ₹20 ಸಾವಿರ ಲಂಚವನ್ನು ಪಡೆದಿದ್ದರು. ಬಳಿಕ ಮತ್ತೆ ₹30 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ₹20 ಸಾವಿರ ನೀಡುವುದಾಗಿ ಹೇಳಿದ್ದ ವ್ಯಾಪಾರಿ, ನಂತರ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು.
ಗುರುವಾರ ಠಾಣೆ ಎದುರು ಪೊಲೀಸರು ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಗಂಭೀರ ಪ್ರಕರಣಗಳ ತನಿಖೆ ಹಾಗೂ ಆರೋಪಿಗಳ ಬಂಧನದಲ್ಲಿ ತೋರಿದ ಕಾರ್ಯಕ್ಷಮತೆಗಾಗಿ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಅವರು 2024-25ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿನ್ನದ ಪದಕವನ್ನು ಪಡೆದಿದ್ದರು.ಬೀದರ್ | ಎಸ್ಐಆರ್ ವಿರೋಧಿ ಸಮಾವೇಶಕ್ಕೆ ಭಗವಂತ ಖೂಬಾಗೆ ಆಹ್ವಾನ
ಇದನ್ನೂ ಓದಿ : ಬೀದರ್ | ಎಸ್ಐಆರ್ ವಿರೋಧಿ ಸಮಾವೇಶಕ್ಕೆ ಭಗವಂತ ಖೂಬಾಗೆ ಆಹ್ವಾನ
ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ, ರವಿ ಪವಾರ, ರಾಜಶೇಖರ್, ಬಸವರಾಜ ರಾಣೋಜಿ, ಮಲ್ಲಿನಾಥ, ಬೀರಪ್ಪ ಸೇರಿದಂತೆ ಇತರ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





