ಕೆಜಿಎಫ್ | ಬೇತಮಂಗಲ ಪಾಲಾರ್ ಕೆರೆಯ ಕೋಡಿ ಹರಿಯುವ ಸ್ಥಳದಲ್ಲಿ ನೂತನ ಸೇತುವೆ ನಿರ್ಮಾಣ: ಐತಿಹಾಸಿಕ ಹೆಜ್ಜೆ

Date:

ಬೇತಮಂಗಲ ಪಾಲಾರ್ ಕೆರೆಯು ಈ ಪ್ರದೇಶದ ಪ್ರಮುಖ ಜೀವನಾಡಿಯಾಗಿದೆ. ಆದರೆ, ಕೆರೆ ಕೋಡಿ ಹರಿದ ಸಂದರ್ಭಗಳಲ್ಲಿ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿದ್ದ ನರಕಯಾತನೆ ವರ್ಣನಾತೀತವಾಗಿದ್ದ ಸಮಸ್ಯೆಗೆ ಶಾಸಕಿ ಎಂ ರೂಪಕಲಾ 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ಶಾಶ್ವತ ಪರಿಹಾರ ದೊರೆತಂತಾಗಿದೆ.

- Advertisement -

ಪಟ್ಟಣದ ಪಾಲಾರ್ ನದಿಯಲ್ಲಿ ಸ್ಥಳೀಯ ರೈತರು-ಮುಖಂಡರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, “ಮಳೆಗಾಲದಲ್ಲಿ ಅಥವಾ ಕೆರೆ ಕೋಡಿ ಹರಿದ ಸಂದರ್ಭದಲ್ಲಿ ರೈತರು ಪ್ರಾಣವನ್ನು ಒತ್ತೆಯಿಟ್ಟುಕೊಂಡು ನೀರಿನಲ್ಲಿ ನಡೆದಾಡುವ ಅಥವಾ ಜಾನುವಾರುಗಳನ್ನು ಕರೆದುಕೊಂಡು ಹೋಗುವ ಅನಿವಾರ್ಯತೆ ಇತ್ತು.” ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿತ್ತು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬೇತಮಂಗಲ ಕೆರೆ ಕಟ್ಟೆಯ ಕೆಳಗಡೆ ಸುಮಾರು 500 ಎಕರೆಗಳಿಗೂ ಅಧಿಕ ಫಲವತ್ತಾದ ಕೃಷಿ ಭೂಮಿಯಿದ್ದು, ನೂರಾರು ಕುಟುಂಬಗಳು ಕೃಷಿಯನ್ನು ನಂಬಿ ಬದುಕುತ್ತಿವೆ. ಕೆರೆ ಕೋಡಿ ಹೋದಾಗ ಕಾಲುವೆಯಲ್ಲಿ ನಿರಂತರವಾಗಿ ನೀರು ಹರಿಯುವುದರಿಂದ 3 ರಿಂದ 6 ತಿಂಗಳ ಕಾಲ ರೈತರು ತಮ್ಮ ಜಮೀನುಗಳಿಗೆ ತೆರಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನೇಕ ಬಾರಿ ರೈತರು ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.

ಸತತ ಪ್ರಯತ್ನ: ಸುಮಾರು ಒಂದೂವರೆ ರಿಂದ ಎರಡು ವರ್ಷಗಳ ಕಾಲ ಕಚೇರಿಗಳು, ಅಧಿಕಾರಿಗಳ ವರ್ಗಾವಣೆ ಹಾಗೂ ವಿವಿಧ ಹಣಕಾಸಿನ ತಡೆಗಳ ನಡುವೆಯೂ ಸತತ ಹೋರಾಟ ನಡೆಸಲಾಗಿದೆ.

ಸರ್ಕಾರದ ಸಹಕಾರ: ಸಿಎಂ ಮಟ್ಟದಲ್ಲಿ ಮತ್ತು ವಿಶೇಷ ಸಭೆಗಳ ಮೂಲಕ ಅಗತ್ಯ ಅನುಮತಿಗಳನ್ನು ಪಡೆದು, ಎತ್ತಿನಹೊಳೆ ಯೋಜನೆಯ ವಿಶೇಷ ಅನುದಾನದಡಿ ರೂ. 3 ಕೋಟಿಗಳನ್ನು ಬಿಡುಗಡೆ ಮಾಡಿಸುವಲ್ಲಿ ತಾವು ಯಶಸ್ವಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರಕ್ಕೆ ಹಾಗೂ ಅಂದಿನ ಜಲಸಂಪನ್ಮೂಲ ಸಚಿವರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಆರ್ಥಿಕ ನಷ್ಟ: ಬೆಳೆದ ಬೆಳೆಗಳನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ರೈತರು ಪ್ರತಿವರ್ಷ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದರು. ಹೈನುಗಾರಿಕೆ ಮತ್ತು ಇತರೆ ಕೃಷಿ ಚಟುವಟಿಕೆಗಳಿಗೂ ಇದು ದೊಡ್ಡ ಮಟ್ಟದ ಹಿನ್ನಡೆಯನ್ನುಂಟು ಮಾಡಿತ್ತು.
ಈ ಬಗ್ಗೆ ಸ್ಥಳೀಯ ರೈತರು ಮಾತನಾಡಿ, ನಾವು ನಿತ್ಯ ಪ್ರಾಣಾಪಾಯದ ಭೀತಿಯಲ್ಲೇ ಸೇತುವೆಯಿಲ್ಲದೆ ಪ್ರವಾಹದ ನೀರಿನಲ್ಲೇ ನಡೆದಾಡಬೇಕಿದ್ದರಿಂದ ಜೀವ ಭಯದಲ್ಲೇ ದಿನ ಕಳೆಯುವಂತಾಗಿತ್ತು. ಶಾಸಕರ ವಿಶೇಷ ಮುತುವರ್ಜಿ ಮತ್ತು ತಾಂತ್ರಿಕ ಹೋರಾಟದಿಂದ ಈ ಪ್ರದೇಶದ ಜನರ ದಶಕಗಳ ಬೇಡಿಕೆಯನ್ನು ಈಡೇರಿಸಲು ಶಾಸಕಿ ಎಂ. ರೂಪಕಲಾ ಅವರು ನಡೆಸಿದ ಪ್ರಯತ್ನಗಳು ಪ್ರಶಂಸನೀಯವಾಗಿವೆ ಎಂದು ಕೃತಜ್ಞತೆ ಸಲ್ಲಿಸಿದರು.

ಪಕ್ಷಭೇದ ಮರೆತು ಶ್ರಮಿಸಿರುವ ಶಾಸಕಿಯನ್ನು ಸ್ಥಳೀಯರು “ಪ್ರತ್ಯಕ್ಷ ದೇವತೆ” ಎಂದು ಬಣ್ಣಿಸಿ ಧನ್ಯವಾದ ಅರ್ಪಿಸಿದ್ದಾರೆ.
“ಇಡೀ ಜೀವನ ಪರ್ಯಂತ ತಮ್ಮನ್ನು ನೆನೆಸಿಕೊಳ್ಳುವುದಾಗಿ” ರೈತರು ಕೃತಜ್ಞತಾಪೂರ್ವಕವಾಗಿ ನುಡಿದಿದ್ದಾರೆ. ಈ ಸೇತುವೆಯ ನಿರ್ಮಾಣದಿಂದ ಈ ಭಾಗದ ಗ್ರಾಮೀಣಾಭಿವೃದ್ಧಿ, ಕೃಷಿ ಉತ್ಪಾದನೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಬಲ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಕಾಸು ಕೊಟ್ಟ ತಕ್ಷಣವೇ ಸಿಕ್ತು ಡೆತ್ ಸರ್ಟಿಫಿಕೇಟ್: ಆಸ್ಪತ್ರೆ ಸಿಬ್ಬಂದಿಯ ಕರಾಳ ಮುಖ ಬಯಲು

ಈ ಸಂದರ್ಭದಲ್ಲಿ ಇಓ ವೆಂಕಟೇಶಪ್ಪ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀ ನಾರಾಯಣ, ನಾರಾಯಣ ಸ್ವಾಮಿ, ಇನಾಯತ್ ವುಲ್ಲಾ, ಗ್ರಾಪಂ ಮಾಜಿ ಅಧ್ಯಕ್ಷ ದುರ್ಗಾ ಪ್ರಸಾದ್, ವಿನೂ, ಮಮತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಪಿಡಿಒ ಉಮಾಶಂಕರ್, ಮಾಜಿ ಸದಸ್ಯ ಸುರೇಂದ್ರ ಗೌಡ, ಸುಕನ್ಯಾ, ಕುಸುಮಾ, ತಿರುಪತಿ, ಜಯಮ್ಮ, ರೇಣುಕ, ಶ್ರೀನಿವಾಸ್, ಗಣೇಶ , ಮುಖಂಡರಾದ ವೇಣುಗೋಪಾಲ್, ಎಂಬಿಎ ಕೃಷ್ಣಪ್ಪ, ಸಿ.ಎಂ ರಾಮಚಂದ್ರಪ್ಪ, ರಾಜಣ್ಣ, ಆಂಜಪ್ಪ, ಹಂಗಳ ರಮೇಶ್, ವೇಣುಗೋಪಾಲ್, ಸೆಕ್ಲೈನ್ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಮಹಿಳೆಯರು ರೈತರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಲು ಭಾರತೀಯ ಕಿಸಾನ ಸಂಘ ಆಗ್ರಹ

ಬರಗಾಲ, ಅಂತರ್ಜಲ ಕುಸಿತ, ಸುಡುಬಿಸಿಲು ಹಾಗೂ ಕೃಷಿ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ...

ಮಂಗಳೂರು | ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ಪ್ರಸಿದ್ದ ಮುಸ್ಲಿಂ ಧಾರ್ಮಿಕ ಪಂಡಿತ, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಗಳ ರೂವಾರಿ ಮುಸ್ಲಿಂ...

ಬಾಗಲಕೋಟೆ | ಪೋಲಿಯೋ ಮುಕ್ತ ಸಮಾಜದ ಸಂಕಲ್ಪ: ಬಾಗಲಕೋಟೆಯಿಂದ ವಿಜಯಪುರದವರೆಗೆ 190 ಕಿ.ಮೀ ಜಾಗೃತಿ ರ್ಯಾಲಿ

ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ರೋಟರಿ ಕ್ಲಬ್ ಬಾಗಲಕೋಟೆ ವತಿಯಿಂದ...

ಉಡುಪಿ | ಅಗ್ರಿಗೋಲ್ಡ್ ಹಗರಣ: ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಸಂತ್ರಸ್ತರ ಪರದಾಟ

ಬಹುಕೋಟಿ ರೂ.ಗಳ ಅಗ್ರಿಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯ...