ಕೋಲಾರ | ಬೇರು ತೆರವುಗೊಳಿಸದೆ ಮಣ್ಣು ಮುಚ್ಚುತ್ತಿರುವುದಕ್ಕೆ ಆಕ್ರೋಶ: ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ

Date:

ತಾಲ್ಲೂಕಿನ ಮಲ್ಲಂಡಹಳ್ಳಿ–ಕೆಂಚಾಪುರ ಮಾರ್ಗದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ತೀರಾ ಕಳಪೆಯಾಗಿದ್ದು, ನಿಯಮಾನುಸಾರ ನಡೆಯುತ್ತಿಲ್ಲ ಎಂದು ಆರೋಪಿಸಿ ಎರಡೂ ಗ್ರಾಮಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಕೆಂಚಾಪುರದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಿರೀಶ್ ಮಾತನಾಡಿ ಸುಮಾರು 30 ವರ್ಷಗಳಿಂದ ದುರಸ್ತಿಯಾಗದೆ ಸಂಚಾರಕ್ಕೆ ಯೋಗ್ಯ ಇಲ್ಲದ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಈಗ ಕೈಗೆತ್ತಿಕೊಳ್ಳಲಾಗಿದೆ. 4 ಮೀಟರ್‌ ಅಗಲದ ರಸ್ತೆಯೊಂದಿಗೆ ಇಕ್ಕೆಲಗಳಲ್ಲಿ 2 ಮೀಟರ್‌ ಪಾದಚಾರಿ ಮಾರ್ಗದೊಂದಿಗೆ ನಿರ್ಮಿಸಲಾಗುತ್ತದೆ ಎಂಬ ಭರವಸೆ ಇತ್ತು. ಆದರೆ, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯಲ್ಲಿ ರಸ್ತೆ ಇಕ್ಕೆಲಗಳಲ್ಲಿರುವ ಗಿಡ-ಮರಗಳ ಬೇರುಗಳನ್ನು ತೆರವುಗೊಳಿಸದೆ, ಅವುಗಳ ಮೇಲೆಯೇ ಮಣ್ಣು ಮುಚ್ಚಿ ಕಾಮಗಾರಿ ಮಾಡಲು ಹೊರಟಿದ್ದಾರೆ. ಈಗಾಗಲೇ ಆ ಬೇರುಗಳು ಚಿಗುರಲಾರಂಭಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಮತ್ತೆ ಹಾಳಾಗುವ ಭೀತಿ ಇದೆ. ಅಲ್ಲದೆ, ವಿಶಾಲವಾಗಿದ್ದ ರಸ್ತೆಯನ್ನು ಕಿರಿದಾಗಿಸಲಾಗುತ್ತಿದೆ. ಮತ್ತೊಂದು ವಾಹನ ಎದುರು ಬಂದರೆ ಹೋಗಲು ಜಾಗವಿಲ್ಲದಂತಾಗಿದೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಹನುಮಂತರಾಯ ದೇಗುಲದ ಬಳಿ ತಿರುವಿನಲ್ಲಿ ಮಳೆನೀರು ಹರಿದುಹೋಗಲು ಮೋರಿ ವ್ಯವಸ್ಥೆ ಮಾಡಿಲ್ಲ. ಮಳೆ ಬಂದಾಗ ನೀರು ರಸ್ತೆ ಮೇಲೆಯೇ ನಿಂತು ಹೊಸ ರಸ್ತೆಯೂ ಕಿತ್ತುಹೋಗಲಿದೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೋವಿಂದಪ್ಪ ಅವರೊಂದಿಗೆ ಮಾತನಾಡಿದ್ದು, ಸರಿಯಾಗಿ ಕಾಮಗಾರಿ ನಡೆಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಹಲವು ಕಡೆ ಬೇರು ಕೀಳದೆ ಮಣ್ಣು ತುಂಬುತ್ತಿದ್ದಾರೆ. ಮಣ್ಣು ಹಾಕುವ ಮುನ್ನವೇ ಗಿಡಗಳ ಬುಡವನ್ನು ಬುಲ್ಡೋಜರ್ ಮೂಲಕ ತೆರವುಗೊಳಿಸಬೇಕು. ಇಲ್ಲವಾದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

‌ಮಲ್ಲಂಡಹಳ್ಳಿಯ ನಿವಾಸಿ ಎಸ್.ಕೃಷ್ಣಮೂರ್ತಿ ಮಾತನಾಡಿ, ರಸ್ತೆ ಕಾಮಗಾರಿಯ ಹಲವಾರು ಲೋಪದೋಷಗಳಿಂದ ಕೂಡಿದೆ. ಈ ಕುರಿತು ಎಇಇ ಗೋವಿಂದಪ್ಪ ಅವರಿಗೆ ದೂರು ನೀಡಿದ್ದರೂ, ಸ್ಥಳದಲ್ಲಿದ್ದ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ಗಿಡ ಮರ ಕತ್ತರಿಸಿ ಬೇರು ತೆಗೆಯದೆ ಅದರ ಮೇಲೆಯೇ ಮಣ್ಣು ತುಂಬಿಕೊಂಡು ಹೋಗುತ್ತಿದ್ದಾರೆ. ತಕ್ಷಣವೇ ಕಳಪೆ ಕಾಮಗಾರಿಯನ್ನು ತಡೆದು, ಗುಣಮಟ್ಟದ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿದ್ದೀರಾ..?ಕೋಲಾರ | ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶಾಸಕ ಕೊತ್ತೂರು ಮಂಜುನಾಥ್ ನೆರವು

ಮಲ್ಲಂಡಹಳ್ಳಿ ಹಾಗೂ ಕೆಂಚಾಪುರ ಗ್ರಾಮಸ್ಥರಾದ ಗೋಪಾಲ್, ನಂಜುಂಡಪ್ಪ, ರಮೇಶಣ್ಣ, ಬಾಲು, ಗಂಗರಾಜು, ಪ್ರಸನ್ನ, ನಾರಾಯಣಸ್ವಾಮಿ, ಚಲಪತಿ, ಸುದರ್ಶನ್ ಬಾಬು ಹಾಗೂ ಶ್ರೀನಿವಾಸ್ ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಣಿಪಾಲದಲ್ಲಿ ಮಾರಕಾಸ್ತ್ರಗಳೊಂದಿಗೆ ಯುವಕನ ಬಂಧನ

ಉಡುಪಿ ನಗರದ ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ...

ಉಡುಪಿ | ಕೋಟ ಜಂಕ್ಷನ್ ಅಪಘಾತ; ಗಾಯಗೊಂಡಿದ್ದ ಕಾರು ಚಾಲಕ ಸಾವು

ಕೋಟ ಜಂಕ್ಷನ್‌ನಲ್ಲಿ ಅ. 26ರಂದು ಸಂಭವಿಸಿದ ಸೈಕಲ್‌ ಮತ್ತು ಕಾರಿನ ನಡುವಿನ...

ಉಡುಪಿ | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಿರಲಿ: ಅಶೋಕ್ ಕುಮಾರ್ ಕೊಡವೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು....

ಕುಮಟಾ | ತದಡಿ ಬಂದರಿನಲ್ಲಿ ದುರಂತ: ಮೀನು ಸಂಗ್ರಹಣಾ ಸ್ಥಳ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಸಾವು

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ದಂಡೆಗೆ ಮರಳಿದ್ದ ಬೋಟ್‌ನ ಮೀನು ಸಂಗ್ರಹಣಾ...