ಕೆ.ಜಿ.ಎಫ್‌ನಲ್ಲಿ ಬಿಗುವಿನ ವಾತಾವರಣ – ಆಕ್ರೋಶದ ನಡುವೆಯೂ ಏಕಾಏಕಿ ಬಿಜಿಎಂಎಲ್ ಮನೆಗಳ ತೆರವು ಕಾರ್ಯಾಚರಣೆ ಆರಂಭ!

Date:

ಕೆ.ಜಿ.ಎಫ್‌ನ ಎಲ್.ಸಿ. ಸಂಖ್ಯೆ 7ರ ಬಳಿ ತೀವ್ರ ಉದ್ವಿಗ್ನ ವಾತಾವರಣ ನೆಲೆಸಿತ್ತು. ದಶಕಗಳಿಂದ ನೆಲೆಸಿದ್ದ ಕೋಲಾರ ಚಿನ್ನದ ಗಣಿ (BGML) ಸಂಸ್ಥೆಯ ಮಾಜಿ ಕಾರ್ಮಿಕರ ಮನೆಗಳನ್ನು ತಾಲೂಕು ಆಡಳಿತವು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಸಂತ್ರಸ್ತ ಕುಟುಂಬಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಉರಿಗಾಂ ರೈಲ್ವೆ ಮೇಲ್ಸೇತುವೆ (ROB) ನಿರ್ಮಾಣ ಯೋಜನೆಗಾಗಿ ಇಂದು ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು, ಸುಮಾರು 20 ಬಿಜಿಎಂಎಲ್ ಕುಟುಂಬಗಳ ಮನೆಗಳ ಜಾಗ ತೆರವುಗೊಳಿಸಲು ಮುಂದಾದರು. ಇದರಿಂದ ಆತಂಕಕ್ಕೆ ಒಳಗಾದ ನಿವಾಸಿಗಳು, ಅಧಿಕಾರಿಗಳ ಕಾಲಿಗೆ ಬಿದ್ದು ಕಣ್ಣೀರಿಡುತ್ತಾ ಬೇಡಿಕೊಂಡರು. ಅನಧಿಕೃತ ವಸತಿ ಕಟ್ಟಡಗಳಾಗಿದ್ದು ತೆರವುಗೊಳಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಹೇಳಿ ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಮುಂಗಾರು ಹಿನ್ನಡೆ, ಹಿಂಗಾರಿಗೆ ಕಂಟಕ: ದೇಶದಲ್ಲಿ 2027ರವರೆಗೆ ಬರಗಾಲದ ಆತಂಕ!

ಪ್ರಕೃತಿಯ ಏರುಪೇರುಗಳನ್ನು ಎದುರಿಸಲು ಸರ್ಕಾರಗಳು ತಕ್ಷಣದ ಆಪತ್ಕಾಲೀನ ಪರಿಹಾರ ಕ್ರಮಗಳಿಗೆ ಸೀಮಿತವಾಗದೆ, ದೀರ್ಘಕಾಲೀನ ಕಾರ್ಯತಂತ್ರಗಳನ್ನು ರೂಪಿಸುವುದು ಅತ್ಯಗತ್ಯ. ಮಣ್ಣಿನ ತೇವಾಂಶ ಸಂರಕ್ಷಣೆ, ನೀರಾವರಿ ವ್ಯಾಪ್ತಿಯ ವೈಜ್ಞಾನಿಕ ವಿಸ್ತರಣೆ, ಹವಾಮಾನ ಬದಲಾವಣೆಗೆ ಸ್ಥಿತಿಸ್ಥಾಪಕತ್ವ ಹೊಂದಿರುವ(Climate-resilient)...

ಒಂದು ವಾರದ ಹಿಂದೆಯಷ್ಟೇ ತೆರವು ನೋಟಿಸ್ ನೀಡಲಾಗಿತ್ತು . ಪ್ರತಿಯೊಬ್ಬ ನಿವಾಸಿಯ ಹಿನ್ನೆಲೆ ಅಥವಾ ದಾಖಲೆಗಳನ್ನು ಪರಿಶೀಲಿಸದೆ, ಕಾನೂನಾತ್ಮಕವಾಗಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡದ ಕಲ್ಲು ಹೃದಯದ ಆಡಳಿತ ಯಂತ್ರ ಏಕಾಏಕಿ ತೆರವು ಕಾರ್ಯಾಚರಣೆಗೆ ಧುಮುಕಿದೆ. ಎಂದು ಸಂತ್ರಸ್ತ ಕುಟುಂಬಗಳ ಸದಸ್ಯರು ಕಣ್ಣೀರಿಟ್ಟರು.

“ನಾವು ಮೂಲಸೌಕರ್ಯ ಹಾಗೂ ಮೇಲ್ಸೇತುವೆ ಅಭಿವೃದ್ಧಿಗೆ ವಿರೋಧಿಗಳಲ್ಲ. ಆದರೆ ಸಾವಿರಾರು ಅಡಿ ಆಳಕ್ಕೆ ಇಳಿದು ದೇಶಕ್ಕೆ ಚಿನ್ನ ತೆಗೆದುಕೊಟ್ಟ ಕಾರ್ಮಿಕರ ಕುಟುಂಬಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ರಸ್ತೆಗೆ ದೂಡುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಬಾಧಿತ ಕುಟುಂಬಗಳು ಅಳಲು ತೋಡಿಕೊಂಡವು.

ಕಾನೂನು ಸಂಘರ್ಷ: ಈ ಜಾಗಕ್ಕೆ ದಶಕಗಳ ನ್ಯಾಯಾಂಗ ಇತಿಹಾಸವಿದ್ದು, ಕರ್ನಾಟಕ ಹೈಕೋರ್ಟ್‌ನ ನಡಾವಳಿಗಳ ಪ್ರಕಾರ ಇವರನ್ನು ಕೇವಲ ‘ಅನಧಿಕೃತ ಆಕ್ರಮಣದಾರರು’ ಎಂದು ಕರೆಯಲು ಸಾಧ್ಯವಿಲ್ಲ. ಸೂಕ್ತ R&R (ಪುನರ್ವಸತಿ) ನಿಯಮಾವಳಿಗಳ ಅಡಿಯಲ್ಲಿ ಪರಿಹಾರ ನೀಡಿ ನಂತರವೇ ಜಾಗ ವಶಕ್ಕೆ ಪಡೆಯಬೇಕು ಎಂದು ಸಂಘಟನೆಗಳು ಒತ್ತಾಯಿಸಿದವು.

ತಾಲೂಕು ಹಾಗೂ ಜಿಲ್ಲಾಡಳಿತವು ತಕ್ಷಣವೇ ತೆರವು ಕಾರ್ಯಾಚರಣೆ ತಡೆಹಿಡಿದು, ಮಧ್ಯಪ್ರವೇಶಿಸಬೇಕು. ಬಾಧಿತ 20 ಕುಟುಂಬಗಳಿಗೆ ಪರ್ಯಾಯ ವಸತಿ ಹಾಗೂ ಸೂಕ್ತ ಆಸರೆ ಕಲ್ಪಿಸಿದ ನಂತರವೇ ಮೇಲ್ಸೇತುವೆ ಕಾಮಗಾರಿ ಮುಂದುವರಿಸಬೇಕು ಎಂದು ಕೆ.ಜಿ.ಎಫ್ ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಇದನ್ನು ಓದಿದ್ದೀರಾ..?ಕೋಲಾರ | ಬರ ಪರಿಹಾರಕ್ಕೆ ಕೂಡಲೇ ಅನುದಾನ ನೀಡದಿದ್ದರೆ ಬೆಂಗಳೂರು ಚಲೋ ಮಾಡ್ತೇವೆ : ಸಿ.ಎಂ.ಆರ್. ಶ್ರೀನಾಥ್

ನಾವು ಅಭಿವೃದ್ಧಿಗೆ ವಿರೋಧಿಯಲ್ಲ. ಆದರೆ ಸಂತ್ರಸ್ತರು ಕಾಲು ಹಿಡಿದು ಬೇಡಿಕೊಂಡರೂ ಒಂದು ದಿನದ ಕಾಲಾವಕಾಶ ನೀಡದೆ ಏಕಾಏಕಿ ಮನೆ ಕೆಡವುದು ಅಮಾನವೀಯ. ಬೊಕ್ಕಸ ತುಂಬಿದ ಕಾರ್ಮಿಕರ ಮಕ್ಕಳನ್ನು ಅನಧಿಕೃತ ಎನ್ನುವುದು ತಪ್ಪು. ಈ ಕೂಡಲೇ ತೆರವು ಕಾರ್ಯಾಚರಣೆ ತಡೆಹಿಡಿಯದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿ ನ್ಯಾಯಾಂಗ ಹೋರಾಟ ನಡೆಸಲಿದ್ದೇವೆ ಎಂದು ಜ್ಯೋತಿ ಬಸು ಹೇಳಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್...

ಮಾಲೂರು | ನೈಸ್ ಟೋಲ್ ಅಕ್ರಮ – 7 ದಿನದಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗುತ್ತೆ

ಶಾಸಕ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಕಾಂಟ್ರಾಕ್ಟ್ ರೂಪದಲ್ಲಿ ಸಿಕ್ಕಿದೆ. ಮಾಜಿ...

ಕೋಲಾರ | ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ: ಶಾಸಕ ಡಾ.ಕೊತ್ತೂರು ಜಿ ಮಂಜುನಾಥ್ ಗರಂ

ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೆ ಹಾಗೂ ಶಿಷ್ಟಾಚಾರ ಪಾಲಿಸದೆ ಏಕಾಏಕಿ ಕಾಮಗಾರಿಗಳನ್ನು...

ಕೋಲಾರ | ಕೋಮುಲ್‌ನಿಂದಲೇ ಪಶು ಆಹಾರ ಘಟಕ ಆರಂಭಕ್ಕೆ ಕ್ರಮ: ನಂಜೇಗೌಡ

ಕೋಮುಲ್ ನೇತೃತ್ವದಲ್ಲಿಯೇ ಪಶು ಆಹಾರ ಘಟಕ ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು,...