ಕೊಪ್ಪಳ | ತಿಂಗಳಿಂದ ಮುಖ್ಯ ವೈದ್ಯರಿಲ್ಲ: ಸಿಬ್ಬಂದಿಯಿಂದ ಚಿಕಿತ್ಸೆ

Date:

ಎಷ್ಟೋ ಬಾರಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿದ್ದರೂ ರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರಕುವುದು ಕಷ್ಟವಾಗುತ್ತದೆ. ಇಂತಹ ವಾಸ್ತವದ ನಡುವೆ ಕೊಪ್ಪಳ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಳೆದ ಒಂದು ತಿಂಗಳಿನಿಂದ ಮುಖ್ಯ ವೈದ್ಯರೇ ಇಲ್ಲ. ಅನುಭವಿ ವೈದ್ಯರನ್ನು ಹುಡುಕುತ್ತಾ ಸಾರ್ವಜನಿಕರು ಆಸ್ಪತ್ರೆಯ ಮೆಟ್ಟಿಲು ಏರಿಳಿಯುವುದು ಮಾಮೂಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ನುರಿತ ವೈದ್ಯರೇ ಇಲ್ಲ. ಇದ್ದ ಒಬ್ಬ ವೈದ್ಯರು ಕೂಡ ವರ್ಗಾವಣೆಯಾಗಿ ಹೋಗಿದ್ದಾರೆ. ಅಂದಿನಿಂದ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ.

- Advertisement -

2021-22ನೇ ಸಾಲಿನಲ್ಲಿ ನಿರ್ಮಿಸಲಾದ ಈ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡಲಾಗಿತ್ತು. ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ನೇತೃತ್ವದಲ್ಲಿ ಚಾಲನೆ ದೊರಕಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಆಸ್ಪತ್ರೆಗೆ ಸತೀಶ್ ಕುಮಾರ್ ಎಂಬ ಎಂಬಿಬಿಎಸ್ ಪದವೀಧರ ವೈದ್ಯರನ್ನು ನೇಮಿಸಲಾಗಿತ್ತು. ಅವರನ್ನು ಹೊರತುಪಡಿಸಿ ಅಕೌಂಟೆಂಟ್, ಸ್ಟಾಫ್ ನರ್ಸ್ ಸೇರಿದಂತೆ 8 ಜನ ಸಿಬ್ಬಂದಿಗಳು ಸದ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಸೇವೆ ಸಲ್ಲಿಸಿದ್ದ ವೈದ್ಯ ಸತೀಶ್ ಕುಮಾರ್ ಹೆಚ್ಚುವರಿ ವ್ಯಾಸಂಗಕ್ಕಾಗಿ ಟ್ರಾನ್ಸ್ಫರ್ ತೆಗೆದುಕೊಂಡು ಹೋದಂದಿನಿಂದ ಆಸ್ಪತ್ರೆಯ ನರ್ಸ್‌ಗಳೇ ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಿದೆ. ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಯ ಅಗತ್ಯ ಬಂದಾಗ ಇದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.

ಇದನ್ನೂ ಓದಿ ಕೊಪ್ಪಳ | ನರೇಗಾ ಕಾರ್ಮಿಕರಿಗೆ ಮಕ್ಕಳ ಕಾಯ್ದೆಗಳ ಕುರಿತು ಅರಿವು

ಬೆನ್ನೂರು ಸುತ್ತಲಿನ ವಿವಿಧ ಹಳ್ಳಿಗಳಿಗೆ ಈ ಆರೋಗ್ಯ ಕೇಂದ್ರವೇ ಆಶಾಕಿರಣ. ಅಕ್ಕಪಕ್ಕದ 11 ಹಳ್ಳಿಗಳ 16 ಸಾವಿರ ಜನಸಂಖ್ಯೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡಿದರೆ ಮೊದಲು ಬರುವುದೇ ಈ ಆಸ್ಪತ್ರೆಗೆ. ಆದರೆ ಈಗ ಈ ಆಸ್ಪತ್ರೆ ಸಾರಥಿಯೇ ಇಲ್ಲದ ದೋಣಿಯಂತಾಗಿದೆ. ಸಣ್ಣಪುಟ್ಟ ಸಮಸ್ಯೆಗಳೊಂದಿಗೆ ಬರುವ ರೋಗಿಗಳಿಗೆ ಇಲ್ಲಿರುವ ಸಿಬ್ಬಂದಿ ಹೇಗೋ ಚಿಕಿತ್ಸೆ ನೀಡುತ್ತಾರೆ. ಆದರೆ ಗಂಭೀರ ಕಾಯಿಲೆಗಳು, ದೊಡ್ಡ ಅಪಘಾತಗಳು ಸಂಭವಿಸಿ ಗಂಭೀರ ಸ್ಥಿತಿಯಲ್ಲಿ ರೋಗಿಗಳು ಬಂದಾಗ ಸಿಬ್ಬಂದಿಗಳಲ್ಲಿ ಆತಂಕ ಮನೆಮಾಡುತ್ತದೆ.

ಸಿಬ್ಬಂದಿ ವರ್ಗವೂ ಆಸ್ಪತ್ರೆಗೆ ವೈದ್ಯರನ್ನು ನೇಮಿಸಲು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಮೇಲಧಿಕಾರಿಗಳು ಇದುವರೆಗೂ ಸ್ಪಂದಿಸಿಲ್ಲ ಎಂದು ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯ ಕುರಿತು ಮಾತನಾಡಿದ ಸ್ಥಳೀಯರು, “ಒಂದು ತಿಂಗಳಿನಿಂದ ವೈದ್ಯರು ವರ್ಗಾವಣೆಯಾಗಿ ಹೋಗಿದ್ದಾರೆ. ಅವರ ಬದಲಿಗೆ ಈ ಆಸ್ಪತ್ರೆಗೆ ಯಾವ ವೈದ್ಯರನ್ನೂ ನೇಮಕ ಮಾಡಿಲ್ಲ. ಇದರಿಂದಾಗಿ ಚಳಿ, ಜ್ವರ, ನೆಗಡಿ, ಕೆಮ್ಮು, ಸಣ್ಣಪುಟ್ಟ ಗಾಯಗಳ ಚಿಕಿತ್ಸೆಗೆ ಬರುವ ರೋಗಿಗಳನ್ನು ಸಿಬ್ಬಂದಿ ಚಿಕಿತ್ಸೆ ನೀಡಿ ಕಳುಹಿಸುತ್ತಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಾಗ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗೆ ಹೋಗಬೇಕಾಗುತ್ತಿದೆ. ಮೊದಲಿದ್ದ ವೈದ್ಯರು ಬಹಳ ಕಾಳಜಿಯಿಂದ ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದರು. ಅಂತಹ ವೈದ್ಯರನ್ನೇ ಹುಡುಕಿ ಇಲ್ಲಿ ನೇಮಕ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜು ಅವರನ್ನು ಈದಿನ.ಕಾಮ್ ತಂಡ ಸಂಪರ್ಕಿಸಿದಾಗ ಅವರಿಂದ ಸಮರ್ಪಕ ಪ್ರತಿಕ್ರಿಯೆ ದೊರೆಯಲಿಲ್ಲ. ಸಮಸ್ಯೆಯನ್ನು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ಸಿಗಬೇಕು. ಉಚಿತವಾಗಿ, ಉತ್ತಮವಾಗಿ, ಕಾಲಕಾಲಕ್ಕೆ ವೈದ್ಯರನ್ನು ನೇಮಿಸುವುದು, ಔಷಧಿಗಳನ್ನು ಪೂರೈಸುವುದು ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಸಮಸ್ಯೆಗೆ ತ್ವರಿತ ಪರಿಹಾರ ಒದಗಿಸಬೇಕಿದೆ. ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರನ್ನು ನೇಮಿಸಿ ಸ್ಥಳೀಯರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಮಾಡುವುದು ಸಾರ್ವಜನಿಕರ ಆಶಯವಾಗಿದೆ.

WhatsApp Image 2026 04 20 at 18.37.37 e1776691850820
ವಿಜಯಕುಮಾರ್ ಎಂ
+ posts

ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ವಿಜಯಕುಮಾರ್ ಎಂ
ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಡಾ. ನಾಗರಾಜ್

ಆಗ್ನೇಯ ಪದವೀಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಹಾಗೂ ಪಕ್ಷದ ಯುವ ಘಟಕದ...

ಬಾಗೇಪಲ್ಲಿ | ನಟ ಪ್ರಕಾಶ್ ರಾಜ್ ಭಾಷಣಕ್ಕೆ ನಿರ್ಬಂಧ : ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕ್ರಮಕ್ಕೆ ಡಿ.ವೈ.ಎಫ್.ಐ ತೀವ್ರ ಆಕ್ರೋಶ

ಪಟ್ಟಣದ ತಾ.ಪಂ.ಪಕ್ಕೆ ಆಯೋಜಿಸಲಾಗಿದ್ದ ಡಿ.ವೈ.ಎಫ್.ಐ (ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್) ಸಮಾವೇಶದಲ್ಲಿ...

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಖಂಡಿಸಿ ಕೃಷ್ಣರಾಜ...

ಕಾರವಾರ | ಚುನಾವಣಾ ಆಯೋಗ ಸುಧಾರಣೆಗೆ ಆಗ್ರಹ: ಜ್ಞಾನೇಶ್ ಕುಮಾರ್‌ ಪದಚ್ಯುತಿಗೆ KPRS ಒತ್ತಾಯ

ಕಾರವಾರ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ...