ಮಸ್ಕಿ ಪಟ್ಟಣದ ಸಮೀಪ 2 ದಿನಗಳ ಹಿಂದೆ ಸುರಿದ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಸುಮಾರು 30 ಆಡುಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಶುಕ್ರವಾರ ಆಡು ಮಾಲೀಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಆಡುಗಳ ಸಾವಿನಿಂದ ಉಂಟಾದ ನಷ್ಟದ ಕುರಿತು ಮಾಲೀಕರಿಂದ ಮಾಹಿತಿ ಪಡೆದ ಶಾಸಕರು, ವೈಯಕ್ತಿಕವಾಗಿ ₹40 ಸಾವಿರ ಸಹಾಯಧನ ನೀಡಿದರು. ಸಂಕಷ್ಟದಲ್ಲಿರುವ ಕುಟುಂಬದೊಂದಿಗೆ ಇರುವುದಾಗಿ ಭರವಸೆ ನೀಡಿದ ಅವರು, ‘ಸಂಬಂಧಪಟ್ಟ ಇಲಾಖೆಯಿಂದ ದೊರೆಯುವ ಪರಿಹಾರವನ್ನು ಶೀಘ್ರವಾಗಿ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಸ್ತೆಯೋ, ಕೆಸರುಗದ್ದೆಯೋ? ಐದನಾಳ ಎಸ್‌ಸಿ ವಾರ್ಡ್‌ನಲ್ಲಿ ಜನರ ಪರದಾಟ
ತಹಶೀಲ್ದಾರ್ ಮಂಜುನಾಥ ಬೋಗಾವತಿ ಸೇರಿದಂತೆ ವಿವಿಧ ಇಲಾಖೆ ಗಳ ಅಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
This video cannot be played in your browser. Open the video directly





