ಚಳಿಗಾಲದ ಅಧಿವೇಶನದ ಉಳಿದ ಅವಧಿವರೆಗೆ ಪ್ರತಿಪಕ್ಷದ 47 ಸಂಸದರ ಅಮಾನತು

Date:

ಸದನದಲ್ಲಿ ಗದ್ದಲ ಉಂಟು ಮಾಡಿದ್ದಕ್ಕಾಗಿ ಕಾಂಗ್ರೆಸ್ ಸೇರಿ ವಿವಿಧ ಪ್ರತಿ ಪಕ್ಷಗಳಿಂದ ಕಳೆದ ಎರಡು ಅಧಿವೇಶನದ ದಿನಗಳಿಂದ ಇಲ್ಲಿಯವರೆಗೆ 47 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಇಂದು(ಡಿ.18) ಅಮಾನತುಗೊಂಡಿರುವ ಸಂಸದರಲ್ಲಿ ಕಾಂಗ್ರೆಸ್ ಪಕ್ಷದ ಅಧೀರ್ ರಂಜನ್ ಚೌಧರಿ, ಡಿಎಂಕೆ ಸಂಸದರಾದ ಟಿ ಆರ್ ಬಾಲು ಮತ್ತು ದಯಾನಿಧಿ ಮಾರನ್ ಮತ್ತು ಟಿಎಂಸಿಯ ಸೌಗತ ರಾಯ್ ಸೇರಿದ್ದಾರೆ.

31 ಮಂದಿಯನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ್ದರೆ,  ಘೋಷಣೆಗಳನ್ನು ಕೂಗಲು ಸ್ಪೀಕರ್ ವೇದಿಕೆಯ ಮೇಲೆ ಹತ್ತಿದ ಕಾರಣಕ್ಕಾಗಿ ವಿಶೇಷಾಧಿಕಾರ ಸಮಿತಿಯ ಕೆ ಜಯಕುಮಾರ್, ವಿಜಯ್ ವಸಂತ್ ಮತ್ತು ಅಬ್ದುಲ್ ಖಲೀಕ್ ಅವರನ್ನು ಅಮಾನತುಗೊಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ‘ದೇಶಕ್ಕಾಗಿ ದೇಣಿಗೆ’ ಅಭಿಯಾನಕ್ಕೆ ಚಾಲನೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ಈ ಸಂಸದರ ಅಮಾನತು ಪ್ರಸ್ತಾವನೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸದನದಲ್ಲಿ ಮಂಡಿಸಿದರು. ನಂತರ ಅದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ನಿರಂತರ ಪ್ರತಿಭಟನೆ ನಡೆಸಿದ ನಂತರ ಅಮಾನತು ಪ್ರಕ್ರಿಯೆ ಮುಂದುವರೆದಿದೆ. ವಿರೋಧ ಪಕ್ಷದ ಸಂಸದರ ಪ್ರತಿಭಟನೆಯ ದೃಷ್ಟಿಯಿಂದ ಲೋಕಸಭೆಯನ್ನು ನಾಳೆಗೆ ಮುಂದೂಡಲಾಗಿದೆ.

ಡಿಸೆಂಬರ್ 14 ರಂದು, ಸಂಸತ್ತಿನ ಭದ್ರತಾ ಉಲ್ಲಂಘನೆಯ ಒಂದು ದಿನದ ನಂತರ, 13 ಲೋಕಸಭಾ ಸಂಸದರು ಮತ್ತು ಒಬ್ಬ ರಾಜ್ಯಸಭಾ ಸಂಸದರನ್ನು “ಅಶಿಸ್ತಿನ ನಡವಳಿಕೆ” ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ.

ಲೋಕಸಭೆಯಿಂದ ಅಮಾನತುಗೊಂಡಿರುವ ಸಂಸದರಲ್ಲಿ ಮಾಣಿಕಂ ಟ್ಯಾಗೋರ್, ಕನಿಮೋಳಿ, ಪಿಆರ್ ನಟರಾಜನ್, ವಿಕೆ ಶ್ರೀಕಂದನ್, ಬೆನ್ನಿ ಬಹನನ್, ಕೆ ಸುಬ್ರಮಣ್ಯಂ, ಎಸ್ ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್ ಸೇರಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ ಬ್ರಿಯಾನ್ ರಾಜ್ಯಸಭೆಯಿಂದ ಅಮಾನತುಗೊಂಡ ಏಕೈಕ ಸಂಸದ.

 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಎಂಸಿಗೆ ಈಗಲೂ ಮೈತ್ರಿ ಬಾಗಿಲು ತೆರೆದಿದೆ: ಕಾಂಗ್ರೆಸ್ ಮುಖಂಡ

ಇಂಡಿಯಾ ಒಕ್ಕೂಟಕ್ಕೆ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಲ್ಲ 42...

ರೈತ ಹೋರಾಟ | ಸರ್ಕಾರದ ದಮನಕ್ಕೆ ಬಗ್ಗದ ‘ದೆಹಲಿ ಚಲೋ’; ಈವರೆಗೆ 6 ರೈತರು ಸಾವು

ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ರೈತ ಸಾಲ ಮನ್ನಾಕ್ಕಾಗಿ ಆಗ್ರಹಿಸಿದ...

ಪ್ರಜಾಪ್ರಭುತ್ವ, ಸತ್ಯ ಉಳಿಸುವಲ್ಲಿ ಮಾಧ್ಯಮ ವಿಫಲವಾದ್ರೆ ಮುಂದೇನು?

ದೇಶದಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ...

ಲೋಕಸಭೆ ಚುನಾವಣೆಗೆ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ....