ಮನರೇಗಾ ವೇತನ ಪರಿಷ್ಕರಣೆ | ದಿನಗೂಲಿಯಲ್ಲಿ ಹರಿಯಾಣ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶದಲ್ಲಿ ಕನಿಷ್ಠ ಕೂಲಿ

Date:

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 2024-25ನೇ ಹಣಕಾಸು ವರ್ಷಕ್ಕಾಗಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ)ಯಡಿ ಪರಿಷ್ಕೃತ ವೇತನಗಳನ್ನು ಪ್ರಕಟಿಸಿದ್ದು, ಸೋಮವಾರ(ಏ.1)ದಿಂದ ಜಾರಿಗೆ ಬರಲಿವೆ.

ಕಾಯ್ದೆಯ ವ್ಯಾಪ್ತಿಗೊಳಪಟ್ಟಿರುವ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೇತನಗಳನ್ನು ಹೆಚ್ಚಿಸಲಾಗಿದೆ. ಆದರೆ ಮೊತ್ತಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕಾಯ್ದೆಯು ವಿಶೇಷ ಅಧಿಸೂಚಿತ ದಿನಗೂಲಿಗಳಲ್ಲಿ ಗ್ರಾಮೀಣ ಕುಟುಂಬಗಳಿಗೆ ನೂರು ದಿನಗಳ ಉದ್ಯೋಗದ ಖಾತರಿಯನ್ನು ನೀಡುತ್ತದೆ.

ದೇಶದಲ್ಲಿ ಅತ್ಯಧಿಕ ಮನರೇಗಾ ವೇತನವನ್ನು ನೀಡುವ ರಾಜ್ಯವಾಗಿ ಹರಿಯಾಣ ಮುಂದುವರೆದಿದೆ. ರಾಜ್ಯದಲ್ಲಿ ಪರಿಷ್ಕೃತ ದಿನಗೂಲಿಯು 374 ರೂ.ಗಳಿದ್ದು, ಕಳೆದ ವರ್ಷದ 357 ರೂ.ಗಳಿಗೆ ಹೋಲಿಸಿದರೆ ಶೇ.4.8ರಷ್ಟು ಹೆಚ್ಚಳವಾಗಿದೆ. ಇತ್ತೀಚಿನ ಪರಿಷ್ಕರಣೆಯಂತೆ ಗೋವಾ(356 ರೂ.) ಮತ್ತು ಕರ್ನಾಟಕ (349 ರೂ.) ನಂತರದ ಸ್ಥಾನಗಳಲ್ಲಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸಿಕ್ಕಿಮ್‌ನ ಗ್ನಾಥಾಂಗ್, ಲಾಚುಂಗ್ ಮತ್ತು ಲಾಚೆನ್ ಗ್ರಾಮ ಪಂಚಾಯಿತಿಗಳಲ್ಲಿ ಮನರೇಗಾ ವೇತನ ದಿನವೊಂದಕ್ಕೆ 374 ರೂ.ಗಳಾಗಿದ್ದರೆ ರಾಜ್ಯದ ಇತರ ಭಾಗಗಳಲ್ಲಿ ದಿನಕ್ಕೆ 249 ರೂ.ಆಗಿದೆ.

ಸೋಮವಾರದಿಂದ ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶಗಳ ಅನುಸೂಚಿತವಲ್ಲದ ಪ್ರದೇಶಗಳು ಅನುಕ್ರಮವಾಗಿ ₹234, ₹234 ಮತ್ತು ₹236ರಂತೆ ಕನಿಷ್ಠ ಮನರೇಗಾ ವೇತನಗಳನ್ನು ಹೊಂದಿರಲಿವೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಗೋವಾದಲ್ಲಿ ದಿನವೊಂದಕ್ಕೆ 34 ರೂ.ಗಳ ಗರಿಷ್ಠ ಏರಿಕೆಯನ್ನು ಮಾಡಲಾಗಿದೆ. ಕಳೆದ ವರ್ಷ 322 ರೂ.ಗಳ ದಿನಗೂಲಿ ನೀಡುತ್ತಿದ್ದ ಗೋವಾ ಏಪ್ರಿಲ್‌ 1ರಿಂದ 356 ರೂ.ಗಳ (ಶೇ.10.56ರಷ್ಟು ಹೆಚ್ಚಳ) ದಿನಗೂಲಿಯನ್ನು ನೀಡಲಿದೆ. ಕರ್ನಾಟಕ (33 ರೂ.ಏರಿಕೆ), ಆಂಧ್ರಪ್ರದೇಶ ಮತ್ತು ತೆಲಂಗಾಣ (ತಲಾ 28 ರೂ.ಏರಿಕೆ ) ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಮೂರು ರಾಜ್ಯಗಳಲ್ಲಿ ಮನರೇಗಾ ದಿನಗೂಲಿಯಲ್ಲಿ ಅನುಕ್ರಮವಾಗಿ ಶೇ.10.44, ಶೇ.10.29 ಮತ್ತು ಶೇ.10.29ರಷ್ಟು ಏರಿಕೆಯಾಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ (ತಲಾ 7ರೂ. ಏರಿಕೆ) ಮತ್ತು ನಾಗಾಲ್ಯಾಂಡ್ (10 ರೂ.ಏರಿಕೆ)ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಂತ ಕಡಿಮೆ ಹೆಚ್ಚಳವಾಗಿದೆ. ಶೇಕಡಾವಾರು ಲೆಕ್ಕದಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಕಳೆದ ವರ್ಷಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ ಏರಿಕೆ(ತಲಾ ಶೇ.3.04)ಯನ್ನು ಕಂಡಿವೆ. ಇವುಗಳಿಗಿಂತ ಮೇಲಿನ ಸ್ಥಾನದಲ್ಲಿರುವ ಲಕ್ಷದ್ವೀಪದಲ್ಲಿ ಶೇ.3.62ರಷ್ಟು ವೇತನ ಹೆಚ್ಚಳವಾಗಿದೆ.

2024-25ನೇ ಸಾಲಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಾಸರಿ ವೇತನವು ದಿನವೊಂದಕ್ಕೆ 284 ರೂ.ಗಳಾಗಿದ್ದು, ಕಳೆದ ವರ್ಷ ಅದು 267 ರೂ.ಆಗಿತ್ತು.

ಗ್ರಾಹಕ ಬೆಲೆ ಸೂಚ್ಯಂಕದ ಕೃಷಿ ಕಾರ್ಮಿಕ ಆಯಾಮ (ಸಿಪಿಐ-ಎಎಲ್)ದಲ್ಲಿ ಬದಲಾವಣೆಗಳನ್ನು ಆಧರಿಸಿ ಪ್ರತಿವರ್ಷ ಮನರೇಗಾ ವೇತನಗಳನ್ನು ಪರಿಷ್ಕರಿಸಲಾಗುತ್ತದೆ.

ಈ ವರ್ಷದ ಫೆಬ್ರವರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕುರಿತ ಸಂಸದೀಯ ಸ್ಥಾಯಿ ಸಮಿತಿಯು, 2010-11ರ ಸಿಪಿಐ-ಎಎಲ್ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ವೇತನ ಪರಿಷ್ಕರಣೆ ಪದ್ಧತಿಯು ಈಗಿನ ಹಣದುಬ್ಬರ ಮತ್ತು ಜೀವನವೆಚ್ಚಕ್ಕೆ ಹೊಂದಿಕೆಯಾಗುವುದಿಲ್ಲವೆಂದು ತನ್ನ ವರದಿಯಲ್ಲಿ ಹೇಳಿತ್ತು.

ಈ ಸುದ್ದಿ ಓದಿದ್ದೀರಾ? ಬಿಜೆಪಿಗೆ ₹4,600 ಕೋಟಿ ದಂಡ ವಿಧಿಸದ ಐಟಿ, ಕಾಂಗ್ರೆಸ್‌ನಿಂದ ₹135 ಕೋಟಿಗೆ ಬೇಡಿಕೆ ಇಟ್ಟಿದೆ: ಖರ್ಗೆ

ಭಾರತದಲ್ಲಿ ಅಗತ್ಯಾಧಾರಿತ ಕನಿಷ್ಠ ವೇತನವನ್ನು ದಿನಕ್ಕೆ 375 ರೂ.ಗಳಿಗೆ ನಿಗದಿಪಡಿಸಬೇಕೆಂದು 2019ರಲ್ಲಿ ಶಿಫಾರಸು ಮಾಡಿದ್ದ ತಜ್ಞರ ಸಮಿತಿಯೊಂದರ ವರದಿಯನ್ನು ಉಲ್ಲೇಖಿಸಿದ್ದ ಸ್ಥಾಯಿ ಸಮಿತಿಯು, ಅದರಂತೆ ಮನರೇಗಾ ವೇತನಗಳನ್ನು ಪರಿಷ್ಕರಿಸುವಂತೆ ಸಲಹೆ ನೀಡಿತ್ತು. ಆದರೆ ಪರಿಷ್ಕೃತ ವೇತನಗಳಂತೆ ಯಾವುದೇ ರಾಜ್ಯವು 374 ರೂ.ಗಿಂತ ಹೆಚ್ಚಿನ ದಿನಗೂಲಿಯನ್ನು ನೀಡುವುದಿಲ್ಲ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕಿಸ್ತಾನ | ಸರಬ್ಜಿತ್ ಸಿಂಗ್ ಕೊಲೆಯ ಆರೋಪಿ ಅಮೀರ್ ಸರ್ಫರಾಜ್ ಗುಂಡಿಕ್ಕಿ ಹತ್ಯೆ

ಭಾರತದ ಸರಬ್ಜಿತ್ ಸಿಂಗ್‌ ಹತ್ಯೆಯ ಆರೋಪಿ ಪಾಕಿಸ್ತಾನದ ಭೂಗತ ಪಾತಕಿ ಅಮೀರ್‌...

ಮಧ್ಯಪ್ರದೇಶ| ಎರಡು ದಿನಗಳ ಹಿಂದೆ ಬೋರ್‌ವೆಲ್‌ಗೆ ಬಿದ್ದ 6 ವರ್ಷದ ಬಾಲಕ ಮೃತ್ಯು

ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಎರಡು ದಿನಗಳ ಹಿಂದೆ ತೆರೆದ...

ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವದ ಬಗ್ಗೆ ಏ.18ರಂದು ಸುಪ್ರೀಂ ತೀರ್ಪು

ಚುನಾವಣಾ ಬಾಂಡ್‌ ಗಳ ಯೋಜನೆಯ ಸಿಂಧುತ್ವದ ಬಗ್ಗೆ ಪ್ರಶ್ನಿಸಿದ್ದ ಅರ್ಜಿಗಳ ಒಂದು...

ಲೋಕಸಭೆ ಚುನಾವಣೆ | ಪ್ರಣಾಳಿಕೆ: ಬಿಜೆಪಿ ‘ಸಂಕಲ್ಪ ಪತ್ರ’ V/s ಕಾಂಗ್ರೆಸ್‌ ‘ನ್ಯಾಯ ಪತ್ರ’; 10 ಪ್ರಮುಖ ಅಂಶಗಳು

ಮೂರನೇ ಬಾರಿಗೆ ಅಧಿಕಾರ ಹಿಡಿಯುತ್ತೇವೆಂದು ಅಬ್ಬರದ ಭಾಷಣ ಮಾಡುತ್ತಿರುವ ಬಿಜೆಪಿ, ಮುಂಬರು...