ಮೋದಿ ಸರ್ಕಾರದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ : ಐಆರ್‌ಎಫ್‌ಎ ವರದಿಯಲ್ಲಿ ಏನಿದೆ ?

Date:

ಭಾರತ ಆತಂಕ ಉಂಟು ಮಾಡುವ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಹೊಂದಿದೆ. ದೇಶದಲ್ಲಿ ಸೌಹಾರ್ದತೆಯ ವಾತಾವರಣ ನಿರಂತರವಾಗಿ ಕುಸಿಯುತ್ತಿದೆ ಎನ್ನುವುದನ್ನು ಈ ವರದಿ ಸೂಚ್ಯವಾಗಿ ಹೇಳಿದೆ. ಚುನಾವಣಾ ಪ್ರಚಾರ ಭಾಷಣಗಳಲ್ಲಿ, ಆಡಳಿತದಲ್ಲಿಯೂ ಮುಸ್ಲೀಮರ ವಿರುದ್ಧ 56 ಇಂಚಿನ ಎದೆಯ ನರೇಂದ್ರ ಮೋದಿ ಅವರಿಗೆ ತಾವು ಅತ್ಯಂತ ವಿದೇಯತೆ ತೋರುವ ಡೊನಾಲ್ಡ್‌ ಟ್ರಂಪ್‌ ಆಡಳಿತದ  ಅಮೇರಿಕದಿಂದಲೇ ಈ ರೀತಿಯ ಕಳವಳ ವ್ಯಕ್ತವಾಗಿದೆ.


ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದ ಬಳಿಕ ದೇಶದಲ್ಲಿ ಮುಸ್ಲೀಮರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ವಾದಕ್ಕೆ ಈಗ ಜಾಗತಿಕ ಮಟ್ಟದಲ್ಲೇ ಪುಷ್ಟಿ ಸಿಕ್ಕಿದೆ. ಪ್ರಧಾನಿ ಮೋದಿ ಯಾರಿಗೆ ಅಂಜಿ ಕೂತಿದ್ದರೋ, ಅವರ ಅಧ್ಯಕ್ಷಗಿರಿಯಲ್ಲಿರುವ ಅಮೇರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ (ಯುಎಸ್‌ಸಿಊಆರ್‌ಎಫ್‌) 2026ರ ವಾರ್ಷಿಕ ವರದಿಯಲ್ಲಿ ದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತಪರಾಕಿಯಂತಿದೆ.

ಅಮೇರಿಕಾ, ಇಸ್ರೇಲ್‌ ದೇಶಗಳು ಸ್ಥಾಪಿತ ಹಿತಾಸಕ್ತಿಯಾಗಿ ಇರಾನ್‌ ಮೇಲೆ ದಾಳಿ ಮಾಡಿದಾಗ ಅಮೇರಿಕ ಹಾಗೂ ಇಸ್ರೇಲ್‌ ದೇಶಗಳ ಬೆಂಬಲವವಾಗಿ ನಿಂತಿದ್ದ ಮೋದಿಗೆ ಈಗ ಐಆರ್‌ಎಫ್‌ಎ ನೀಡಿರುವ ವರದಿಯಿಂದ ತೀವ್ರ ಮುಖಭಂಗವಾಗಿದೆ. ಬ್ರಿಕ್ಸ್‌ ದೇಶಗಳ ಒಕ್ಕೂಟದಿಂದಲೂ ಕೂಡ ವಿಶ್ವಾಸ ಕಳೆದುಕೊಳ್ಳುವ ಹಾಗೆ ಮಾಡಿದ ಮೋದಿ ಮಾಡಿದ ಅವಾಂತರಕ್ಕೆ ದೇಶ ಜಗತ್ತಿನ ಮುಂದೆ ತಲೆತಗ್ಗಿಸುವಂತಾಗಿದೆ.  

ಆಯೋಗದ ವರದಿಯ ಪ್ರಕಾರ, ಭಾರತ ಆತಂಕ ಉಂಟು ಮಾಡುವ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಹೊಂದಿದೆ. ದೇಶದಲ್ಲಿ ಸೌಹಾರ್ದತೆಯ ವಾತಾವರಣ ನಿರಂತರವಾಗಿ ಕುಸಿಯುತ್ತಿದೆ ಎನ್ನುವುದನ್ನು ಈ ವರದಿ ಸೂಚ್ಯವಾಗಿ ಹೇಳಿದೆ. ಚುನಾವಣಾ ಪ್ರಚಾರ ಭಾಷಣಗಳಲ್ಲಿ, ಆಡಳಿತದಲ್ಲಿಯೂ ಮುಸ್ಲೀಮರ ವಿರುದ್ಧ 56 ಇಂಚಿನ ಎದೆಯ ನರೇಂದ್ರ ಮೋದಿ ಅವರಿಗೆ ತಾವು ಅತ್ಯಂತ ವಿದೇಯತೆ ತೋರುವ ಡೊನಾಲ್ಡ್‌ ಟ್ರಂಪ್‌ ಆಡಳಿತದ  ಅಮೇರಿಕದಿಂದಲೇ ಈ ರೀತಿಯ ಕಳವಳ ವ್ಯಕ್ತವಾಗಿದೆ. ಟ್ರಂಪ್‌ ಗೆ ಅಂಜಿ ನಡೆದುಕೊಳ್ಳುವ ಮೋದಿ, ಇದಕ್ಕೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದೇ ಕುತೂಹಲ. ತಮ್ಮ ರಾಜಕೀಯ ಸಿದ್ದಾಂತವನ್ನು ಸರ್ಕಾರದ ಆಡಳಿತದಲ್ಲೂ ಮನಸೋಇಚ್ಚೆ ತುರುಕಿಸುವ ಮೋದಿಗೆ ಇನ್ನಾದರೂ ಬುದ್ದಿ ಬರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಐಆರ್‌ಎಫ್‌ಎ 19987ರ ಅಡಿ ರಚನೆಯಾಗಿರುವ ಒಂದು ಸ್ವತಂತ್ರ ಹಾಗೂ ದ್ವಿಪಕ್ಷೀಯ ಸಂಸ್ಥೆಯಾಗಿದ್ದು ಅಮೇರಿಕದ ನೀತಿ ಬದಲಾವಣೆಯ ಬಗ್ಗೆ ಅಮೇರಿಕದ ಅಧ್ಯಕ್ಷ. ವಿದೇಶಾಂಗ ಕಾರ್ಯದರ್ಶಿ ಹಾಗೂ ಸಂಸತ್‌ ಗೆ ಸಲಹೆಗಳನ್ನು ನೀಡುತ್ತದೆ. ವಿದೇಶಗಳಲ್ಲಿನ ಧಾರ್ಮಿಕ ಸ್ವಾಂತತ್ರ್ಯದ ಬಗ್ಗೆಯೂ ಮಾಹಿತಿ, ಸಲಹೆಗಳನ್ನು ನೀಡುತ್ತದೆ. ಸಂವಿಧಾನಬದ್ಧವಾಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಮೋದಿ ಸರ್ಕಾರ ಅನೇಕ ಬಾರಿ ಉಲ್ಲಂಘನೆ ಮಾಡಿದೆ ಎನ್ನುವುದಕ್ಕೆ ಇಲ್ಲಿ ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ನಡೆದಿರುವ ಹಲ್ಲೆ, ದೌರ್ಜನ್ಯಗಳೇ ಸಾಕ್ಷಿಯಾಗಿ ನಿಲ್ಲುತ್ತವೆ.

ಇದನ್ನೂ ಓದಿ : ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

ಇನ್ನು, 18 ದೇಶಗಳನ್ನು ‘ಆತಂಕ ಉಂಟುಮಾಡುವ ದೇಶಗಳು’ (ಸಿಪಿಸಿ) ಎಂದು ಕರೆಯಲಾಗಿದೆ. 11 ದೇಶಗಳನ್ನು ‘ವಿಶೇಷ ಗಮನ ನೀಡಬೇಕಾದ ದೇಶಗಳು’ (ಎಸ್‌ಡಬ್ಲ್ಯುಎಲ್) ಎಂದು ಕರೆದಿದೆ. ಏಳು ಸಂಸ್ಥೆ/ಸಂಘಟನೆಗಳನ್ನು ‘ಆತಂಕ ಉಂಟುಮಾಡುವ ಸಂಸ್ಥೆಗಳು’ (ಇಪಿಸಿ) ಎಂದು ಪಟ್ಟಿ ಮಾಡಲಾಗಿದೆ.

- Advertisement -

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ದೇಶವು ‘ಆತಂಕ ಸೃಷ್ಟಿಸುವ ದೇಶ’ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ  2014ರಿಂದ  ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ(ಎನ್‌.ಡಿ.ಎ ಒಕ್ಕೂಟ) ಅಧಿಕಾರಕ್ಕೆ ಬಂದಾಗಲಿಂದ ಅಲ್ಪಸಂಖ್ಯಾತರನ್ನೇ ಗುರಿ ಮಾಡಿಕೊಂಡು ಕಾಯ್ದೆಗಳನ್ನು, ಕಠಿಣ ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ), ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ವಕ್ಸ್ ತಿದ್ದುಪಡಿ ಕಾಯ್ದೆ ಮತ್ತು 2025ರ ವಲಸೆ ಮತ್ತು ವಿದೇಶಿಯರ ಮಸೂದೆ- ಇವುಗಳನ್ನು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡೇ ಜಾರಿಗೊಳಿಸಲಾಗಿದ್ದು, ಇವು ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿವೆ ಎಂದು ವರದಿ ಹೇಳಿದೆ.ವರದಿಯಲ್ಲಿ ಉಲ್ಲೇಖಿಸಿರುವುದು ಮಾತ್ರವಲ್ಲದೇ, ಈ ಮೇಲಿನ ಎಲ್ಲಾ ಕಾಯ್ದೆಗಳು ಹಾಗೂ ನೀತಿ ನಿಯಮಗಳನ್ನು ಜಾರಿಗೆ ತಂದಾಗ ದೇಶದಲ್ಲಿ ನಡೆದ ಪ್ರತಿಭಟನೆಗಳು ಕೂಡ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿಯುತ್ತಿದೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸರ್ಕಾರದ ಬುಲ್ಡೋಜರ್‌ ನೀತಿ, ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಲ್ಲಿ ಗೋರಕ್ಷಣೆಯ ನೆಪದಲ್ಲಿ ನಡೆದ ಮುಸ್ಲೀಮರ ಮೇಲಿನ ದಾಳಿ, ಗುಂಪು ಹಲ್ಲೆ, ಕೊಲೆ ಇವೆಲ್ಲವನ್ನು ಕೂಡ ವರದಿಯಲ್ಲಿ ಗಮನಾರ್ಹವಾಗಿ ಉಲ್ಲೇಖಿಸಲಾಗಿದೆ. ಅಲ್ಪಸಂಖ್ಯಾತರನ್ನು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಥವಾ ಪ್ರಾರ್ಥನಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಮಾಡಿದ ಕಾನೂನು ಬದಲಾವಣೆ, ದೇಶದ 12 ರಾಜ್ಯಗಳಲ್ಲಿ ತರಲಾಗಿರುವ ಮತಾಂತರ ಕಾಯ್ದೆ, ಧಾರ್ಮಿಕ ನಿರಾಶ್ರಿತರನ್ನು ಗಡಿಪಾರು ಮಾಡುವ ನೀತಿ ದೇಶದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಮೋದಿ ಸರ್ಕಾರ ಕೇಂದ್ರ ಚುನಾವಣಾ ಆಯೋಗದಿಂದಲೂ ಎಸ್‌ ಐ ಆರ್‌ ಪ್ರಕ್ರಿಯೆಗಳ ಮೂಲಕವೂ ಇಂತಹ ಷಡ್ಯಂತ್ರ ಮಾಡುತ್ತಿದೆ ಎನ್ನುವ ಗಂಭೀರ ಆರೋಪವೂ ಇದೆ.  

ಅನೇಕ ರಾಜ್ಯಗಳಲ್ಲಿ ಹಿಂದೂ ರಾಷ್ಟ್ರೀಯವಾದಿ ಗುಂಪುಗಳು ನಿರ್ಭೀತಿಯಿಂದ ಕ್ರೈಸ್ತ ಮತ್ತು ಮುಸ್ಲಿಮರನ್ನು ಪ್ರಚೋದನೆಗೆ, ಕಿರುಕುಳಕ್ಕೆ ಒಳಪಡಿಸಿವೆ.  ವಕ್ಸ್ ಕಾಯ್ದೆಗೆ ತಿದ್ದುಪಡಿ ತಂದು ವಕ್ಸ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿದ್ದು ಮತ್ತು ವಕ್ಸ್ ಆಸ್ತಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವುದಲಕ್ಕೆ ಕುತಂತ್ರ ರೂಪಿಸಿದ್ದನ್ನು ಕೂಡ  ಆಯೋಗ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಹಾಗೆಯೇ ಉತ್ತರಾಖಂಡ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಕಾಯ್ದೆಗೆ (ಯುಎಸ್‌ಎಎಂಇ) ತಿದ್ದುಪಡಿ ತಂದು ಮದರಸಗಳ ಜತೆಗೆ ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತರ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಂದೆ ಎಂದು ಹೇಳಿದ್ದಲ್ಲದೇ, ಪಹಲ್ಗಾಮ್ ನಡೆದ ಉಗ್ರರ ದಾಳಿಯ ಬಗ್ಗೆಯೂ ಮತ್ತು ಅದರ ಸುತ್ತ ನಡೆದ ಬೆಳವಣಿಗೆಗಳ ಬಗ್ಗೆ, ಮೋದಿ ಸರ್ಕಾರ ನಡೆದುಕೊಂಡ ಕುರಿತಾಗಿಯೂ ಸ್ಪಷ್ಟವಾಗಿ ಉಲ್ಲೇಖ ಮಾಡಿಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಸಿಎಎ ವಿರುದ್ಧ ಹೋರಾಟ ನಡೆಸಿದ ವಿದ್ಯಾರ್ಥಿ ಮುಖಂಡ ಉಮ‌ರ್ ಖಾಲಿದ್, ಶಾರ್ಜೀಲ್ ಇಮಾಮ್ ಅವರು ಐದು ವರ್ಷಗಳಿಂದ ಜೈಲಿನಲ್ಲಿದ್ದು, ವಿಚಾರಣೆಯೇ ನಡೆದಿಲ್ಲ. ಕಾಶ್ಮೀರ ಮತ್ತು ಭಾರತದಲ್ಲಿ ಮುಸ್ಲಿಮರ ಮೇಲಿನ ದಾಳಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದರೆಂದು ವಿಶ್ವವಿದ್ಯಾಲಯವೊಂದರ ಪ್ರೊಫೆಸರ್ ಅಲಿಖಾನ್ ಮಹ್ಮದಾಬಾದ್ ಅವರ ವಿರುದ್ಧ ಬಿಜೆಪಿ ಮುಖಂಡರೊಬ್ಬರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರು ಎಂದು ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ವರದಿ ಉಲ್ಲೇಖ ಮಾಡಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ವರದಿಯನ್ನು ಅಲ್ಲಗಳೆದಿದೆ.


eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಸ್ತುವನ್ನು ಸುಡುವುದರಿಂದಷ್ಟೇ ‘ಚರಸ್’ ಎಂದು ಸಾಬೀತುಪಡಿಸಲಾಗದು: 22 ವರ್ಷಗಳ ಬಳಿಕ ಇಬ್ಬರು ಖುಲಾಸೆ

ವಶಪಡಿಸಿಕೊಂಡ ವಸ್ತುವಿನ ಒಂದು ಸಣ್ಣ ಭಾಗವನ್ನು ಸುಟ್ಟು ನೋಡುವುದರಿಂದ ಮಾತ್ರವೇ ಅದು...

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು ಕಾವಲುಗಾರನ ಕಥನ

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ...

ವಲಸೆ ತಡೆಗೆ ‘ರುದ್ರಾಕ್ಷಿ ಕೃಷಿ’ ಯೋಜನೆಗೆ ಮುಂದಾದ ಉತ್ತರಾಖಂಡ ಸರ್ಕಾರ; 1.5 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯವೇ?

ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಿಂದ ಜನರು ನೌಕರಿ ಮತ್ತು ಜೀವನೋಪಾಯ ಅರಸಿ ನಗರಗಳಿಗೆ...