ಸುಳ್ಳೇ ಬಂಡವಾಳ, ಯುದ್ಧವೇ ವ್ಯಾಪಾರ: ಸೋತು ಸುಣ್ಣವಾದರೂ ತೀರದ ಅಮೆರಿಕದ ಅಹಂಕಾರ

Date:

ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ ನೀತಿಯನ್ನು ಟೀಕಿಸುತ್ತಿದೆ. ಆದರೆ ಅಮೆರಿಕನ್ನರು ಮಾತ್ರ ಕತ್ತಲಲ್ಲಿರುವ ‘ಪೆದ್ದರಾಗಿಯೇ’ ಉಳಿದಿದ್ದಾರೆ. ಈ ಕುರಿತು ಅವರಲ್ಲಿ ಯಾವುದೇ ಗಂಭೀರ ಚರ್ಚೆಯೇ ನಡೆಯುವುದಿಲ್ಲ. ಜಾಗತಿಕ ಮಟ್ಟದಲ್ಲಿ ರಾಜಕೀಯ ಅಜ್ಞಾನವನ್ನು ಅಳೆಯುವುದಾದರೆ, ವಿಶ್ವದ ಪೆದ್ದರ ಪಟ್ಟಿಯಲ್ಲಿ ಅಮೆರಿಕದ ಪ್ರಜೆಗಳದೇ ಅಗ್ರಸ್ಥಾನ ಎನ್ನಲಡ್ಡಿಯಿಲ್ಲ

- Advertisement -

1945ರ ಎರಡನೇ ಮಹಾಯುದ್ಧದ ಬಳಿಕ ಜಗತ್ತು ಶಾಂತಿಯತ್ತ ಹೊರಳುತ್ತದೆ ಎಂಬ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ. ‘ಜಗತ್ತಿನ ದೊಡ್ಡಣ್ಣ’ ಹಾಗೂ ತನ್ನನ್ನು ತಾನು ‘ಪ್ರಜಾಪ್ರಭುತ್ವದ ರಕ್ಷಕ’ ಎಂದು ಹೇಳಿಕೊಳ್ಳುವ ಅಮೆರಿಕ ಸಾರಿರುವ ಬಹುತೇಕ ಎಲ್ಲ ಪ್ರಮುಖ ಯುದ್ಧಗಳ ತಳಪಾಯವೂ ‘ಹಸಿ ಸುಳ್ಳುಗಳೇ’ ಆಗಿವೆ. ಪ್ರಜಾಪ್ರಭುತ್ವ ಸ್ಥಾಪನೆ, ಮಾನವ ಹಕ್ಕುಗಳ ರಕ್ಷಣೆ ಅಥವಾ ಭಯೋತ್ಪಾದನೆ ನಿಗ್ರಹದ ಸೋಗಿನಲ್ಲಿ ಅಮೆರಿಕ ನಡೆಸಿದ ಈ ರಕ್ತಪಾತಗಳ ಹಿಂದಿರುವುದು ಕೇವಲ ಆರ್ಥಿಕ ಲಾಭದ ದುರಾಸೆ ಹಾಗೂ ಜಾಗತಿಕ ಪಾರುಪತ್ಯದ ದಾಹ. ವಿಪರ್ಯಾಸವೆಂದರೆ, ವಿಶ್ವದ ಅತ್ಯಂತ ಪ್ರಬುದ್ದರು ಎಂದು ಬಿಂಬಿಸಿಕೊಳ್ಳುವ ಅಮೆರಿಕದ ಪ್ರಜೆಗಳು ಈ ಯುದ್ಧಗಳೆದುರು ತೋರುತ್ತಿರುವ ಅಸಹಾಯಕತೆ, ಮೌನ ಮತ್ತು ಅಜ್ಞಾನ ಎದ್ದು ಕಾಣುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ...

ಮಹಿಳೆಯ ಗೌರವವನ್ನು ರಕ್ಷಿಸುವ ಹೆಸರಿನಲ್ಲಿ ಆಕೆಯ ಶಿಕ್ಷಣ, ಪ್ರತಿಭೆ, ವೃತ್ತಿ ಅಥವಾ ಸಾಮಾಜಿಕ ಸೇವೆಯ ಬಾಗಿಲುಗಳನ್ನು ಮುಚ್ಚುವುದು ಒಂದು ವಿಷಯ; ಧಾರ್ಮಿಕ ಹಯಾ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡೇ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಪಾಲ್ಗೊಳ್ಳಲು ಅವಕಾಶ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ;...

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹೈಟೆಕ್ ಶೌಚಾಲಯ ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಶಾಲೆಯ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್...

ಅಮೆರಿಕವು ತನ್ನ ಯುದ್ಧೋನ್ಮಾದವನ್ನು ನ್ಯಾಯಸಮ್ಮತಗೊಳಿಸಲು ಕಟ್ಟುಕಥೆಗಳನ್ನು ಹೆಣೆಯುತ್ತಲೇ ಬಂದಿದ್ದು, ಇವೆಲ್ಲದರಲ್ಲೂ ಅದು ಹೀನಾಯವಾಗಿ ಸೋತಿದೆ. ವಿಯೆಟ್ನಾಂ ಯುದ್ಧವೇ (1955-1975) ಇದಕ್ಕೆ ಮೊದಲ ದೊಡ್ಡ ಉದಾಹರಣೆ. ಅಮೆರಿಕನ್‌ ಸೇನೆ ವಿಯೆಟ್ನಾಂ ಮೇಲೆ ಎರಗಲು ಬಳಸಿದ ನೆಪ ‘ಗಲ್ಫ್ ಆಫ್ ಟೊಂಕಿನ್’ ಘಟನೆ. ವಿಯೆಟ್ನಾಂ ಪಡೆಗಳು ಅಮೆರಿಕದ ಹಡಗಿನ ಮೇಲೆ ವಿನಾಕಾರಣ ದಾಳಿ ಮಾಡಿವೆ ಎಂಬ ಸುಳ್ಳು ವರದಿಯನ್ನು ಸೃಷ್ಟಿಸಿ ಯುದ್ಧ ಘೋಷಿಸಲಾಯಿತು. ದಶಕಗಳ ಕಾಲ ನಡೆದ ಈ ಯುದ್ಧದಲ್ಲಿ ಲಕ್ಷಾಂತರ ವಿಯೆಟ್ನಾಮಿಗಳು ಹಾಗೂ 58 ಸಾವಿರಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಬಲಿಯಾದರು. ಅಂತಿಮವಾಗಿ 1975ರಲ್ಲಿ ಅಮೆರಿಕ ಸೋಲು ಅನುಭವಿಸಿ ಪಲಾಯನ ಮಾಡಿತು.  

ಜಗತ್ತು ಕಂಡ ಅತ್ಯಂತ ದೊಡ್ಡ ರಾಜಕೀಯ ಸುಳ್ಳುಗಳಲ್ಲಿ ಇರಾಕ್ ಯುದ್ಧ (2003) ಕೂಡ ಒಂದು. ಇರಾಕ್‌ ಅಧ್ಯಕ್ಷ ಸದ್ದಾಂ ಹುಸೇನ್‌ ಬಳಿ‘ ಸಾಮೂಹಿಕ ವಿನಾಶಕ ಶಸ್ತ್ರಾಸ್ತ್ರಗಳಿವೆ’, ಆತ ಜಗತ್ತಿಗೆ ಅಪಾಯಕಾರಿ ಎಂಬ ಹಸಿ ಸುಳ್ಳನ್ನು ಜಗತ್ತಿನೆದುರು ಭಿತ್ತಿ ಇರಾಕ್‌ ಮೇಲೆ ದಾಳಿ ಮಾಡಲಾಯಿತು. ಲಕ್ಷಾಂತರ ಅಮಾಯಕರ ಮಾರಣಹೋಮವಾಯಿತು, ಇಡೀ ಮಧ್ಯಪ್ರಾಚ್ಯ ಅರಾಜಕತೆಗೆ ತಳ್ಳಲ್ಪಟ್ಟಿತು. ಆದರೆ ಆ ವಿನಾಶಕ ಶಸ್ತ್ರಾಸ್ತ್ರಗಳು ಕೊನೆಯವರೆಗೂ ಸಿಗಲೇ ಇಲ್ಲ. ಅಮೆರಿಕಕ್ಕೆ ಸಿಕ್ಕಿದ್ದು ಕೇವಲ ಸಾವು- ನೋವು ಮತ್ತು ಇರಾಕ್‌ನ ತೈಲ ನಿಕ್ಷೇಪಗಳ ಮೇಲಿನ ನಿಯಂತ್ರಣದ ಕಳಂಕವಷ್ಟೇ. ಈ ಯುದ್ಧದಲ್ಲಿಯೂ ಅಮೆರಿಕದ ನೈತಿಕ ಹಾಗೂ ತಂತ್ರಗಾರಿಕೆಯ ಸೋಲು ಜಗಜ್ಜಾಹೀರಾಯಿತು.

ಅಫ್ಘಾನಿಸ್ತಾನ ಯುದ್ಧವು (2001-2021) ಅಮೆರಿಕದ ದುರಹಂಕಾರ ಮತ್ತು ವೈಫಲ್ಯದ ಪರಾಕಾಷ್ಠೆಯಾಗಿದೆ. ಭಯೋತ್ಪಾದನೆ ನಿಗ್ರಹ ಹಾಗೂ ಒಸಾಮಾ ಬಿನ್‌ ಲಾಡೆನ್ ಬೇಟೆಯ ಹೆಸರಿನಲ್ಲಿ ಅಫ್ಘಾನಿಸ್ತಾನವನ್ನು ಪ್ರವೇಶಿಸಿದ ಅಮೆರಿಕ, ಬರೋಬ್ಬರಿ 20 ವರ್ಷಗಳ ಕಾಲ ಅಲ್ಲಿ ಬೀಡುಬಿಟ್ಟಿತ್ತು. ಟ್ರಿಲಿಯನ್‌ಗಟ್ಟಲೆ ಡಾಲರ್ ಹಣವನ್ನು ನೀರಿನಂತೆ ಸುರಿಯಿತು. ಆದರೆ 2021ರಲ್ಲಿ, ತಾನು ಯಾವ ತಾಲಿಬಾನ್ ಅನ್ನು ಮಟ್ಟಹಾಕಲು ಬಂದಿತ್ತೋ ಅದೇ ತಾಲಿಬಾನಿಗಳಿಗೆ ಇಡೀ ದೇಶವನ್ನು ಒಪ್ಪಿಸಿ ಅಮೆರಿಕ ಸೇನೆ ರಾತ್ರೋರಾತ್ರಿ ಕಾಲ್ಕಿತ್ತಿತು. ಇದು ಅಮೆರಿಕ ಇತಿಹಾಸದ ಅತ್ಯಂತ ದೊಡ್ಡ ಸೇನಾ ಮತ್ತು ರಾಜತಾಂತ್ರಿಕ ಮುಖಭಂಗ.

ಇದನ್ನು ಓದಿದ್ದೀರಾ? ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ? ​

ಇದೇ ರೀತಿ ಸಿರಿಯಾ ಮತ್ತು ಲಿಬಿಯಾದಲ್ಲಿಯೂ ಅಮೆರಿಕದ ಹಸ್ತಕ್ಷೇಪವು ಕೇವಲ ವಿನಾಶವನ್ನೇ ತಂದಿದೆ. ಸರ್ವಾಧಿಕಾರವನ್ನು ಕೊನೆಗಾಣಿಸುವ ಮತ್ತು ಪ್ರಜಾಪ್ರಭುತ್ವ ಸ್ಥಾಪಿಸುವ ಸುಳ್ಳು ಭರವಸೆ ನೀಡಿ ಆ ದೇಶಗಳಿಗೆ ಒಳನುಗ್ಗಿದ ಅಮೆರಿಕ, ಅಲ್ಲಿನ ಸರ್ಕಾರಗಳನ್ನು ಉರುಳಿಸಿತು. ಇದರ ಪರಿಣಾಮವಾಗಿ, ಇಂದು ಆ ದೇಶಗಳು ಅಕ್ಷರಶಃ ನರಕವಾಗಿವೆ, ಆಂತರಿಕ ಕಲಹಗಳಿಗೆ ಬಲಿಯಾಗಿವೆ. ಇಲ್ಲೆಲ್ಲೂ ಅಮೆರಿಕ ಗೆದ್ದಿಲ್ಲ, ಬದಲಾಗಿ ತಾನು ಕಾಲಿಟ್ಟ ಕಡೆಯಲ್ಲಾ ರಕ್ತಪಾತ ಮತ್ತು ಅಸ್ಥಿರತೆಯನ್ನು ಮಾತ್ರ ಬಿಟ್ಟುಬಂದಿದೆ. ತನ್ನ ಸಾಮ್ರಾಜ್ಯಶಾಹಿ ಹಿತಾಸಕ್ತಿಗಳಿಗೆ ಇಡೀ ದೇಶಗಳನ್ನೇ ಬಲಿಕೊಟ್ಟಿದೆ.

ಅಮೆರಿಕದ ಪಾಲಿಗೆ ಯುದ್ಧವೆಂದರೆ ಅದೊಂದು ಭಾರಿ ಲಾಭದಾಯಕ ಬಂಡವಾಳಶಾಹಿ ಉದ್ಯಮವಿದ್ದಂತೆ. ಎಲ್ಲಿಯವರೆಗೆ ಅಮೆರಿಕದ ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳು, ತೈಲ, ಅನಿಲ ಮತ್ತು ರಸಗೊಬ್ಬರ ಉದ್ಯಮಗಳು ಲಾಭ ಮಾಡಿಕೊಳ್ಳುತ್ತವೆಯೋ ಅಲ್ಲಿಯವರೆಗೆ ಆ ಯುದ್ಧದ ನೈತಿಕತೆಯ ಬಗ್ಗೆ ಆಡಳಿತಶಾಹಿಯಾಗಲೀ, ಜನಸಾಮಾನ್ಯರಾಗಲೀ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚಿನ ಯುದ್ಧಗಳಲ್ಲಿ ತೈಲ, ಅನಿಲ ಹಾಗೂ ರಸಗೊಬ್ಬರ ವಲಯದಲ್ಲಿ ಶತಕೋಟಿ ಡಾಲರುಗಳ ಲೆಕ್ಕದಲ್ಲಿ ಅಮೆರಿಕನ್ ಕಂಪನಿಗಳು ಲಾಭ ಮಾಡಿವೆ. ಜಗತ್ತಿನೆಲ್ಲೆಡೆ ಇಂಧನ ಬಿಕ್ಕಟ್ಟು ಸೃಷ್ಟಿಯಾದಾಗ, ಅಮೆರಿಕದ ತೈಲ ಮತ್ತು ನೈಸರ್ಗಿಕ ಅನಿಲ ಕಂಪನಿಗಳು ದಾಖಲೆಯ ರಫ್ತು ಮಾಡಿ ತಮ್ಮ ಷೇರುಪೇಟೆಯ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

​ಇನ್ನು ಶಸ್ತ್ರಾಸ್ತ್ರ ಉದ್ಯಮದ ಕಥೆಯಂತೂ ಹೇಳತೀರದು. ಅಮೆರಿಕದ ದೈತ್ಯ ಶಸ್ತ್ರಾಸ್ತ್ರ ಕಂಪನಿಗಳಾದ ಲಾಕ್ ಹೀಡ್ ಮಾರ್ಟಿನ್, ರೇಥಿಯಾನ್, ಬೋಯಿಂಗ್‌ನಂತಹವುಗಳ ಷೇರುಗಳು ಯುದ್ಧ ಶುರುವಾದ ತಕ್ಷಣ ವಾಲ್ ಸ್ಟ್ರೀಟ್ ಷೇರುಪೇಟೆಯಲ್ಲಿ ಗಗನಕ್ಕೇರುತ್ತವೆ. ಜಗತ್ತಿನಲ್ಲಿ ಯುದ್ಧಗಳೇ ಇಲ್ಲದೆ ಹೋದರೆ, ಶಾಂತಿ ನೆಲೆಸಿದರೆ ಅಮೆರಿಕದ ಈ ರಕ್ತಪಿಪಾಸು ಶಸ್ತ್ರಾಸ್ತ್ರ ಕಂಪನಿಗಳು ಹಣ ಮಾಡುವುದಾದರೂ ಎಂತು? ಯುದ್ಧವನ್ನು ಸೃಷ್ಟಿಸುವುದು, ಅದನ್ನು ಪೋಷಿಸುವುದು ಹಾಗೂ ಅದಕ್ಕೆ ಶಸ್ತ್ರಾಸ್ತ್ರಗಳನ್ನು ಮಾರುವುದು ಅಮೆರಿಕದ ಆರ್ಥಿಕತೆಯ ಹಾಗೂ ಬಂಡವಾಳಶಾಹಿಗಳ ಏಳಿಗೆಯ ಪ್ರಮುಖ ಮೂಲವಾಗಿದೆ.

​ತನ್ನ ಈ ಆರ್ಥಿಕ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅಮೆರಿಕವು ಜಗತ್ತಿನಾದ್ಯಂತ ಸುಮಾರು 70ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ. ಇದು ವಿಶ್ವಶಾಂತಿಯ ರಕ್ಷಣೆಗಲ್ಲ; ಬದಲಾಗಿ ಜಗತ್ತಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಏಕಸ್ವಾಮ್ಯ ಸಾಧಿಸಲು ಹೆಣೆದ ಮಿಲಿಟರಿ ಜಾಲವಷ್ಟೇ. ಈ ನೆಲೆಗಳ ಮೂಲಕ ಅಮೆರಿಕವು ಇತರ ದೇಶಗಳ ಸಾರ್ವಭೌಮತ್ವಕ್ಕೆ ಬೆದರಿಕೆ ಒಡ್ಡುತ್ತಾ, ತನ್ನ ಶಸ್ತ್ರಾಸ್ತ್ರ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಹಾಗೂ ತನ್ನ ಬೆದರಿಕೆ ತಂತ್ರಗಳನ್ನು ಜಾರಿಯಲ್ಲಿಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ.

​ಈ ಇಡೀ ಪ್ರಹಸನದಲ್ಲಿ ಅತ್ಯಂತ ಆಘಾತಕಾರಿ ಹಾಗೂ ದುರಂತದ ಅಂಶವೆಂದರೆ ಅಮೆರಿಕನ್ ಪ್ರಜೆಗಳ ಮೌನ, ನಿರ್ಲಕ್ಷ್ಯ ಮತ್ತು ದಪ್ಪ ಚರ್ಮದ ಪ್ರವೃತ್ತಿ. ಯುದ್ಧ ಯಾರ ವಿರುದ್ಧ ನಡೆಯುತ್ತಿದೆ? ಯಾಕಾಗಿ ನಡೆಯುತ್ತಿದೆ? ನಾವು ಮಾಡುತ್ತಿರುವುದು ನೈತಿಕವೇ, ಅನೈತಿಕವೇ? ಎಂಬ ಬಗ್ಗೆ ಅಲ್ಲಿನ ಬಹುತೇಕ ಜನಸಾಮಾನ್ಯರು ಕನಿಷ್ಠ ಆಲೋಚನೆಗೂ ಬೀಳುವುದಿಲ್ಲ. ಅಮೆರಿಕದ ಸರ್ಕಾರ ಮತ್ತು ಮುಖ್ಯವಾಹಿನಿಯ ಕಾರ್ಪೊರೇಟ್ ಮಾಧ್ಯಮಗಳು ಬಿತ್ತರಿಸುವ ‘ಸುಳ್ಳು ದೇಶಭಕ್ತಿ’ಯ ಪ್ರೊಪಗಾಂಡಾಗೆ ಈ ಜನ ಅಸಹಾಯಕತೆಯಿಂದಲೋ ಅಥವಾ ನಿರ್ಲಕ್ಷ್ಯದಿಂದಲೋ ಸುಲಭವಾಗಿ ಬಲಿಯಾಗುತ್ತಾರೆ.

​ಈ ಯುದ್ಧದಾಹದ ಕುರಿತು ಜಗತ್ತಿಗೇ ಗೊತ್ತಿದೆ, ಇಡೀ ವಿಶ್ವವೇ ಅಮೆರಿಕದ ದ್ವಂದ್ವ ನೀತಿಯನ್ನು ಟೀಕಿಸುತ್ತಿದೆ. ಆದರೆ ಅಮೆರಿಕನ್ನರು ಮಾತ್ರ ಕತ್ತಲಲ್ಲಿರುವ ‘ಪೆದ್ದರಾಗಿಯೇ’ ಉಳಿದಿದ್ದಾರೆ. ಈ ಕುರಿತು ಅವರಲ್ಲಿ ಯಾವುದೇ ಗಂಭೀರ ಚರ್ಚೆಯೇ ನಡೆಯುವುದಿಲ್ಲ. ಜಾಗತಿಕ ಮಟ್ಟದಲ್ಲಿ ರಾಜಕೀಯ ಅಜ್ಞಾನವನ್ನು ಅಳೆಯುವುದಾದರೆ, ವಿಶ್ವದ ಪೆದ್ದರ ಪಟ್ಟಿಯಲ್ಲಿ ಅಮೆರಿಕದ ಪ್ರಜೆಗಳದೇ ಅಗ್ರಸ್ಥಾನ ಎನ್ನಲಡ್ಡಿಯಿಲ್ಲ. ಪ್ರಪಂಚದ ಬೇರೆ ದೇಶಗಳಲ್ಲಿ ಏನಾಗುತ್ತಿದೆ, ತಮ್ಮ ತೆರಿಗೆ ಹಣ ಹೇಗೆ ರಕ್ತಪಾತಕ್ಕೆ ಬಳಕೆಯಾಗುತ್ತಿದೆ ಎಂಬ ಕನಿಷ್ಠ ಸಾಮಾನ್ಯ ಜ್ಞಾನವೂ ಬಹುತೇಕ ಅಮೆರಿಕನ್ನರಿಗೆ ಇಲ್ಲದಿರುವುದು ವಿಪರ್ಯಾಸ.

​ಅಮೆರಿಕನ್ನರ ವಿರೋಧವು ಕೇವಲ ಅವರ ಸ್ವಾರ್ಥಕ್ಕೆ ಮಾತ್ರ ಸೀಮಿತವಾಗಿದೆ. ಎಲ್ಲಿಯ ತನಕ ಅಮೆರಿಕದ ಸೇನೆ ದೊಡ್ಡ ಸಂಖ್ಯೆಯಲ್ಲಿ ಸಾವುನೋವುಗಳನ್ನು ಅನುಭವಿಸುವುದಿಲ್ಲವೋ ಅಲ್ಲಿಯ ತನಕ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ವಿಯೆಟ್ನಾಂ ಯುದ್ಧದ ಸಮಯದಲ್ಲಿ ಅಮೆರಿಕನ್ ಯುವಕರ ಸಾವು ಹೆಚ್ಚಾದಾಗ ಮಾತ್ರ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದವು. ಆದರೆ ಈಗ ಡ್ರೋನ್ ದಾಳಿಗಳು, ಬಾಡಿಗೆ ಸೈನಿಕರು ಹಾಗೂ ತಂತ್ರಜ್ಞಾನದ ಮೂಲಕ ಯುದ್ಧ ನಡೆಸಲು ಶುರುಮಾಡಿದ ಮೇಲೆ ಅಮೆರಿಕನ್ನರ ಸಾವು ಕಡಿಮೆಯಾಯಿತು; ಇದರೊಂದಿಗೆ ಯುದ್ಧದ ಬಗೆಗಿನ ಅವರ ವಿರೋಧವೂ, ನೈತಿಕ ಪ್ರಜ್ಞೆಯೂ ಸತ್ತುಹೋಯಿತು.

ಇದನ್ನೂ ಓದಿ LPG ಹೊತ್ತು ಭಾರತಕ್ಕೆ ಬಂದ ‘ಶಿವಾಲಿಕ್’ ಹಡಗು; ತಣಿಯುವುದೇ ಕೊರತೆ-ಆತಂಕ?

​ತಮ್ಮ ಸರ್ಕಾರ ಮಾಡುವ ಅನ್ಯಾಯಗಳನ್ನು ಅವರು ಪ್ರಶ್ನಿಸುವುದೇ ಇಲ್ಲ. ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಇರುವುದು ಸರ್ಕಾರವನ್ನು ಎಚ್ಚರಿಸುವುದರಲ್ಲಿ ಮತ್ತು ಪ್ರಶ್ನಿಸುವುದರಲ್ಲಿ. ನಿರ್ಭೀತವಾಗಿ ಪ್ರಶ್ನಿಸುವಂತೆ, ಅಮೆರಿಕದ ಪ್ರಜೆಗಳು ತಮ್ಮ ಆಡಳಿತಶಾಹಿಯನ್ನು ನಿಲ್ಲಿಸಿ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಇಂತಹ ನೈತಿಕವಾಗಿ ದಾರಿ ತಪ್ಪಿರುವವರು ಈ ಮತದಾರರು. ಜಾಗತಿಕ ವಿದ್ಯಮಾನಗಳ ಅರಿವಿಲ್ಲದ, ಕಾರ್ಪೊರೇಟ್ ಲಾಭಕೋರತನಕ್ಕೆ ಕುರುಡಾಗಿರುವ ಇದೇ ಮತದಾರರೇ ಅಮೆರಿಕದ ಅಧ್ಯಕ್ಷನನ್ನು ಆರಿಸುತ್ತಾರೆ ಎಂಬುದು ಜಗತ್ತಿನ ಪಾಲಿನ ಬಹುದೊಡ್ಡ ದುರಂತ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?: ಹೈಕಮಾಂಡ್ ಮುಂದೆ ಬಣ, ಸಾಮಾಜಿಕ ಸಮೀಕರಣದ ಸವಾಲು

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ...

ಪಿ. ಚಿದಂಬರಂ ಅವರ ಲೇಖನ | GDP ಅಂಕಿಅಂಶಗಳಿಗೆ ಹಿಡಿದ ಕನ್ನಡಿ

ತಮ್ಮ ಸುತ್ತಮುತ್ತಲಿನ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (Gen...

ವಚನ ಕಲ್ಯಾಣ | ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ…

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ!...

ಲಿಂಗ್ಡೋ ಸಮಿತಿ ನಿಯಮ ಪಕ್ಕಕ್ಕೆ; ಕ್ಯಾಂಪಸ್ ಪ್ರಜಾಪ್ರಭುತ್ವಕ್ಕೆ ಕತ್ತರಿ: ವಿದ್ಯಾರ್ಥಿ ಸಂಘಟನೆಗಳ ದೂರವಿಡಲು ಸರ್ಕಾರದ ಹುನ್ನಾರ?

ಕಾಗದಕ್ಕಷ್ಟೇ ಸೀಮಿತವಾಯಿತೇ ಲಿಂಗ್ಡೋ ಸಮಿತಿ ಶಿಫಾರಸುಗಳು? ಸಮಿತಿಯ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿದ್ದರೂ...