ಕಾವೇರಿಸಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನ – ಧೂಳೆಬ್ಬಿಸುವ ವಂದೇ ಮಾತರಂ – ಎಸ್ ಐ ಆರ್

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಮತ್ತು ವಂದೇ ಮಾತರಂ ವಿವಾದಗಳು ಸೋಮವಾರದಿಂದ ಶುರುವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ.

- Advertisement -

ವಂದೇ ಮಾತರಂ ವಿವಾದವನ್ನು ಕೆದಕಿ ಕೋಮುವಾದಿ ಕಿಡಿ ಎಬ್ಬಿಸುವ ಆಡಳಿತ ಪಕ್ಷದ ಇರಾದೆ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ ಮೂಲಕ ಮತಗಳ್ಳತನದ ಕುತಂತ್ರದ ವಿರುದ್ಧ ಪ್ರತಿಪಕ್ಷಗಳ ಗಟ್ಟಿ ಗದ್ದಲಗಳು ಕಲಾಪವನ್ನು ಕವಿಯಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಆಡಳಿತ ಪಕ್ಷದ ಕೋಮುವಾದಿ ಕಾರ್ಯಸೂಚಿಯ ವಿರುದ್ಧ ಪ್ರತಿಪಕ್ಷಗಳು ನಿರುದ್ಯೋಗದ ಸಮಸ್ಯೆಯನ್ನು ಎತ್ತಿ ಹೂಡಲಿವೆ.

ವಂದೇ ಮಾತರಂ ಗೀತೆಗೆ 150 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ, ಈ ರಾಷ್ಟ್ರಗೀತೆಯ ಎಲ್ಲ ಸಾಲುಗಳನ್ನು ಹಾಡಬೇಕೆಂಬ ಮತ್ತು ಈ ಗೀತೆಯ ‘ಮುಖ್ಯ ಸಾಲುಗಳನ್ನು’ 1937ರಲ್ಲಿ ಕೈಬಿಟ್ಟಿದ್ದೇ ದೇಶ ವಿಭಜನೆಗೆ ದಾರಿ ಮಾಡಿತು ಎಂಬ ವಾದವನ್ನು ಮೋದಿ ಸರ್ಕಾರ ಚರ್ಚೆಯ ಮುಖ್ಯಭೂಮಿಕೆಗೆ ಎಳೆದು ತರಲಿದೆ. ದಿನವಿಡೀ ನಡೆಯುವ ಈ ಚರ್ಚೆ ಚಳಿಯನ್ನು ಝಾಡಿಸಿ ಉಭಯ ಸದನಗಳ ತಾಪಮಾನ ಏರಿಸಲಿದೆ.

ವಂದೇ ಮಾತರಂನ ಹಳೆಯ ವಿವಾದವನ್ನು ಸಂಘಪರಿವಾರ ಈಗ ಮತ್ತೆ ಬಡಿದೆಬ್ಬಿಸಿದೆ. ಕೋಮುಧೃವೀಕರಣದ ಕುದಿ ಕೊಪ್ಪರಿಗೆ ಧಗಧಗಿಸಿಯೇ ಇರಿಸುವುದು ತನ್ನ ರಾಜಕಾರಣಕ್ಕೆ ಅನಿವಾರ್ಯ. ಬಾಬರಿ ಮಸೀದಿಯನ್ನು ಕೆಡವಿ ಆ ಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಯಿತು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೆಯ ಅನುಚ್ಛೇದವನ್ನು ರದ್ದು ಮಾಡಿತು. ಸಮಾಜವನ್ನು ಒಡೆಯುವ ಕಾರ್ಯಸೂಚಿಗಳು ಖಾಲಿಯಾದಾಗ ಹೊಸತರ ಹುಡುಕಾಟ ನಡೆಸಿದೆ. ವಂದೇ ಮಾತರಂ ನೆವದಲ್ಲಿ ರಾಜಕೀಯ ವಿರೋಧಿಗಳನ್ನು ಹಣಿಯಲು ಹತಾರುಗಳನ್ನು ಮಸೆದು ಹರಿತಗೊಳಿಸತೊಡಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್

ಒಂಬತ್ತು ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗದ ಮುಖಾಂತರ ಮತದಾರರ ಪಟ್ಟಿಯ ಪರಿಷ್ಕರಣೆಯ ಮೋದಿ ಸರ್ಕಾರದ ಹುನ್ನಾರವನ್ನು ಬಯಲು ಮಾಡುವುದು ಪ್ರತಿಪಕ್ಷಗಳ ಪಟ್ಟಿಯ ಪ್ರಮುಖ ಕಾರ್ಯಸೂಚಿ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಮತದಾರರ ಪಟ್ಟಿ ಪರಿಷ್ಕರಣೆಯ ಹುನ್ನಾರಗಳನ್ನು ನಿದರ್ಶನಗಳ ಸಹಿತ ಬಯಲಿಗೆಳೆದಿದ್ದಾರೆ. 2026ರಲ್ಲಿ ವಿಧಾನಸಭೆ ಚುನಾವಣೆ ಎದುರಿಸುವ ರಾಜಕೀಯ ಮಹತ್ವದ ಎರಡು ರಾಜ್ಯಗಳು ಪಶ್ಚಿಮ ಬಂಗಾಳ ಮತ್ತು ತಮಿಳುನಾಡು. ಮಮತಾ ಬ್ಯಾನರ್ಜಿ ಮತ್ತು ಎಂ.ಕೆ.ಸ್ಟ್ಯಾಲಿನ್ ಅವರ ಪ್ರತಿಪಕ್ಷಗಳ ಸರ್ಕಾರಗಳ ಈ ರಾಜ್ಯಗಳಿಗೆ ಸಂಪೂರ್ಣ ಶಕ್ತಿಯೊಂದಿಗೆ ಲಗ್ಗೆ ಹಾಕುವುದು ಮೋಶಾ ರಣತಂತ್ರ. ಬಿಜೆಪಿ ಅಶ್ವಮೇಧದ ಕುದುರೆಗೆ ಇನ್ನೂ ಶರಣು ಹೇಳದಿರುವ ರಾಜ್ಯಗಳಿವು. ಕುತ್ತಿಗೆ ಸೀಳಿದರೂ ಮತದಾರರ ಹಕ್ಕುಗಳ ಅಪಹರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮಮತಾ ಪಣ ತೊಟ್ಟಿದ್ದಾರೆ. ತಮಿಳುನಾಡಿನ ಸ್ಟ್ಯಾಲಿನ್ ಸರ್ಕಾರ ಕೂಡ ಮತದಾರರ ಪಟ್ಟಿ ಪರಿಷ್ಕರಣೆಯ ಕುತಂತ್ರದ ವಿರುದ್ದ ಬಲವಾದ ದನಿಯೆತ್ತಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯೂ ಈ ವಿರೋಧಕ್ಕೆ ದನಿಗೂಡಿಸಿದೆ.

ಮೂರು ವಾರಗಳ ಅವಧಿಯ ಈ ಅಧಿವೇಶನದಲ್ಲಿ ಸರ್ಕಾರ ಉನ್ನತ ಶಿಕ್ಷಣ ಆಯೋಗ, ಷೇರು ಮಾರುಕಟ್ಟೆ, ಪರಮಾಣು ಶಕ್ತಿ, ಕಾರ್ಪೊರೇಟ್ ಕಾನೂನು ಹಾಗೂ ಚಂಡೀಗಢವನ್ನು ಕೇಂದ್ರಾಡಳಿತ ಪ್ರದೇಶವೆಂದು ಪರಿಗಣಿಸುವ ಕುರಿತ ಹತ್ತು ಮುಖ್ಯ ಮಸೂದೆಗಳನ್ನು ಮಂಡಿಸುವ ನಿರೀಕ್ಷೆ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫಕೀರನಂತೆ ‘ಜೋಳಿಗೆ’ ಎತ್ತಿಕೊಂಡು ಹೋಗುವ ಸಮಯ ಬಂತು, ಹೊರಡಿ ಮೋದಿಜಿ: ಕಾಂಗ್ರೆಸ್ ಲೇವಡಿ

ದೇಶಾದ್ಯಂತ ಔಷಧಿಗಳ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ಭುಗಿಲೆದ್ದ ಆಕ್ರೋಶ; ತೀವ್ರಗೊಂಡ ಮೋಶಾ ದಮನ ಕ್ರಮಗಳು

ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌...

ಸಿಇಸಿ ಗ್ಯಾನೇಶ್ ವಿರುದ್ಧ ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಚುನಾವಣಾ...