ಆದಿ ಚುಂಚನಗಿರಿ ಸ್ವಾಮೀಜಿಗಳಿಗೊಂದು ಬಹಿರಂಗ ಪತ್ರ

Date:

ಒಂದು ಮರ್ಯಾದಸ್ಥ, ಸ್ವಾಭಿಮಾನಿ, ಶ್ರಮಜೀವಿ ಸಮುದಾಯದವರು ಬೆಳೆದ ಅನ್ನ ತಿಂದು ಅವರಿಗೇ ವಿಷವಿಕ್ಕುತ್ತಿರುವ, ಅವರನ್ನೇ ಅವಮಾನಿಸುತ್ತಿರುವ ಈ ದುಷ್ಟತ್ರಯರನ್ನು ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿದರೆ ಘೋರ ಅಪಚಾರವಾದೀತು; ಸಮುದಾಯದ ದೃಷ್ಟಿಯಿಂದ ಮಹಾಪರಾಧವೂ ಆದೀತು….

ಚುನಾವಣಾ ದುರುದ್ದೇಶದಿಂದ ಛದ್ಮಶ್ರೀ ಹೆರಿಗೆ ಆಸ್ಪತ್ರೆಯಲ್ಲಿ ದುಡ್ಡು ಕೊಟ್ಟು ನರ್ಸಿಂಗ್ ಸರ್ಟಿಫಿಕೇಟ್ ಪಡೆದ ನರ್ಸ್ ಗಳಿಂದ ಸಿಸೇರಿಯನ್ ಆಪರೇಷನ್ ಮೂಲಕ ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳನ್ನು ರಾತ್ರೋರಾತ್ರಿ ಹುಟ್ಟಿಸಿದವರು ಅಸ್ವಸ್ಥ ನಾರಾಯಣ ಮತ್ತು ಲೂಟಿ ರವಿಗಳು… ಈ ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸಿನಿಮಾ ಮಾಡುತ್ತೇನೆಂದು ಘೋಷಿಸಿದವನು Money ರತ್ನ…. ಈ ದುಷ್ಟತ್ರಯ ಗಳಿಗೆ ನೀವು ಬರೀ ಎಚ್ಚರಿಕೆ ಕೊಟ್ಟರೆ ಸಾಲದು…

ತಮ್ಮ ಪಾಡಿಗೆ ತಾವು ಶತಶತಮಾನಗಳಿಂದ ಬೇಸಾಯ ಮಾಡುತ್ತ, ಬೆವರು ಹರಿಸುತ್ತ, ದೇಶಕ್ಕೆ ಅನ್ನ ನೀಡುತ್ತ ಗೌರವಾನ್ವಿತ, ಸ್ವಾಭಿಮಾನಿ ಬದುಕು ಕಟ್ಟಿಕೊಂಡವರು ಒಕ್ಕಲಿಗರು… ಅವರನ್ನು ಬ್ರಿಟಿಷರ ಪರ ಹೋರಾಡಿದ ದೇಶದ್ರೋಹಿಗಳಂತೆ ಚಿತ್ರಿಸಲು ಸಂಘಪರಿವಾರದಿಂದ ಸುಪಾರಿ ತೆಗೆದುಕೊಂಡಿರುವ ಈ ಮೂವರನ್ನೂ ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ಬಹಿರಂಗ ಕರೆ ಯನ್ನು ಸಮುದಾಯದ ಜವಾಬ್ದಾರಿಯುತ ಸ್ವಾಮೀಜಿಗಳಾಗಿರುವ ನೀವು ತಡಮಾಡದೆ ನೀಡಲೇಬೇಕು…

ಈ ಉದ್ದೇಶಕ್ಕಾಗಿ ಸಮುದಾಯದ ಮುಖಂಡರನ್ನೊಳಗೊಂಡ ಸರ್ವಪಕ್ಷಗಳ ಒಂದು ಸಮನ್ವಯ ಸಮಿತಿಯನ್ನು ರಚಿಸಿ, ಈ ಮೀರ್ ಸಾಧಕ ರನ್ನು ಸೋಲಿಸುವ ಅಭಿಯಾನವೊಂದನ್ನು ತತ್ ಕ್ಷಣವೇ ಶುರುಮಾಡಬೇಕು…

ಒಂದು ಮರ್ಯಾದಸ್ಥ, ಸ್ವಾಭಿಮಾನಿ, ಶ್ರಮಜೀವಿ ಸಮುದಾಯದವರು ಬೆಳೆದ ಅನ್ನ ತಿಂದು ಅವರಿಗೇ ವಿಷವಿಕ್ಕುತ್ತಿರುವ, ಅವರನ್ನೇ ಅವಮಾನಿಸುತ್ತಿರುವ ಈ ದುಷ್ಟತ್ರಯರನ್ನು ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿದರೆ ಘೋರ ಅಪಚಾರವಾದೀತು; ಸಮುದಾಯದ ದೃಷ್ಟಿಯಿಂದ ಮಹಾಪರಾಧವೂ ಆದೀತು….

ಸಮುದಾಯ ಎದುರಿಸುತ್ತಿರುವ ಇಂಥ ಸಂಕಷ್ಟದ, ಸಂದಿಗ್ಧದ ಕಾಲದಲ್ಲಿ ಜವಾಬ್ದಾರಿಯುತ ಸ್ವಾಮೀಜಿಗಳಾದ ನೀವು ಎಂದಿನಂತೆ ಜಾಣ ಮೌನ ಕ್ಕೆ ಜಾರಿದರೆ ಚರಿತ್ರೆ ನಿಮ್ಮನ್ನು ಖಂಡಿತಾ ಕ್ಷಮಿಸದು…

ಶೂದ್ರ ಸಮುದಾಯದ ಪ್ರಬಲ ಸ್ವಾಮೀಜಿ ಪಟ್ಟದಲ್ಲಿದ್ದೂ, ಸಮುದಾಯದ ಸ್ವಾಭಿಮಾನಕ್ಕೆ, ಅಂತಃಶಕ್ತಿಗೆ ಧಕ್ಕೆ ಬಂದಾಗಲೂ ಅವಮಾನಕ್ಕೀಡಾದಾಗಲೂ, ಸಂಶಯಕ್ಕೊಳಗಾದಾಗಲೂ ಸುಮ್ಮನಿದ್ದರೆ ಜವಾಬ್ದಾರಿಯುತ ಸ್ವಾಮೀಜಿಯಾಗಿರುವ ನೀವು ಮನುಸ್ಮೃತಿಯ ವಿಸ್ಮೃತಿ ಗೆ ಒಳಗಾಗಿದ್ದೀರೆಂದೇ ಅರ್ಥ…ಈ ಕಾರಣದಿಂದಲೇ ನೀವು ಶ್ರಮಸಂಸ್ಕೃತಿಯ, ಶೂದ್ರಸಂಸ್ಕೃತಿಯ ವಿರೋಧಿಗಳೆಂದು ಬಿಂಬಿಸಿಕೊಳ್ಳುವ ಅಪಾಯವಿದೆ…

ತಮ್ಮ ಸಮುದಾಯಕ್ಕೆ ಇಂಥಾ ಅಪಾಯ ಬಂದಾಗೆಲ್ಲ ಬೀದಿಗಿಳಿದು ವರ್ಷಗಟ್ಟಲೆ ಹೋರಾಡುವ ಇತರ ಸಮುದಾಯಗಳ ಸ್ವಾಮೀಜಿಗಳ ಹೋರಾಟದ ಪುಸ್ತಕ ಗಳಿಂದಲಾದರೂ ನೀವು ಒಂದೆರಡು ಪುಟಗಳನ್ನು ಎರವಲು ಪಡೆದು ಪಠಿಸಬೇಕು…ನಂತರ ಶೂದ್ರಶಕ್ತಿ ಯ ಬಗ್ಗೆ ನಿಮಗೆ ಆಪ್ತರೆನಿಸಿಕೊಂಡಿರುವ ಸಂಘಪರಿವಾರಕ್ಕೆ ಎಚ್ಚರಿಕೆ ನೀಡಬೇಕು…. ನಮ್ಮನ್ನು ಮುಟ್ಟಿದರೆ, ದುರುಪಯೋಗಪಡಿಸಿಕೊಳ್ಳಲೆತ್ನಿಸಿದರೆ, ಅಪಮಾನಕ್ಕೀಡು ಮಾಡಿದರೆ, ಹುಷಾರ್… ಎಂಬ ಸಂದೇಶವನ್ನು ಕುಕ್ಕುಟಖಚಿತ ವಾಗಿ ತಲುಪಿಸಬೇಕು…

ಸಮುದಾಯವನ್ನು ಅಪಮಾನಿಸಿದ ಈ ದುಷ್ಟತ್ರಯ ಗಳನ್ನು ಸೋಲಿಸುವವರೆಗೆ ನೀವು ವಿರಮಿಸಲೇಬಾರದು…ಈ ಕರ್ತವ್ಯ ಪಾಲನೆಗಾಗಿ ಮಠದಿಂದ ಹೊರಬಂದು ಹೋರಾಡಲೇಬೇಕು… ವಿರಮಿಸಿದರೆ ನೀವು ಸಮುದಾಯದ ಸ್ವಾಮೀಜಿಯಾಗಿರುವುದೇ ನಿರರ್ಥಕವಾಗಿಬಿಡುತ್ತದೆ…

ದುಷ್ಟತ್ರಯ ಗಳು ಕಾಲಿಗೆ ಬಿದ್ದರೆ, ದಯವಿಟ್ಟು ಕ್ಷಮಿಸಿಬಿಡಬೇಡಿ… ಶೂದ್ರಸಂಪ್ರದಾಯದ ಪ್ರಕಾರ ಝಾಡಿಸಿ ಒದೆಯುವ ಶೌರ್ಯ ತೋರಬೇಕು… ಕಾಲಭೈರವನನ್ನು ಪೂಜಿಸಿದರೆ ಸಾಲದು… ಕಾಲಭೈರವನೇ ಆಗಬೇಕು… ಸಕಾಲ ಭೈರವನೇ ಆಗಬೇಕು…ಏಕೆಂದರೆ, ಇದು ತತ್ ಕ್ಷಣದ ಬಾಯಿ ತೀಟೆಗೆ ಮಾಡಿದ ತಂತ್ರವಲ್ಲ… ಇದು ಹಲವಾರು ತಿಂಗಳುಗಳಿಂದ ಶೂದ್ರರನ್ನು ಶೂದ್ರರ ಮೇಲೇ ಛೂ ಬಿಡಲು ಹೆಣೆದ ನಾಗಪುರದ ಚಿತ್ತಪಾವನ ಷಡ್ಯಂತ್ರ…

ಆದಿಚುಂಚನಗಿರಿ ಮಠ ಒಂದು ಶ್ರಮಿಕ ಮಠ; ಶ್ರಮಿಕರೇ ಕಟ್ಟಿದ ಮಠ; ದಾರ -ಬಂಧನ ಮುಕ್ತ ಮಠ….

ಅದು ಬೆವರು ಸಂಸ್ಕೃತಿ ಯ ಮಠ, ಊಟ ಮಾಡುವಾಗ ಮಾತ್ರ ಬೆವರು ಸುರಿಸುವವರ ಮಠವಲ್ಲ….

ಅದು ಅಪ್ಪಟ ಕನ್ನಡದ ಮಠ; ಕನ್ನಡಿಗರ ಮಠ; ದ್ರಾವಿಡ ಮಠ; ಶೂದ್ರಮಠ…. ಅರ್ಥವಾಗದ ಸಂಸ್ಕೃತ ಶ್ಲೋಕಾಚರಣೆಯ ಕೀಳರಿಮೆಯ ಕ್ಷುದ್ರ ಮಠವಲ್ಲ ಎಂಬುದು ಎಲ್ಲರಿಗೂ, ನಿಮಗೂ ನೆನಪಿರಬೇಕು….

ಸಮುದಾಯವನ್ನು ಅವಮಾನಿಸಿದ ಈ ದುಷ್ಟತ್ರಯ ಗಳಿಗೆ ನೀವು ಹೇಗೆ ಪಾಠ ಕಲಿಸುತ್ತೀರಿ ಎಂಬುದನ್ನು ಸಮುದಾಯ ಎದುರು ನೋಡುತ್ತಿದೆ… ಈ ಮೂವರು ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದರೆ, ಅದಕ್ಕೆ ನಿಮ್ಮ ನಿರಾಸಕ್ತಿ, ನಿಷ್ಕ್ರಿಯತೆ, ಬದ್ಧತೆಯ ಕೊರತೆ, ಸಂಘ ಪರಿವಾರದೊಡನೆ ನಿಮಗಿರಬಹುದಾದ ಒಳ ಒಡಂಬಡಿಕೆಗಳೇ (ಈ ಅನುಮಾನ ಸಮುದಾಯದ ಜನರಲ್ಲಿ ತುಂಬಾ ದಿನಗಳಿಂದ ಇದೆ) ಕಾರಣವೆಂಬುದು ಖಚಿತವಾಗುತ್ತದೆ…

ಆದ್ದರಿಂದ ಗೌರವಾನ್ವಿತ ಸ್ವಾಮೀಜಿಗಳೇ… Please try to stich in time to save nine… ಎಲ್ಲವೂ ಮುಗಿದ ನಂತರ ತೇಪೆ ಹಾಕಲು ಯತ್ನಿಸಬೇಡಿ…ತೇಪೆ ಎಂದಿದ್ದರೂ ತೇಪೆಯೇ!

Dear Respected Swamiji, please become a war time captain, not a peace time captain…
ಶಾಂತಿಕಾಲದ ನಾಯಕನಾಗುವುದು ಶ್ರಮಿಕ ಸಮುದಾಯದ ಸ್ವಾಮೀಜಿಗಳಿಗೆ ಸಲ್ಲದ ಸಂಪ್ರದಾಯ….

ಮೇಲಿನ ಜವಾಬ್ದಾರಿ ಒಕ್ಕಲಿಗರ ಸಂಘದ ನಿರ್ದೇಶಕರಾಗಲು ಕೋಟಿಗಟ್ಟಲೆ ಖರ್ಚು ಮಾಡಿದ, ಖರ್ಚಿನ ಹತ್ತು ಪಟ್ಟು ದೋಚುತ್ತಿರುವ ಒಕ್ಕಲಿಗ ವೀರಾಧಿವೀರ ನಿರ್ದೇಶಕ ರೆಲ್ಲರ ಮೇಲೂ ಇದೆ….

ಇದು ಸ್ವಾಮೀಜಿಯವರೊಬ್ಬರದೇ ಕರ್ತವ್ಯವಲ್ಲ…ಶೂದ್ರ ಸಂಸ್ಕೃತಿಯನ್ನು ಗೌರವಿಸುವ ಎಲ್ಲರದೂ.

– ಶೂದ್ರಾಕ್ಷ

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಸಮಂಜಸವಾದ ಬರಹ, ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಯವರ ನಾಯಕತ್ವದ ಸರ್ಕಾರವನ್ನು ಉರುಳಿಸುವ ತಂತ್ರವನ್ನು ಮಾಡಿದಾಗಲೇ ಶ್ರೀ ಗಳು ಸಮುದಾಯದ ಪರವಾಗಿ ಅಬ್ಬರಿಸಲಿಲ್ಲ, ಇದೇ ಪರಿಸ್ಥಿತಿ ಬೇರೆ ಸಮುದಾಯದ ನಾಯಕರಿಗೆ ಆಗಿದ್ದರೆ ಆ ಸಮುದಾಯದ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದರು. ಆದರೆ ನಮ್ಮ ಶ್ರೀ ಗಳಿಂದ ನಾವು ಅದನ್ನು ಅಪೇಕ್ಷೆ ಪಡುವುದು ನಮ್ಮ ಮೂರ್ಖತನ ಅನಿಸುತ್ತದೆ.

  2. ಶೂದ್ರಾಕ್ಷ ಎಂಬ ಕಲ್ಪಿತ ಹೆಸರಿನಲ್ಲಿ- ಅಂದರೆ ಮರೆಮಾಚಿದ ಹೆಸರಲ್ಲಿ “ಬಹಿರಂಗ ಪತ್ರ” ಬರೆದಿರುವುದು ಹಾಸ್ಯಾಸ್ಪದವಾಗಿದೆ.
    ಸ್ವಾಮೀಜಿ ಅವರು ಒಬ್ಬ ಸಂತರಾಗಿ ಅತ್ಯಂತ ನಿರ್ಣಾಯಕ ಘಟ್ಟದಲ್ಲಿ ಮಧ್ಯಪ್ರವೇಶ ಮಾಡಿ ಯಾವುದೇ ಸಾಕ್ಷ್ಯಗಳಿಲ್ಲದ ಕಲ್ಪಿತ ಪಾತ್ರಗಳಾದ ಉರೀಗೌಡ, ದೊಡ್ಡನಂಜೇಗೌಡರ ವಿಷಯವನ್ನು ಮುಂದುವರಿಸದಂತೆ ತಾಕೀತು ಮಾಡಿದರು. ಹಾಗೂ ಅಲ್ಲಿಗೆ ಆ ವಿಷಯ ಮುನ್ನೆಲೆಗೆ ಬರದೆ ಸಾಮಾಜಿಕ ಜಾಲತಾಣ ಮತ್ತು ಭಾಷಣಗಳಿಂದ ಕಣ್ಮರೆಯಾಯಿತು. ಇದು ಆಗಬೇಕಾದ ಕಾರ್ಯವಾಗಿತ್ತು ಹಾಗೂ ಸ್ವಾಮೀಜಿ ಅವರ ಪಾತ್ರ ಅಷ್ಟಕ್ಕೇ ಸೀಮಿತ.
    ಈಗ ಬಹಿರಂಗ ಪತ್ರವನ್ನು ಮರೆಮಾಚಿದ ಹೆಸರಲ್ಲಿ ಬರೆದಿರುವವರು ತಾವು ಸಾರ್ವಜನಿಕ ಬದುಕಿನಲ್ಲಿ ಮಾಡಬೇಕಾದ ಹೊಣೆಗಾರಿಕೆಯನ್ನು ಇನ್ನೊಬ್ಬರ ಹೆಗಲಿಗೆ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಸಾಮಾಜಿಕ ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಷ್ಟು ಕಾಳಜಿಯಿದ್ದರೆ ಇವರು ಆ ಮೂವರ ಕ್ಷೇತ್ರಗಳಲ್ಲಿ ಮನೆಮನೆಗೆ ಹೋಗಿ ಅವರ ವಿರುದ್ಧ ಪ್ರಚಾರ ಮಾಡಬೇಕು.
    ಅದುಬಿಟ್ಟು ಸಾಮಾಜಿಕ ಸಾಮರಸ್ಯ ಮೂಡಿಸುವ ಕೆಲಸ ಮಾಡುವ ಸ್ವಾಮೀಜಿ ಅವರನ್ನು ಚುನಾವಣಾ ಪ್ರಚಾರಕ್ಕೆ ಎಳೆಯುವ ಪ್ರಚೋದಿಸುವ ಕೆಲಸ ಮಾಡುವುದು ಪ್ರಬುದ್ಧ ನಡವಳಿಕೆ ಅಲ್ಲ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ...

ಬೆಂಗಳೂರು ಕಂಬಳ | ಪಾತಕಿ ಶ್ಯಾಮ್ ಕಿಶೋರ್ ಗರಿಕಪಟ್ಟಿಗೆ ಆಹ್ವಾನ: ಮುಂಬಯಿ ತುಳುವರಿಗೆ ಅಚ್ಚರಿ!

80-90ರ ದಶಕದಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ 'ಅಂಡರ್ ವರ್ಲ್ಡ್‌' ಪಾತಕಿಗಳ ನೆತ್ತರ...

ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…

ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು...

ದೇಶ ವಿಭಜನೆ ಕಾಲಘಟ್ಟದ ಒಂದು ಉಪಕತೆ : ಹಸನ್ ನಯೀಂ ಸುರಕೋಡ ಬರೆಹ

ಭಾರತ ವಿಭಜನೆ ಎನ್ನುವ ಕಾಲಘಟ್ಟದ ಅಧ್ಯಯನವನ್ನು ಮಾಡಬಯಸುವವರು ಸಾದತ್ ಹಸನ್ ಮಂಟೊರಂಥ...