ಪ್ರಜಾಪ್ರಭುತ್ವದ ಬಗ್ಗೆ ಪ್ರಜಾಸತ್ತಾತ್ಮಕವಲ್ಲದ ಒಂದು ಚರ್ಚೆ

Date:

ಬಹಿರಂಗವಾಗಿ ಹಿಂಸೆಯನ್ನು ಪ್ರಚೋದಿಸುವ, ಹಿಂಸೆಯ ವಕಾಲತ್ತು ಮಾಡುತ್ತಿರುವ, ದೇಶದ ನಾಗರಿಕರನ್ನು ಪರಸ್ಪರ ದ್ವೇಷಿಸುವಂತೆ ಪ್ರಚೋದಿಸುವ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಎಂದು ಮನವಿ ಮಾಡುವ ಹಾಗೂ ಒಂದು ನಿರ್ದಿಷ್ಟ ಸಮುದಾಯದ ನರಸಂಹಾರದ ಬೆದರಿಕೆ ಹಾಕುತ್ತಿರುವ ದೇಶಾದ್ಯಂತ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಒಬ್ಬ ಅಧ್ಯಾಪಕ ಕಾನೂನಿನ ತರಗತಿಯಲ್ಲಿ ಕಾನೂನಿನ ಪರಿಧಿಯೊಳಗಿದ್ದು, ತನ್ನ ವಿಚಾರಗಳನ್ನು ಇರಿಸಿದಾಗ ವಿವಾದವಾಗುತ್ತೆ

ಪ್ರಜಾಪ್ರಭುತ್ವ ದುರ್ಬಲವಾಗುತ್ತ ಹೋದಂತೆ, ಸಾರ್ವಜನಿಕ ಚರ್ಚೆಗಳು ಆಳವಿಲ್ಲವಾಗುತ್ತ ಮತ್ತು ಅಸಂಗತವಾಗುತ್ತ ಹೋಗುತ್ತದೆ. ಇದರ ಒಂದು ನಿದರ್ಶನ ಕಳೆದ ವಾರ ಕಂಡಿತು. ಅನ್‌ಅಕಾಡೆಮಿ ಎಂಬ ಹೆಸರಿನ ಆನ್‌ಲೈನ್‌ ಕೋಚಿಂಗ್‌ ಸಂಸ್ಥೆಯ ಒಂದು ಶಿಕ್ಷಕ ಕರಣ್‌ ಸಂಗವಾಲ್‌ ಕಾನೂನಿನ ವಿಷಯದ ಬಗ್ಗೆ ಇದ್ದ ತನ್ನ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಸುಶಿಕ್ಷಿತ ಅಭ್ಯರ್ಥಿಗಳಿಗೇ ಮತ ಹಾಕಬೇಕು ಎಂದು ಹೇಳಿದರು. ಆ ಉಪನ್ಯಾಸ ಯೂಟ್ಯೂಬ್‌ನಲ್ಲಿ ಲಭ್ಯವಿತ್ತು. ಇದರಿಂದಲೇ ವಿವಾದ ಸೃಷ್ಟಿಯಾಯಿತು. ಆಮ್‌ ಆದ್ಮಿ ಪಾರ್ಟಿ ಮತ್ತು ಬಿಜೆಪಿಯ ಬೆಂಬಲಿಗರು ಯುದ್ಧಕ್ಕೆ ಅಣಿಯಾದರು. ಇದರಿಂದ ಹೆದರಿದ ಸಂಸ್ಥೆಯ ಮಾಲೀಕ ರೊಮನ್‌ ಸೈನಿಯು ಒಂದು ಪೋಸ್ಟ್‌ ಬರೆದು ಟ್ವಿಟರ್‌ನಿಂದ ಕೈತೊಳೆದುಕೊಂಡರು. ಅವರನ್ನು ಸಂಸ್ಥೆಯಿಂದ ದೂರವಾಗಿಸಲಾಯಿತು.

ಈ ಚರ್ಚೆಯಲ್ಲಿ ಎರಡೂ ಕಡೆಯಿಂದ ಪ್ರಜಾಸತ್ತಾತ್ಮಕವಲ್ಲದ ವಾದಗಳನ್ನು ಮಂಡಿಸಲಾಯಿತು. ಕರಣ್‌ ಸಂಗವಾಲ್‌ ಪರವಾಗಿ ವಾದಿಸುವವರು, ರಾಜಕೀಯದಲ್ಲಿ ಶಿಕ್ಷಿತ ಜನರು ಬರುವ ಅವಶ್ಯಕತೆ ಇದೆ ಹಾಗೂ ತನ್ನ ವಿದ್ಯಾರ್ಥಿಗಳಿಗೆ ಈ ವಿಷಯವನ್ನು ಹೇಳುವ ಅವಶ್ಯಕತೆ ಇದೆ ಎಂದು ವಾದಿಸಿದರು. ಇದನ್ನು ವಿರೋಧಿಸುವ ಜನರು ಔಪಚಾರಿಕ ಶಿಕ್ಷಣದ ಬೇಡಿಕೆ ಇಡುವುದು ಪ್ರಜಾಸತ್ತಾತ್ಮಕವಲ್ಲ, ಹಾಗಾಗಿ ಸಂಸ್ಥೆಯಿಂದ ಈ ಅಧ್ಯಾಪಕನನ್ನು ತೆಗೆದುಹಾಕುವುದು ಖಂಡಿತವಾಗಿಯೂ ಸರಿಯಾದ ಕ್ರಮ ಎಂದು ವಾದಿಸಿದರು. ಈ ಎರಡೂ ವಾದಗಳು ಆಧಾರಹೀನವಾಗಿವೆ, ಈ ಎರಡೂ ನಿಷ್ಕರ್ಷಗಳು ಅಪಾಯಕಾರಿಯಾಗಿವೆ.

ಮೊದಲಿಗೆ ಅಧ್ಯಾಪಕರ ಸಮರ್ಥನೆಯಲ್ಲಿ ನೀಡಲಾಗುತ್ತಿರುವ ವಾದಗಳನ್ನು ನೋಡುವ. ರಾಜಕಾರಣಿ ಸರಕಾರದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ, ಅವರಿಗೆ ಎಷ್ಟೆಲ್ಲ ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿರುತ್ತೆ ಎಂಬುದನ್ನು ನೋಡಿದಾಗ, ತಿಳಿವಳಿಕೆಯುಳ್ಳ ನಾಯಕರ ಅವಶ್ಯಕತೆ ಇದೆ ಎಂಬುದರಲ್ಲಿ ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಪ್ರಶ್ನೆ ಇರುವುದು, ಔಪಚಾರಿಕ ಶಿಕ್ಷಣ ಎಂಬುದು ತಿಳಿವಳಿಕೆಯ ಗ್ಯಾರಂಟಿಯೇ? ಆಯ್ತು, ಗ್ಯಾರಂಟಿ ಬೇಡ, ತಿಳಿವಳಿಕೆಯುಳ್ಳವರಾಗಿರಲು ಔಪಚಾರಿಕವಾದ ಡಿಗ್ರಿಗಳ ಅವಶ್ಯಕತೆ ಇದೆಯೇ? ಒಂದು ವೇಳೆ ನಾವು ನಮ್ಮ ಸುತ್ತ ಮುತ್ತ ನೋಡಿದಲ್ಲಿ ಸ್ಪಷ್ಟವಾಗುವುದೇನೆಂದರೆ ಡಿಗ್ರಿಗಳು ಅಕ್ಷರ ಜ್ಞಾನ ನೀಡಬಲ್ಲವು, ಪುಸ್ತಕೀಯ ಮಾಹಿತಿ ನೀಡಬಲ್ಲವು, ಕೆಲವು ವಿಶೇಷ ಡಿಗ್ರಿಗಳು ಕೌಶಲ್ಯ ನೀಡಬಲ್ಲವು, ಆದರೆ ಡಿಗ್ರಿಗಳು ತಿಳಿವಳಿಕೆ ನೀಡುವುದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಜಕೀಯ ತಿಳಿವಳಿಕೆಯ ಸ್ವರೂಪ ಬೇರೇ ರೀತಿಯದ್ದಾಗಿರುತ್ತದೆ. ಯಾವ ತಿಳಿವಳಿಕೆಯ ನಿರೀಕ್ಷೆ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ನಿಂದ ಮಾಡಲಾಗುತ್ತೋ ಅಥವಾ ಬ್ಯಾಟರ್‌ನಿಂದ ಯಾವ ಟೆಂಪರಾಮೆಂಟ್‌ ನಿರೀಕ್ಷಿಸಲಾಗುತ್ತೋ ಅಥವಾ ಬಾಲರ್‌ಗಳಿಂದ ನಿರೀಕ್ಷಿಸಲಾದ ಚತುರತೆ, ಇವೆಲ್ಲ ಡಿಗ್ರಿಗಳಿಂದ ಪಡೆದುಕೊಳ್ಳಲು ಆಗುವುದಿಲ್ಲ. ಅದೇ ರೀತಿಯಲ್ಲಿ ರಾಜಕೀಯ ನಾಯಕರ ತಿಳಿವಳಿಕೆಗೆ ಬೇಕಾಗುವ ಗುಣಗಳಿಗೆ, ಕೇಳಿಸಿಕೊಳ್ಳುವ ಕ್ಷಮತೆ, ಸಮಾಜವನ್ನು ಅರಿಯುವ ಸಾಮರ್ಥ್ಯ, ಜನರೊಂದಿಗೆ ಸಂವಾದ ನಡೆಸುವ ಗುಣ ಹಾಗೂ ಅವರ ನೋವಿನ ಅಭಿವ್ಯಕ್ತಿ ಮಾಡುವ ಹಾಗೂ ಅವುಗಳ ಬಗೆಹರಿಸುವ ಸಾಮರ್ಥ್ಯ. ಇವೆಲ್ಲ, ಜನರ ನಡುವೆ ಇದ್ದು, ಜನರ ಕಷ್ಟಸುಖ ಕೇಳಿ ಹಾಗೂ ಅನಭವದಿಂದ ಪ್ರಾಪ್ತಿಯಾಗುತ್ತೆ, ಅದರಲ್ಲಿ ಕೆಲವೊಮ್ಮೆ ಔಪಚಾರಿಕ ಶಿಕ್ಷಣದಿಂದ ಲಾಭವೂ ಆಗುತ್ತೆ ಆದರೆ ಅದರ ಅವಶ್ಯಕತೆ ಇರುವುದಿಲ್ಲ.

ರಾಜಕಾರಣಕ್ಕಾಗಿ ಬೇಕಾಗುವ ನೈತಿಕತೆ ಅಥವಾ ನಿಷ್ಠೆ ಅಥವಾ ಜನರ ಪ್ರತಿ, ಇರಬೇಕಾದ ಪ್ರಾಮಾಣಿಕತೆಯ ಇವೆಲ್ಲವುಗಳಿಗೆ ಓದುಬರಹದೊಂದಿಗೆ ಯಾವ ಸಂಬಂಧವೂ ಇಲ್ಲ. ರಾಜಕಾರಣದಲ್ಲಿ ಭ್ರಷ್ಟಾಚಾರ, ಮೋಸ ಹಾಗೂ ಅನೈತಿಕತೆಯ ಬಹುತೇಕ ಪ್ರಕರಣಗಳಲ್ಲಿ ಅಪರಾಧಿಗಳು ಬಹಳಷ್ಟು ಓದಿಕೊಂಡವರೇ ಆಗಿರುತ್ತಾರೆ. ಕೇವಲ ರಾಜಕಾರಣಲ್ಲಷ್ಟೇ ಅಲ್ಲ, ಜೀವನದ ಯಾವುದೇ ಕ್ಷೇತ್ರದಲ್ಲಿ ಔಪಚಾರಿಕ ಶಿಕ್ಷಣ ಮತ್ತು ಡಿಗ್ರಿಗಳಿಗೂ ನೈತಿಕತೆಗೂ ಯಾವ ಸಂಬಂಧವೂ ಇಲ್ಲ. ಹಾಗೂ, ರಾಜಕಾರಣಿಗಳಲ್ಲಿ ಶಿಕ್ಷಣದ ಪರವಾಗಿ ವಾದ ಮಂಡಿಸುವುದು ಇನ್ನೊಂದು ರೀತಿಯಲ್ಲೂ ಅರ್ಥಹೀನವಾಗಿದೆ. ಒಂದು ವೇಳೆ ಶಿಕ್ಷಣ ನಾಯಕರಲ್ಲಿ ಗುಣಗಳನ್ನು ವಿಕಸನಗೊಳಿಸುತ್ತೆ ಎಂದಲ್ಲಿ ಜನರು ಸ್ವಾಭಾವಿಕವಾಗಿಯೇ ಯಾರ ಮಾತನ್ನೂ ಕೇಳದೆಯೇ ಶಿಕ್ಷಿತ ಜನರನ್ನು ಆಯ್ಕೆ ಮಾಡುತ್ತಾರೆ. ಇದಕ್ಕಾಗಿ ಪ್ರಚಾರ ಪ್ರಸಾರದ ಅವಶ್ಯಕತೆಯೇನಿದೆ? ಒಬ್ಬ ರಾಜಕಾರಿಣಿಯ ಎಲ್ಲಕ್ಕಿಂತ ದೊಡ್ಡ ಯೋಗ್ಯತೆಯೆಂದರೆ ಅವರ ಮತದಾರರು ಅವರನ್ನು ಇಷ್ಟಪಡುವುದು. ಅವರನ್ನು ತಮ್ಮ ನೋವು ನಲಿವುಗಳ ಗಳಿಗೆಗಳಲ್ಲಿ ಜೊತೆಗಾರ ಎಂದುಕೊಳ್ಳುವುದು. ಒಬ್ಬ ರಾಜಕಾರಿಣಿಯ ಪರೀಕ್ಷೆ ಶಾಲೆ ಅಥವಾ ಯುನಿವರ್ಸಿಟಿಯ ಪರೀಕ್ಷೆಗಳಲ್ಲಿ ಆಗದೆ ಚುನಾವಣೆಯ ಪರೀಕ್ಷೆಯಲ್ಲಿ ಆಗುತ್ತದೆ. ಈ ಪರೀಕ್ಷೆಯನ್ನು ಹೊರತುಪಡಿಸಿ ಅವರ ಮೇಲೆ ಔಪಚಾರಿಕ ಡಿಗ್ರಿ ಇರಬೇಕೆಂದು ನಿರೀಕ್ಷಿಸುವುದು ಅಥವಾ ಆ ರೀತಿ ಕಟ್ಟಳೆಗೆ ಒಳಪಡಿಸುವುದು ವ್ಯರ್ಥದ ಕೆಲಸವಾಗಿದೆ. ಒಟ್ಟಾರೆಯಾಗಿ, ಲೋಕತಾಂತ್ರಿಕ ಮತ್ತು ತಾರ್ಕಿಕವಾಗಿ ಎರಡೂ ಆಧಾರಗಳ ಮೇಲೆ ಕರಣ ಸಂಗವಾನ ಅವರ ಹೇಳಿಕೆಯೊಂದಿಗೆ ಅಸಮ್ಮತಿ ಇಟ್ಟುಕೊಳ್ಳಬಹುದಾಗಿದೆ.

ಈಗ ಚರ್ಚೆಯ ಇನ್ನೊಂದು ಬದಿಯನ್ನು ನೋಡುವ. ಕರಣ ಸಂಗವಾನ ಮೇಲೆ ಕ್ರಮ ಕೈಗೊಳ್ಳಬೇಕಾಗುವಂಥ ಅಥವಾ ಅವರ ಕಾಂಟ್ರ್ಯಾಕ್ಟನ್ನೇ ರದ್ದುಗೊಳಿಸಂವಂಥದ್ದೇನಾದರೂ ಹೇಳಿದರೆ? ಅವರು ಒಂದು ವೇಳೆ ಗಣಿತ ಅಥವಾ ಫಿಸಿಕ್ಸ್‌ನ ಲೆಕ್ಚರ್‌ ನೀಡುತ್ತಿದ್ದರು ಎಂದಾಗಿದ್ದಲ್ಲಿ ಹೌದು ಅವರು ವಿಷಯಕ್ಕೆ ಸಂಬಂಧವಿಲ್ಲದ ಅನಗತ್ಯವಾದ ಮಾತುಗಳನ್ನು ಆಡುತ್ತಿದ್ದಾರೆ ಎನ್ನಬಹುದಾಗಿತ್ತು. ಆದರೆ ಕಾನೂನಿನ ವಿಷಯದ ಬಗ್ಗೆ ಮಾತನಾಡುವಾಗ ಸಮಾಜ ಮತ್ತು ಪ್ರಜಾಪ್ರಭುತ್ವ ಚರ್ಚೆ ಆಗುವುದು ಸಹಜವಾಗಿದೆ. ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ಒಂದು ಚೌಕಟ್ಟಿನ ಒಳಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಅವರಿಗಿರುತ್ತದೆ. ಚರ್ಚೆಯನ್ನು ನಡೆಸುವ ಕಾರಣದಿಂದಲೂ ಅಧ್ಯಾಪಕರು ಯಾವುದೇ ನಿಲುವು ತೆಗೆದುಕೊಳ್ಳಬಹುದು. ಏನೇ ಇರಲಿ, ಅಸಂಸದೀಯವಾದಂತಹ, ಅಪಾಧಿಕವಾದಂತಹ, ಪ್ರಚೋದನಕಾರಿಯಾದಂತಹ, ಸಂವಿಧಾನ ವಿರೋಧಿಯಾದಂತಹ ಅಥವಾ ದೇಶದ್ರೋಹ ಎನ್ನಿಸಿಕೊಳ್ಳುವ ಯಾವ ಮಾತನ್ನೂ ಕರಣ್ ಸಂಗವಾನ ಹೇಳಿಲ್ಲ. ಇಂಥಹದ್ದರಲ್ಲಿ ಕೇವಲ ಒಂದು ರಾಜಕೀಯ ನಿಲುವು ಹೊಂದಿರುವ ಜನರ ಒತ್ತಡಕ್ಕೆ ಮಣಿದು ಅಧ್ಯಾಪಕನ ಮೇಲೆ ಕ್ರಮ ಕೈಗೊಳ್ಳುವುದು ಹಾಗೂ ಅದರಲ್ಲೂ ಅವರ ಮಾತುಗಳನ್ನು ಕೇಳದೇ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಒಂದು ವೇಳೆ ಕರಣ್ ಸಂಗವಾನ ಅವರ ವಾದ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದರೆ ಅವರನ್ನು ಕೆಲಸದಿಂದ ವಜಾಗೊಳಿಸುವುದೂ ಪ್ರಜಾಸತ್ತಾತ್ಮಕವಾದುದ್ದಲ್ಲ.

ಈ ವಿಷಯದಲ್ಲಿ ಪರ ಮತ್ತು ವಿರುದ್ಧವಾಗಿ ನೀಡಿರುವ ವಾದಗಳು ಮಾತ್ರ ಅಸಂಬದ್ಧವಾಗಿಲ್ಲ, ಈ ವಿಷಯದ ಮೇಲಿನ ಚರ್ಚೆಯೇ ಅಸಂಬದ್ಧವಾಗಿದೆ. ವಾಸ್ತವವೇನೆಂದರೆ, ರಾಜಕಾರಿಣಿಗಳು ಶಿಕ್ಷಿತರಾಗಿರುವುದು ಅಥವಾ ಇಲ್ಲವಾಗಿರುವುದು ಇಂದು ನಮ್ಮ ದೇಶದಲ್ಲಿ ಒಂದು ವಿಷಯವೇ ಆಗಿಲ್ಲ. ಸತ್ಯವೇನೆಂದರೆ, 50 ಮತ್ತು 60 ರ ದಶಕಗಳಲ್ಲಿ ಕೆಲವು ಅಶಿಕ್ಷಿತ ಜನರು ನಮ್ಮ ವಿಧಾನಸಭೆಗಳಿಗೆ ಮತ್ತು ಸಂಸತ್ತಿಗೆ ಆಯ್ಕೆ ಆಗಿರಬಹುದು. ಆದರೆ ಈಗ ಅವರ ಸಂಖ್ಯೆ ನಗಣ್ಯವಾಗಿದೆ. ನಾವು ಆಯ್ಕೆ ಮಾಡಿದ ನಾಯಕರು ಒಳ್ಳೆಯವರಾಗಿರಬಹುದು ಅಥವಾ ಕೆಟ್ಟವರಾಗಿರಬಹುದು. ಕರ್ತವ್ಯ ನಿರ್ವಹಿಸುವರು ಅಥವಾ ಕೆಲಸಕ್ಕೆ ಬಾರದವರಾಗಿರಬಹುದು, ಪ್ರಾಮಾಣಿಕರಾಗಿರಬಹುದು ಅಥವಾ ದುಷ್ಟರಾಗಿರಬಹುದು. ಆದರೆ ಬಹುತೇಕ ಎಲ್ಲರೂ ಡಿಗ್ರಿ ಹೊಂದಿದವರಾಗಿದ್ದಾರೆ. ಇಂಥದ್ದರಲ್ಲಿ, ನಾಯಕರು ಶಿಕ್ಷಿತರಾಗಿರಬೇಕು ಅಥವಾ ಇಲ್ಲ ಎಂಬುದು ಚರ್ಚೆ ನಡೆಯುವುದು ತನ್ನಲ್ಲೇ ಒಂದು ತಿಳಿವಳಿಕೆಯಿಲ್ಲದ ಸೂಚನೆಯಾಗಿದೆ.

ಇದನ್ನು ಓದಿ ಚಂದ್ರಯಾನ-3 ಯಶಸ್ವಿ; ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ, ಸಿಹಿ ಹಂಚಿದ ಸಿಎಂ

ನಿಜವಾದ ಸಮಸ್ಯೆ ಇದಕ್ಕಿಂತ ಆಳವಾಗಿದೆ. ನಮ್ಮ ಕಾಲದ ವಿಡಂಬನೆಯೇನೆಂದರೆ ನಾವು ಒಂದು ಸಾಧಾರಣವಾದ ವಿಡಿಯೋದಲ್ಲಿ ನೀಡಿದ ಲೆಕ್ಚರ್‌ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಆದರೆ ಬಹಿರಂಗವಾಗಿ ಹಿಂಸೆಯನ್ನು ಪ್ರಚೋದಿಸುವ, ಹಿಂಸೆಯ ವಕಾಲತ್ತು ಮಾಡುತ್ತಿರುವ, ದೇಶದ ನಾಗರಿಕರನ್ನು ಪರಸ್ಪರ ದ್ವೇಷಿಸುವಂತೆ ಪ್ರಚೋದಿಸುವ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಎಂದು ಮನವಿ ಮಾಡುವ ಹಾಗೂ ಒಂದು ನಿರ್ದಿಷ್ಟ ಸಮುದಾಯದ ನರಸಂಹಾರದ ಬೆದರಿಕೆ ಹಾಕುತ್ತಿರುವ ದೇಶಾದ್ಯಂತ ಹರಿದಾಡುತ್ತಿರುವ ವಿಡಿಯೋ ಬಗ್ಗೆ ಚರ್ಚೆ ನಡೆಸುತ್ತಿಲ್ಲ. ಒಬ್ಬ ಅಧ್ಯಾಪಕ ಕಾನೂನಿನ ತರಗತಿಯಲ್ಲಿ ಕಾನೂನಿನ ಪರಿಧಿಯೊಳಗಿದ್ದು, ತನ್ನ ವಿಚಾರಗಳನ್ನು ಇರಿಸಿದಾಗ ವಿವಾದವಾಗುತ್ತೆ. ಆದರೆ ಸರಕಾರಿ ಪದದಲ್ಲಿ ಇರುವ ಪ್ರಧಾನಮಂತ್ರಿ ಸಲಹೆಗಾರ ಆಗಿರುವ ವ್ಯಕ್ತಿಯೊಬ್ಬನು ಸಂವಿಧಾನವನ್ನು ತಿರಸ್ಕರಿಸುವ ಮಾತನಾಡಿದಾಗ ಅಲ್ಲಿ ಆ ವಿಷಯದ ಬಗ್ಗೆ ಮೌನ ಕಂಡುಬಂದಿದೆ. ತಪ್ಪು ವಾದ ಮಂಡಿಸುವವರ ಮೇಲೆ ತುರ್ತು ಕ್ರಮ ಕೈಗೊಳ್ಳಲಾಗಿದೆ ಆದರೆ ನಿಂದಿಸುವವರನ್ನು ಸನ್ಮಾನಿಸಲಾಗುತ್ತಿದೆ, ಗುಂಡು ಹಾರಿಸುವವರ ಬಗ್ಗೆ ಎಲ್ಲ ಕಣ್ಣು ಮತ್ತು ನಾಲಿಗೆ ಸುಮ್ಮನಾಗಿವೆ. ಪ್ರಜಾಪ್ರಭುತ್ವ ನಿಧಾನವಾಗಿ ಸಾಯುವುದು ಹೀಗೆ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...

ಹೊಸ ಓದು | ಕಾವ್ಯದ ತಿರುಳು ಕಡೆದ ಬೆಣ್ಣೆಯಂತೆ ತೇಲಿಬಂದು ಓದುಗನ ಹೃದಯ ತಟ್ಟುವ ಬಾಶೋ ಹಾಯ್ಕು

ಬಾಶೋ ನಮ್ಮನ್ನು ಕಾವ್ಯದ ತಿರುಳನ್ನು ಅರಸಲು ಪ್ರೇರೇಪಿಸುತ್ತಾನೆ. ತಿರುಳೇ ಕಾವ್ಯದ ಇರುವಿಕೆ....

ರಾಜ್ಯಗಳಿಗೆ ಸಾಲದ ಅಗತ್ಯ: ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆಯಲ್ಲವೇ?

ರಾಜ್ಯ ಪಡೆಯುವ ಸಾಲ ಅದರ ಒಟ್ಟು ರಾಜ್ಯ ಅಭಿವೃದ್ಧಿ ಪ್ರಮಾಣದ (ಜಿಎಸ್‌ಡಿಪಿ)...

ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಪ್ರಧಾನಿ ಮೋದಿ ಮೌನವಾಗಿರುವುದೇಕೆ?

ಆಯುರ್ವೇದದಿಂದ ತಯಾರಿಸಲ್ಪಟ್ಟ ಪತಂಜಲಿ ಕೊರೊನಿಲ್ ಮಾತ್ರೆಯನ್ನು ಸರ್ಕಾರವೇ ಮುಂದೆ ನಿಂತು ಮಾರಾಟ...