ಕೆಲವರಿಗೆ ಟಿಕೆಟ್ ತಪ್ಪಬಹುದು, ಪಕ್ಷ ಬಿಟ್ಟು ಹೋಗಲೂಬಹುದು: ಜಗದೀಶ್ ಶೆಟ್ಟರ್

Date:

  • ಆಡಳಿತ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಗಾಳ
  • ಚುನಾವಣೆ ಘೋಷಣೆ ನಂತರ ಪಟ್ಟಿ ಬಿಡುಗಡೆ

ಕೆಲಕಾರಣದಿಂದ ಕೆಲವರಿಗೆ ಟಿಕೆಟ್ ತಪ್ಪಬಹುದು ಅಂತಹವರು ಪಕ್ಷ ಬಿಟ್ಟು ಹೋಗುವ ಸಾಧ್ಯತೆ ಇದೆ. ಚುನಾವಣೆ ಹೊತ್ತಿನಲ್ಲಿ ಇಂತಹ ಬೆಳವಣಿಗೆ ಸಹಜ. ಇದನ್ನು ಪಕ್ಷದೊಳಗೆ ಪರಿಹರಿಸಿಕೊಳ್ಳುತ್ತೇವೆ. ಆದರೆ ಇದನ್ನೇ ವಿಪಕ್ಷಕ್ಕೆ ಬಂಡವಾಳವನ್ನಾಗಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಶೆಟ್ಟರ್ ಹೇಳಿದರು.

ಧಾರವಾಡದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿರೋಧ ಪಕ್ಷ ಕಾಂಗ್ರೆಸ್‌ನ ಚುನಾವಣಾ ರಣತಂತ್ರಕ್ಕೆ ಬಿಜೆಪಿ ತಬ್ಬಿಬ್ಬಾಗಿದೆ. ಪಕ್ಷಾಂತರ ಪರ್ವ ಆರಂಭವಾಗಿರುವ ಕಾರಣ, ತನ್ನ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಚಿಂತನೆ ನಡೆಸಿರುವ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆಯನ್ನು ತಡೆಹಿಡಿದಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪಟ್ಟಿ ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದೆ ಎಂದರು.

ಈ ಸುದ್ದಿ ಓದಿದ್ದೀರಾ?: ಆಡಳಿತ ಪಕ್ಷಕ್ಕೆ ಮತ್ತೊಂದು ಶಾಕ್‌: ಕೂಡ್ಲಿಗಿ ಬಿಜೆಪಿ ಶಾಸಕ…

ನಮ್ಮ ಪಕ್ಷ ಗೆಲ್ಲುವ ಮಾನದಂಡ ಇರುವವರಿಗೆ ಟಿಕೆಟ್ ನೀಡುತ್ತದೆ. ಹೀಗಾಗಿ ಪಕ್ಷದೊಳಗೆ ಅಸಮಾಧಾನ ಸಹಜ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿಯ ಹಲವು ಶಾಸಕರಿಗೆ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಆರೋಪ ಮಾಡಿದ್ದರು. ಇದಕ್ಕೆ ಪೂರಕವೆನ್ನುವಂತೆ ಜಗದೀಶ್ ಶೆಟ್ಟರ್ ಕೊಟ್ಟಿರುವ ಹೇಳಿಕೆ ಈಗ ಮಹತ್ವ ಪಡೆದುಕೊಳ್ಳುತ್ತಿದೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪನಿಶ್ಮೆಂಟ್‌ಗೆ ಆಸ್ಪದ ಕೊಡಬೇಡಿ, ಒಳ್ಳೆ ಕೆಲಸ ಮಾಡಿ: ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಎಚ್ಚರಿಕೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಡಿಸಿಎಂ ಸಭೆ 'ಪನಿಶ್ಮೆಂಟ್ ಮಾಡೋದು ದೊಡ್ಡ...

ಕೇಂದ್ರದ ಯೋಜನೆ ರಾಜ್ಯದ ಜನರಿಗೆ ತಲುಪಿಸುವಲ್ಲಿ ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ: ಬೊಮ್ಮಾಯಿ

'ಕೇಂದ್ರ ಸರ್ಕಾರಕ್ಕೆ 9 ವರ್ಷ, ನರೇಂದ್ರ ಮೋದಿ ಆಡಳಿತ ಮುಂದುವರೆಯಲಿʼ 'ಐದು ಗ್ಯಾರಂಟಿಗಳ...

ನೂತನ ಸಚಿವರಿಗೆ ಕೊಠಡಿ ಹಂಚಿಕೆ: ಇಲ್ಲಿದೆ ಪೂರ್ಣ ಮಾಹಿತಿ

ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ ಸಿಎಂ ಹೊಸ ಸಚಿವರಿಗೆ ಶಕ್ತಿ ಸೌಧದಲ್ಲಿ...

ಆರ್‌ಎಸ್‌ಎಸ್‌-ಬಜರಂಗದಳದ ದಲಿತರು, ಶೂದ್ರರನ್ನು ಸೆಳೆಯಬೇಕಿದೆ: ಸತೀಶ್‌ ಜಾರಕಿಹೊಳಿ

ಒಂದು ಸಂಘಟನೆ ನಿಷೇಧಿಸಿದರೆ ಮತ್ತೊಂದು ಹುಟ್ಟಿಕೊಳ್ಳುತ್ತದೆ ದಲಿತರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ...