ದಾವಣಗೆರೆ ಉಪಸಮರ: ಜಮೀರ್ ಸುದ್ದಿಗೋಷ್ಠಿ ಏಕತೆಯ ಪ್ರದರ್ಶನವೋ ಅಥವಾ ತಾತ್ಕಾಲಿಕ ಉಪಶಮನವೋ?

Date:

ಕಾಂಗ್ರೆಸ್ ಪಕ್ಷ ವ್ಯಕ್ತಿ ಅಥವಾ ಕುಟುಂಬದಿಂದ ಅಲ್ಲ; ಎಲ್ಲ ಸಮುದಾಯಗಳ ಸಮನ್ವಯದಿಂದ ನಡೆಯುತ್ತದೆ ಎಂಬುದು ಸರಿ. ಆದರೆ ಈ ಸಮನ್ವಯವು ಕ್ರಿಯೆಯಲ್ಲಿ ಕಾಣಬೇಕೇ ಹೊರತು, ಮಾತುಗಳಲ್ಲಿ ಮಾತ್ರವಲ್ಲ. ಏಪ್ರಿಲ್ 9ರ ಫಲಿತಾಂಶವು ಕೇವಲ ಒಂದು ಕ್ಷೇತ್ರದ ಸೋಲು-ಗೆಲುವು ಅಲ್ಲ. ಬದಲಾಗಿ ಕಾಂಗ್ರೆಸ್‌ನ ಒಳಗಿನ ಶಕ್ತಿ ಸಮೀಕರಣಗಳ ಮತ್ತು ಸಮುದಾಯ ರಾಜಕಾರಣದ ಭವಿಷ್ಯವನ್ನು ನಿರ್ಧರಿಸುತ್ತದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಒಂದು ಸುದ್ದಿಗೋಷ್ಠಿಯಲ್ಲ; ಕಾಂಗ್ರೆಸ್ ಪಕ್ಷದ ಒಳಗಿನ ಸಮೀಕರಣಗಳು, ಸಮುದಾಯ ರಾಜಕಾರಣ ಮತ್ತು ಕುಟುಂಬ ಪ್ರಭಾವದ ನಡುವಿನ ಸೂಕ್ಷ್ಮ ಎಳೆಗಳನ್ನು ಬಿಚ್ಚಿಡುತ್ತದೆ. ಮೇಲ್ನೋಟಕ್ಕೆ ಏಕತೆಯ ಪ್ರದರ್ಶನದಂತೆ ಕಂಡರೂ, ಅದು ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾದರೂ, ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಮಾಡಿದ ಮೋಸ ಚರಿತ್ರೆಯ ಪುಟ ಸೇರುವುದಂತೂ ಸತ್ಯ.

- Advertisement -

ಮುಸ್ಲಿಂ ಸಮುದಾಯದ ನಾಯಕರು ಈ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದು, ‘ನಾವು ಕಾಂಗ್ರೆಸ್‌ಗೆ ಜೊತೆಯಾಗಿ ನಿಲ್ಲುತ್ತೇವೆ’ ಎನ್ನುವಂತಹ ಮಾತುಗಳನ್ನೂ ಆಡಿದ್ದಾರೆ. ಆದರೆ ಈ ಬೆಂಬಲ ಎಲ್ಲಿಯವರೆಗೆ ಎನ್ನುವುದು ಮುಸ್ಲಿಂ ಸಮುದಾಯದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಚರಿತ್ರೆಯುದ್ದಕ್ಕೂ ಮಾಡಿದ ಮೋಸಗಳ ಪುಟಗಳಿಗೆ ಇದು ಕೂಡ ಸೇರಿಹೋಗಿದೆ. ಮುಸ್ಲಿಮರನ್ನು ಬಳಸಿಕೊಂಡು, ಚುನಾವಣೆಯ ನಂತರ ಅವರನ್ನು ಕಡೆಗಣಿಸುವುದು, ಸಮುದಾಯದ ಸಮಸ್ಯೆಗಳಿಗೆ ಕಿವಿಗೊಡದೆ ಹೋಗುವುದು ಇವೆಲ್ಲಾ ಕಾಂಗ್ರೆಸ್‌ನ ಪುನರಾವರ್ತಿತ ಕಥೆ. ಇಂದು ದಾವಣಗೆರೆಯಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಬೆಂಬಲ ಹೇಳುತ್ತಿರುವುದು ಆ ಚರಿತ್ರೆಯ ಹೊಸ ಅಧ್ಯಾಯವನ್ನು ಸೇರಿಸುತ್ತಿದೆಯೇ ಹೊರತು ಮುಸ್ಲಿಂ ಸಮುದಾಯಕ್ಕೆ ನಿಜವಾದ ಸಬಲೀಕರಣವನ್ನು ತರಲಾರದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಜಮೀರ್ ಅಹಮದ್ ಖಾನ್ ಅವರು ಮಲ್ಲಿಕಾರ್ಜುನ್ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದು ಮತ್ತೊಂದು ಸೂಕ್ಷ್ಮ ಸಂದೇಶವನ್ನು ಸಾರುತ್ತಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲವಾಗುವ ಏಕತೆಯ ಚಿತ್ರಣ. ಆದರೆ ಜಮೀರ್ ಅವರು ದಾವಣಗೆರೆಗೆ ಬಾರದಿದ್ದರೆ ಜಮೀರ್ ಅವರ ರಾಜಕೀಯ ಬದುಕಿಗೆ ಸಮಸ್ಯೆಯಾಗುತ್ತಿತ್ತೇ? ಈ ಸುದ್ದಿಗೋಷ್ಠಿ ಜಮೀರ್ ಅವರ ರಾಜಕೀಯ ಭವಿಷ್ಯಕ್ಕೆ ಕವಚವಾಗಿದೆಯೇ? ಮುಸ್ಲಿಂ ಸಮುದಾಯದ ಬೆಂಬಲವನ್ನು ತಮ್ಮ ಪಕ್ಷಕ್ಕೆ ತಿರುಗಿಸುವ ಮೂಲಕ ಜಮೀರ್, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರೇ? ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿವೆ.

ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯ ರಾಜಕಾರಣವು ಕುಟುಂಬ ರಾಜಕಾರಣದೊಂದಿಗೆ ಹೆಣೆದುಕೊಂಡಿದೆ ಎಂಬುದು ಗುಪ್ತವಲ್ಲ. ಒಂದು ಕಡೆ ಮುಸ್ಲಿಂ ನಾಯಕರನ್ನು ಮುಂದಿಟ್ಟು ಏಕತೆ ತೋರಿಸುವುದು, ಮತ್ತೊಂದು ಕಡೆ ಆ ಸಮುದಾಯಕ್ಕೆ ಕೇವಲ ವಾಗ್ದಾನಗಳು ಮತ್ತು ಖಾಲಿ ಭರವಸೆಗಳನ್ನು ನೀಡುವುದೇ ಆಗಿದೆ. ದಾವಣಗೆರೆ ದಕ್ಷಿಣದ ಈ ಸುದ್ದಿಗೋಷ್ಠಿ ಮುಸ್ಲಿಂ ಸಮುದಾಯಕ್ಕೆ ಮತ್ತೊಮ್ಮೆ ‘ಬಳಸಿಕೊಂಡು ಕೈ ಬಿಡುವ’ ಚರಿತ್ರೆಯನ್ನು ನೆನಪಿಸುತ್ತಿದೆ. ಮುಸ್ಲಿಮರು ಕಾಂಗ್ರೆಸ್ಸನ್ನು ಬೆಂಬಲಿಸುವುದಾಗಿ ಹೇಳುತ್ತಿರುವುದು ಸತ್ಯವಾದರೂ, ಆ ಬೆಂಬಲದ ಹಿಂದೆ ಇರುವುದು ನಿಜವಾದ ಭರವಸೆಯೇ ಅಥವಾ ಮತ್ತೊಮ್ಮೆ ಮೋಸಕ್ಕೆ ಒಳಗಾಗುವ ಭಯವೇ ಎಂಬುದನ್ನು ಚರ್ಚಿಸುವ ಸಮಯ ಬಂದಿದೆ.

ರಾಜಕೀಯವು ತಾತ್ಕಾಲಿಕ ಲಾಭಗಳ ಆಟವಾಗಿರುವುದರಲ್ಲಿ ಸಂದೇಹವಿಲ್ಲ. ಆದರೆ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿರಂತರ ಬೆಂಬಲ ವ್ಯಕ್ತಪಡಿಸುತ್ತ ಬಂದಿದ್ದರೂ, ಪಕ್ಷ ಆ ಸಮುದಾಯವನ್ನು ಕಾಲಕಾಲಕ್ಕೆ ಬಳಸಿಕೊಂಡು ಬಿಸಾಡುತ್ತಲೇ ಬಂದಿದೆ. ಜಮೀರ್ ಅಹಮದ್ ಖಾನ್ ಅವರು ದಾವಣಗೆರೆಗೆ ಬಂದು ಈ ಸುದ್ದಿಗೋಷ್ಠಿ ನಡೆಸಿರುವುದು, ವೈಯಕ್ತಿಕವಾಗಿ ಅನುಕೂಲಕರವಾಗಿದ್ದರೂ, ಮುಸ್ಲಿಂ ಸಮುದಾಯಕ್ಕೂ ಮತ್ತೊಂದು ಮೋಸವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸುಮಾರು 80 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಕಾಂಗ್ರೆಸ್‌ಗೆ ‘ಸುರಕ್ಷಿತ’ ಕ್ಷೇತ್ರವಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಟಿಕೆಟ್ ಹಂಚಿಕೆಯಲ್ಲಿ ಶಾಮನೂರು ಕುಟುಂಬದ ಮೊಮ್ಮಗ ಸಮರ್ಥ್ ಶಾಮನೂರುಗೆ ಅವಕಾಶ ನೀಡಿದಾಗ ಜಮೀರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜೀನಾಮೆ ಅಸ್ತ್ರವನ್ನು ಎತ್ತಿದ್ದರು. ಕೇರಳ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು ಮತ್ತು ದಾವಣಗೆರೆ ಪ್ರಚಾರದಿಂದ ದೂರವೇ ಉಳಿದಿದ್ದರು. ಸಚಿವ ಮಲ್ಲಿಕಾರ್ಜುನ್, ‘ಜಮೀರ್ ಬರುವುದಕ್ಕಿಂತ ಬಾರದಿರುವುದೇ ಒಳ್ಳೆಯದು’ ಎಂಬ ಹೇಳಿಕೆಯು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.

ಈ ಹಿನ್ನೆಲೆಯಲ್ಲಿ ಏಪ್ರಿಲ್ 5ರ ಸುದ್ದಿಗೋಷ್ಠಿ ಹೈಕಮಾಂಡ್‌ನ ಒತ್ತಡದಿಂದ ನಡೆದ ‘ಬಲವಂತದ ಏಕತೆ’ಯ ಚಿತ್ರಣವಾಗಿದೆ. ಜಮೀರ್ ಅವರು ‘ಯಾವುದೇ ಮುನಿಸಿಲ್ಲ, ಸಮರ್ಥ್ ನೂರಕ್ಕೆ ನೂರು ಗೆಲ್ಲುತ್ತಾರೆ’ ಎಂದು ಹೇಳಿದ್ದಾರೆ. ಆದರೆ ಮಾತುಗಳಿಗಿಂತ ಕ್ರಿಯೆ ಮುಖ್ಯ. ಸುದ್ದಿಗೋಷ್ಠಿ ನಂತರ ಅವರು ಭೋಜನ ಸ್ವೀಕರಿಸಿ, ಕೆಲವು ಮುಸ್ಲಿಂ ಮುಖಂಡರೊಂದಿಗೆ ಮಾತನಾಡಿ, ಯಾವುದೇ ರ‍್ಯಾಲಿ ಅಥವಾ ಸಾರ್ವಜನಿಕ ಸಭೆ ನಡೆಸದೆ ಹುಬ್ಬಳ್ಳಿಗೆ ವಾಪಸಾಗಿದ್ದಾರೆ.

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ. ಜಮೀರ್ ಅವರ ಅಸಮಾಧಾನವು ಈಗಾಗಲೇ ಬಂಡಾಯ(ಸಾದಿಕ್ ಪೈಲ್ವಾನ್) ಮತ್ತು ಮೌನ ವಿರೋಧಕ್ಕೆ ಕಾರಣವಾಗಿತ್ತು. ಸಾದಿಕ್‌ ಅವರು ಕಾಂಗ್ರೆಸ್‌ಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಮುಸ್ಲಿಂ ಮತದಾರರೂ ಕೂಡ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳುತ್ತಿದ್ದಾರೆ. ಈಗ ಜಮೀರ್‌ ಕೂಡ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಅವರು ಪೂರ್ಣ ಪ್ರಚಾರದಲ್ಲಿ ಭಾಗಿಯಾಗದಿರುವುದು ‘ಜಮೀರ್ ಬೆಂಬಲಿಸುತ್ತಾರೆ; ಆದರೆ ಜನರನ್ನು ಮನವೊಲಿಸುವುದಿಲ್ಲ’ ಎಂಬ ಸಂದೇಶವನ್ನು ನೀಡುತ್ತದೆ. ಅಲ್ಲದೆ ಮುಸ್ಲಿಮರು ಕಾಂಗ್ರೆಸ್ಸನ್ನು ಬೆಂಬಲಿಸಿದರೂ ಅಸಮಾಧಾನ ಹೋಗುವುದಿಲ್ಲ ಎಂಬುದು ವಾಸ್ತವ. ಇದು ಕಾಂಗ್ರೆಸ್‌ಗೆ 40 ಸಾವಿರ ಮತಗಳ ಅಂತರದ ಗೆಲುವಿನ ಗುರಿಯನ್ನು ಕಷ್ಟಕರವಾಗಿಸುತ್ತದೆ.

ಇದನ್ನೂ ಓದಿದ್ದೀರಾ? ಚಿತ್ರದುರ್ಗ | ನ್ಯಾಯಾಲಯ ಆದೇಶಕ್ಕೂ ಕವಡೆ ಕಿಮ್ಮತ್ತಿಲ್ಲ: ʼನಗದು ಘೋಷಣೆ ವಹಿʼ ಮಾಹಿತಿಗೆ ಅಧಿಕಾರಿಗಳ ಹಿಂದೇಟು

ಜಮೀರ್-ಮಲ್ಲಿಕಾರ್ಜುನ್‌ ಸುದ್ದಿಗೋಷ್ಠಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವಾಗಿದೆಯೇ ಹೊರತು ಸಮಸ್ಯೆಯ ಮೂಲವನ್ನು ಕಿತ್ತೆಸೆಯುವುದಿಲ್ಲ. ಕಾಂಗ್ರೆಸ್ ಪಕ್ಷ ವ್ಯಕ್ತಿ ಅಥವಾ ಕುಟುಂಬದಿಂದ ಅಲ್ಲ; ಎಲ್ಲ ಸಮುದಾಯಗಳ ಸಮನ್ವಯದಿಂದ ನಡೆಯುತ್ತದೆ ಎಂಬುದು ಸರಿ. ಆದರೆ ಈ ಸಮನ್ವಯವು ಕ್ರಿಯೆಯಲ್ಲಿ ಕಾಣಬೇಕೇ ಹೊರತು, ಮಾತುಗಳಲ್ಲಿ ಮಾತ್ರವಲ್ಲ. ಏಪ್ರಿಲ್ 9ರ ಫಲಿತಾಂಶವು ಕೇವಲ ಒಂದು ಕ್ಷೇತ್ರದ ಸೋಲು-ಗೆಲುವು ಅಲ್ಲ. ಬದಲಾಗಿ ಕಾಂಗ್ರೆಸ್‌ನ ಒಳಗಿನ ಶಕ್ತಿ ಸಮೀಕರಣಗಳ ಮತ್ತು ಸಮುದಾಯ ರಾಜಕಾರಣದ ಭವಿಷ್ಯವನ್ನು ನಿರ್ಧರಿಸುತ್ತದೆ.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರೈತನ ಭೂಹಕ್ಕಿಗೆ ‘ಪೋಡಿ’ ಅಡ್ಡಿ: ಆನ್‌ಲೈನ್ ಸೇವೆಯಿದ್ದರೂ ಮುಗಿಯದ ಅಲೆದಾಟ!

ರೈತನಿಗೆ ಭೂಮಿಯೇ ಬದುಕು. ಆ ಭೂಮಿಯ ಗಡಿ ಎಲ್ಲಿ? ಎಷ್ಟು ವಿಸ್ತೀರ್ಣ?...