ಗಿಫ್ಟ್‌ ಪಾಲಿಟಿಕ್ಸ್‌ | ಬೆಳ್ಳಿ ಎಂದು ನಕಲಿ ಬೆಳ್ಳಿ ಲಕ್ಷ್ಮಿ ಫೋಟೋ ಕೊಟ್ಟ ಬಿಜೆಪಿ ಶಾಸಕ

Date:

  • ಬೆಳ್ಳಿ ಲಕ್ಷ್ಮಿ ಫೋಟೋ ಹರಿದ ಮಹಿಳೆ
  • ಬಿಜೆಪಿ ಉಡುಗೊರೆಗೆ ಮಹಿಳೆ ಆಕ್ರೋಶ

ರಾಜ್ಯ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ನಡುವೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಬೆಳ್ಳಿ ಫೋಟೋ ಎಂದು ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಆದರೆ, ಬಿಜೆಪಿ ಶಾಸಕ ನೀಡಿರುವ ಬೆಳ್ಳಿಯ ಅಸಲಿಯತ್ತನ್ನು ಮಹಿಳೆಯೊಬ್ಬರು ಬಯಲು ಮಾಡಿದ್ದಾರೆ.

ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಸದಾ ಹೇಳಿಕೊಳ್ಳುವ ಪ್ರೀತಂ ಗೌಡ ಅವರು ಮಹಿಳೆಯರಿಗೆ ಬೆಳ್ಳಿಯ ಲಕ್ಷ್ಮಿ ಫೋಟೋ ನೀಡಿದ್ದಾರೆ. ಆದರೆ, ಅದು ಬೆಳ್ಳಿಯದ್ದಲ್ಲ ನಕಲಿ ಎಂಬುದು ವಿಡಿಯೋ ಮೂಲಕ ಬಹಿರಂಗವಾಗಿದೆ.

ಕಳೆದ ಹದಿನೈದು ದಿನದಿಂದ ಹಾಸನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮತದಾರರ ಸೆಳೆಯಲು ಯತ್ನ ನಡೆಯುತ್ತಿದೆ. ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ವಾರ್ಡ್‌ವಾರು ಹಾಗು ಗ್ರಾ.ಪಂಚಾಯಿತಿವಾರು ಕಾರ್ಯಕ್ರಮ ನಡೆಯುತ್ತಿವೆ.

ಈ ಸುದ್ದಿ ಓದಿದ್ದೀರಾ? ಮುಸ್ಲಿಮರ ಮೀಸಲಾತಿ ರದ್ದು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ; ವಿಚಾರಣೆ ಮುಂದೂಡಿಕೆ

ಬಿಜೆಪಿ ಶಾಸಕ ನೀಡಿದ ಬೆಳ್ಳಿ ಲಕ್ಷ್ಮಿ ಫೋಟೋದ ಅಸಲಿಯತ್ತು ಬಯಲು ಮಾಡಿದ ಮಹಿಳೆಯೊಬ್ಬರು ವಿಡಿಯೋದಲ್ಲಿ, “ಇದು ಬೆಳ್ಳಿ ಫೋಟೋ ಅಂತ ಕೊಟ್ಟವ್ರೆ, ಬೆಳ್ಳಿದೋ ಬಂಗಾರದ್ದೋ ನೋಡೋಣ, ಬೆಳ್ಳಿನ ನೀರಿಗೆ ಬಿಡ್ತಿವಿ ನೋಡಿ” ಎಂದು ಫೋಟೋವನ್ನು ಬಿಚ್ಚಿದ್ದಾರೆ.

ಬೆಳ್ಳಿ ಬಣ್ಣದ ಪೇಪರ್ ಮೂಲಕ ಲಕ್ಷ್ಮಿ ಫೋಟೋ ಮಾಡಲಾಗಿದ್ದು, “ನೋಡಿ, ಇದು ಬೆಳ್ಳಿ ಲಕ್ಷ್ಮಿ, ಇದು ಮಾರಿದ್ರೆ ಮೂವತ್ತು ಸಾವ್ರ ಸಿಗುತ್ತೆ ನೋಡಿ” ಎಂದು ಹರಿದು ಬಿಸಾಕಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮಲ್ಲಿನ ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿಗೆ ಸೋಲು: ಸ್ವಪಕ್ಷಿಯರ ವಿರುದ್ಧ ಸಿ ಟಿ ರವಿ ಕಿಡಿ

ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಹೊಂದಾಣಿಕೆ ರಾಜಕಾರಣದಿಂದಲೇ ಬಿಜೆಪಿಗೆ ಸೋಲಾಗಿದೆ ಪಕ್ಷದೊಳಗಿನ...

ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ: ಸಿಎಂ ಸಿದ್ದರಾಮಯ್ಯ

ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್ ಎಸ್ ಎಸ್ ನವರು ಸಂವಿಧಾನ ವಿರೋಧಿಗಳು ಟೌನ್‌ಹಾಲ್...

ಪಠ್ಯ ಪರಿಷ್ಕರಣೆ | ಕಾಂಗ್ರೆಸ್‌ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ, ಸಿ ಟಿ ರವಿ ವಾಗ್ದಾಳಿ

ಬನ್ನಂಜೆ ಗೋವಿಂದಾಚಾರ್ಯರ ಪಾಠ ಹಿಂಪಡೆದಿದ್ದು ಖಂಡನಾರ್ಹ: ಕೋಟಾ ಶ್ರೀನಿವಾಸ ಪೂಜಾರಿ ಕಾರ್ಲ್ ಮಾರ್ಕ್ಸ್...

ಅಭಿಷೇಕ್‌ ಬ್ಯಾನರ್ಜಿಗೆ ಇ.ಡಿ ಸಮನ್ಸ್‌ | ವಿಚಾರಣೆಗೆ ಹಾಜರಾಗುವುದಿಲ್ಲ ಎಂದ ಟಿಎಂಸಿ ನಾಯಕ

ಪ್ರಾಥಮಿಕ ಶಾಲಾ ನೇಮಕಾತಿ ಹಗರಣದಲ್ಲಿ ಅಭಿಷೇಕ್‌ ಬ್ಯಾನರ್ಜಿ ಪ್ರಶ್ನಿಸಿದ್ದ ಸಿಬಿಐ ಪಂಚಾಯತ್‌ ಚುನಾವಣೆಯ...