ರಾಹುಲ್ ಗಾಂಧಿಗೆ ಜಗದೀಶ್ ಶೆಟ್ಟರ್ ಸ್ವಾಗತ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸದಲ್ಲಿದ್ದಾರೆ. ಹುಬ್ಬಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ವಾಗತಿಸಿದ್ದಾರೆ.

ಬಸವ ಜಯಂತಿ ಹಿನ್ನೆಲೆ ಕೂಡಲ ಸಂಗಮದಲ್ಲಿ ಬಸವ ಧರ್ಮ ಪೀಠ ಕಾರ್ಯಕ್ರಮ ಆಯೋಜಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಭೇಟಿ ಮಹತ್ವದಾಗಲಿದೆ.

ರಾಹುಲ್ ಗಾಂಧಿ ಅವರು ಹುಬ್ಬಳಿಗೆ ಬಂದಿಳಿದ ಬಳಿಕ ಜಗದೀಶ್ ಶೆಟ್ಟರ್ ಅವರ ಜೊತೆಗೆ ರಾಹುಲ್‌ ಗಾಂಧಿ ಮಾತುಕತೆ ನಡೆಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ರಾಹುಲ್ ಗಾಂಧಿ ಸಂಗಮನಾಥ ದೇವಾಲಯ ಮತ್ತು ಐಕ್ಯ ಲಿಂಗಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಬಸವ ಜಯಂತಿಯ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ನಂತರ ವಿಜಯಪುರದಲ್ಲಿ ಹಮ್ಮಿಕೊಂಡಿರುವ ‘ಜನ ಸಂಪರ್ಕ’ ಬೃಹತ್ ಸಮಾವೇಶಕ್ಕೆ ತೆರಳಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಚಿವ ಸೋಮಣ್ಣಗೆ ವರುಣಾದಲ್ಲಿ ಮತ್ತೆ ಮುಖಭಂಗ

ಕೈ ಪಕ್ಷ ಲಿಂಗಾಯತ ಸಮುದಾಯದೊಂದಿಗಿದೆ ಎನ್ನುವುದನ್ನು ಬಹಿರಂಗವಾಗಿ ತೋರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಹಿನ್ನೆಲೆ ಪಕ್ಷದ ರಾಷ್ಟ್ರೀಯ ಪ್ರಮುಖ ರಾಹುಲ್ ಗಾಂಧಿ ಅವರ ಮೂಲಕವೇ ಲಿಂಗಾಯತ ಸಮುದಾಯಕ್ಕೊಂದು ಸಂದೇಶ ಕೊಡಿಸುತ್ತಿದೆ.

ಬಸವ ಜಯಂತಿ ಕಾರ್ಯಕ್ರಮದ ದಿನದಂದು ಬಸವಣ್ಣನವರ ಐಕ್ಯಸ್ಥಳ ಕೂಡಲ ಸಂಗಮದಲ್ಲಿ ರಾಹುಲ್ ಗಾಂಧಿಯವರಿಂದ ಕಾರ್ಯಕ್ರಮವನ್ನು ಪಕ್ಷ ಆಯೋಜಿಸಿದೆ.

LEAVE A REPLY

Please enter your comment!
Please enter your name here