ಹೊರಮೈ ರೋಗನಿರೋಧಕ ಸಹಿಷ್ಣುತೆಯ ಸಂಶೋಧನೆಗೆ 2025ರ ವೈದ್ಯಕೀಯ ನೊಬೆಲ್ ಪ್ರಶಸ್ತಿ

Date:

ಈ ಮೂವರ ಸಂಶೋಧನೆಗಳು ಕ್ಯಾನ್ಸರ್, ಆಟೋಇಮ್ಯೂನ್ ಕಾಯಿಲೆಗಳು, ಅಂಗಾಂಶ ಕಸಿ ತಿರಸ್ಕಾರಗೊಳ್ಳುವ ಸಮಸ್ಯೆಗಳು ಮುಂತಾದುವಕ್ಕೆ ಔಷಧಿಗಳ ಆವಿಷ್ಕರಣೆಗೆ ಅಗತ್ಯ ಜ್ಞಾನವನ್ನು ಒದಗಿಸಿವೆ. ಅದಾಗಲೇ ಅಂತಹ ಔಷಧಿಗಳು ಮಾರುಕಟ್ಟೆಗೆ ಬಂದಿವೆ, ಇಲ್ಲವೇ ಕ್ಲಿನಿಕಲ್ ಪರೀಕ್ಷಾ ಹಂತದಲ್ಲಿವೆ. ಮಾರಣಾಂತಿಕ ಕಾಯಿಲೆಗಳಿಂದ ನರಳುವವರಿಗೆ ಬದುಕುಳಿಯುವ ಬೆಳಕಿಂಡಿಯನ್ನು ತೋರಿಸಿವೆ.

- Advertisement -

ರೋಗನಿರೋಧಕ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆಗೆ 2025ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಮೂವರು ಸಂಶೋಧಕರಿಗೆ ನೀಡಲಾಗಿದೆ. ಅದನ್ನು ಹೊರಮೈ ರೋಗನಿರೋಧಕ ಸಹಿಷ್ಣುತೆ (Peripheral Immune Tolerance) ಎಂದು ಕರೆಯಲಾಗಿದೆ.

ಮೂವರಲ್ಲಿ ಮೊದಲನೆಯವರಾದ ಮೇರಿ ಬ್ರಂಕೋವ್ ಮಹಿಳೆ. ಇಲ್ಲಿಯವರೆಗೆ ವೈದ್ಯಕೀಯ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಹದಿನಾಲ್ಕನೆಯವರು. ಅವರು ಅಮೆರಿಕದ ಪ್ರಿನ್ಸ್‌ ಟನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ವಾಷಿಂಗ್ಟನ್ ರಾಜ್ಯದ ಸಿಯಾಟಲ್‍ನಲ್ಲಿರುವ ಜೀವವಿಜ್ಞಾನದ ಸಂಸ್ಥೆಯೊಂದರಲ್ಲಿ ವಿಜ್ಞಾನಿಯಾಗಿದ್ದಾರೆ. ಮತ್ತಿಬ್ಬರೆಂದರೆ ಫ್ರೆಡ್ ರಾಮ್ಸ್‍ಡೆಲ್ ಮತ್ತು ಶಿಮೋನ್ ಸಕಾಗುಚಿ. ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ರಾಮ್ಸ್‍ಡೆಲ್ ಅವರು ಸ್ಯಾನ್‍ಫ್ರಾನ್ಸಿಸ್ಕೋದಲ್ಲಿಯ ಸಂಸ್ಥೆಯೊಂದಕ್ಕೆ ವೈಜ್ಞಾನಿಕ ಸಲಹೆಗಾರರು. ಜಪಾನಿನ ಕ್ಯಾಟೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಶಿಮೋನ್ ಸಕಾಗುಚಿಯವರು ಒಸಾಕಾ ವಿಶ್ವವಿದ್ಯಾಲಯದ ಇಮ್ಯೂನಾಲಜಿ ವಿಭಾಗದ ಪ್ರಾಧ್ಯಾಪಕರು.

ಹೊರಮೈ ರೋಗನಿರೋಧಕ ಸಹಿಷ್ಣುತೆಯ ಸಂಶೋಧನೆಯು ಸೂಕ್ಷ್ಮಜೀವಿ ವಿಜ್ಞಾನದ ಭಾಗವಾದ ಇಮ್ಯೂನಾಲಜಿ (Immunology) ವಿಷಯಕ್ಕೆ ಸಂಬಂಧಿಸಿದ್ದು.

ಕ್ಲಿಷ್ಟತೆ ಅರಿಯಲೊಂದು ಸರಳ ವ್ಯಾಖ್ಯಾನ

ಸಾಮಾನ್ಯ ಓದುಗರಿಗೆ ವೈದ್ಯಕೀಯ ವಿಜ್ಞಾನದ ಇಂತಹ ಕ್ಲಿಷ್ಟಕರ ವಿಷಯವು ಒಂದೇ ಓದಿಗೆ ಅರ್ಥವಾಗುವಂತದ್ದಲ್ಲ. ಅದಕ್ಕಾಗಿ ಇಲ್ಲೊಂದು ಸರಳ ನಿರೂಪಣೆಯ ವಿಷಯವನ್ನು ಕೊಟ್ಟುಬಿಡಬಹುದು. ಇಮ್ಯೂನಾಲಜಿಯ ಪಠ್ಯಪುಸ್ತಕವೊಂದರಲ್ಲಿ ರೋಗನಿರೋಧಕ ವ್ಯವಸ್ಥೆಯನ್ನು ಹೀಗೆ ವಿವರಿಸಲಾಗಿದೆ.

ಸೂಕ್ಷ್ಮಜೀವಿಗಳೆಂಬ ಶತ್ರು ಸೈನಿಕರು ನಮ್ಮ ದೇಹಕ್ಕೆ ದಾಳಿಯಿಟ್ಟರೆ ಅವರನ್ನು ಸದೆಬಡಿಯಲು ಹಲವು ರೀತಿಯ ರಕ್ಷಕ ವ್ಯವಸ್ಥೆಯು ನಮ್ಮ ದೇಹದಲ್ಲಿರುತ್ತವೆ. ಅದರಲ್ಲಿ ಪ್ರಮುಖವಾದ ವ್ಯವಸ್ಥೆಯೆಂದರೆ ಬಿಳಿರಕ್ತ ಕಣಗಳಲ್ಲೊಂದಾದ ಲಿಂಫೋಸೈಟು (Lymphocytes)ಗಳ ಪಾತ್ರ. ಅವುಗಳಲ್ಲಿ ಎರಡು ವಿಧ. ಒಂದು ಟಿ – ಲಿಂಫೋಸೈಟುಗಳ ರೋಗನಿರೋಧಕ ವ್ಯವಸ್ಥೆ, ಮತ್ತೊಂದು ಬಿ – ಲಿಂಫೋಸೈಟುಗಳ ರೋಗನಿರೋಧಕ ವ್ಯವಸ್ಥೆ. ಸೂಕ್ಷ್ಮಜೀವಿ ಶತ್ರು ಸೈನಿಕರು ದೇಹವನ್ನು ಪ್ರವೇಶಿಸಿದರೆ ಟಿ – ಲಿಂಫೋಸೈಟುಗಳೆಂಬ ದೇಹದೊಳಗಿನ ಕಾವಲು ಸೈನಿಕರು ಅವುಗಳ ಸಂಪರ್ಕಕ್ಕೆ ಬರುತ್ತಿದ್ದಂತೆ ಕುಸ್ತಿ ಆಡಿ ಹೊಸಕಿ ಹಾಕುತ್ತವೆ. ಬಿ – ಲಿಂಫೋಸೈಟುಗಳು ತಮ್ಮ ಬಂದೂಕಿನಿಂದ ಅದಾಗಲೇ ಹೊರಬಿಟ್ಟಿರುವ ರಕ್ತದಲ್ಲಿ ಓಡಾಡುತ್ತಿರುವ ಗುಂಡುಗಳು (ಪ್ರತಿಕಾಯಗಳು ಅಥವಾ ಆಂಟಿಬಾಡಿಗಳು) ಸೂಕ್ಷ್ಮಜೀವಿ ಶತ್ರು ಸೈನಿಕರನ್ನು ಹುಡುಕಿ ಹುಡುಕಿ ಕೊಲ್ಲುತ್ತವೆ. ಈ ಟಿ – ಲಿಂಫೋಸೈಟುಗಳು ಮತ್ತು ಬಿ – ಲಿಂಫೋಸೈಟುಗಳು ದೇಹದ ರೋಗನಿರೋಧಕ ಶಕ್ತಿಗೆ ಅತ್ಯಗತ್ಯ. ಸೂಕ್ಷ್ಮಜೀವಿಗಳೆಂದರೆ ಬ್ಯಾಕ್ಟೀರಿಯಾ, ವೈರಸ್, ಪ್ರೋಟೊಜೋವಾ, ಫಂಗೈ ಮುಂತಾದುವು.

ಆದರೆ, ಈ ಸಾರಿಯ ನೊಬೆಲ್ ಪ್ರಶಸ್ತಿಯ ವಿಷಯವು ಟಿ – ಲಿಂಫೋಸೈಟುಗಳ ರೋಗನಿರೋಧಕ ಶಕ್ತಿಗೆ ಸೀಮಿತ. ಟಿ – ಲಿಂಫೋಸೈಟುಗಳು ಅಥವಾ ಟಿ – ಸೆಲ್‍ಗಳು ಮೂಳೆಮಜ್ಜೆಯಲ್ಲಿ ತಯಾರಾಗಿ ಎದೆಯ ಗೂಡಿನ ಮೇಲ್ಭಾಗದಲ್ಲಿರುವ ಥೈಮಸ್ ಎಂಬ ಗ್ರಂಥಿಯಲ್ಲಿ ಮತ್ತಷ್ಟು ಪ್ರಕ್ರಿಯೆಗೊಳಗಾಗಿ ಪ್ರಬುದ್ಧವಾಗುತ್ತವೆ. ಇಂತಹ ಲಿಂಫಾಯ್ಡ್ ಅಂಗಾಂಶಗಳಲ್ಲಿ ನಡೆಯುವ ಸಹಿಷ್ಣುತೆಯನ್ನು ‘ಕೇಂದ್ರೀಯ ರೋಗನಿರೋಧಕ ಸಹಿಷ್ಣುತೆ’ (Central Immune Tolerance) ಎಂದು ಕರೆಯಲಾಗಿದೆ. ಕೇಂದ್ರೀಯ ಕೋಶಗಳಿಂದ ಹೊರಬಂದು ರಕ್ತ ಮತ್ತಿತರ ಕೋಶಗಳಲ್ಲಿದ್ದುಕೊಂಡು ಸೂಕ್ಷ್ಮಜೀವಿಗಳನ್ನು ಹೊಸಕಿಹಾಕುವ ಪ್ರಕ್ರಿಯೆಯನ್ನು ಹೊರಮೈ ರೋಗನಿರೋಧಕ ಸಹಿಷ್ಣುತೆ (Peripheral Immune Tolerance) ಎಂದು ಕರೆಯಲಾಗಿದೆ. ಇಲ್ಲಿ ಹೊರಮೈ ಎಂದರೆ ಥೈಮಸ್ ಮತ್ತಿತರ ಲಿಂಫಾಯ್ಡ್ ಕೋಶಗಳ ಹೊರಗೆ ಎಂದಷ್ಟೇ ಅರ್ಥ. ದೇಹದ ಹೊರಗೆ ಅಲ್ಲವೇ ಅಲ್ಲ. ಅದು ದೇಹದ ಒಳಗೆ ನಡೆಯುವ ರೋಗನಿರೋಧಕ ಸಹಿಷ್ಣುತೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...
2. Nobel 2025 T Cells Immunity

ಆದರೆ, ಟಿ – ಸೆಲ್‍ಗಳು ಸೂಕ್ಷ್ಮಜೀವಿಗಳನ್ನು ಸೂಕ್ತ ರೀತಿಯಲ್ಲಿ ಗುರುತಿಸಿಕೊಳ್ಳಬೇಕಾಗುತ್ತದೆ. ಸೂಕ್ಷ್ಮಜೀವಿಗಳನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನೆರವಾಗುವುದೇ ಹೆಲ್ಪರ್ ಟಿ – ಲಿಂಫೋಸೈಟುಗಳು. ಅವು ದೇಹದಲ್ಲಿ ಗಸ್ತು ತಿರುಗುತ್ತಿರುತ್ತವೆ. ಸೂಕ್ಷ್ಮಜೀವಿಗಳನ್ನು ಕಂಡಾಕ್ಷಣ ರೋಗನಿರೋಧಕ ಜೀವಕೋಶಗಳನ್ನು ಸಕ್ರಿಯಗೊಳಿಸುತ್ತವೆ. ಆಗ ಸಕ್ರಿಯಗೊಂಡ ಕಿಲ್ಲರ್ ಟಿ – ಲಿಂಫೋಸೈಟುಗಳು ಸೂಕ್ಷ್ಮಜೀವಿಗಳ ಸಂಪರ್ಕಕ್ಕೆ ಬಂದಾಕ್ಷಣ ಕುಸ್ತಿ ಆಡಿ ಹೊಸಕಿಹಾಕುತ್ತವೆ ಅರ್ಥಾತ್ ಕೊಂದುಹಾಕುತ್ತವೆ. ಆ ಕಾರಣಕ್ಕಾಗಿಯೇ ಅಂತಹ ಲಿಂಫೋಸೈಟುಗಳನ್ನು ‘ಕಿಲ್ಲರ್ ಟಿ – ಲಿಂಫೋಸೈಟುಗಳು’ ಎಂದು ಕರೆಯಲಾಗಿದೆ.

ಹೀಗೆ, ರೋಗನಿರೋಧಕ ಪ್ರಕ್ರಿಯೆಯಲ್ಲಿ ಸೂಕ್ಷ್ಮಜೀವಿಗಳನ್ನು ಮಾತ್ರ ಗುರುತಿಸಿಕೊಳ್ಳುವ ಸಾಧ್ಯತೆಯು ಶರೀರ ಕ್ರಿಯೆಯಲ್ಲಿ ಹೇಗೆ ಸೃಷ್ಟಿಗೊಂಡಿದೆ? ನಮ್ಮದೇ ದೇಹದ ಕೋಶಗಳನ್ನು ಗುರುತಿಸಿ ಹೊಸಕಿ ಹಾಕದಿರುವುದಕ್ಕೆ ಕಾರಣಗಳನ್ನು ಸಂಶೋಧಿಸಲಾಗಿದೆ. ಒಂದು ವೇಳೆ ಅಚಾನಕ್ಕಾಗಿ ನಮ್ಮದೇ ದೇಹದ ಕೋಶಗಳನ್ನು ಗುರುತಿಸಿ ಹೊಸಕಿ ಹಾಕಿಬಿಟ್ಟರೆ ಅಂತಹ ಕ್ರಿಯೆಗಳು ‘ಆಟೋಇಮ್ಯೂನ್ ಕಾಯಿಲೆಗಳು’ ಆದಂತಹ ಟೈಪ್ 1 ಡಯಾಬಿಟಿಸ್, ಕೀಲುನೋವು ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಟಿ-ಜೀವಕೋಶಗಳು ಸೂಕ್ಷ್ಮಜೀವಿಗಳನ್ನು ಮಾತ್ರ ಗುರುತಿಸಿಕೊಳ್ಳಲು ಸೂಕ್ಷ್ಮಜೀವಿಗಳಲ್ಲಿರುವ ಪ್ರೋಟೀನುಗಳು ಕಾರಣ. ಆ ಪ್ರೋಟೀನುಗಳನ್ನು ಗುರುತಿಸಿಕೊಳ್ಳಲು ಟಿ ಜೀವಕೋಶಗಳ ಮೇಲೆ ಸುಮಾರು 10,000ದಿಂದ 50,000ವರೆಗೆ ಗ್ರಾಹಕ (Receptor)ಗಳಿರುತ್ತವೆ. ಈ ಹಂತದ ವೈಜ್ಞಾನಿಕ ಸಂಶೋಧನೆಯ ತಿಳುವಳಿಕೆಯು ಮಾಲೆಕ್ಯುಲಾರ್ ಮಟ್ಟದ್ದು. ಆಣ್ವಿಕ ಜೀವವಿಜ್ಞಾನ (ಮಾಲೆಕ್ಯುಲಾರ್ ಬಯಾಲಜಿ) ಅಥವಾ ಬಯೋಟೆಕ್ನಾಲಜಿ (ಬಿ.ಟಿ.) ಮಟ್ಟದ್ದು. ವೈದ್ಯಕೀಯ ಜಗತ್ತಿನ ಹಲವು ಸಂಶೋಧನೆಗಳು ಪ್ರಸ್ತುತವಾಗಿ ಆಣ್ವಿಕ ಜೀವವಿಜ್ಞಾನದ ಮಟ್ಟದಲ್ಲಿ ನಡೆಯುತ್ತಿವೆ. ಇದಿಷ್ಟು ಮಾಹಿತಿಯು 2025ರ ನೊಬೆಲ್ ಪ್ರಶಸ್ತಿಯ ಸಂಶೋಧನೆಯ ವಿವರಗಳನ್ನು ಸರಳವಾಗಿ ಅರಿಯಲೊಂದು ಪೀಠಿಕೆ.

ಶಿಮೋನ್ ಸಕಾಗುಚಿ ಕೊಡುಗೆ

ರೋಗನಿರೋಧಕ ಶಕ್ತಿಯಲ್ಲಿ ಥೈಮಸ್ ಗ್ರಂಥಿಯ ಪಾತ್ರವನ್ನು ನಿರೂಪಿಸಿದವರು ಜಪಾನಿನ ಶಿಮೋನ್ ಸಕಾಗುಚಿಯವರು. ತಮ್ಮ ಅಧ್ಯಯನಕ್ಕೆ ನವಜಾತ ಇಲಿಗಳನ್ನು ಬಳಸಿಕೊಂಡ ಅವರು ಒಂದು ಗುಂಪಿನ ಇಲಿಗಳಲ್ಲಿ ಎದೆಗೂಡಿನೊಳಗಿನ ಥೈಮಸ್ ಗ್ರಂಥಿಯನ್ನು ತೆಗೆದುಹಾಕಿ ಪ್ರಯೋಗಕ್ಕೊಳಪಡಿಸಿದರು. ಆ ಗುಂಪಿನ ಇಲಿಗಳು ಹಲವು ಕಾಯಿಲೆಗಳಿಗೆ ಒಳಗಾದವು. ಆದರೆ, ಅವಕ್ಕೆ ಥೈಮಸ್ ಹೊಂದಿದ ಗುಂಪಿನಿಂದ ತೆಗೆದುಕೊಂಡ ಟಿ ಜೀವಕೋಶಗಳನ್ನು ಚಿಕಿತ್ಸೆಯ ರೂಪದಲ್ಲಿ ನೀಡಿದಾಗ ಇಲಿಗಳು ಚೇತರಿಸಿಕೊಂಡವು. ಯಾಕೆಂದರೆ, ಟಿ ಜೀವಕೋಶಗಳು ಥೈಮಸ್‍ನಲ್ಲಿ ಪ್ರಬುದ್ಧಗೊಳ್ಳುವ ಪ್ರಕ್ರಿಯೆಯಲ್ಲಿ ಹಾದುಬಂದಿದ್ದವು. ಹೀಗೆ ತಮ್ಮ ಅಧ್ಯಯನದ ಮೂಲಕ ರೋಗನಿರೋಧಕ ಪ್ರಕ್ರಿಯೆಯಲ್ಲಿ ಥೈಮಸ್ ಗ್ರಂಥಿಯ ಪಾತ್ರವನ್ನು ಸಕಾಗುಚಿ ನಿರೂಪಿಸಿದರು. ಅಂತಹ ಸೆಲ್‍ಗಳನ್ನು CD25 ಜೀವಕೋಶಗಳೆಂದು ಕರೆದರು. ಇದನ್ನವರು 1995ರಲ್ಲಿ ಸ್ಪಷ್ಟವಾಗಿ ನಿರೂಪಿಸಿದರು. ಅದು ಮೂಲಭೂತ ತಿಳುವಳಿಕೆಯಾಗಿ ಮುಂದಿನ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿತು. ಕ್ಯಾನ್ಸರ್, ಸ್ವಯಂ ನಿರೋಧಕ (ಆಟೋಇಮ್ಯೂನ್) ಕಾಯಿಲೆಗಳಿಗೆ ಹಾಗೂ ಅಂಗಾಂಶ ಕಸಿ ಸಂದರ್ಭಗಳಲ್ಲಿ ಚಿಕಿತ್ಸೆ ಕಂಡು ಹಿಡಿಯಬಹುದಾದ ಮಾರ್ಗಕ್ಕೆ ಅವರ ಸಂಶೋಧನೆ ಬುನಾದಿ ಹಾಕಿಕೊಟ್ಟಿತು.

ಮೇರಿ ಬ್ರಂಕೋವ್ ಮತ್ತು ಫ್ರೆಡ್ ರಾಮ್ಸ್‍ಡೆಲ್ ಅವರ ಕೊಡುಗೆ

ಮೇರಿಯವರು ಇಲಿಗಳಲ್ಲಿ FOXP3 ಎಂಬ ವಂಶವಾಹಿಯನ್ನು ಫ್ರೆಡ್ ರಾಮ್ಸ್‍ಡೆಲ್ ಅವರೊಡಗೂಡಿ ಕಂಡುಹಿಡಿದರು. ಈ ವಂಶವಾಹಿ ಅಥವಾ ಜೀನ್ X ಕ್ರೋಮೊಸೋಮ್‍ನಲ್ಲಿರುತ್ತದೆ ಎಂದು ಅರಿತರು. FOXP3 ಜೀನ್ ಟಿ ಸೆಲ್‍ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ ಹಾಗೂ ರೋಗನಿರೋಧಕ ಸಹಿಷ್ಣುತೆಗೆ ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಬರದಂತೆ ತಡೆಯಲು ಅಗತ್ಯ.

3. Thymus gland

ಹಾಗೆಯೇ, ಚರ್ಮ ಸಿಬ್ಬು ಸಮಸ್ಯೆಯಿಂದ ಗಂಡು ಇಲಿಗಳು ನರಳುತ್ತಿರುವುದನ್ನು ಅವರು ಗಮನಿಸಿದರು. ಅಂತಹ ಸಮಸ್ಯೆಯು ಹೆಣ್ಣು ಇಲಿಗಳಲ್ಲಿರಲಿಲ್ಲ. ಅಂತಹ ಸಮಸ್ಯೆಗೆ ಅವರು ಕೊಟ್ಟ ಕಾರಣವೇನೆಂದರೆ ಗಂಡು ಇಲಿಗಳಲ್ಲಿ ಒಂದು X ಕ್ರೋಮೊಸೋಮ್ (ವರ್ಣತಂತು) ಇದ್ದರೆ ಹೆಣ್ಣು ಇಲಿಗಳಲ್ಲಿ ಎರಡು X ಕ್ರೋಮೊಸೋಮ್‍ಗಳಿರುವುದು. ಚರ್ಮ ಸಿಬ್ಬು ಸಮಸ್ಯೆಯು ಹೆಣ್ಣು ಇಲಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿರಲು ಎರಡು X ಕ್ರೋಮೊಸೋಮ್‍ಗಳಿಂದ ಉತ್ಪತ್ತಿಯಾಗುವ FOXP3 ಜೀನ್. FOXP3 ಜೀನ್ ಕೊರತೆಯಾದಲ್ಲಿ ಅಥವಾ ಮ್ಯುಟೇಷನ್‍ಗೆ ಒಳಗಾದಲ್ಲಿ X ಸೆಲ್‍ಗಳ ಉತ್ಪತ್ತಿಯು ಹೆಚ್ಚಾಗಿ ಆಟೋಇಮ್ಯೂನ್ ಕಾಯಿಲೆಗಳು ಬರುತ್ತವೆ. ಮಕ್ಕಳಲ್ಲಿ ಕಂಡುಬರುತ್ತಿದ್ದ IPEX (ಐಪೆಕ್ಸ್) ಸಿಂಡ್ರೋಮ್‍ಗೆ FOXP3 ಜೀನ್‍ನಲ್ಲಿ ಆದ ಮ್ಯುಟೇಷನ್ ಕಾರಣ ಎಂದವರು ತೋರಿಸಿಕೊಟ್ಟರು.

ಇದನ್ನೂ ಓದಿ ವಯನಾಡ್ ಭೂಕುಸಿತ | ಒಂದು ವರ್ಷ ಕಳೆದರೂ ಸಿಗದ ನೆರವು; ಕೇಂದ್ರಕ್ಕೆ ಹೈಕೋರ್ಟ್‌ ತರಾಟೆ

ದೇಹಕ್ಕೆ ದೇಹವೇ ಶತ್ರುವಾಗುವ ಆಟೋ ಇಮ್ಯೂನ್ ಕಾಯಿಲೆಗಳನ್ನು ಮತ್ತು ಕ್ಯಾನ್ಸರ್ ಅನ್ನು ನಿಯಂತ್ರಿಸಲು ಬೇಕಾದ ಕೋಶ ವಿಜ್ಞಾನ (Cell Biology) ವನ್ನು ಮೇರಿ ಬ್ರಂಕೋವ್ ಮತ್ತು ಫ್ರೆಡ್ ರಾಮ್ಸ್‍ಡೆಲ್ ವಿವರವಾಗಿ ಸಂಶೋಧಿಸಿದ್ದಾರೆ.

ಅದಾಗಲೇ ಟಿ ಸೆಲ್‍ಗಳ ಉತ್ಪತ್ತಿ ಮತ್ತು ಅವು ಪ್ರಬುದ್ಧತೆಗೆ ಬರುವುದನ್ನು ಶಿಮೋನ್ ಸಕಾಗುಚಿಯವರ ಅಧ್ಯಯನದಿಂದ ತಿಳಿಯಲಾಗಿತ್ತು. ಎಲ್ಲವೂ ಒಂದಕ್ಕೊಂದು ಸಂಬಂಧವಿರುವಂತಹ ಅಧ್ಯಯನಗಳೇ. ಹಾಗಾಗಿ ಸಕಾಗುಚಿಯವರನ್ನು ಮೂರನೇ ಕ್ರಮಾಂಕದಲ್ಲಿ ಬ್ರಂಕೋವ್ ಮತ್ತು ರಾಮ್ಸ್‍ಡೆಲ್ ಅವರ ಜೊತೆಗೆ ನೊಬೆಲ್ ಪ್ರಶಸ್ತಿಗೆ ಪರಿಗಣಿಸಲಾಗಿದೆ.
ಈ ಮೂವರ ಸಂಶೋಧನೆಗಳು ಕ್ಯಾನ್ಸರ್, ಆಟೋಇಮ್ಯೂನ್ ಕಾಯಿಲೆಗಳು, ಅಂಗಾಂಶ ಕಸಿ ತಿರಸ್ಕಾರಗೊಳ್ಳುವ ಸಮಸ್ಯೆಗಳು ಮುಂತಾದುವಕ್ಕೆ ಔಷಧಿಗಳ ಆವಿಷ್ಕರಣೆಗೆ ಅಗತ್ಯ ಜ್ಞಾನವನ್ನು ಒದಗಿಸಿವೆ. ಅದಾಗಲೇ ಅಂತಹ ಔಷಧಿಗಳು ಮಾರುಕಟ್ಟೆಗೆ ಬಂದಿವೆ ಇಲ್ಲವೇ ಕ್ಲಿನಿಕಲ್ ಪರೀಕ್ಷಾ ಹಂತದಲ್ಲಿವೆ. ಮಾರಣಾಂತಿಕ ಕಾಯಿಲೆಗಳಿಂದ ನರಳುವವರಿಗೆ ಬದುಕುಳಿಯುವ ಬೆಳಕಿಂಡಿಯನ್ನು ತೋರಿಸಿವೆ. ವೈದ್ಯಕೀಯ ಸಂಶೋಧನೆಗಳಲ್ಲಿ ಸದಾ ಮೇಲುಗೈ ಪಡೆಯುತ್ತಿರುವ ಅಮೆರಿಕ, ಜಪಾನ್ ಮತ್ತಿತರೆ ದೇಶಗಳ ವಿಜ್ಞಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸೋಣ.

ಔಷಧಿಯೊಂದು ಮಾರುಕಟ್ಟೆಗೆ ಬರುವ ಮೊದಲು ಎಷ್ಟು ಪರೀಕ್ಷೆಗಳ ಪಾಸು ಮಾಡಬೇಕು ಗೊತ್ತೇ?

WhatsApp Image 2025 07 22 at 12.22.50 PM
ಪ್ರೊ. ಎಂ. ನಾರಾಯಣ ಸ್ವಾಮಿ
+ posts

ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ಎಂ. ನಾರಾಯಣ ಸ್ವಾಮಿ
ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು? ವಿಮಾನದ ಕಾಕ್‌ಪಿಟ್‌ ಹೇಗಿರುತ್ತದೆ ಬಲ್ಲಿರಾ?

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್ ಭಾಷಣದ ಹಿಂದಿದೆ ಮೋದಿ ಸರ್ಕಾರದ ವೈಫಲ್ಯದ ಮುಖವಾಡ

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು...