ಎಂಎಸ್‌ಪಿ | 43ನೇ ದಿನಕ್ಕೆ ಕಾಲಿಟ್ಟ ದಲ್ಲೇವಾಲ್ ಉಪವಾಸ; ರೈತರ ಬಲಿಗೆ ಕಾಯುತ್ತಿದೆಯೇ ಕೇಂದ್ರ?

Date:

ನಾವು ಬಾಲ್ಯದಿಂದ ಇಂದಿಗೂ ಭಾಷಣಗಳಲ್ಲಿ ಹೇಳಿಕೊಂಡು, ಕೇಳಿಕೊಂಡು ಬಂದಿರುವುದು ‘ರೈತ ದೇಶದ ಬೆನ್ನೆಲುಬು’ ಎಂಬುದು. ಆಸ್ತಿಕರು ‘ರೈತನೇ ದೇವರೆಂದರೆ’, ನಾಸ್ತಿಕರು ‘ರೈತನೇ ನಮ್ಮ ದೇಶ’ ಎನ್ನುತ್ತಾರೆ. ಅವೆಲ್ಲವೂ ಇಂದು ಭಾಷಣಕ್ಕೆ ಸೀಮಿತ, ರಾಜಕಾರಣಿಗಳ ಮಾತಿನ ಚಪಲಕ್ಕೆ ಆಹುತಿಯಾಗಿವೆ. ರೈತರ ಬೇಡಿಕೆಯನ್ನು ಕೇಳುವವರೂ ಇಲ್ಲ, ಬೆಲೆಯೂ ಇಲ್ಲ. ಅದಕ್ಕೆ ಸ್ಪಷ್ಟ ಉದಾಹರಣೆ ಸುಮಾರು 43 ದಿನಗಳಿಂದ ಜಗ್‌ಜೀತ್ ಸಿಂಗ್ ದಲ್ಲೇವಾಲ್ ಉಪವಾಸ ಮಾಡುತ್ತಿರುವುದು.

- Advertisement -

ರೈತರು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ನಡೆದಿದೆ. ಆದರೆ, ಕಾರ್ಪೋರೇಟ್ ಕಂಪನಿಗಳ ಅದರಲ್ಲೂ ಅಂಬಾನಿ-ಅದಾನಿಗಳ ಅತ್ಯಾಪ್ತ, ಆಪ್ತಮಿತ್ರ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಪಾಡು ಇನ್ನಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ. ತಮ್ಮ ಬೇಡಿಕೆ ಈಡೇರಿಕೆಗೆ ರೈತರು ತಮ್ಮ ಜೀವವನ್ನೇ ಮುಡಿಪಿಡುವಂತಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನು ಓದಿದ್ದೀರಾ? ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ; ನನ್ನನ್ನು ಮೇಲೆತ್ತಲು ಸರ್ಕಾರಕ್ಕೆ ಬಿಡಬೇಡಿ: 29 ದಿನಗಳಿಂದ ಉಪವಾಸ ಮಾಡುತ್ತಿರುವ ರೈತ ದಲೈವಾಲ್

2020ರಿಂದ ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. 2020ರಲ್ಲಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೀರ್ಘ ಪ್ರತಿಭಟನೆಯನ್ನು ನಡೆಸಿದ್ದರು. ರೈತರ ಪಟ್ಟುಬಿಡದ ಈ ಹೋರಾಟದಿಂದಾಗಿ ಬೇರೆ ದಾರಿಯಿಲ್ಲದೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು2021ರ ನವೆಂಬರ್‌ನಲ್ಲಿ ಹಿಂಪಡೆದಿತ್ತು.

ಆದರೆ, ಎಂಎಸ್‌ಪಿಗೆ ಕಾನೂನು ಖಾತರಿ ನೀಡುವ ರೈತರ ಬೇಡಿಕೆ ಇಂದಿಗೂ ಬೇಡಿಕೆಯಾಗಿಯೇ ಉಳಿದಿದೆ. ಎಂಎಸ್‌ಪಿ ಕಾನೂನು ಖಾತರಿ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಪಂಜಾಬ್ ರೈತರು 2024ರ ಫೆಬ್ರವರಿ 13ರಿಂದ ದೆಹಲಿ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದರು. ಅವರನ್ನು ಪಂಜಾಬ್-ಹರಿಯಾಣ ಗಡಿಯಲ್ಲಿಯೇ ಗಡ್ಡಗಟ್ಟಲಾಯಿತು. ಅಂದಿನಿಂದಲೂ ಅವರು ಖನೌರಿ ಮತ್ತು ಶಂಭು ಗಡಿಗಳಲ್ಲಿ ಹೋರಾಟ ಮುಂದುವರೆಸಿದ್ದಾರೆ. ಇವೆಲ್ಲವುದರ ನಡುವೆ ರೈತ ನಾಯಕ ಜಗ್‌ಜೀತ್ ಸಿಂಗ್ ದಲ್ಲೇವಾಲ್ ರೈತರ ಬೇಡಿಕೆಯ ಈಡೇರಿಕೆಗಾಗಿ ಅನಿರ್ಧಿಷ್ಠಾವಧಿ ಉಪವಾಸ ನಡೆಸುತ್ತಿದ್ದಾರೆ. ಅವರ ಉಪವಾಸ 40ಕ್ಕೂ ದಿನಗಳ ಗಡಿ ದಾಟಿದೆ. ಅವರ ಆರೋಗ್ಯ ಪರಿಸ್ಥಿತಿ ಶೋಚನೀಯವಾಗಿದೆ. “ನಾನು ನನ್ನ ಹೋರಾಟದಲ್ಲಿ ಗೆಲ್ಲುತ್ತೇನೆ ಅಥವಾ ಸಾಯುತ್ತೇನೆ. ನನ್ನನ್ನು ಬಲವಂತವಾಗಿ ಮೇಲೆತ್ತಲು ಸರ್ಕಾರಕ್ಕೆ ಬಿಡಬೇಡಿ” ಎಂದು ಸ್ಪಷ್ಟವಾಗಿ ದಲ್ಲೇವಾಲ್ ಹೇಳಿದ್ದಾರೆ.

ಈ ಹಂತದಲ್ಲಾದರೂ ರೈತರೊಂದಿಗೆ ಕೂತು ಮಾತನಾಡಿ ಬೇಡಿಕೆ ಈಡೇರಿಕೆಯ ಚಿಂತನೆ ನಡೆಸಬೇಕಾದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ರೈತರ ಜೀವಕ್ಕೆ ಬೆಲೆ ನೀಡದ ಈ ಕೇಂದ್ರ ಸರ್ಕಾರ ಸರ್ಪಕ್ಕಾಗಿ ಹೊಂಚು ಹಾಕುತ್ತಿರುವ ಗರುಡನಂತೆ ಕಾಣಿಸುತ್ತಿದೆ.

ಇದನ್ನು ಓದಿದ್ದೀರಾ? ಎಂಎಸ್‌ಪಿ | ಜನವರಿ 4ರಂದು ಕಿಸಾನ್ ಮಹಾ ಪಂಚಾಯತ್: ರೈತರ ಕರೆ

2020ರಿಂದ ಎಂಎಸ್‌ಪಿ ಕಾನೂನು ಖಾತರಿಗಾಗಿ ರೈತರು ಪ್ರತಿಭಟಿಸುತ್ತಿದ್ದರೂ ಕೇಂದ್ರ ಮಾತ್ರ ರೈತರತ್ತ ತಲೆಹಾಕಿಯೂ ಮಲಗಲ್ಲ ಎಂದು ನಿರ್ಧರಿಸಿದಂತಿದೆ. ಪದೇ ಪದೇ ಇನ್ನೇನು ಎಂಎಸ್‌ಪಿ ಜಾರಿಗೊಳಿಸುವತ್ತೇವೆ ಎಂದು ಕೇಂದ್ರ ಹೇಳುತ್ತಲೇ ಇದೆ. ಆದರೆ, ಜಾರಿಗೆ ಮಾತ್ರ ಬಂದಿಲ್ಲ. ಕಾನೂನು ಖಾತರಿ ಬಗ್ಗೆ ಮಾತೇ ಇಲ್ಲ.

ಈಗಾಗಲೇ ರೈತರ ಹೊಟ್ಟೆಗೆ ಹೊಡೆದಿರುವ ಮೋದಿ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳಿಗೆ ಕೃಷಿ ಭೂಮಿಯನ್ನು ಧಾರೆ ಎರೆಯುತ್ತಿದೆ. ರೈತರ ಭೂಮಿ ಕಿತ್ತುಕೊಂಡು ಕಾರ್ಪೋರೇಟ್‌ಗಳ ಕೈಗೆ ಒಪ್ಪಿಸಲಾಗುತ್ತಿದೆ. ಇತ್ತ ಪರಿಹಾರವೂ ಇಲ್ಲ, ಭೂಮಿಯೂ ಇಲ್ಲ ಎಂಬ ಸ್ಥಿತಿಯಲ್ಲಿರುವ ರೈತರ ಅಳಲು ಕೇಳುವವರಿಲ್ಲ.

ಇನ್ನೊಂದೆಡೆ ಬೀದಿಗಿಳಿದು ಹೋರಾಡುವ ರೈತರನ್ನು ರೈತರೇ ಅಲ್ಲ ಎಂದು ಬಿಂಬಿಸಿ, ಜನರನ್ನೇ ರೈತರ ವಿರುದ್ಧ ಎತ್ತಿಕಟ್ಟುವಲ್ಲಿಯೂ ಬಿಜೆಪಿಗರು ಬಹುತೇಕ ಸಫಲರಾಗಿದ್ದಾರೆ. ರೈತರನ್ನೇ ಭಯೋತ್ಪಾದಕರು ಎಂದು ಬಿಂಬಿಸುವ ಕೀಳು ಸ್ಥಿತಿಗೆ ಕೇಂದ್ರ ಸರ್ಕಾರ ಇಳಿದಿದೆ.

ರೈತರ, ಬಡವರ್ಗದ, ಜನ ಸಾಮಾನ್ಯರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ನಮ್ಮ ನಾಟಕೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಸಾನದ ದಾಹ ಹೆಚ್ಚಾದಂತಿದೆ. ನೋಟ್‌ ಬಂದ್‌ನಿಂದ ಹಿಡಿದು ಲಾಕ್‌ಡೌನ್‌ವರೆಗೆ ಮುಂದಾಲೋಚನೆಯಿಲ್ಲದ ತನ್ನ ಆದೇಶಗಳಿಂದ ಈಗಾಗಲೇ ಮೋದಿ ಪಡೆದ ನರಬಲಿಗೆ ಲೆಕ್ಕವಿಲ್ಲ. ದೇಶದ ಬೆನ್ನೆಲುಬಾದ ರೈತರ ಬೇಡಿಕೆಗಳನ್ನು ಈಡೇರಿಸಬೇಕಾದ ಕೇಂದ್ರ ಸರ್ಕಾರ ದಲೈವಾಲ್ ಪ್ರಾಣಪಕ್ಷಿ ಹಾರಲು ಕಾದುಕೂತಿರುವುದು ವಿಪರ್ಯಾಸ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

ಜಪಾನ್ ಅಂಗಳದಲ್ಲಿ ಮಿನುಗಿದ ಭಾರತದ ‘ಚಿನ್ನ’ದ ನಾರಿಯರು: ಕಷ್ಟಗಳನ್ನು ಮೆಟ್ಟಿ ನಿಂತ ಗೆಲುವಿನ ಗಾಥೆ

ಜಪಾನ್‌ನ ಐಚಿ ಪ್ರಾಂತ್ಯದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಭಾರತೀಯ...

ವ್ಯವಸ್ಥೆಯ ವೈಫಲ್ಯಕ್ಕೆ 32 ಬೈಗಾ ಕಂದಮ್ಮಗಳ ಬಲಿ: ಬುಡಕಟ್ಟು ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ಕೇಂದ್ರ, ರಾಜ್ಯ ಸರ್ಕಾರಗಳು ಇಂತಹ ಅಳಿದುಳಿಯುತ್ತಿರುವ ಬುಡಕಟ್ಟು ಸಮುದಾಯದ ಕಡೆಗೆ ತಮ್ಮ...

ಆದಿವಾಸಿ ಕಲಾವಿದನ ನಿಧನದ 25 ವರ್ಷಗಳ ನಂತರ ₹18 ಕೋಟಿಗೆ ಹರಾಜಾಯಿತು ಆತನ ಕಲಾಕೃತಿ!

ಈ ಚಿತ್ರಕಲಾಕೃತಿಯಲ್ಲಿ ಚಿತ್ರಿತವಾಗಿರುವ ನಾಗ, ಭೂಮಿತಾಯಿಯ ಪ್ರತೀಕ. ನಾಗನ ಮೇಲೆ ನಿಂತಿರುವ...