ಉಸಿರಾಡುವ ಗಾಳಿ ಮಶೀನ್ ಮೂಲಕ ಮಾರಾಟ: ಶುದ್ಧ ವಾಯುವಿಲ್ಲದೆ ಪರಿಸರ ಬಿಕ್ಕಟ್ಟಿನಲ್ಲಿ ದೆಹಲಿ

Date:

ಬ್ರಿಟಿಷ್ ವಿದ್ವಾಂಸ ಉರ್ಸುಲಾ ಹುವ್ಸ್ ದಶಕಗಳ ಹಿಂದೆ, ಜೀವನಕ್ಕೆ ಅಗತ್ಯವಾದದ್ದನ್ನು ಬಂಡವಾಳಶಾಹಿಗಳು ಮಾರಾಟ ಮಾಡಬೇಕಾದ ವಸ್ತುವನ್ನಾಗಿ ಪರಿವರ್ತಿಸುತ್ತಾರೆ ಎಂದು ಎಚ್ಚರಿಸಿದ್ದರು. ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲಾ ಹೊಸ ಸರಕುಗಳನ್ನು ಸೃಷ್ಟಿಸುತ್ತದೆ ಎಂದಿದ್ದರು. ಆ ಹಾದಿಯಲ್ಲಿ ಇದೀಗ ಗಾಳಿಯೂ ಮಾರಾಟದ ಸರಕಾಗಿದೆ.

ದೆಹಲಿಯಲ್ಲಿ ಜನರು ಸದ್ಯ ಉಸಿರಾಡುತ್ತಿಲ್ಲ, ತಮ್ಮನ್ನು ತಾವು ಉಳಿಸಿಕೊಳ್ಳಲು ಏದುಸಿರುವ ಬಿಡುತ್ತಿದ್ದಾರೆ. ಏಕೆಂದರೆ ವಾಯುಮಾಲಿನ್ಯ ಸಂಕಟಕ್ಕೆ ಸಿಲುಕಿರುವ ದೆಹಲಿ ಈಗ ಅಪಾಯಕಾರಿಯಾದ ಪರಿಸರ ಬಿಕ್ಕಟ್ಟಿನಲ್ಲಿದೆ. ವಾಯು ಗುಣಮಟ್ಟವು ಹಲವು ಕಡೆಗಳಲ್ಲಿ 500ರ ಗಡಿ ದಾಟಿದ್ದು ‘ಗಂಭೀರ’ ಸ್ಥಿತಿಗೆ ತಲುಪಿದೆ. ಆರೋಗ್ಯದ ತುರ್ತು ಪರಿಸ್ಥಿತಿ ಎದುರಾಗಿದೆ. ಉಸಿರಾಡಲು ಜನರು ತಡಕಾಡುವಂತಾಗಿದೆ. ಚಳಿಗಾಲದಲ್ಲಿ ದೆಹಲಿಯಲ್ಲಿರಬೇಡಿ ಎಂದು ವೈದ್ಯರೇ ಸಲಹೆ ನೀಡುತ್ತಿದ್ದಾರೆ. ಈ ನಡುವೆ ಗಾಳಿಯೂ ಮಾರಾಟದ ವಸ್ತುವಾಗಿದೆ. ದೆಹಲಿಯಲ್ಲಿ ಉಸಿರಾಡುವ ಶುದ್ಧ ಗಾಳಿಯೂ ಮಶೀನ್ ಮೂಲಕ ಮಾರಾಟ ಮಾಡಲಾಗುತ್ತದೆ.

- Advertisement -

ಶಾಲೆಗಳನ್ನು ಮುಚ್ಚಲಾಗಿದೆ. ಈ ಚಳಿಗಾಲದಲ್ಲಿ ಮಂಜಿನ ಜತೆಗೆ ಕಲುಷಿತ ಗಾಳಿಯಿಂದಾಗಿ ವಾಯು ಮಾರ್ಗ ಸ್ಪಷ್ಟವಾಗಿರದ ಕಾರಣ ವಿಮಾನಗಳ ಸಂಚಾರ ವಿಳಂಬವಾಗುತ್ತಿದೆ. ಜನರಿಗೆ ಶ್ವಾಸಕೋಶದ ಸಮಸ್ಯೆ ಕಾಡುತ್ತಿವೆ, ಕಣ್ಣುಗಳು ಉರಿಯುತ್ತಿವೆ. ಆದರೂ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳತ್ತ ಗಮನಹರಿಸದೆ ‘ಪ್ರತಿ ವರ್ಷವೂ ಇದೇ ಗೋಳು ಬಿಡಪ್ಪ ಇರಲಿ’ ಎಂಬ ಮನೋಭಾವ ಹೊಂದಿರುವಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಇದನ್ನು ಓದಿದ್ದೀರಾ? ದೆಹಲಿಯಲ್ಲಿ ‘ಅತ್ಯಂತ ಕಳಪೆ’ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ

ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಪ್ರತಿ ಚಳಿಗಾಲದಲ್ಲಿಯೂ ದೆಹಲಿಯ ಸ್ಥಿತಿ ಹೀಗಿಯೇ, ‘ಇದು ತಾತ್ಕಾಲಿಕ ವಿದ್ಯಮಾನ’ ಎಂದು ಹೇಳಿಕೊಂಡಿದ್ದಾರೆ. ವಾಯುಮಾಲಿನ್ಯ ವಿಚಾರವನ್ನೇ ಮುಂದಿಟ್ಟುಕೊಂಡು ದೆಹಲಿಯಲ್ಲಿ ಈ ಹಿಂದಿನ ಎಎಪಿ ಸರ್ಕಾರವನ್ನು ಟೀಕಿಸುತ್ತಿದ್ದ ಬಿಜೆಪಿ ಈಗ ಆಡಳಿತಕ್ಕೆ ಬಂದ ಮೇಲೆ “ದೆಹಲಿಯಲ್ಲಿ ವಾಯುಮಾಲಿನ್ಯ ಸಾಮಾನ್ಯ” ಎಂದು ಹೇಳುತ್ತಿದೆ. ಅಧಿಕಾರಕ್ಕೆ ಬಂದ 9-10 ತಿಂಗಳಲ್ಲೇ ವಾಯುಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಿಲ್ಲ, ಅದು ಅವಾಸ್ತವಿಕ ಎಂದು ಪರಿಸರ ಸಚಿವರು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಗಾಳಿಯ ದಿಕ್ಕು, ಗಾಳಿಯ ವೇಗ ಕಡಿಮೆಯಾಗಿರುವುದರಿಂದ ಮಲಿನಗೊಂಡ ಗಾಳಿ ಒಂದೇ ಕಡೆ ಸ್ಥಗಿತವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಇವೆಲ್ಲವುದರ ನಡುವೆ ಇನ್ನೂ ಕೆಲವುರು ನೆರೆಯ ರಾಜ್ಯಗಳ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ನೆರೆಯ ರಾಜ್ಯಗಳು ಕೃಷಿ ತ್ಯಾಜ್ಯಕ್ಕೆ ಹಾಕುವ ಬೆಂಕಿಯ ಹೊಗೆ, ಇತರೆ ಹೊಗೆಗಳೇ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಕಾರಣ ಎಂದು ದೂರಿದ್ದಾರೆ. ಯಾರು ಯಾರನ್ನು ದೂರಿದರೂ, ಯಾವುದೇ ಕಾರಣವನ್ನು ಕೊಟ್ಟರೂ ಸದ್ಯ ದೆಹಲಿಯಲ್ಲಿ ಜನರು ಕಲುಷಿತ ಗಾಳಿಯನ್ನು ಉಸಿರಾಡಲು ನಾಗರಿಕರೂ ಕಾರಣ. ಅಷ್ಟು ಮಾತ್ರವಲ್ಲದೆ ನೆಪ ಮಾತ್ರಕ್ಕೆ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರುವ, ಕೈಗೊಳ್ಳುತ್ತಿರುವ ಈ ಹಿಂದಿನ ಮತ್ತು ಇಂದಿನ ಸರ್ಕಾರಗಳೂ ಕಾರಣ.

ದೇಶದಲ್ಲಿ ಯಾವುದೇ ಬಿಕ್ಕಟ್ಟು ಬಂದಾಗಲೂ ಆ ಸ್ಥಿತಿಯಿಂದಲೂ ವ್ಯಾಪಾರ, ವ್ಯವಹಾರ ನಡೆಸುವ ಲಾಭ ಪಡೆಯವುದು ಈ ಹಿಂದಿನಿಂದಲೂ ನಡೆದಿದೆ, ಅದು ಮುಂದುವರೆಯುತ್ತದೆ. ಬ್ರಿಟಿಷ್ ವಿದ್ವಾಂಸ ಉರ್ಸುಲಾ ಹುವ್ಸ್ ದಶಕಗಳ ಹಿಂದೆ, ಬಂಡವಾಳಶಾಹಿ ವ್ಯವಸ್ಥೆಯು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಹೇಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ ಎಂಬ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಜೀವನಕ್ಕೆ ಅಗತ್ಯವಾದದ್ದನ್ನು ಬಂಡವಾಳಶಾಹಿಗಳು ಮಾರಾಟ ಮಾಡಬೇಕಾದ ವಸ್ತುವನ್ನಾಗಿ ಪರಿವರ್ತಿಸುತ್ತಾರೆ ಎಂದು ಹೇಳಿದ್ದರು. ಬಂಡವಾಳಶಾಹಿ ವ್ಯವಸ್ಥೆಯು ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲಾ ಹೊಸ ಸರಕುಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದರು. ಆ ಹಾದಿಯಲ್ಲಿ ದೇಶದಲ್ಲಿ ಈಗಾಗಲೇ ನೀರು ಮಾರಾಟದ ಸರಕಾಗಿದೆ. ಈಗ ಗಾಳಿಯೂ ಮಾರಾಟದ ಸರಕಾಗುತ್ತಿದೆ.

ಇದನ್ನು ಓದಿದ್ದೀರಾ? ಅತೀವ ಸಂಕಟದಲ್ಲಿ ಸಿಲುಕಿವೆ ದೇಶದ ರಾಜಧಾನಿ ದೆಹಲಿಯ ಶ್ವಾಸಕೋಶಗಳು!

ನೀರು ಶುದ್ಧೀಕರಿಸಲು ವಾಟರ್ ಪ್ಯೂರಿಫೈಯರ್‌ ಬಳಸುವಂತೆ ಇದೀಗ ವಾಯು ಶುದ್ಧೀಕರಣ ಯಂತ್ರ(Air Purifier) ಮಾರುಕಟ್ಟೆಗೆ ಬರುತ್ತಿದೆ. ಇದು ತಂತ್ರಜ್ಞಾನ ಬೆಳವಣಿಗೆ ಅಂದುಕೊಂಡರೂ ಈ ಗಾಳಿಯನ್ನು ಕಲುಷಿತಗೊಳಿಸಿದ್ದು ನಾವೇ ಅಲ್ಲವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕಾಗುತ್ತದೆ. ವಾಸ್ತವದಲ್ಲಿ ಇದು ತಾಂತ್ರಿಕ ಪ್ರಗತಿಯೇ? ಅಥವಾ ಗಾಳಿ ಖರೀದಿಗಾಗಿ ಗ್ರಾಹಕರ ಸೃಷ್ಟಿಯೇ? ಗಾಳಿ ಎಷ್ಟು ಕಲುಷಿತವಾದರೂ ಪರವಾಗಿಲ್ಲ ನಾವು ಈ ಯಂತ್ರದ ಮೂಲಕ ಶುದ್ಧಗೊಳಿಸುತ್ತೇವೆ ಎಂಬ ಉಡಾಫೆಯ ಮನಸ್ಥಿತಿಗೆ ಸರ್ಕಾರ ಮತ್ತು ನಾಗರಿಕರನ್ನು ದೂಡುವುದೇ? ಏನೇ ಆದರೂ ಇದೀಗ ನೀರಿನಂತೆ ಗಾಳಿಯೂ ಮಾರಾಟದ ವಸ್ತು!

ಇಂತಹ ಸಂದರ್ಭದಲ್ಲಿ ನಮ್ಮ ಕಣ್ಣು ಹಾಯಬೇಕಾಗಿದ್ದು ಬಡ ಕೂಲಿ ಕಾರ್ಮಿಕನೆಡೆ. ದೆಹಲಿಯಲ್ಲಿ ಕಾರ್ಮಿಕರು ಹೊಟ್ಟೆಬಟ್ಟೆಗಾಗಿ ಬೇರೆ ದಾರಿಯಿಲ್ಲದೆ ವಿಷ ಗಾಳಿಯನ್ನು ಉಸಿರಾಡುತ್ತಾ ಕೂಲಿ ಕೆಲಸ ಮಾಡುತ್ತಾ ದಿನದೂಡುತ್ತಾರೆ. ಆದರೆ ಉಲ್ಲವರು ಸ್ವಚ್ಛ ಗಾಳಿಯನ್ನೂ ಕೊಂಡು ಉಸಿರಾಡಿ ಬದುಕುತ್ತಾರೆ. ‘ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ’ ಎಂದು ಬಸವಣ್ಣರು ಹೇಳಿದಂತೆ ಇದೀಗ ದೆಹಲಿಯ ಬಡವರ ಸ್ಥಿತಿ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು? ವಿಮಾನದ ಕಾಕ್‌ಪಿಟ್‌ ಹೇಗಿರುತ್ತದೆ ಬಲ್ಲಿರಾ?

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್ ಭಾಷಣದ ಹಿಂದಿದೆ ಮೋದಿ ಸರ್ಕಾರದ ವೈಫಲ್ಯದ ಮುಖವಾಡ

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು...