‘ಮಾತೆ’ ಎನ್ನುತ್ತಾ ಡಿಜಿಟಲ್ ನಿಂದನೆ: ಸಿಜೆಪಿ ಮಹಿಳಾ ಪ್ರತಿಭಟನಾಕಾರರಿಗೆ ಬಿಜೆಪಿ ‘ಡಾಕ್ಸಿಂಗ್’ ದಾಳಿ

Date:

ಈ ಸೈಬರ್ ದಾಳಿಯ ಮೊದಲ ಹಂತವೇ ‘ಡಾಕ್ಸಿಂಗ್’ (Doxxing). ಅಷ್ಟಕ್ಕೂ ಇದು ಬರೀ ತಾಂತ್ರಿಕ ಅಕ್ರಮವಲ್ಲ. ಮಹಿಳೆಯರ ಜೀವ ಮತ್ತು ಸುರಕ್ಷತೆಗೆ ಒಡ್ಡುವ ನೇರ ಬೆದರಿಕೆ. ಸರಣಿ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳ ಡಿಜಿಟಲ್ ಹಿಂಸೆಗೆ ಈಗ ಒಳಗಾಗುತ್ತಿದ್ದಾರೆ ಸಿಜೆಪಿ ಮಹಿಳಾ ಹೋರಾಟಗಾರರು. ಈಗ ಬಿಜೆಪಿಗರಿಗೆ, ಬಲಪಂಥೀಯರ ಕಣ್ಣಿಗೆ ಮಹಿಳೆ 'ಮಾತೆ'ಯಾಗಿ ಕಾಣಲ್ಲವೇ?

ಸಾರ್ವಜನಿಕ ವೇದಿಕೆಗಳಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ…” ಎಂದು ಉದ್ಘೋಷಿಸುತ್ತಾ, ಮಹಿಳೆಯನ್ನು ‘ಮಾತೆ’ ‘ಶಕ್ತಿ’ ‘ಪೂಜನೀಯ’ ಎಂದು ಆರಾಧನೆಯ ಬೂಟಾಟಿಕೆ ಮಾಡುವ ಬಿಜೆಪಿ, ಸಂಘಪರಿವಾರ ಬಲಪಂಥೀಯರ ಕಣ್ಣು ಈಗ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮಹಿಳಾ ಹೋರಾಟಗಾರರ ಮೇಲೆ ಬಿದ್ದಿದೆ. ತಾವು ಮಾತೆ ಎನ್ನುವ ಈ ಮಹಿಳೆ ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದ್ದೇ ತಡ ಬಲಪಂಥೀಯರ ಗುಂಪೇ ಆಕೆಯ ಮೇಲೆ ಮುಗಿಬೀಳುತ್ತಿದೆ, ‘ಡಾಕ್ಸಿಂಗ್’ ದಾಳಿ ನಡೆಸುತ್ತಿದೆ.

- Advertisement -

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶೋಷಣೆ, ಅಸಮಾನತೆ ಹಾಗೂ ಆಡಳಿತ ಕ್ರಮಗಳ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಹಕ್ಕು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಸಾರ್ವಜನಿಕವಾಗಿ ಧ್ವನಿ ಎತ್ತಿದಾಗ ಅಥವಾ ರಾಜಕೀಯ-ಸಾಮಾಜಿಕ ವಿಷಯಗಳಲ್ಲಿ ಭಿನ್ನಮತ ವ್ಯಕ್ತಪಡಿಸಿದಾಗ, ಅವರನ್ನು ವಿಷಯಾಧಾರಿತವಾಗಿ ಎದುರಿಸುವ ಧೈರ್ಯ ಇಲ್ಲದ ಹೇಡಿಗಳು ಡಿಜಿಟಲ್ ನಿಂದನೆ ಹಾಗೂ ಮಾಧ್ಯಮ ತೇಜೋವಧೆಗೆ ಗುರಿಪಡಿಸುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನೂ ಓದಿ: Gen-Zಗಳಿಂದ ಹಳೆ ತಲೆಮಾರು ಕಲಿಯುವುದೇನು? ಹೇಗೆ ಸಹಾಯ ಮಾಡುವುದು?

ಇಂತಹ ವ್ಯವಸ್ಥಿತ ಪ್ರವೃತ್ತಿ ತೀವ್ರಗೊಳ್ಳುತ್ತಿದೆ. ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳಾ ಹೋರಾಟಗಾರ್ತಿಯರ ಖಾಸಗಿ ವಿವರಗಳನ್ನು ಕದ್ದು, ಪ್ರೈಮ್‌ಟೈಮ್ ಟಿವಿ ಆಂಕರ್‌ಗಳ ವೈಚಾರಿಕ ದಾಳಿಗೆ ಬಲಿಕೊಡಲಾದ ಘಟನೆಗಳು ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನೇ ಅಲುಗಾಡಿಸುತ್ತಿವೆ.

ಸೈಬರ್ ದಾಳಿಯ ಮೊದಲ ಹಂತವೇ ‘ಡಾಕ್ಸಿಂಗ್’

ಈ ಸೈಬರ್ ದಾಳಿಯ ಮೊದಲ ಹಂತವೇ ‘ಡಾಕ್ಸಿಂಗ್’ (Doxxing). ಅಂದರೆ ಸಿಜೆಪಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ಗಳು, ಫೋನ್ ನಂಬರ್, ವಾಸಸ್ಥಳದ ವಿಳಾಸ, ವಾಹನ ಸಂಖ್ಯೆ ಮತ್ತು ಉದ್ಯೋಗದ ವಿವರಗಳನ್ನು ಅವರ ಸಮ್ಮತಿಯಿಲ್ಲದೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವುದು.

ಹಾಗೆಯೇ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ವೈಯಕ್ತಿಕ ವಿವರಗಳನ್ನು ಕಲೆಹಾಕುವುದು ಅಥವಾ ಪೊಲೀಸ್ ದೂರಿನ ಎಫ್‌ಐಆರ್ ಪ್ರತಿಯಲ್ಲಿರುವ ಮನೆ ವಿಳಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದು. ಅಷ್ಟಕ್ಕೂ ಇದು ಬರೀ ತಾಂತ್ರಿಕ ಅಕ್ರಮವಲ್ಲ. ಮಹಿಳೆಯರ ಜೀವ ಮತ್ತು ಸುರಕ್ಷತೆಗೆ ಒಡ್ಡುವ ನೇರ ಬೆದರಿಕೆ. ಇವೆಲ್ಲವುದರ ಬಳಿಕ ಆರಂಭವಾದ ಸರಣಿ ಅತ್ಯಾಚಾರ ಹಾಗೂ ಕೊಲೆ ಬೆದರಿಕೆಗಳ ಡಿಜಿಟಲ್ ಹಿಂಸೆಗೆ ಈಗ ಒಳಗಾಗುತ್ತಿದ್ದಾರೆ ಸಿಜೆಪಿ ಮಹಿಳಾ ಹೋರಾಟಗಾರರು.

ಈ ಡಿಜಿಟಲ್ ಹಿಂಸೆ ಇಷ್ಟಕ್ಕೆ ನಿಂತಿಲ್ಲ. ಕ್ರೌರ್ಯಕ್ಕೆ ಜತೆಗೂಡಿದೆ ಗೋದಿ ಮೀಡಿಯಾಗಳು. ಈ ರೀತಿ ಕಾನೂನುಬಾಹಿರವಾಗಿ ಕಲೆಹಾಕಿದ ಖಾಸಗಿ ದತ್ತಾಂಶಗಳನ್ನು ಟಿವಿ ಸುದ್ದಿವಾಹಿನಿಗಳ ಪ್ರೈಮ್‌ಟೈಮ್ ಚರ್ಚೆಗಳಲ್ಲಿ ಬಳಸಿ ‘ಮಾಧ್ಯಮ ವಿಚಾರಣೆ’ ನಡೆಸಲಾಗುತ್ತಿದೆ! ಮಹಿಳೆಯರ ವೈಯಕ್ತಿಕ ಜೀವನ, ಉಡುಪು, ಕೆಲಸ ಮಾಡುವ ಸ್ಥಳಗಳನ್ನು ಈ ಗೋದಿ ಮೀಡಿಯಾಗಳು ಪ್ರದರ್ಶಿಸುತ್ತಾ ಮಹಿಳೆಯರ ಖಾಸಗಿತನವನ್ನು ಬೀದಿಪಾಲಾಗಿಸುತ್ತಿದೆ. ಅಷ್ಟು ಮಾತ್ರವಲ್ಲದೆ ತಮ್ಮ ಈ ಕೀಳು ಕೃತ್ಯಕ್ಕೆ ಸಮರ್ಥನೆಯಾಗಿ ಈ ಮಹಿಳೆಯರಿಗೆ ‘ರಾಷ್ಟ್ರವಿರೋಧಿಗಳು’ ಅಥವಾ ‘ಸನಾತನ ವಿರೋಧಿಗಳು’ ಎಂಬ ಹಣೆಪಟ್ಟಿ ಕಟ್ಟುತ್ತಿದೆ.

ಇದನ್ನೂ ಓದಿ: ಜೆನ್‌-ಝೀ ಮಾತ್ರವಲ್ಲ, ಮೋದಿಯ ಕಟ್ಟಾ ಬೆಂಬಲಿಗ ‘ಕುಲೀನ ವರ್ಗ’ವೂ BJPಯಿಂದ ದೂರ ಸರಿಯುತ್ತಿದೆ!

ಇನ್ನು ಗೋದಿ ಮೀಡಿಯಾದ ಆಂಕರ್‌ಗಳು ತಮ್ಮನ್ನು ತಾವು ನ್ಯಾಯಾಧೀಶರು ಅಂದುಕೊಂಡಂತಿದೆ. “ಈ ಮಹಿಳೆಯರಿಗೆ ಯಾರೂ ಕೆಲಸ ಕೊಡಬೇಡಿ, ಈ ಮಹಿಳೆಯರನ್ನು ಸಮಾಜದಿಂದ ಬಹಿಷ್ಕರಿಸಿ” ಎಂಬ ಬಹಿರಂಗ ಕರೆಗಳನ್ನು ನೀಡುತ್ತಿದೆ. ಒಟ್ಟಿನಲ್ಲಿ ಮೋದಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಿದ ಮಹಿಳೆಯರ ಜೀವನೋಪಾಯವನ್ನೇ ಕಸಿದುಕೊಳ್ಳುವ ಮಟ್ಟಕ್ಕೆ ಈ ಗೋದಿ ಮೀಡಿಯಾಗಳು ನೈತಿಕ ಪತನ ಕಂಡಿದೆ. ಅದರಲ್ಲೂ ಅಪ್ರಾಪ್ತ ಬಾಲಕಿಯರ ಹೆಸರು ಮತ್ತು ಶಾಲೆಯ ವಿವರಗಳನ್ನು ಪ್ರಸಾರ ಮಾಡಿ, ಅವರನ್ನು ಮನೆ ಖಾಲಿ ಮಾಡುವ ಸ್ಥಿತಿಗೆ ತಳ್ಳಿದ ಉದಾಹರಣೆಗಳು ಈ ಡಿಜಿಟಲ್ ನಿಂದನೆಯ ಭೀಕರತೆಯ ನಿದರ್ಶನ.

ಅಷ್ಟಕ್ಕೂ ಮಹಿಳೆಯರನ್ನು ತಾಯಿ ಎನ್ನುವವರು ಅದೇ ಮಹಿಳೆಯರ ಚಾರಿತ್ರ ಸಂಹರಣಕ್ಕೆ ಇಳಿಯುವುದೇಕೆ? ಮಹಿಳೆಯರನ್ನು ಕೇವಲ ಪೂಜೆಯ ಸಂಕೇತವಾಗಿ ಕಾಣುವ, ಸಮಾಜಕ್ಕೆ ಅದೇ ಮನಸ್ಥಿತಿಯನ್ನು ಬಿತ್ತುವವರು ಆಕೆ ತನ್ನ ಸ್ವಂತ ವಿಚಾರಶಕ್ತಿಯಿಂದ ನಿರ್ಧಾರವನ್ನು ತಳೆದಾಗ, ಹೋರಾಡಿದಾಗ, ಪ್ರಶ್ನಿಸಿದಾಗ ಸಹಿಸಲ್ಲವೇಕೆ? ಅಷ್ಟಕ್ಕೂ ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ಮಹಿಳೆಯರ ‘ಡಾಕ್ಸಿಂಗ್’ ಮಾಡುವವರು ಹೇಡಿಗಳು, ತಾರ್ಕಿಕವಾಗಿ ಮಹಿಳಾ ಹೋರಾಟಗಾರರ ಪ್ರಶ್ನೆಯನ್ನು ಎದುರಿಸಲಾಗದವರು ಎಂಬುದು ನಿಜ. ಜತೆಗೆ ಮಹಿಳೆಯರ ಖಾಸಗಿತನದ ಮೇಲೆ ದಾಳಿ ಮಾಡುವುದು ಮತ್ತು ಮಾಧ್ಯಮಗಳಲ್ಲಿ ಸಾರ್ವಜನಿಕ ವಿಚಾರಣೆಗೆ ಒಳಪಡಿಸುವುದು ಪಿತೃಪ್ರಧಾನ ವ್ಯವಸ್ಥೆ ಮಹಿಳೆಯನ್ನು ಕಂಡು ಪಡುವ ಭಯವೂ ಹೌದು.

ಭಿನ್ನಾಭಿಪ್ರಾಯಗಳನ್ನು ಗೌರವಿಸುವುದು ಮತ್ತು ಪ್ರಜೆಗಳ ಖಾಸಗಿತನವನ್ನು ರಕ್ಷಿಸುವುದು ಪ್ರಜಾಪ್ರಭುತ್ವದ ಅಡಿಪಾಯ. ಸೈಬರ್ ಬೆದರಿಕೆ, ಡಾಕ್ಸಿಂಗ್ ಹಾಗೂ ಮಾಧ್ಯಮಗಳ ಹದ್ದುಮೀರಿದ ಪ್ರವೃತ್ತಿಗಳಿಗೆ ತಕ್ಷಣವೇ ಕಾನೂನಾತ್ಮಕ ಅಣೆಕಟ್ಟು ಹಾಕುವುದು ಸದ್ಯದ ಅನಿವಾರ್ಯ. ಮಹಿಳೆಯ ಗೌರವವು ಕೇವಲ ಸಾಂಪ್ರದಾಯಿಕ ಶ್ಲೋಕಗಳಿಗೆ ಸೀಮಿತವಾಗದೆ, ಆಕೆಯ ವೈಚಾರಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಗೌರವಿಸುವುದರಲ್ಲಿದೆ ಎಂಬುದನ್ನೂ ಈ ಬಲಪಂಥೀಯರು ಗ್ರಹಿಸಲು ಸಾಧ್ಯವಿಲ್ಲ ಬಿಡಿ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...