ʼಪ್ರೆಸ್ ಕ್ಲಬ್ ಆಫ್ ಇಂಡಿಯಾʼದ ಮೊದಲ ಮಹಿಳಾ ಅಧ್ಯಕ್ಷೆ ಸಂಗೀತಾ ಬರೂಹಾ ಪಿಶಾರೋಟಿ

Date:

ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ)ದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ಸಂಗೀತಾ ಬರೂಹಾ ಪಿಶಾರೋಟಿ ಅವರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಭಾರೀ ಮತ ಗಳಿಸಿ ಗೆದ್ದ ಸಂಗೀತಾ ಅವರು ಇತಿಹಾಸ ನಿರ್ಮಿಸಿದ್ದಾರೆ. ಚುನಾವಣೆಯಲ್ಲಿ ಪಿಶಾರೋಟಿ 1,019 ಮತಗಳನ್ನು ಗಳಿಸಿದರೆ, ಅವರ ಎದುರಾಳಿಗಳಾದ ಅತುಲ್ ಮಿಶ್ರಾ 129 ಮತ್ತು ಅರುಣ್ ಶರ್ಮಾ 89 ಮತಗಳನ್ನು ಗಳಿಸಿದ್ದಾರೆ.

- Advertisement -

ಪ್ರೆಸ್ ಕ್ಲಬ್ ಆಫ್ ಇಂಡಿಯಾ ದೇಶದ ಪತ್ರಕರ್ತರ ಅತ್ಯಂತ ಹಳೆಯ ಮತ್ತು ಪ್ರಭಾವಶಾಲಿ ಸಂಘಟನೆಗಳಲ್ಲಿ ಒಂದಾಗಿದ್ದು, ಇದರ ಕಚೇರಿ ನವದೆಹಲಿಯಲ್ಲಿದೆ. 1957ರ ಡಿಸೆಂಬರ್ 20ರಂದು ಪಿಸಿಐ ಸ್ಥಾಪಿಸಲಾಗಿದ್ದು, ಹಿರಿಯ ಪತ್ರಕರ್ತ ಮತ್ತು ‘ಹಿಂದೂಸ್ತಾನ್ ಟೈಮ್ಸ್’ನ ಅಂದಿನ ಮುಖ್ಯ ಸಂಪಾದಕರಾಗಿದ್ದ ದುರ್ಗಾ ದಾಸ್ ಅವರು ಸ್ಥಾಪಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನು ಓದಿದ್ದೀರಾ? 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ ಬೆಂಗಳೂರು ಪ್ರೆಸ್‌ಕ್ಲಬ್

ದುರ್ಗಾ ದಾಸ್ ಅವರು 1930ರ ದಶಕದಲ್ಲಿ ಲಂಡನ್‌ ಪ್ರೆಸ್‌ ಕ್ಲಬ್‌ಗೆ ಭೇಟಿ ನೀಡಿದ್ದು, ಅದೇ ಮಾದರಿಯ ಸಂಘಟನೆ ಭಾರತದಲ್ಲಿಯೂ ಇರಬೇಕು ಎಂದೆನಿಸಿ ದೇಶದಲ್ಲಿ ಸ್ಥಾಪಿಸಿದ್ದರು. ಹಿರಿಯ ಪತ್ರಕರ್ತ ಡಿ. ಆರ್. ಮಂಕೇಕರ್ ಪಿಸಿಐನ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1957ರಲ್ಲಿ ಪಿಸಿಐ ಸ್ಥಾಪಿಸಲಾಗಿದ್ದರೂ, ಈವರೆಗೂ ಒಂದೇ ಒಂದು ಬಾರಿಯೂ ಯಾವುದೇ ಮಹಿಳೆಯರು ಅಧ್ಯಕ್ಷಗಿರಿಯನ್ನು ಪಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಂಗೀತಾ ಅವರು ಪ್ರತಿಸ್ಪರ್ಧಿಗಳಿಗಿಂತ ಅತ್ಯಧಿಕ ಮತವನ್ನು ಪಡೆದು ಅಧ್ಯಕ್ಷೆಯಾಗಿದ್ದಾರೆ.

ಜತೆಗೆ ಸಂಗೀತಾ ಅವರ ತಂಡವು ಎಲ್ಲ ಕಚೇರಿ ಮತ್ತು ವ್ಯವಸ್ಥಾಪಕ ಸಮಿತಿ ಹುದ್ದೆಗಳನ್ನು ಗೆದ್ದುಕೊಂಡಿದೆ. 21 ಸ್ಥಾನಗಳನ್ನೂ ಕ್ಲೀನ್‌ ಸ್ವೀಪ್ ಮಾಡಿದೆ. ಉಪಾಧ್ಯಕ್ಷರಾಗಿ ಜತಿನ್ ಗಾಂಧಿ 1,029 ಮತಗಳನ್ನು ಪಡೆದರೆ, ಪ್ರಧಾನ ಕಾರ್ಯದರ್ಶಿಯಾಗಿ ಅಫ್ಜಲ್ ಇಮಾಮ್ 948 ಮತಗಳೊಂದಿಗೆ ಆಯ್ಕೆಯಾಗಿದ್ದಾರೆ. ಅದಿತಿ ರಜಪೂತ್ ಖಜಾಂಚಿಯಾಗಿ ಮತ್ತು ಪಿ.ಆರ್.ಸುನೀಲ್ ಕುಮಾರ್ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫಲಿತಾಂಶದ ಬಳಿಕ ಮಾತನಾಡಿದ ಪಿಶಾರೋಟಿ, “ಮುಕ್ತ, ನ್ಯಾಯಸಮ್ಮತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯ ಮೇಲೆ ಸದ್ಯಸರಿಗೆ ವಿಶ್ವಾಸವಿರುವುದಕ್ಕೆ ಈ ಗೆಲವು ಸಾಕ್ಷಿ” ಎಂದು ಹೇಳಿದ್ದಾರೆ. ಹಾಗಾದರೆ ಯಾರು ಈ ಇತಿಹಾಸ ಸೃಷ್ಟಿಸಿದ ಸಂಗೀತಾ ಬರೂಹಾ ಎಂದು ತಿಳಿಯೋಣ.

ಈಶಾನ್ಯ ಭಾರತದ ಸಂಗೀತಾ ಬರೂಹಾ ಪಿಶಾರೋಟಿ

ಅಸ್ಸಾಂನ ಗೋಲಾಘಾಟ್‌ನಲ್ಲಿ ಜನಿಸಿದ ಸಂಗೀತಾ ಅವರು 1995ರಲ್ಲಿ ಗುವಾಹಟಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಸದ್ಯ ನವದೆಹಲಿಯಲ್ಲಿಯೇ ನೆಲೆಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಸಂಗೀತಾ, ಈಶಾನ್ಯ ಭಾರತದಿಂದ ದೆಹಲಿಗೆ ಬಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಪ್ರಮುಖ ಪತ್ರಕರ್ತರಾಗಿದ್ದಾರೆ.

1996ರಲ್ಲಿ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (UNI) ಸುದ್ದಿಸಂಸ್ಥೆಯ ನವದೆಹಲಿ ಪ್ರಧಾನ ಕಚೇರಿಯಲ್ಲಿ ಉದ್ಯೋಗಕ್ಕೆ ಸೇರುವ ಮೂಲಕ ತಮ್ಮ ವೃತ್ತಿ ಜೀವನವನ್ನು ಸಂಗೀತಾ ಆರಂಭಿಸಿದರು. ಈ ಮೂಲಕ ಆ ಕಚೇರಿಯಲ್ಲಿ ನೇಮಕಗೊಂಡ ಈಶಾನ್ಯ ಭಾರತದ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೂ ಪಾತ್ರರಾದವರು ಸಂಗೀತಾ. ‘ದಿ ಹಿಂದೂ’ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ‘ದಿ ವೈರ್’ ಡಿಜಿಟಲ್ ಸುದ್ದಿ ಮಾಧ್ಯಮದ ರಾಷ್ಟ್ರೀಯ ವ್ಯವಹಾರಗಳ ಸಂಪಾದಕಿಯಾಗಿ (National Affairs Editor) ಕಾರ್ಯನಿರ್ವಹಿಸುತ್ತಿದ್ದಾರೆ.

ಈಶಾನ್ಯ ಭಾರತದ ರಾಜಕೀಯ ಮತ್ತು ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ ನಡೆಸಿರುವ ಸಂಗೀತಾ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಮೊದಲನೆಯದಾಗಿ Assam: The Accord, The Discord ಎಂಬ ಪುಸ್ತಕವನ್ನು 2019ರಲ್ಲಿ ಬರೆದಿದ್ದಾರೆ. ಈ ಪುಸ್ತಕವು ಅಸ್ಸಾಂ ಒಪ್ಪಂದ ಮತ್ತು ರಾಜ್ಯದ ರಾಜಕೀಯ ಸ್ಥಿತಿಗತಿಗಳ ಕುರಿತಾದ ಮಾಹಿತಿಗಳನ್ನು ಒಳಗೊಂಡಿದೆ. The Assamese: A Portrait of a Community ಎಂಬ ಪುಸ್ತಕವನ್ನೂ ಸಂಗೀತಾ ಬರೆದಿದ್ದು, ಇದು ಅಸ್ಸಾಮಿ ಸಮುದಾಯದ ಸಂಸ್ಕೃತಿ ಮತ್ತು ಇತಿಹಾಸವನ್ನು ಬಿಂಬಿಸುವ ಕೃತಿಯಾಗಿದೆ.

ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿರುವ ಏಷ್ಯಾದ ಅತಿದೊಡ್ಡ ನದಿ ದ್ವೀಪವಾದ ಮಜುಲಿ ಪ್ರತಿವರ್ಷ ಎದುರಿಸುತ್ತಿರುವ ಮಣ್ಣಿನ ಸವೆತ ಮತ್ತು ಅದರಿಂದ ಸ್ಥಳೀಯರ ಜೀವನೋಪಾಯಕ್ಕೆ ಉಂಟಾಗುತ್ತಿರುವ ನಷ್ಟದ ಬಗ್ಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಸರಣಿ ವರದಿಗಳನ್ನು ಸಂಗೀತಾ ಬರೆದಿದ್ದರು. 2011ರಲ್ಲಿ ಬರೆದ ಈ ಸರಣಿ ವರದಿಗಳಿಗೆ ‘ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್’ (CSDS) ಫೆಲೋಶಿಪ್ ಪಡೆದಿದ್ದಾರೆ.

ಹಾಗೆಯೇ 2017ರಲ್ಲಿ ದೆಹಲಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ವಸತಿ ತಾರತಮ್ಯದ ಕುರಿತು ಸಂಗೀತಾ ಬರೆದ ವಿಶೇಷ ವರದಿಯು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ವರದಿಯು ನಗರದಲ್ಲಿ ಮನೆ ಬಾಡಿಗೆಗೆ ಪಡೆಯುವಾಗ ಧರ್ಮದ ಆಧಾರದಲ್ಲಿ ನಡೆಯುವ ತಾರತಮ್ಯವನ್ನು ಬಹಿರಂಗಪಡಿಸಿತ್ತು. ಈ ವರದಿಗೆ ಪ್ರತಿಷ್ಠಿತ ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿ ಲಭಿಸಿದೆ.

ಇದನ್ನು ಓದಿದ್ದೀರಾ? ನೆನಪು | ಸ್ಸಾರಿ ಪ್ರೊಫೆಸರ್… ಪೂರ್ವಗ್ರಹಪೀಡಿತನಾಗಿದ್ದೆ!

ಇದನ್ನು ಹೊರತುಪಡಿಸಿದ್ದಂತೆ ಇತ್ತೀಚೆಗೆ ಮಣಿಪುರ ಸಂಘರ್ಷದ ಬಗ್ಗೆ, ಚಕ್ಮಾ ಮತ್ತು ಹಾಜಾಂಗ್ ಸಮುದಾಯಗಳ ಪೌರತ್ವ ವಿವಾದದ ಕುರಿತು, ಅಸ್ಸಾಂನಲ್ಲಿ ಎನ್.ಆರ್.ಸಿ ಜಾರಿ ಮತ್ತು ಅಲ್ಲಿನ ನಾಗರಿಕತ್ವದ ಸಮಸ್ಯೆಗಳ ಕುರಿತು, ಲಡಾಖ್ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ಬಂಧನ ಮೊದಲಾದವುಗಳ ಬಗ್ಗೆ ವಿಶ್ಲೇಷಣಾತ್ಮಕ ವರದಿಗಳನ್ನು ನಿರಂತರವಾಗಿ ಬರೆದಿದ್ದಾರೆ. ಅಸ್ಸಾಂನ ರಾಜ್ಯಗೀತೆ ‘ಓ ಮುರ್ ಅಪುನರ್ ದೇಶ್’ ಬಗ್ಗೆ ಐತಿಹಾಸಿಕ ಸಂಶೋಧನಾ ವರದಿಯನ್ನೂ ಸಂಗೀತಾ ಬರೆದಿದ್ದಾರೆ.

ತಮ್ಮ ವೃತ್ತಿ ಜೀವನದ ಆರಂಭದಲ್ಲಿಯೇ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆಯ ಮೊದಲ ಈಶಾನ್ಯ ಭಾರತದ ಮಹಿಳಾ ಪತ್ರಕರ್ತೆ ಎಂಬ ಹೆಗ್ಗಳಿಕೆ ಪಡೆದ ಸಂಗೀತಾ, ಈಗ ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ಬರೆದಿದ್ದಾರೆ. ಸಂಗೀತಾ ನೇತೃತ್ವದಲ್ಲಿ ಪತ್ರಕರ್ತರ ಹಿತರಕ್ಷಣೆಗಾಗಿ ಪಿಸಿಐ ಕಾರ್ಯನಿರ್ವಹಿಸುತ್ತದೆ ಮತ್ತು ಪತ್ರಕರ್ತರ ಮೇಲಿನ ದಾಳಿ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಧ್ವನಿ ಎತ್ತುತ್ತದೆ ಎಂಬ ನಿರೀಕ್ಷೆ ನಮ್ಮದು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ ಅಸ್ತ್ರ!

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...

ಹಾವೇರಿ | ಬರದ ಬೇಗೆಯಲ್ಲೂ ಕೈ ಹಿಡಿದ ಮೆಕ್ಕೆಜೋಳ; ರೈತ ಚಂ.ಸು ಪಾಟೀಲ್ ಸಾವಯವ ಸಾಧನೆ

"ಯಾವುದೇ ರಸಗೊಬ್ಬರಗಳನ್ನು ಬಳಸದೇ, ಕೀಟನಾಶಕಗಳನ್ನು ಸಿಂಪಡಿಸದೆಯೇ ಸಹಜ ಸಮೃದ್ಧ ಬೆಳೆ ಬೆಳೆಯುವುದು...

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...