ರಾಜ್ಯ ಉಪಸಮರ | ಕುಟುಂಬ ತಂತ್ರ ಸೋಲಿಸಿ ಗೆಲ್ಲುವುದೇ ಜನತಂತ್ರ?

Date:

ಕರ್ನಾಟಕದಲ್ಲಿ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಗಳ ವಿದ್ಯಮಾನ ಕಾಂಗ್ರೆಸ್ ಪಕ್ಷದ ಸೈದ್ದಾಂತಿಕತೆಯನ್ನು ಪರೀಕ್ಷೆಗೆ ಒಡ್ಡಿದೆ. ಈ ಎರಡು ಕ್ಷೇತ್ರಗಳ ಅಭ್ಯಾರ್ಥಿಗಳ ಆಯ್ಕೆ, ಗೆಲುವು ಸೋಲಿನಾಚೆಗೆ ಕುಟುಂಬ ತಂತ್ರ ಹಾಗೂ ಜನತಂತ್ರನ್ನು ಅಣಕ್ಕಿಸುತ್ತಿದೆ.

- Advertisement -

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಹಾಗೂ ಬಾಗಲಕೋಟೆಯ ಎಚ್.ವೈ. ಮೇಟಿಯವರ ನಿಧನದಿಂದ ತೆರವಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಉಪಚುನಾವಣೆ ನಡೆಯಲಿದೆ. ಈಗಾಗಲೇ ಅಭ್ಯರ್ಥಿಗಳು ಬಿರುಸಿನ ಪ್ರಚಾರವನ್ನೂ ಆರಂಭಿಸಿದ್ದಾರೆ. ಇವುಗಳ ನಡುವೆ ಕೆಲ ಸೈದ್ಧಾಂತಿಕ ಚರ್ಚೆಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಶಾಮನೂರು ಮತ್ತು ಮೇಟಿ ಇಬ್ಬರೂ ಆರು ಬಾರಿ ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ನಾಲ್ಕೈದು ದಶಕಗಳ ಕಾಲ ರಾಜಕೀಯ ಅಧಿಕಾರ ಅನುಭವಿಸಿದವರು. ಈ ಬಾರಿಯೂ ಅವರ ಕುಟುಂಬಗಳೇ ಟಿಕೆಟ್‌ ಗಿಟ್ಟಿಸಿವೆ. ಇಷ್ಟು ವರ್ಷ ಬಾವುಟ ಕಟ್ಟಿ, ಹೆಗಲ ಮೇಲೆ ಬ್ಯಾನರ್ ಹೊತ್ತು ಇವರಿಗಾಗಿ ಹಾಗೂ ಪಕ್ಷಕ್ಕಾಗಿ ಶ್ರಮಿಸಿದವರಿಗೆ, ಹೊಸಬರಿಗೆ, ಉದಯೋನ್ಮುಖ ನಾಯಕರಿಗೆ ಅವಕಾಶ ನೀಡಬೇಕಿತ್ತು. ಅದರೆ ಕಾಂಗ್ರೆಸ್ ಪಕ್ಷ ಕೊನೆಗೂ ಕುಟುಂಬ ತಂತ್ರಕ್ಕೆ ಮಣಿದು ಪ್ರಜಾತಂತ್ರ ಅಣಕಿಸುವಂತೆ ಮಾಡಿದೆ.

ಕುಟುಂಬ ರಾಜಕೀಯದ ವಿರುದ್ಧ ನಿರಂತರವಾಗಿ ಮಾತನಾಡುವ ಮೂರು ಪಕ್ಷಗಳ ನಾಯಕರು ಪರಸ್ಪರ ಕುಟುಂಬ ರಾಜಕಾರಣದಲ್ಲೇ ಮುಳುಗಿದ್ದಾರೆ. ರಾಜಕೀಯ ಅಧಿಕಾರವನ್ನು ಪಿತ್ರಾರ್ಜಿತ ಆಸ್ತಿಯಂತೆ ಕಾಣುತ್ತಿದ್ದಾರೆ. ಅದರಂತೆ ರಾಜಕೀಯ ಪಕ್ಷಗಳೂ ಒಗ್ಗಿಕೊಳ್ಳುತ್ತಿವೆ. ಆ ಕ್ಷೇತ್ರದಲ್ಲಿ ಸರ್ವಾಧಿಕಾರ, ಫ್ಯೂಡಲ್ ಮನಸ್ಥಿತಿ ಸೃಷ್ಠಿಯಾಗಿ ಎರಡನೆ ಹಂತದ ನಾಯಕರು ಬೆಳೆಯದಂತಾಗಿದೆ. ಅಂಧಾನುಕರಣೆಗೆ ಒಡ್ಡಿ ಜನರನ್ನು ಬುದ್ಧಿ ಊನರನ್ನಾಗಿಸುತ್ತಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಾದಿಕ್ ಪೈಲ್ವಾನ್ ಅಂತಹ ಹಿರಿಯ ನಾಯಕರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ.

ಕನ್ನಡದ ಖ್ಯಾತ ಸಂಸ್ಕೃತಿ ಚಿಂತಕ ಡಿ ಆರ್. ನಾಗರಾಜ್ಜ ‘ ನತಂತ್ರ ಉಳಿಯಬೇಕಾದರೆ ನಾಯಕರುಗಳನ್ನು ನಿರಂತರವಾಗಿ ನಿರಾಕರಿಸುತ್ತಾ ಇರಬೇಕು’ ಎಂದು ಪ್ರಸ್ತಾಪಿಸಿದ್ದಾರೆ. ಈಗಿನ ರಾಜಕೀಯ ವಿದ್ಯಮಾನ ಗಮನಿಸಿದರೆ ಇದು ಸರಿ ಎನಿಸುತ್ತದೆ. ಜನರ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರದ ಗದ್ದುಗೆ ಭದ್ರಪಡಿಸಿಕೊಂಡು, ಅದನ್ನು ತಮ್ಮ ಕುಟುಂಬದ ಆಸ್ತಿಯಂತೆ ಪರಿಭಾವಿಸುವ ಫ್ಯೂಡಲ್ ಮನಸ್ಥಿಗಳ ಸೋಲು ಆಗಬೇಕಾದರೆ ನಾಯಕರ ನಿರಂತರ ನಿರಾಕರಣೆ ಬೇಕು. ಈ ಎರಡು ವಿಧಾನಸಭಾ ಕ್ಷೇತ್ರದಲ್ಲೂ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಬಹುಸಂಖ್ಯೆಯಲ್ಲಿ ಮುಸ್ಲಿಂಮರು ಇದ್ದರೂ ಅವರನ್ನು ಪರಿಗಣಿಸಿಲ್ಲ. ಇಂತಹ ಸಂದರ್ಭದಲ್ಲಿ ಗೆಲುವು ಸೋಲಿನಾಚೆಗೆ ಯೋಚಿಸುವ, ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಮತ್ತು ಅದರ ಮೌಲ್ಯ ಎತ್ತಿಹಿಡಿಯುವ ಬಗ್ಗೆ ಯೋಚಿಸುವ ಪ್ರತಿಯೊಬ್ಬರು ಈ ಬಗ್ಗೆ ಯೋಚಿಸಬೇಕಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇ. 35 ರಷ್ಟು ಮುಸ್ಲಿಂಮರೇ ಇದ್ದಾರೆ. ನ್ಯಾಯ ಬದ್ಧವಾಗಿ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತು. ದೀರ್ಘ ಕಾಲ ಶಾಮನೂರು ಶಿವಶಂಕರಪ್ಪ ಅವರ ಬೆನ್ನಿಗಿದ್ದ ಕಾಂಗ್ರೆಸ್ ಮುಖಂಡ ಸಾದಿಕ್ ಫೖಲಾವನ್ ಅವರಿಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರಬೇಕಿತ್ತು. ಈ ಮೂಲಕ ಜನರ ಋಣ ಭಾರ ತೀರಿಸಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ನಿರಂತರ ಬೆಂಬಲ ನೀಡುತ್ತಾ ಬಂದಿರುವ ಮುಸ್ಲಿಂ ಮತದಾರರಿಗೆ ಕಾಂಗ್ರೆಸ್ ಪಕ್ಷ ಈ ಚುನಾವಣೆಯಿಂದ ಏನು ಸಂದೇಶ ನೀಡಿದೆ ಎಂದು ಅವಲೋಕಿಸಬೇಕಿದೆ. ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೇ ಹದಹಾಕಿ ತಿವಿದರದು ಹೂವೆ? ಎಂಬ ಸ್ಥಿತಿ ಮುಸ್ಲಿಂ ಮತದಾರರದ್ದಾಗಿದೆ.

ಇದನ್ನೂ ಓದಿ:ದಾವಣಗೆರೆ | ‘ಅಹಿಂದ’ ನಾಯಕ ಸಿದ್ದರಾಮಯ್ಯ ಮಾರಾಟವಾಗಿದ್ದಾರೆ: ಜಿ ಬಿ ವಿನಯ್‌ಕುಮಾರ್‌

ಭಾರತದಂತ ಪ್ರಜಾಪ್ರಭುತ್ವ ದೇಶದಲ್ಲಿ ಅಧಿಕಾರ ಜನರ ಕೈಯಲ್ಲಿರಬೇಕು ಎಂಬುದು ಮೂಲಭೂತ ಸಿದ್ದಾಂತ. ಆದರೆ ರಾಜಕೀಯ ಪಕ್ಷಗಳು ಜನರ ಕೖಗೆ ಅಧಿಕಾರ ನೀಡಲು ಶ್ರಮಿಸುತ್ತಿವಿಯೇ ಎನ್ನುವುದು ಈಗಿನ ಪ್ರಶ್ನೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳು ಇಬ್ಬರು ಅಭ್ಯರ್ಥಿಗಳ ನಡುವಿನ ಹಣಾಹಣಿಯಲ್ಲ. ಬದಲಾಗಿ ಅದು ‘ಕುಟುಂಬ ರಾಜಕಾರಣ’ ಮತ್ತು ‘ನಿಷ್ಠಾವಂತ ಕಾರ್ಯಕರ್ತರ ಅವಕಾಶ’ಗಳ ನಡುವಿನ ಸಂಘರ್ಷವಾಗಿದೆ. ದಶಕಗಳ ಕಾಲ ಅಧಿಕಾರ ಅನುಭವಿಸಿದವರ ಕುಟುಂಬಕ್ಕೇ ಮತ್ತೆ ಮಣೆ ಹಾಕಿರುವುದು, ಪಕ್ಷಕ್ಕಾಗಿ ಬೆವರು ಸುರಿಸಿದ ಉದಯೋನ್ಮುಖ ನಾಯಕರಿಗೆ ಮತ್ತು ಅರ್ಹ ಸಮುದಾಯಗಳಿಗೆ ಮಾಡಿದ ಅಪಚಾರದಂತೆ ಭಾಸವಾಗುತ್ತಿದೆ. ವಿಶೇಷವಾಗಿ ದಾವಣಗೆರೆ ದಕ್ಷಿಣದಂತಹ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮತದಾರರ ದಟ್ಟಣೆಯಿದ್ದರೂ, ಅವರಿಗೆ ಪ್ರಾತಿನಿಧ್ಯ ನೀಡದೆ ಕೇವಲ ಒಂದು ಕುಟುಂಬದ ಹಿಡಿತಕ್ಕೆ ಪಕ್ಷ ಮಣಿದಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಡಿ.ಆರ್. ನಾಗರಾಜ್ ಅವರು ಹೇಳಿದಂತೆ, “ನಾಯಕರನ್ನು ನಿರಂತರವಾಗಿ ನಿರಾಕರಿಸುವ” ಮೂಲಕವೇ ಜನಸಾಮಾನ್ಯರು ತಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಿದೆ. ರಾಜಕೀಯವು ಕೇವಲ ‘ಪಿತ್ರಾರ್ಜಿತ ಆಸ್ತಿ’ಯಾಗಬಾರದು; ಅದು ಸಮಾನ ಅವಕಾಶಗಳ ವೇದಿಕೆಯಾಗಬೇಕು. ಮತದಾರರು ಕೇವಲ ಭಾವನಾತ್ಮಕ ಅಲೆ ಅಥವಾ ಆಮಿಷಕ್ಕೆ ಒಳಗಾಗದೆ, ತಮಗೆ ಸಿಗಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯದ ಬಗ್ಗೆ ಪ್ರಶ್ನಿಸಬೇಕಿದೆ.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌: ಯಾಕೀ ವಿವಾದ?

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ....

ಪೈಲಟ್ ಗಾಯಗೊಂಡ ನಂತರ ʼಫ್ಲೈದುಬೈʼ ವಿಮಾನ ನಡೆಸಿದವರು ಯಾರು? ವಿಮಾನದ ಕಾಕ್‌ಪಿಟ್‌ ಹೇಗಿರುತ್ತದೆ ಬಲ್ಲಿರಾ?

ಬುಧವಾರ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟದಲ್ಲಿದ್ದ FZ1073 ವಿಮಾನದಲ್ಲಿ ನಡೆದ...

ಜಾಗತಿಕ ಬಿಕ್ಕಟ್ಟಿನ ನೆಪ, ಮರೆಯಾದ ದೇಶದ ಹಿತ: ಜೈಶಂಕರ್ ಭಾಷಣದ ಹಿಂದಿದೆ ಮೋದಿ ಸರ್ಕಾರದ ವೈಫಲ್ಯದ ಮುಖವಾಡ

ಬೆಲೆ ಏರಿಕೆಯ ಬೇಗೆಯಲ್ಲಿ ಜನಸಾಮಾನ್ಯರು ನರಳುತ್ತಿದ್ದರೆ, ಗದ್ದೆಯಲ್ಲಿ ರೈತ ರಸಗೊಬ್ಬರಕ್ಕಾಗಿ ಕಣ್ಣೀರು...