ಮಾಟಮಂತ್ರ ‘ಶಂಕೆ’ ಎಂಬ ನೆಪ: ವದಂತಿಗೆ ಮಹಿಳೆಯರೇ ಬಲಿಯಾಗುವುದೇಕೆ?

Date:

ಮಾಟಮಂತ್ರ ಶಂಕೆಯಿಂದ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ನ ಕಲೈಯಾ ಗ್ರಾಮದಲ್ಲಿ ದುರುಳರು ತಾಯಿ ಮತ್ತು ಎರಡು ತಿಂಗಳ ಹಸುಗೂಸನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. 2025ರಲ್ಲಿಯೂ ಇಂತಹ ಘಟನೆಗಳು ದೇಶಾದ್ಯಂತ ಸುದ್ದಿಯಾಗಿತ್ತು. ಈ ಅಮಾನುಷ ಕೃತ್ಯ ಮುಂದುವರೆದಿರುವುದೇಕೆ? ವದಂತಿಗೆ ಮಹಿಳೆಯರು ಅದರಲ್ಲೂ ದಲಿತ ಮಹಿಳೆಯರೇ ಬಲಿಯಾಗುವುದೇಕೆ?

ಮಾಟ-ಮಂತ್ರ ಅಥವಾ ವಾಮಾಚಾರ (Witchcraft) ನಡೆಸಿದ್ದಾರೆ ಎಂದು ಸಂಶಯಿಸಿ ಅಮಾಯಕರನ್ನು ಜೀವಂತವಾಗಿ ಸುಟ್ಟು ಹಾಕುವ, ಕೊಲೆ ಮಾಡುವ ಭೀಕರ ಘಟನೆಗಳು ಇತ್ತೀಚೆಗೆ ದೇಶದಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಮೂಢನಂಬಿಕೆಯಿಂದಾಗಿ ಮಕ್ಕಳನ್ನು ಸೇರಿದಂತೆ ನರಬಲಿ ನೀಡುವ ದುಷ್ಕೃತ್ಯಗಳು ನಡೆಯುತ್ತಿರುವ ನಡುವೆಯೇ ಮಾಟ ಮಾಡಿರಬಹುದು ಎಂಬ ಆರೋಪಕ್ಕೆ ಅಮಾಯಕರು ಬಲಿಯಾಗುವುದೂ ಅಧಿಕವಾಗುತ್ತಿದೆ. ಇಂತಹ ಅಮಾನುಷ ಕೃತ್ಯಕ್ಕೆ ಇತ್ತೀಚೆಗೆ 32 ವರ್ಷದ ಮಹಿಳೆ ಮತ್ತು ಆಕೆಯ ಎರಡು ತಿಂಗಳ ಹಸುಗೂಸು ಆಹುತಿಯಾಗಿದ್ದಾರೆ.

- Advertisement -

ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ನ ಕಲೈಯಾ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಜ್ಯೋತಿ ಸಿಂಕು ಮತ್ತು ಆಕೆಯ ಎರಡು ತಿಂಗಳ ಮಗುವನ್ನು ಆಕೆಯ ಕುಟುಂಬ ಸದಸ್ಯರೇ ಸುಟ್ಟು ಕೊಂದಿದ್ದಾರೆ. ಆಕೆ ಮಾಟಮಂತ್ರ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾರೆ. ಮಹಿಳೆಯ ಪತಿ 40 ವರ್ಷದ ಕೊಲ್ಹಾನ್ ಸಿಂಕು ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬುಧವಾರ ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಇದನ್ನು ಓದಿದ್ದೀರಾ? ಮಾಟಮಂತ್ರ ಮಾಡುತ್ತಿದ್ದ ಶಂಕೆ: ಒಂದೇ ಕುಟುಂಬದ ಐವರ ಸಜೀವ ದಹನ

ಕೊಲ್ಹಾನ್ ಸಿಂಕು ಹೇಳುವಂತೆ, ಮನೆಯ ಅಂಗಳದಲ್ಲಿ ಸುಮಾರು 12ಕ್ಕೂ ಅಧಿಕ ಮಂದಿ ಸೇರಿದ್ದರು. ಮೊದಲ ಪತ್ನಿ ಕೂಡಾ ಇದ್ದರು. ಗುಂಪು ಸಿಂಕುವಿನ ಎರಡನೇ ಪತ್ನಿ ಜ್ಯೋತಿ ಸಿಂಕು ಮಾಟಗಾತಿ ಎಂದು ಆರೋಪಿಸಲು ಪ್ರಾರಂಭಿಸಿದೆ. “ಮರುದಿನ ಬೆಳಿಗ್ಗೆ ಪಂಚಾಯತ್‌ನಲ್ಲಿ ಈ ವಿಷಯ ಮಾತಾನಾಡೋಣ ಎಂದೆ. ಆದರೆ ಯಾರೂ ನನ್ನ ಮಾತು ಕೇಳಲಿಲ್ಲ. ಕೆಲವರು ಪೆಟ್ರೋಲ್ ತಂದು ಸುರಿದು, ಬೆಂಕಿ ಹಚ್ಚಿದರು. ಜ್ಯೋತಿ ಮತ್ತು ಆಕೆಯ ನವಜಾತ ಶಿಶು ಬೆಂಕಿಯಲ್ಲಿ ಸಜೀವ ದಹನವಾಗಿ ಸ್ಥಳದಲ್ಲೇ ಸಾವನ್ನಪ್ಪಿದರೆ, ನಾನು ನನ್ನ ಬಟ್ಟೆ ಕಳಚಿ ಪ್ರಾಣಪಾಯದಿಂದ ಪಾರಾದೆ” ಎಂದು ಹೇಳಿದ್ದಾರೆ ಕೊಲ್ಹಾನ್ ಸಿಂಕು. ಸದ್ಯ ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಇತರರನ್ನು ಗುರುತಿಸುವ ಪ್ರಕ್ರಿಯೆ ಮುಂದುವರೆದಿದೆ.

2025ರಲ್ಲಿಯೂ ಇಂತಹ ಘಟನೆಗಳು ದೇಶಾದ್ಯಂತ ಸುದ್ದಿಯಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಹೌರಾಘಾಟ್ ಪ್ರದೇಶದಲ್ಲಿ ಗುಂಪೊಂದು ಮಾಟ ಮಂತ್ರದ ಶಂಕೆಯ ಮೇಲೆ ದಂಪತಿ ಗರ್ದಿ ಬಿರೋವಾ ಮತ್ತು ಮೀರಾ ಬಿರೋವಾ ಎಂಬವರನ್ನು ಸುಟ್ಟು ಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20 ಮಂದಿಯನ್ನು ಬಂಧಿಸಲಾಗಿದೆ. ಅದೇ ವರ್ಷ ಜುಲೈನಲ್ಲಿ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ವಾಮಾಚಾರದ ಶಂಕೆಯಿಂದ ಒಂದೇ ಕುಟುಂಬದ ಐವರು ಸದಸ್ಯರನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಹಳ್ಳಿಯಲ್ಲಿ ಮಗುವೊಂದು ಸಾವನ್ನಪ್ಪಿದ್ದಕ್ಕೆ ಇವರೇ ಕಾರಣ ಎಂಬ ಸುಳ್ಳು ಮಾಹಿತಿಯನ್ನು ನಂಬಿ ಇಡೀ ಕುಟುಂಬದ ಕೊಲೆ ನಡೆದಿತ್ತು. ಹೀಗೆಯೇ ಮಾಟಗಾತಿ ಎಂದು ಸಂಶಿಸಿ ಕಲ್ಲಿನಿಂದ ಥಳಿಸಿ, ಕೋಲಿನಿಂದ ಹೊಡೆದು ಹತ್ಯೆಗೈದಿರುವ ಅದೆಷ್ಟೋ ಘಟನೆಗಳು ವರದಿಯಾಗಿದೆ.

ಜಾರ್ಖಂಡ್‌ನಲ್ಲಿ ಇಂತಹ ಒಂದೆರಡು ಘಟನೆಗಳು ನಡೆದಿರುವುದಲ್ಲ. ವರದಿಗಳ ಪ್ರಕಾರ ಜಾರ್ಖಂಡ್‌ನಲ್ಲಿ 2001ರಿಂದ 2021ರ ನಡುವೆ ಸುಮಾರು 590ಕ್ಕೂ ಹೆಚ್ಚು ಮಹಿಳೆಯರನ್ನು ಇದೇ ರೀತಿ ಮಾಟಗಾತಿ ಎಂಬ ಹಣೆಪಟ್ಟಿ ಕಟ್ಟಿ ಕೊಲ್ಲಲಾಗಿದೆ. ಇನ್ನು ಬಿಹಾರದಲ್ಲಿ ಇಂದಿಗೂ 75,000 ಮಹಿಳೆಯರನ್ನು ಮಾಟಗಾತಿಗಳೆಂದು ಕರೆಸಿಕೊಳ್ಳುವ ಆತಂಕದಲ್ಲಿಯೇ ಬದುಕುತ್ತಿದ್ದಾರೆ. ಇನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿಯ ಪ್ರಕಾರ, ದೇಶದಲ್ಲಿ 2000ರಿಂದ 2016ರ ಅವಧಿಯಲ್ಲಿ ಮಾಟ-ಮಂತ್ರದ ಸಂಶಯದ ಮೇಲೆ ಸುಮಾರು 2,500ಕ್ಕೂ ಹೆಚ್ಚು ಮಂದಿಯ ಕೊಲೆ ನಡೆದಿದೆ.

ಇದನ್ನು ಓದಿದ್ದೀರಾ? ವೃದ್ಧೆಗೆ ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಗ್ರಾಮಸ್ಥರು

ಅಷ್ಟಕ್ಕೂ ಇದು ಬರೀ ಮಾಟಗಾತಿ ಅಥವಾ ವಾಮಾಚಾರದಲ್ಲಿ ತೊಡಗಿರುವ ಕುಟುಂಬ ಎಂಬ ಸಂಶಯದಲ್ಲಿ ನಡೆದಿರುವ ಕೊಲೆಗಳೇನಲ್ಲ. ಇಲ್ಲಿ ಸಾಕಷ್ಟು ಪಿತೂರಿಗಳಿವೆ. ಯಾರ ಕಣ್ಣಿಗೂ ಕಾಣದ ಮಹಿಳೆಯರ ಮೇಲಿನ ಶೋಷಣೆಗಳಿವೆ. ದುರುಳ ಪುರುಷರ ಕಾಮದಾಸೆಗೆ ಸಮ್ಮತಿಸದ ಮಹಿಳೆಯ ಮೇಲೆ ನಡೆಯುವ ವಿಚಿತ್ರ ದಾಳಿಗಳಾಗಿವೆ. 2020ರ ಅಕ್ಟೋಬರ್‌ನಲ್ಲಿ ಅಜ್ಮೀರ್‌ನ ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (Central University of Rajasthan) ಸಾರ್ವಜನಿಕ ನೀತಿ, ಕಾನೂನು ಮತ್ತು ಆಡಳಿತ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿರುವ ತನ್ವಿ ಯಾದವ್ ಸಂಶೋಧನಾ ಪ್ರಬಂಧವೊಂದನ್ನು ಪ್ರಕಟಿಸಿದ್ದಾರೆ. “Witch Hunting: A Form of Violence against Dalit Women in India” ಎಂಬ ಈ ಸಂಶೋಧನಾ ಪ್ರಬಂಧವು ಮಾಟಗಾತಿಯರೆಂದು ಪಟ್ಟ ಕಟ್ಟಿ ಮಹಿಳೆಯರ ಅದರಲ್ಲೂ ವಿಶೇಷವಾಗಿ ದಲಿತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದ ಬಗ್ಗೆ ಬೆಳಕು ಚೆಲ್ಲಿದೆ. ಈ ಸಂಶೋಧನಾ ಪ್ರಬಂಧವು 2020ರಲ್ಲಿ CASTE: A Global Journal on Social Exclusion ಎಂಬ ಅಂತಾರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಮಾಟಮಂತ್ರದ ಹೆಸರಿನಲ್ಲಿ ಮಹಿಳೆಯರನ್ನು ಗುರಿಮಾಡುವುದರ ಹಿಂದೆ ಇರುವ ಆಸ್ತಿ ವಿವಾದಗಳು, ವೈಯಕ್ತಿಕ ದ್ವೇಷಗಳು ಮತ್ತು ಪುರುಷಪ್ರಧಾನ ವ್ಯವಸ್ಥೆಯ ಹುನ್ನಾರಗಳನ್ನು ಈ ಪ್ರಬಂಧವು ವಿಶ್ಲೇಷಿಸಿದೆ. ಈ ಪ್ರಬಂಧ ಹೇಳುವಂತೆ ಮಾಟ ಮಾಡುವ ಹೆಸರಲ್ಲಿ ಮಹಿಳೆಯರ ಮೇಲೆ ಹಲ್ಲೆ, ಕೊಲೆ ನಡೆಯುವುದು ಬರೀ ಮೂಢನಂಬಿಕೆಯನ್ನು ಆಧರಿಸಿರುವುದಲ್ಲ. ಬದಲಿಗೆ ದಲಿತ ಮಹಿಳೆಯರನ್ನು ಹತ್ತಿಕ್ಕಲು ಬಳಸುವ ಒಂದು ವ್ಯವಸ್ಥಿತ ಲಿಂಗ ಆಧಾರಿತ ಹಿಂಸೆ. ನಾವು ಈವರೆಗೆ ಘಟನೆಗಳನ್ನು ತುಲನೆ ಮಾಡಿ ನೋಡಿದಾಗ ಈ ಮಾಟ ಮಾಡಿದ ಶಂಕೆಯಿಂದ ಪ್ರಾಣ ಕಳೆದುಕೊಂಡವರು ಹೆಚ್ಚಾಗಿ ಮಹಿಳೆಯರು. ಅದರಲ್ಲೂ ದಲಿತ ಮಹಿಳೆಯರು ಅಧಿಕ. ಇತರೆ ಜಾತಿಯ ಮಹಿಳೆಯರು ಲಿಂಗ, ವರ್ಗದ ಆಧಾರದಲ್ಲಿ ಈ ಶೋಷಣೆಗೆ ಒಳಗಾದರೆ, ದಲಿತ ಮಹಿಳೆಯರು ಜಾತಿ, ವರ್ಗ, ಲಿಂಗ ಎಂಬ ಮೂರೂ ಸ್ತರಗಳಲ್ಲಿ ಏಕಕಾಲಕ್ಕೆ ಶೋಷಣೆಗೆ ಒಳಗಾಗುತ್ತಾರೆ.

ಬಹುತೇಕ ಪ್ರಕರಣಗಳಲ್ಲಿ ಮಹಿಳೆ ಲೈಂಗಿಕವಾಗಿ ಸಹಕರಿಸಲು ಒಪ್ಪದಿದ್ದಾಗ ಅಥವಾ ಅತ್ಯಾಚಾರವನ್ನು ವಿರೋಧಿಸಿದಾಗ ಈ ಪುರುಷ ಪ್ರಧಾನ ವ್ಯವಸ್ಥೆಯು ಆಕೆಯ ವಿರುದ್ಧ ‘ಮಾಟಗಾತಿ’ ಎಂಬ ಹಣೆಪಟ್ಟಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇಂತಹ ಆರೋಪಕ್ಕೊಳಗಾದ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡುವುದು, ಅಮಾನವೀಯವಾಗಿ ಥಳಿಸುವುದು, ಮಲ ತಿನ್ನಿಸುವುದು ಮತ್ತು ಕೊನೆಗೆ ಜನಾಂಗೀಯ ಹತ್ಯೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ.

ಈ ಪಿತೃಪ್ರಧಾನ ವ್ಯವಸ್ಥೆಯು ಮಹಿಳೆಯರು ಆಸ್ತಿಯಲ್ಲಿ ಹಕ್ಕು ಕೇಳಿದಾಗ ಅಥವಾ ಸ್ವತಂತ್ರವಾಗಿ ಬದುಕಲು ಪ್ರಯತ್ನಿಸಿದಾಗ, ಅವರನ್ನು ‘ಡಾಕಿನಿ’ ಅಥವಾ ‘ಮಾಟಗಾತಿ’ ಎಂದು ಕರೆಯಲು ಆರಂಭಿಸುತ್ತದೆ. ಈ ಮೂಲಕ ಸಮಾಜದಿಂದ ಹೊರಹಾಕುವ ಅಥವಾ ಕೊಲ್ಲುವ ಸಂಚು ರೂಪಿಸುತ್ತದೆ. ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣಶಾಹಿ ಪಿತೃಪ್ರಧಾನ ಮನಸ್ಥಿತಿಯ ಮೇಲ್ಜಾತಿಯವರು ಎಂದು ಕರೆಸಿಕೊಳ್ಳುವ ಪುರುಷಪ್ರಧಾನ ವ್ಯವಸ್ಥೆಯು ಕೆಳಜಾತಿಯ ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಮಾಟಗಾತಿ ಎಂಬ ಆರೋಪವನ್ನು ಬಳಸಿಕೊಳ್ಳುತ್ತಿದೆ ಎನ್ನುತ್ತದೆ ಈ ಸಂಶೋಧನಾ ಪ್ರಬಂಧ. ಯುದ್ಧವಾಗಲಿ, ಕೋಮುಗಲಭೆಯಾಗಲಿ ಅಥವಾ ಏನೇ ನಡೆಯಲಿ ಅಲ್ಲಿ ಮೊದಲನೆಯದಾಗಿ ಬಲಿಯಾಗುವುದು ಮಹಿಳೆಯರು. ಈ ದುಷ್ಕೃತ್ಯದಲ್ಲಿಯೂ ಪುರುಷರ ದೌರ್ಜನ್ಯಕ್ಕೆ ಬಳಲುವುದು, ಇಡೀ ಸಮಾಜವನ್ನು ಪ್ರತಿನಿತ್ಯ ಎದುರಿಸುತ್ತಾ ದಿನದೂಡುವುದು ಮಹಿಳೆಯರು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಪತ್ರಕರ್ತೆಗೆ ಪೊಲೀಸರಿಂದ ಲೈಂಗಿಕ ಕಿರುಕುಳ: ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಖಂಡನೆ

ದೆಹಲಿಯ ಜಂತ‌ರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಹಾಸನ | ಗೊರೂರು ಪಂಕಜ: ನಾಡೋಜ ಕೈಯಾರ ಕಿಞ್ಞಣ್ಣ ರೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

ನಾಡೋಜ ಕೈಯಾರ ಕಿಞ್ಞಣ್ಣ ರೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ -2026ಕ್ಕೆ ಹಾಸನದ...

ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ವೀಡಿಯೋ ಲೀಕ್ ಮಾಡಿದ ದುಷ್ಕರ್ಮಿ: ಶೀಘ್ರ ಬಂಧನಕ್ಕೆ ಒತ್ತಾಯ

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿಯೊಬ್ಬ, ಸಂತ್ರಸ್ತೆಯ ಖಾಸಗಿ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...