ಚಳವಳಿ ನಿಗ್ರಹಕ್ಕೆ ತೋರುವ ಶೌರ್ಯ ರಕ್ಷಣೆಯಲ್ಲೇಕಿಲ್ಲ? ಅಮಿತ್ ಶಾ ಆಡಳಿತ ವೈಫಲ್ಯಕ್ಕೆ ಸರಣಿ ಅತ್ಯಾಚಾರಗಳೇ ಸಾಕ್ಷಿ

Date:

ಯಾವುದೇ ಒಂದು ಆಡಳಿತದ ನಿಜವಾದ ಮಾನದಂಡ ಇರುವುದು ರಾಜಕೀಯ ಭಾಷಣಗಳಲ್ಲಲ್ಲ, ಬದಲಿಗೆ ಆ ಆಡಳಿತದಲ್ಲಿ ಸಾಮಾನ್ಯ ನಾಗರಿಕರು, ವಿಶೇಷವಾಗಿ ಮಹಿಳೆಯರು, ಪಡೆಯುವ ಭದ್ರತೆಯಲ್ಲಿ. ರಾಜಧಾನಿಯಲ್ಲಿ ಸಾಲು ಸಾಲಾಗಿ ಹರಿದ ರಕ್ತ ಮತ್ತು ಈ ನಾಲ್ಕು ಅಮಾಯಕರ ಕ್ರೂರ ಹತ್ಯೆಗಳು ಅಮಿತ್ ಶಾ ಅವರ ಸುಳ್ಳು ಭರವಸೆಗಳಿಗೆ ಬಿದ್ದ ತೀವ್ರ ಪೆಟ್ಟಲ್ಲವೇ?

ದೇಶದ ರಾಜಧಾನಿ ನವದೆಹಲಿಯಲ್ಲಿ ಕೇವಲ ಎರಡೇ ವಾರಗಳ ಅಂತರದಲ್ಲಿ ನಡೆದಿರುವ ನಾಲ್ಕು ಭೀಕರ ಹಾಗೂ ಹೇಯ ಅತ್ಯಾಚಾರ-ಹತ್ಯೆ ಪ್ರಕರಣಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿವೆ. ಈ ಸಾಲು ಸಾಲು ಘಟನೆಗಳು ನಾವು ಮಹಿಳೆಯರಿಗೆ ರಕ್ಷಣೆ ನೀಡುತ್ತೇವೆ ಎಂದು ಆಗಾಗೇ ಹೇಳುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಡಳಿತ ವೈಫಲ್ಯವನ್ನು ಮತ್ತು ದೆಹಲಿ ಪೊಲೀಸ್ ಪಡೆಯ ದಾರಿ ತಪ್ಪಿದ ಆದ್ಯತೆಗಳನ್ನು ಜಗಜ್ಜಾಹೀರುಗೊಳಿಸಿವೆ. ಸಾಂವಿಧಾನಿಕವಾಗಿ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆ ನೇರವಾಗಿ ಬರುವುದು ಕೇಂದ್ರ ಗೃಹ ಸಚಿವ ಅಂದರೆ ಅಮಿತ್ ಶಾ ಅವರ ಸುಪರ್ದಿಯಲ್ಲಿ. ಹೀಗಿದ್ದರೂ, ದೇಶದ ಅತ್ಯುನ್ನತ ರಾಜಕೀಯ ಕೇಂದ್ರದಲ್ಲೇ ಮಹಿಳೆಯರ ಸುರಕ್ಷತೆ ಸಂಪೂರ್ಣವಾಗಿ ತಳಸೇರಿರುವುದು ಗೃಹ ಸಚಿವಾಲಯದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ನೆಟ್ಟಿದೆ.

- Advertisement -

ಇತ್ತೀಚೆಗೆ ಜಂತರ್‌ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ, ಇಂತಹ ಅದ್ವಾನಗಳ ಹೊಣೆ ಹೊತ್ತು ಅಂದಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಿದ್ಯಾರ್ಥಿಗಳು, ಯುವಜನರು ಪ್ರತಿಭಟನೆ ನಡೆಸಿದ್ದರು. ಶಾಂತಿಯುತವಾಗಿ ನಡೆಯುತ್ತಿದ್ದ ಇಂತಹ ಪ್ರತಿಭಟನೆಗಳನ್ನು ದಮನ ಮಾಡಲು ಜಲಫಿರಂಗಿ, ಪೆಲೆಟ್ ಗನ್, ಲಾಠಿಚಾರ್ಜ್‌ಗಳ ಪ್ರಯೋಗ ಮಾಡಲಾಗಿತ್ತು. ಇದಕ್ಕಾಗಿ ದೆಹಲಿ ಪೊಲೀಸರನ್ನು ಬೃಹತ್ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಅಷ್ಟು ಮಾತ್ರವಲ್ಲದೆ ಹೊರಗಿನಿಂದ ಗೂಂಡಾಗಳನ್ನೂ ಕರೆಸಿಕೊಳ್ಳಲಾಗಿತ್ತು. ಬಿಜೆಪಿಗರು, ಬಲಪಂಥೀಯರೂ ಸೇರಿ ಯುವಜನರ ಮೇಲೆ ದಾಳಿ ಮಾಡಿದ್ದರು ಎಂಬುದನ್ನು ಅವರಲ್ಲಿ ಒಬ್ಬನಾದ ಸ್ವತಂತ್ರ ಭಾರದ್ವಾಜ್ ಪಾಡ್‌ಕಾಸ್ಟ್ ಒಂದರಲ್ಲಿ ತಾನಾಗೇ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ ಮತ್ತೊಂದು ಕಡೆ. ಗಾಡ್ಗೀಳ್‌ನ ಕಠಿಣ ಸಂರಕ್ಷಣಾ ಶಿಫಾರಸುಗಳಿಂದ ಕಸ್ತೂರಿರಂಗನ್ ವರದಿವರೆಗೆ—ಪಶ್ಚಿಮ ಘಟ್ಟದ ಭವಿಷ್ಯವನ್ನು ರೂಪಿಸಿದ ಎರಡು ಪ್ರಮುಖ ವರದಿಗಳು ಏನು...

ವಂದೇ ಮಾತರಂ: ರಾಷ್ಟ್ರಗೌರವದ ಸಂಕೇತವೋ, ಚಿತ್ತ ಚದುರಿಸುವ ರಾಜಕೀಯ...

ಭಾರತದ ಯುವಜನತೆಯಲ್ಲಿ ರಾಹುಲ್ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿರುವುದನ್ನು ಗಮನಿಸಿ, ಇದೇ ಸಂಸತ್ ಕಲಾಪದಲ್ಲಿ, "ವಂದೇ ಮಾತರಂ" ವಿಷಯವನ್ನು ಮುನ್ನೆಲೆಗೆ ತಂದು, ಯುವಜನತೆಯ ಗಮನವನ್ನು ಬೇರೆಡೆ ಸೆಳೆಯುವ old trick ಮಾಡಲಾಗಿದೆ ಎಂಬುದು ಈ...

ಇದನ್ನೂ ಓದಿ: ಮಹಿಳಾ ಮೀಸಲಾತಿ | ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿ ನೀಡುವುದರಲ್ಲಿ ತಪ್ಪೇನಿದೆ?

Advertisements

ದೆಹಲಿ ಪೊಲೀಸರನ್ನು ಚಳವಳಿ ನಿಗ್ರಹಕ್ಕೆ ಬಳಸಿಕೊಂಡಿರುವ ಅಮಿತ್ ಶಾ ಅವರು ಅಪರಾಧಿಗಳಲ್ಲಿ ಭಯ ಹುಟ್ಟಿಸಲು, ಮಹಿಳೆಯರಿಗೆ ರಕ್ಷಣೆ ನೀಡಲು ಬಳಸಿಕೊಂಡಂತೆ ಕಾಣುತ್ತಿಲ್ಲ. ಹಾಗೆಯೇ ಚಳವಳಿ ನಡೆಸುವವರ ಮೇಲೆ ಹಲ್ಲೆ ನಡೆಸಿದ, ಬಲ ಪ್ರಯೋಗಿಸಿದ ಈ ದೆಹಲಿ ಪೊಲೀಸರೂ ಅಪರಾಧಿಗಳ ವಿರುದ್ಧ, ಮಹಿಳೆಯರ ಪರವಾಗಿ ನಿಲ್ಲಲು ಮುಂದಾಗುತ್ತಿರುವಂತಿಲ್ಲ. ಇವೆಲ್ಲವೂ ಸ್ಪಷ್ಟವಾಗಿ ವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ತೋರುತ್ತಿದೆ. ಸಾರ್ವಜನಿಕರ ಹಕ್ಕುಗಳ ಚಳವಳಿಯನ್ನು ಹತೋಟಿಗೆ ತರಲು ತೀವ್ರ ಆಸಕ್ತಿ ತೋರುವ ಸರ್ಕಾರ, ಮಹಿಳೆಯರ ಜೀವ ಕಾಯುವಲ್ಲಿ ತೋರುತ್ತಿರುವ ಉದಾಶೀನತೆ ದೆಹಲಿ ಇಂದು ‘ಅತ್ಯಾಚಾರಗಳ ರಾಜಧಾನಿ’ ಎಂಬ ಕೆಟ್ಟ ಹೆಸರನ್ನು ಪಡೆಯುವಂತೆ ಮಾಡಿದೆ.

ಹದಿನೈದು ದಿನಗಳಲ್ಲಿ ಸರಣಿ ಅತ್ಯಾಚಾರ ಘಟನೆ

ಕಳೆದ ಹದಿನೈದು ದಿನಗಳಲ್ಲಿ ರಾಜಧಾನಿಯ ವಿವಿಧ ಮೂಲೆಗಳಲ್ಲಿ ಅತ್ಯಂತ ಕ್ರೂರ, ಭೀಕರ ಅತ್ಯಾಚಾರ ಪ್ರಕರಣಗಳು ಕಂಡುಬಂದಿವೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಅಪಹರಿಸಿದ ಮೂವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಕೊಲೆ ಮಾಡಿ ಎಸೆದಿದ್ದರು.

ಅದಾದ ಬಳಿಕ ಅಪ್ರಾಪ್ತ ಬಾಲಕಿಯೊಬ್ಬಳನ್ನು ಜಾಲಕ್ಕೆ ಬೀಳಿಸಿಕೊಂಡು ಆಕೆಯ ಮೇಲೆ ಸರಣಿ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆಗೈದ ಭೀಕರ ಕೃತ್ಯವೂ ದೆಹಲಿಯಲ್ಲೇ ನಡೆದಿದೆ. ಸಿಸಿಟಿವಿ ಕ್ಯಾಮೆರಾಗಳ ವ್ಯಾಪ್ತಿ ಹಾಗೂ ಜನನಿಬಿಡ ಪ್ರದೇಶದ ಸಮೀಪವೇ ಈ ದುರಂತ ಸಂಭವಿಸಿದೆ. ಉತ್ತರ-ಪೂರ್ವ ದೆಹಲಿಯ ಎರಡು ಪ್ರತ್ಯೇಕ ಘಟನೆಗಳು ನಡೆದಿವೆ. ಇವೆರಡೂ ಪ್ರಕರಣಗಳಲ್ಲಿ ಸಂತ್ರಸ್ತೆಯರನ್ನು ಅತ್ಯಂತ ಬಲಿಷ್ಠವಾಗಿ ಹಾಗೂ ವಿಕೃತವಾಗಿ ಹಿಂಸಿಸಿ ಹತ್ಯೆ ಮಾಡಲಾಗಿತ್ತು. ಸಂತ್ರಸ್ತೆಯರ ಮೃತದೇಹಗಳು ಸಿಕ್ಕ ಸ್ಥಿತಿಯೇ ಅವುಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು. ಈ ಎಲ್ಲ ಪ್ರಕರಣಗಳಲ್ಲೂ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಗಸ್ತು ಇಲ್ಲದಿರುವುದು, ಸಿಸಿಟಿವಿಗಳು ಕೆಲಸ ಮಾಡದಿರುವುದು ಮತ್ತು ಅಪರಾಧಿಗಳಿಗೆ ಕಾನೂನಿನ ಯಾವುದೇ ಭಯವಿಲ್ಲದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಉಲ್ಟಾ ಹೊಡೆದ ಅಮಿತ್ ಶಾ ಹೇಳಿಕೆಗಳು!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವಿಧ ಚುನಾವಣೆಗಳ ಸಂದರ್ಭಗಳಲ್ಲಿ, ಮಾಧ್ಯಮಗಳ ನೇರ ಸಂದರ್ಶನಗಳಲ್ಲಿ ಮತ್ತು ಸಾರ್ವಜನಿಕ ಸಮಾವೇಶಗಳಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ಬೃಹತ್ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. “ನಮ್ಮ ಆಡಳಿತವಿರುವಲ್ಲಿ ಅತ್ಯಾಚಾರಗಳಿಗೆ ಮತ್ತು ಅಪರಾಧಿಗಳಿಗೆ ಜಾಗವಿಲ್ಲ, ನಾವು ಮಹಿಳೆಯರಿಗೆ ಪೂರ್ಣ ಭದ್ರತೆ ನೀಡುತ್ತೇವೆ, ಅಪರಾಧಿಗಳಿಗೆ ಜೈಲಿನ ಕಂಬಿ ಎಣಿಸುವಂತೆ ಮಾಡುತ್ತೇವೆ” ಎಂದು ಅಮಿತ್ ಶಾ ಹಲವು ಬಾರಿ ಹೆಮ್ಮೆಯಿಂದ ಪ್ರತಿಪಾದಿಸಿದ್ದರು.

ಇದನ್ನೂ ಓದಿ: ರಾಮಮಂದಿರದ ಬಾಣ ಖಾಲಿ: 2029ರ ಲೋಕಸಭೆಗೆ ‘ಯುಸಿಸಿ’ ಅಸ್ತ್ರಕ್ಕಾಗಿ ತಡಕಾಡುತ್ತಿರುವ ಅಮಿತ್ ಶಾ

ಆದರೆ, ಇಂದು ಅವರ ಭಾಷಣಗಳು ಭೀಕರ ವಾಸ್ತವದ ಎದುರು ಸಂಪೂರ್ಣವಾಗಿ ಉಲ್ಟಾ ಹೊಡೆದಿವೆ. ಸ್ವತಃ ಅವರ ನೇರ ಸುಪರ್ದಿಯಲ್ಲಿರುವ ದೆಹಲಿ ಪೊಲೀಸ್ ಪಡೆ ತನ್ನ ಮೂಗಿನ ಕೆಳಗೆ ಸಾಲು ಸಾಲು ಹತ್ಯೆಗಳು ನಡೆಯುತ್ತಿದ್ದರೂ ಕೈಕಟ್ಟಿ ಕುಳಿತಿದೆ. ಅಮಿತ್ ಶಾ ಅವರು ನೀಡಿದ್ದ “ನಮ್ಮ ಆಡಳಿತದಲ್ಲಿ ಅತ್ಯಾಚಾರ ನಡೆಯಲ್ಲ” ಎಂಬ ಆಶ್ವಾಸನೆಗಳು ಕೇವಲ ರಾಜಕೀಯ ಗಿಮಿಕ್ ಮತ್ತು ಓಟ್ ಬ್ಯಾಂಕ್ ಭಾಷಣಗಳಷ್ಟೇ ಆಗಿದ್ದವೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿದೆ.

ತಮ್ಮ ಆಡಳಿತ ಮಾದರಿಯನ್ನು ವೈಭವೀಕರಿಸಿಕೊಳ್ಳಲು ‘ಮಹಿಳಾ ಸುರಕ್ಷತೆ’ಯನ್ನು ಕೇಂದ್ರ ಸರ್ಕಾರ ವಸ್ತುವಾಗಿ ಬಳಸಿಕೊಂಡಿತ್ತು. ಆದರೆ ಇಂದು ದೇಶದ ರಾಜಧಾನಿಯಲ್ಲೇ ಮಹಿಳೆಯರು ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ದೆಹಲಿ ಪೊಲೀಸರ ಗಮನ ಕ್ರಿಮಿನಲ್‌ಗಳನ್ನು ಹಿಡಿಯುವುದಕ್ಕಿಂತ ಹೆಚ್ಚಾಗಿ, ಪ್ರಜಾಸತ್ತಾತ್ಮಕವಾಗಿ ಹಕ್ಕುಗಳನ್ನು ಕೇಳುವ ವಿದ್ಯಾರ್ಥಿಗಳು, ಯುವಕರು ಮತ್ತು ರೈತರನ್ನು ಬಂಧಿಸುವುದರ ಮೇಲೆಯೇ ಕೇಂದ್ರಿಕೃತವಾಗಿದೆ. ಈ ಆದ್ಯತೆಗಳ ಗೊಂದಲವೇ ಅಪರಾಧಿಗಳಿಗೆ ಯಾವುದೇ ಕಟ್ಟುಪಾಡಿಲ್ಲದೆ ಕೃತ್ಯ ಎಸಗಲು ಧೈರ್ಯ ತಂದಿದೆ.

ಯಾವುದೇ ಒಂದು ಆಡಳಿತದ ನಿಜವಾದ ಮಾನದಂಡ ಇರುವುದು ರಾಜಕೀಯ ಭಾಷಣಗಳಲ್ಲಲ್ಲ, ಬದಲಿಗೆ ಆ ಆಡಳಿತದಲ್ಲಿ ಸಾಮಾನ್ಯ ನಾಗರಿಕರು, ವಿಶೇಷವಾಗಿ ಮಹಿಳೆಯರು, ಪಡೆಯುವ ಭದ್ರತೆಯಲ್ಲಿ. ವಿದ್ಯಾರ್ಥಿ ಸಂಘಟನೆಗಳ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಕ್ಷಣಾರ್ಧದಲ್ಲಿ ಸಾವಿರಾರು ಸಶಸ್ತ್ರ ಪೊಲೀಸರನ್ನು ಮತ್ತು ಜಲಫಿರಂಗಿಗಳನ್ನು ತಂದು ನಿಲ್ಲಿಸುವ ದೆಹಲಿ ಗೃಹ ಸಚಿವಾಲಯಕ್ಕೆ, ರಾತ್ರಿ ವೇಳೆ ಮಹಿಳೆಯರಿಗೆ ರಕ್ಷಣೆ ನೀಡಲು ಸೂಕ್ತ ರಕ್ಷಣೆ ಅಥವಾ ಗಸ್ತು ಪಡೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಈ ವ್ಯವಸ್ಥೆಯ ಬಹುದೊಡ್ಡ ವ್ಯಂಗ್ಯ.

ರಾಜಧಾನಿಯಲ್ಲಿ ಸಾಲು ಸಾಲಾಗಿ ಹರಿದ ರಕ್ತ ಮತ್ತು ಈ ನಾಲ್ಕು ಅಮಾಯಕರ ಕ್ರೂರ ಹತ್ಯೆಗಳು ಅಮಿತ್ ಶಾ ಅವರ ಸುಳ್ಳು ಭರವಸೆಗಳಿಗೆ ಬಿದ್ದ ತೀವ್ರ ಪೆಟ್ಟಲ್ಲವೇ? ಶಾ ಅವರು ಕೇವಲ ವಿದ್ಯಾರ್ಥಿ ಯುವಜನ ಚಳವಳಿಗಳ ದಮನಕ್ಕಷ್ಟೇ ದೆಹಲಿ ಪೊಲೀಸರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇಲಾಖೆಗೆ ನೈಜ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಿ, ರಾಜಕೀಯ ಹಿತಾಸಕ್ತಿ ಬದಿಗೊತ್ತಿ ಅಪರಾಧ ತಡೆಗೆ ಮೊದಲ ಆದ್ಯತೆ ನೀಡಬೇಕು. ಭಾಷಣಗಳ ಮೂಲಕ ಜನರನ್ನು ಮರಳು ಮಾಡುವ ಕಾಲ ಮುಗಿದಿದೆ; ಪ್ರತಿಯೊಬ್ಬ ಮಹಿಳೆಗೂ ಸುರಕ್ಷತೆಯ ವಾತಾವರಣ ನಿರ್ಮಿಸುವುದು ಅಮಿತ್ ಶಾ ಅವರ ಸಾಂವಿಧಾನಿಕ ಜವಾಬ್ದಾರಿ. ಇದನ್ನು ಮಾಡಲು ವಿಫಲವಾದರೆ, ಇತಿಹಾಸ ನಿಮ್ಮನ್ನು ಒಬ್ಬ ವಿಫಲ ಗೃಹ ಸಚಿವ ಎಂದಷ್ಟೇ ನೆನಪಿನಲ್ಲಿಟ್ಟುಕೊಳ್ಳುತ್ತದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟಿಎಂಸಿ ಬಂಡಾಯ ಸಂಸದರ ಅನರ್ಹತೆ ಪ್ರಕರಣ: ತ್ವರಿತ ನಿರ್ಧಾರಕ್ಕೆ ಲೋಕಸಭಾ ಸ್ಪೀಕರ್‌ಗೆ ಸುಪ್ರೀಂ ಕಿವಿಮಾತು

ತ್ರಿಪುರಾ ಮೂಲದ 'ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ' (ಎನ್‌ಸಿಪಿಐ -...

ವಿಜಯಪುರ | ಜಿಲ್ಲೆಯ 4 ತಾಲೂಕುಗಳು ತೀವ್ರ ಬರಪೀಡಿತ: ಸಚಿವ ಎಂ.ಬಿ ಪಾಟೀಲ

ಕೇಂದ್ರ ಸರಕಾರದ ಬರ ನಿರ್ವಹಣಾ ಮಾನದಂಡಗಳನ್ನು ಆಧರಿಸಿ ವಿಜಯಪುರ ಜಿಲ್ಲೆಯ ಆಲಮೇಲ,...

ಗಾಡ್ಗೀಳ್‌, ಕಸ್ತೂರಿ ರಂಗನ್ ವರದಿಗಳು ಹೇಳುವುದೇನು? ವಿರೋಧವೇಕೆ?

ಪಶ್ಚಿಮ ಘಟ್ಟವನ್ನು ಉಳಿಸಬೇಕೆಂಬ ಪರಿಸರದ ಕೂಗು ಒಂದು ಕಡೆ, ಜನವಸತಿ–ಕೃಷಿ–ಜೀವನೋಪಾಯದ ಆತಂಕ...