ಗೌತಮ್‌ ಗಂಭೀರ್; ತಂಡವನ್ನು ಗೆಲ್ಲಿಸುತ್ತಿಲ್ಲ, ತಾವೂ ಬದಲಾಗುತ್ತಿಲ್ಲ

Date:

ಗೌತಮ್ ಗಂಭೀರ್ ಒಬ್ಬ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋಚ್ ಆಗಿ ಕೇವಲ ತಂತ್ರಗಾರಿಕೆ ಮಾತ್ರವಲ್ಲದೆ, ಟೀಕೆಗಳನ್ನು ಸ್ವೀಕರಿಸುವ ಮತ್ತು ಒತ್ತಡದ ಸಂದರ್ಭದಲ್ಲಿ ತಂಡದ ವಾತಾವರಣವನ್ನು ತಿಳಿಯಾಗಿಡುವ ಜಾಣ್ಮೆಯೂ ಅಗತ್ಯ. ಹಿರಿಯರ ಮಾತುಗಳು ಕೇವಲ ಟೀಕೆಗಳಲ್ಲ, ಅವು ಭಾರತ ಕ್ರಿಕೆಟ್‌ನ ಹಿತದೃಷ್ಟಿಯಿಂದ ಬಂದ ಎಚ್ಚರಿಕೆ ಗಂಟೆಗಳು ಎಂಬುದನ್ನು ಗಂಭೀರ್ ಅರ್ಥಮಾಡಿಕೊಳ್ಳಬೇಕಿದೆ

- Advertisement -

ರಾಹುಲ್ ದ್ರಾವಿಡ್ ಅವರ ಶಾಂತ ಸ್ವಭಾವದ ನಂತರ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ಗೌತಮ್ ಗಂಭೀರ್, ತಮ್ಮ ಆಕ್ರಮಣಕಾರಿ ಶೈಲಿಗೆ ಹೆಸರಾದವರು. ಆದರೆ, ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅನುಭವಿಸಿದ ಮುಖಭಂಗ(ವೈಟ್‌ವಾಶ್) ಮತ್ತು ಬಾರ್ಡರ್- ಗವಾಸ್ಕರ್ ಟ್ರೋಫಿಯ ಆರಂಭಿಕ ಹಂತದಲ್ಲಿನ ಗೊಂದಲಗಳು ಗಂಭೀರ್‌ ಅವರನ್ನು  ಟೀಕೆಗಳ ಸುಳಿಗೆ ಸಿಲುಕಿಸಿವೆ. ಮೈದಾನದಲ್ಲಿನ ಫಲಿತಾಂಶಕ್ಕಿಂತ ಹೆಚ್ಚಾಗಿ, ಮೈದಾನದ ಹೊರಗೆ ಹಿರಿಯ ಕ್ರಿಕೆಟಿಗರ ವಾಗ್ದಾಳಿಗಳು ಗಂಭೀರ್‌ ಅವರ ತಲೆನೋವನ್ನು ಹೆಚ್ಚಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗಂಭೀರ್ ಕೋಚ್ ಆದಾಗಿನಿಂದಲೂ ಅವರ ನೇರ ನಡೆನುಡಿ ಚರ್ಚೆಯ ವಿಷಯವಾಗಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರಿಕಿ ಪಾಂಟಿಂಗ್‌ ಅವರ ಹೇಳಿಕೆಗೆ ಗಂಭೀರ್‌ ನೀಡಿದ ಪ್ರತಿಕ್ರಿಯೆ ವಿವಾದದ ಕಿಡಿ ಹೊತ್ತಿಸಿತು. ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ಪಾಂಟಿಂಗ್‌ ಆಡದ್ದ ಮಾತಿಗೆ, “ಭಾರತದ ಕ್ರಿಕೆಟ್ ಬಗ್ಗೆ ಪಾಂಟಿಂಗ್‌ಗೆ ಏನು ಕೆಲಸ? ಅವರು ತಮ್ಮ ಆಸ್ಟ್ರೇಲಿಯಾ ತಂಡದ ಬಗ್ಗೆ ಯೋಚಿಸಲಿ,” ಎಂದು ಗಂಭೀರ್ ಖಾರವಾಗಿ ಉತ್ತರಿಸಿದ್ದರು.

ಇದು ಅನೇಕ ಹಿರಿಯ ಕ್ರಿಕೆಟಿಗರಿಗೆ ರುಚಿಸಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್, ಬಿಸಿಸಿಐಗೆ ನೇರ ಸಲಹೆ ನೀಡದರು. “ಗಂಭೀರ್ ಅವರಿಗೆ ಮಾಧ್ಯಮಗಳ ಮುಂದೆ ಮಾತನಾಡಲು ಬಿಡಬಾರದು. ಡ್ರೆಸ್ಸಿಂಗ್‌ ರೂಮ್‌ನಲ್ಲಿ ಅವರು ಉತ್ತಮ ಕೆಲಸ ಮಾಡಬಹುದು, ಆದರೆ ಪತ್ರಿಕಾಗೋಷ್ಠಿಯಲ್ಲಿ ಅವರ ಮಾತುಗಳು ಮತ್ತು ವರ್ತನೆ ತಂಡಕ್ಕೆ ಹೊರೆಯಾಗಬಹುದು. ರೋಹಿತ್ ಶರ್ಮಾ ಅಥವಾ ಅಜಿತ್‌ ಅಗರ್ಕರ್‌ ಅವರೇ ಮಾಧ್ಯಮಗಳನ್ನು ನಿಭಾಯಿಸುವುದು ಲೇಸು,” ಎಂದು ಟ್ವೀಟ್ ಮಾಡುವ ಮೂಲಕ ಗಂಭೀರ್ ಅವರ ‘ಸಂಯಮ’ದ ಬಗ್ಗೆ ಪ್ರಶ್ನೆ ಎತ್ತಿದರು.

Gautham gambir 4

ಭಾರತ ಕ್ರಿಕೆಟ್‌ನ ದಿಗ್ಗಜ ಸುನಿಲ್ ಗಾವಸ್ಕರ್ ಕೂಡ ಗಂಭೀರ್ ಅವರ ತಂತ್ರಗಾರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಸೋಲಿನ ನಂತರ ಮಾತನಾಡಿದ್ದ ಅವರು, ತಂಡದ ಸಿದ್ಧತೆಯ ಕೋರಿಕೆಯನ್ನು ಎತ್ತಿ ತೋರಿಸಿದ್ದರು. “ಭಾರತ ತಂಡಕ್ಕೆ ಅಭ್ಯಾಸ ಪಂದ್ಯಗಳ ಅಗತ್ಯವಿತ್ತು. ಅದನ್ನು ರದ್ದುಗೊಳಿಸಿದ್ದು ಸರಿಯಲ್ಲ,”ಎಂದು ಗವಾಸ್ಕರ್ ಹೇಳಿದ್ದರು. ಅಲ್ಲದೆ, ಕೋಚಿಂಗ್‌ ಸಿಬ್ಬಂದಿಯ ಜವಾಬ್ದಾರಿಯ ಬಗ್ಗೆಯೂ ಎಚ್ಚರಿಸಿದ್ದ ಸನ್ನಿ, “ಫಲಿತಾಂಶ ಬರದಿದ್ದರೆ ಪ್ರಶ್ನೆಗಳು ಏಳುವುದು ಸಹಜ. ಗಂಭೀರ್ ಅವರ ಹನಿಮೂನ್‌ ಅವಧಿ ಮುಗಿದಿದೆ,” ಎಂದು ಮಾರ್ಮಿಕವಾಗಿ ಎಚ್ಚರಿಸಿದ್ದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ

ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್, ಗಂಭೀರ್ ಅವರ ಸ್ವಭಾವವನ್ನೇ ಗುರಿಯಾಗಿಸಿಕೊಂಡರು. “ಗಂಭೀರ್ ಒಬ್ಬ ಉತ್ತಮ ಕೋಚ್ ಆಗಿರಬಹುದು, ಆದರೆ ಒತ್ತಡದಲ್ಲಿ ಅವರು ಸಿಡಿಮಿಡಿಗೊಳ್ಳುತ್ತಾರೆ. ಇದು ಆಸ್ಟ್ರೇಲಿಯಾಕ್ಕೆ ಲಾಭದಾಯಕವಾಗಬಹುದು,” ಎಂದು ವ್ಯಂಗ್ಯವಾಡಿದ್ದರು.

​ಇನ್ನೊಂದೆಡೆ, ಮಾಜಿ ಕೋಚ್ ರವಿಶಾಸ್ತ್ರಿ ಅವರು ಗಂಭೀರ್‌ಗೆ ತಾಳ್ಮೆಯ ಮಂತ್ರ ಬೋಧಿಸಿದ್ದಾರೆ. “ಆಸ್ಟ್ರೇಲಿಯಾದಲ್ಲಿ ಯಶಸ್ಸು ಕಾಣಬೇಕಾದರೆ ಶಾಂತವಾಗಿರಬೇಕು. ಎದುರಾಳಿಗಳು ಕೆಣಕುತ್ತಾರೆ, ಆದರೆ ಅದಕ್ಕೆ ಪ್ರತಿಕ್ರಿಯಿಸದೆ ಆಟದ ಮೂಲಕ ಉತ್ತರ ನೀಡಬೇಕು,” ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ.

​ಗಂಭೀರ್ ಬೆನ್ನಿಗೆ ನಿಂತ ದಾದಾ

​ಇಷ್ಟೆಲ್ಲಾ ಟೀಕೆಗಳ ನಡುವೆಯೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಗಂಭೀರ್ ಬೆಂಬಲಕ್ಕೆ ನಿಂತಿದ್ದಾರೆ. “ಗಂಭೀರ್ ಸ್ವಭಾವವೇ ಹಾಗೆ. ಅವರನ್ನು ಬದಲಾಯಿಸಲು ಹೋಗಬೇಡಿ. ಆಕ್ರಮಣಕಾರಿ ಮನೋಭಾವವೇ ಅವರನ್ನು ವಿಶ್ವಕಪ್ ವಿಜೇತರನ್ನಾಗಿ ಮಾಡಿದೆ. ಅವರಿಗೆ ಸ್ವಲ್ಪ ಸಮಯ ಕೊಡಿ, ಫಲಿತಾಂಶ ತಾನಾಗಿಯೇ ಬರುತ್ತದೆ,” ಎಂದು ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ.

Gautham gambir 3 1

​ಬಿಸಿಸಿಐ ಕಟ್ಟಪ್ಪಣೆ

​ಮೂಲಗಳ ಪ್ರಕಾರ, ನ್ಯೂಜಿಲೆಂಡ್ ಸರಣಿಯ ಸೋಲಿನ ನಂತರ ಬಿಸಿಸಿಐ ನಡೆಸಿದ ಆರು ಗಂಟೆಗಳ ಸುದೀರ್ಘ ಸಭೆಯಲ್ಲಿ ಗಂಭೀರ್ ಅವರ ಕೆಲವು ನಿರ್ಧಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಸದ್ಯ ತಂಡವು ಸಂಕ್ರಮಣ ಕಾಲದಲ್ಲಿದ್ದು, ರೋಹಿತ್, ಕೊಹ್ಲಿಯಂತಹ ಹಿರಿಯರು ಮತ್ತು ಜೈಸ್ವಾಲ್, ಗಿಲ್ ಅವರಂತಹ ಕಿರಿಯರ ನಡುವೆ ಸೇತುವೆಯಾಗುವ ಜವಾಬ್ದಾರಿ ಗಂಭೀರ್ ಮೇಲಿದೆ.

​ಗೌತಮ್ ಗಂಭೀರ್ ಒಬ್ಬ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋಚ್ ಆಗಿ ಕೇವಲ ತಂತ್ರಗಾರಿಕೆ ಮಾತ್ರವಲ್ಲದೆ, ಟೀಕೆಗಳನ್ನು ಸ್ವೀಕರಿಸುವ ಮತ್ತು ಒತ್ತಡದ ಸಂದರ್ಭದಲ್ಲಿ ತಂಡದ ವಾತಾವರಣವನ್ನು ತಿಳಿಯಾಗಿಡುವ ಜಾಣ್ಮೆಯೂ ಅಗತ್ಯ. ಹಿರಿಯರ ಮಾತುಗಳು ಕೇವಲ ಟೀಕೆಗಳಲ್ಲ, ಅವು ಭಾರತ ಕ್ರಿಕೆಟ್‌ನ ಹಿತದೃಷ್ಟಿಯಿಂದ ಬಂದ ಎಚ್ಚರಿಕೆ ಗಂಟೆಗಳು ಎಂಬುದನ್ನು ಗಂಭೀರ್ ಅರ್ಥಮಾಡಿಕೊಳ್ಳಬೇಕಿದೆ. ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿ, ಟಿ20 ವಿಶ್ವಕಪ್, ಆಸ್ಟ್ರೇಲಿಯಾ ಸರಣಿಯ ಫಲಿತಾಂಶವು ಗಂಭೀರ್ ಅವರ ಕೋಚಿಂಗ್ ಭವಿಷ್ಯದ ದಿಕ್ಸೂಚಿಯಾಗಲಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ,...

ಕಠಿಣ ಹಾದಿಯಾದರೂ WTC ಫೈನಲ್ ತಲುಪಬಲ್ಲೆವು: ದಕ್ಷಿಣ ಆಫ್ರಿಕಾ ಆಟಗಾರ ಏಡೆನ್ ಮಾರ್ಕ್ರಮ್

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (WTC) ಸತತ ಎರಡನೇ ಬಾರಿ ಫೈನಲ್ ತಲುಪುವ...

ಬ್ರೆಜಿಲ್‌ನಲ್ಲಿ ʼಲೂಲಾʼ ಐತಿಹಾಸಿಕ ಗೆಲುವು: ನಾಗರಿಕ ಸಂಘಟನೆಗಳು ಚುನಾವಣೆಯ ದಿಕ್ಕು ಬದಲಿಸಿದ್ದು ಹೇಗೆ?

ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ನಾಯಕ ಲೂಯಿಸ್ ಇನಾಸಿಯೊ ಲೂಲಾ ಡಿ...