ಬಡ, ಮಧ್ಯಮ ವರ್ಗದ ಪ್ರೀತಿಯಿಂದ ಬೆಳೆದ ‘ಕ್ರಿಕೆಟ್ ದೇವರು’; ಕಷ್ಟ ಕಾಲದಲ್ಲಿ ಅವರ ಮಕ್ಕಳನ್ನೇ ಮರೆತದ್ದೇಕೆ?

Date:

ಲಕ್ಷಾಂತರ ಮಧ್ಯಮ ವರ್ಗದವರು ಮತ್ತು ಬಡವರು ಸಚಿನ್ ಅವರ ಆಟವನ್ನು ನೋಡಿ, ಅವರನ್ನು ಬೆಂಬಲಿಸಿ, ಆರಾಧಿಸಿ ಭಾರತದ ಮರೆಯಲಾಗದ ‘ಹೀರೋ’ ಆಗಿ ಮಾಡಿದ್ದರು. ಇಂದು ಅದೇ ಕಡುಬಡವ ಹಾಗೂ ಮಧ್ಯಮ ವರ್ಗದ ಅಭಿಮಾನಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಬೀದಿಗೆ ಬಂದು ತಮ್ಮ ಭವಿಷ್ಯಕ್ಕಾಗಿ ಸಂಕಷ್ಟದಲ್ಲಿರುವಾಗ, ಸಚಿನ್ ಅವರಿಗೆ ನ್ಯಾಯಬದ್ಧವಾಗಿ ಬೆಂಬಲ ಸೂಚಿಸಬೇಕಾಗಿತ್ತು.

- Advertisement -

ತೀವ್ರ ಟೀಕೆ ಹಾಗೂ ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ಸುರಿಮಳೆಯ ಬಳಿಕ ಕೊನೆಗೂ ‘ಕ್ರಿಕೆಟ್ ದೇವರು’ ಸಚಿನ್ ತೆಂಡುಲ್ಕರ್ ತಮ್ಮ ಮೌನ ಮುರಿದಿದ್ದಾರೆ. ದೇಶದಾದ್ಯಂತ ಸಂಚಲನ ಮೂಡಿಸಿರುವ ‘ಸಿಜೆಪಿ’ (CJP) ಪ್ರತಿಭಟನೆ ಹಾಗೂ ಹೋರಾಟಗಾರರ ಮೇಲೆ ನಡೆದ ದಮನಕಾರಿ ನೀತಿಗಳ ಕುರಿತು ಬಹಳ ದಿನಗಳ ಕಾಲ ತುಟಿ ಬಿಚ್ಚದಿದ್ದ ಅವರು, ತೀವ್ರ ಒತ್ತಡದ ನಂತರ ನೀಡಿದ ಪ್ರತಿಕ್ರಿಯೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಅವರು ನೀಡಿದ ಹೇಳಿಕೆಯಲ್ಲಿ ಯುವಜನರ ಮೇಲಿನ ಕಾಳಜಿಗಿಂತ, ತಾವು ಸುರಕ್ಷಿತವಾಗಿರಬೇಕೆಂಬ ಜಿಪುಣತನವೇ ಎದ್ದು ಕಾಣುತ್ತಿದ್ದು, ಆಡಳಿತಶಾಹಿಯನ್ನು ಎದುರು ಹಾಕಿಕೊಳ್ಳುವ ಭಯ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...

ವೈದ್ಯರು ಹಾಗೂ ಎಂಜಿನಿಯರ್ ಆಗಬೇಕೆಂಬ ಕನಸು ಹೊತ್ತು, ಹಳ್ಳಿಗಳಿಂದ ಮತ್ತು ತೀರಾ ಬಡತನದ ಹಿನ್ನೆಲೆಯಿಂದ ಬಂದು, ಸಾಲಸೋಲ ಮಾಡಿ ಹಗಲಿರುಳು ಕಷ್ಟಪಟ್ಟು ಓದಿದ್ದ ವಿದ್ಯಾರ್ಥಿಗಳ ಆಕ್ರೋಶದ ಕಿಚ್ಚಿನಿಂದ ಈ ‘ಸಿಜೆಪಿ’ ಪ್ರತಿಭಟನೆ ಹುಟ್ಟಿಕೊಂಡಿತ್ತು. ಭಾರಿ ಸದ್ದು ಮಾಡಿದ ‘ನೀಟ್’ ಪರೀಕ್ಷೆಯ ಅಕ್ರಮ ಹಾಗೂ ಸಾಲು ಸಾಲು ಪ್ರಶ್ನೆಪತ್ರಿಕೆಗಳ ಸೋರಿಕೆಯು ಯುವಜನರ ಭವಿಷ್ಯವನ್ನು ಮಸಕು ಮಾಡಿದಾಗ ಅವರು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಿತ್ತು. ತಮ್ಮ ನ್ಯಾಯಸಮ್ಮತ ಹಕ್ಕುಗಳಿಗಾಗಿ ಹೀಗೆ ಪ್ರತಿಭಟಿಸುತ್ತಿದ್ದವರ ಮೇಲೆ ನಿರ್ದಯವಾಗಿ ಲಾಠಿ ಚಾರ್ಜ್ ಹಾಗೂ ದೌರ್ಜನ್ಯಗಳು ನಡೆದಾಗ ಇಡೀ ದೇಶವೇ ಕಳವಳಗೊಂಡಿತ್ತು. ಯಾವ ಯುವಜನತೆ ದಶಕಗಳ ಕಾಲ ಸಚಿನ್ ಅವರನ್ನು ಆರಾಧಿಸಿತ್ತೋ, ಅದೇ ಯುವಜನತೆಯ ಮಕ್ಕಳು, ಮಕ್ಕಳು, ಮೊಮ್ಮಕ್ಕಳು ಸಂಕಷ್ಟದಲ್ಲಿದ್ದಾಗ ಅವರಿಂದ ಸಾಂತ್ವನದ ನುಡಿಯನ್ನೂ ನಿರೀಕ್ಷಿಸಿತ್ತು. ಆದರೆ, ಆ ಸಂದರ್ಭದಲ್ಲಿ ಸಚಿನ್ ತೋರಿದ ನಿಗೂಢ ಮೌನ, ಕೋಟ್ಯಂತರ ಕ್ರೀಡಾಭಿಮಾನಿಗಳ ಪಾಳಿಗೆ ಅರಗಿಸಿಕೊಳ್ಳಲಾಗದ ಕಟು ಸತ್ಯವಾಗಿತ್ತು.

ಕೊನೆಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್‌ಗೀಡಾದ ನಂತರ ಎಚ್ಚೆತ್ತ ಸಚಿನ್, ಸಿಜೆಪಿ ಹೋರಾಟದ ಕುರಿತು ಸುತ್ತಿ ಬಳಸಿ ಹೇಳಿಕೆಯೊಂದನ್ನು ನೀಡಿದ್ದಾರೆ. ಆದರೆ, ಈ ಹೇಳಿಕೆಯು ತಜ್ಞರಿಂದ ಪ್ರಯಾಸಪಟ್ಟು ಸಿದ್ಧಪಡಿಸಿದ ‘ಪಿಆರ್’ ತಂತ್ರದಂತಿದೆ ವಿನಃ, ಅದರಲ್ಲಿ ಯಾವುದೇ ನೈಜ ಕಳಕಳಿ ಅಥವಾ ಬದ್ಧತೆ ಕಾಣುತ್ತಿಲ್ಲ. ಸರ್ಕಾರದ ಅಥವಾ ವ್ಯವಸ್ಥೆಯ ಲೋಪಗಳನ್ನು ನೇರವಾಗಿ ಟೀಕಿಸುವುದರಿಂದ ಅವರು ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಯುವಕರ ಪರವಾಗಿ ಗಟ್ಟಿಯಾಗಿ ನಿಲ್ಲುವ ಬದಲು, ಯಾರಿಗೂ ನೋವಾಗದಂತೆ, ವಿಶೇಷವಾಗಿ ಅಧಿಕಾರಸ್ಥರಿಗೆ ಕೋಪ ಬಾರದಂತೆ ಅವರು ಅತ್ಯಂತ ಎಚ್ಚರಿಕೆ ವಹಿಸಿದ್ದಾರೆ.

ಸಚಿನ್ ಅವರ ಈ ನಡೆಯನ್ನು ಕೇವಲ ಒಂದು ಪ್ರತಿಕ್ರಿಯೆ ಎನ್ನುವುದಕ್ಕಿಂತ, ಸಿಜೆಪಿ ಹೋರಾಟಗಾರರಿಗೆ ಬೆಂಬಲ ಸೂಚಿಸುವಲ್ಲಿ ಅವರು ತೋರಿದ ‘ಜಿಪುಣತನ’ ಎನ್ನುವುದು ಹೆಚ್ಚು ಸೂಕ್ತ. ಪ್ರಜಾಪ್ರಭುತ್ವದಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ, ವಿಶೇಷವಾಗಿ ಯುವಜನತೆಯ ದಮನದ ವಿರುದ್ಧ ಪ್ರಭಾವಿ ವ್ಯಕ್ತಿಗಳು ಸ್ಪಷ್ಟ ನಿಲುವು ತಾಳಬೇಕಾದ ಅನಿವಾರ್ಯತೆ ಇದ್ದಾಗ, ಸಚಿನ್ ಅವರ ನಾಲಗೆ ಕದಲಲಿಲ್ಲ. ಅವರು ಬಳಸಿದ ಪದಗಳು ಅತ್ಯಂತ ಎಚ್ಚರಿಕೆಯ ಹಾಗೂ ತಟಸ್ಥ ಸ್ವರೂಪದ್ದಾಗಿದ್ದವು. ವ್ಯವಸ್ಥೆಯ ದೌರ್ಜನ್ಯವನ್ನು ಖಂಡಿಸುವ ಬದಲು, ಕೇವಲ ಸಾಮಾನ್ಯವಾದ ಹಿತವಚನಗಳನ್ನು ಹೇಳಿ ಕೈತೊಳೆದುಕೊಂಡಿದ್ದು ಪ್ರತಿಭಟನಾಕಾರರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

ಸಿಜೆಪಿ, ಯುವಜನ, ಕಾಕ್ರೋಚ್, ಬಾಲಿವುಡ್, ವಿದ್ಯಾರ್ಥಿ,ಕೇಂದ್ರ ಸರ್ಕಾರ, ಮೋದಿ ಸರ್ಕಾರ, ಚಿತ್ರರಂಗ, CJP, youth, cockroach, Bollywood, student, central government, Modi government, film industry,

ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಭಾವನೆ. ಆ ಕ್ರೀಡಾ ಜಗತ್ತಿಗೆ ಸಚಿನ್ ತೆಂಡುಲ್ಕರ್ ಅವರೇ ದೇವಾಧಿದೇವ ಎಂದು ಬಿಂಬಿತವಾದವರು. ಲಕ್ಷಾಂತರ ಮಧ್ಯಮ ವರ್ಗದವರು ಮತ್ತು ಬಡವರು ಸಚಿನ್ ಅವರ ಆಟವನ್ನು ನೋಡಿ, ಅವರನ್ನು ಬೆಂಬಲಿಸಿ, ಆರಾಧಿಸಿ ಭಾರತದ ಮರೆಯಲಾಗದ ‘ಹೀರೋ’ ಆಗಿ ಮಾಡಿದ್ದರು. ಇಂದು ಅದೇ ಕಡುಬಡವ ಹಾಗೂ ಮಧ್ಯಮ ವರ್ಗದ ಅಭಿಮಾನಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಬೀದಿಗೆ ಬಂದು ತಮ್ಮ ಭವಿಷ್ಯಕ್ಕಾಗಿ ಸಂಕಷ್ಟದಲ್ಲಿರುವಾಗ, ಸಚಿನ್ ಅವರಿಗೆ ನ್ಯಾಯಬದ್ಧವಾಗಿ ಬೆಂಬಲ ಸೂಚಿಸಬೇಕಾಗಿತ್ತು. ಆದರೆ, ಕ್ರೀಡಾಂಗಣದಲ್ಲಿ ಘಟಾನುಘಟಿ ಬೌಲರ್‌ಗಳ ಎದುರು ತೋರುತ್ತಿದ್ದ ದಿಟ್ಟತನವನ್ನು, ಯುವಜನರ ಬದುಕಿನ ಪ್ರಶ್ನೆಯಾಗಿರುವ ಸಿಜೆಪಿ ಪ್ರತಿಭಟನೆಯಂತಹ ಗಂಭೀರ ಸಾಮಾಜಿಕ ಬಿಕ್ಕಟ್ಟಿನ ವಿಚಾರದಲ್ಲಿ ತೋರಲು ಅವರು ವಿಫಲರಾಗಿದ್ದಾರೆ. ಕಷ್ಟದ ಸಮಯದಲ್ಲಿ ತಮ್ಮ ಬೆನ್ನಿಗೆ ನಿಲ್ಲದ ಈ ‘ದೇವರ’ ನೈಜ ಮುಖವಾಡ ಕಳಚಿದೆ ಎಂದು ಯುವಜನತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದೆ.

ಸಚಿನ್ ಅವರ ಈ ನಡೆ ಭಾರಿ ಟ್ರೋಲ್‌ಗೆ ಗ್ರಾಸವಾಗಲು ಮುಖ್ಯ ಕಾರಣ ಅವರ ದ್ವಂದ್ವ ನಿಲುವು. ಅವರ ಹೇಳಿಕೆ ಹೊರಬೀಳುತ್ತಿದ್ದಂತೆಯೇ, ಎಕ್ಸ್ ಹಾಗೂ ಫೇಸ್‌ಬುಕ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಅವರ ಹಳೆಯ ಪಂದ್ಯಗಳ ಶ್ರೇಷ್ಠತೆಯನ್ನಲ್ಲ, ಬದಲಾಗಿ ಅವರ ಇಂದಿನ ‘ಕೋಮಲ’ ನಿಲುವನ್ನು ಜನ ಅಣಕಿಸುತ್ತಿದ್ದಾರೆ. ದೇಶದ ನೈಜ ಸಮಸ್ಯೆಗಳಿಗಿಂತ, ತಮ್ಮ ವೈಯಕ್ತಿಕ ವರ್ಚಸ್ಸಿಗೆ ಹಾಗೂ ಬ್ರ್ಯಾಂಡ್ ಮೌಲ್ಯಕ್ಕೆ ಧಕ್ಕೆಯಾಗದಂತೆ ಕಾಪಾಡಿಕೊಳ್ಳುವ ಅವರ ಹತಾಶ ಪ್ರಯತ್ನವನ್ನು ನೆಟ್ಟಿಗರು ಕಟುವಾಗಿ ಟೀಕಿಸುತ್ತಿದ್ದಾರೆ.

ಸಚಿನ್ ಅವರ ಈ ನಡೆಯನ್ನು ಜನಸಾಮಾನ್ಯರು ಕೇವಲ ಮೌನ ಅಥವಾ ಎಚ್ಚರಿಕೆ ಎಂದು ಪರಿಗಣಿಸಿಲ್ಲ, ಬದಲಾಗಿ ಇದನ್ನು ‘ಅವಕಾಶವಾದ’ ಎಂದು ಬಣ್ಣಿಸುತ್ತಿದ್ದಾರೆ. ಭವಿಷ್ಯದ ಲಾಭಗಳು, ಸರ್ಕಾರದೊಂದಿಗಿನ ಉತ್ತಮ ಬಾಂಧವ್ಯ, ಕೋಟ್ಯಂತರ ರೂಪಾಯಿಗಳ ವಾಣಿಜ್ಯ ಒಪ್ಪಂದಗಳು ಹಾಗೂ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಸ್ವಾರ್ಥ ಈ ಮೌನ ಮತ್ತು ಸುತ್ತಿ ಬಳಸಿದ ಹೇಳಿಕೆಯ ಹಿಂದಿದೆ ಎಂಬುದು ವಿಶ್ಲೇಷಕರ ಸ್ಪಷ್ಟ ಅಭಿಪ್ರಾಯ. ಸಿಜೆಪಿ ಹೋರಾಟಗಾರರ ಪರ ನಿಂತರೆ ಆಡಳಿತಶಾಹಿಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಯವೇ ಅವರ ಈ ಅವಕಾಶವಾದಕ್ಕೆ ಮೂಲ ಕಾರಣವಾಗಿದೆ.

ಬ್ಯಾಟ್ ಹಿಡಿದು ಮೈದಾನದಲ್ಲಿ ನೂರಾರು ದಾಖಲೆಗಳನ್ನು ಬರೆದ ಸಚಿನ್ ತೆಂಡುಲ್ಕರ್, ಸಾಮಾಜಿಕ ಜವಾಬ್ದಾರಿಯ ಪಿಚ್ ಮೇಲೆ ‘ಡಕ್ ಔಟ್’ ಆಗಿದ್ದಾರೆ. ಟೀಕೆಗಳಿಂದ ತಪ್ಪಿಸಿಕೊಳ್ಳಲು ಅವರು ನೀಡಿದ ತಡವಾದ ಹೇಳಿಕೆಯು ಅವರ ಘನತೆಯನ್ನು ಹೆಚ್ಚಿಸುವ ಬದಲು, ಅವರ ಮೇಲಿದ್ದ ನಂಬಿಕೆಯನ್ನು ಮತ್ತಷ್ಟು ಕುಗ್ಗಿಸಿದೆ. ‘ಸಿಜೆಪಿ’ ಪ್ರತಿಭಟನಾಕಾರರ ಮೇಲಿನ ದಮನದ ವಿರುದ್ಧ ಮಾತನಾಡಲಾಗದ ಅವರ ಈ ಅವಕಾಶವಾದಿ ನಿಲುವು, ಇತಿಹಾಸದ ಪುಟಗಳಲ್ಲಿ ಅವರ ಕ್ರೀಡಾ ಸಾಧನೆಯ ಜೊತೆಗೊಂದು ಕಪ್ಪು ಚುಕ್ಕೆಯಾಗಿ ಸದಾ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ ಅಡ್ಡಿಯಾಗುತ್ತದೆ?

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ....

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟ ಕೇಂದ್ರದ ಕರಾಳ ಶಾಸನ

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಕರೆಘಂಟೆಯೇ?

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...