“ಎಐ” ಖಂಡಿತವಾಗಿಯೂ ವೈದ್ಯರಿಗೆ ಉತ್ತಮ ಸಹಾಯಕವಾಗಿರುತ್ತದೆ. ಇದು ವೈದ್ಯರನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಮಾನವ ಸಂವಹನವು ನಿರ್ಣಾಯಕವಾಗಿಸುವ ಮಾರ್ಗದರ್ಶಿ ಸಾಧನವಾಗಿದೆ. ಬೇಗನೆ ನಿರ್ಧಾರ ತೆಗೆದುಕೊಳ್ಳಬಹುದು ಮತ್ತು ಹೆಚ್ಚು ನಿಖರವಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಹೆಚ್ಚು ಸಮಯ ಬೇಡುವ ಪರೀಕ್ಷೆಗಳಿಗೆ ಹೋಗದೆ ಆರೈಕೆಯ ವೆಚ್ಚವನ್ನು ಕಡಿಮೆಯಾಗಿಸಲೂಬಹುದು
‘ಎಐ’ ಕೃತಕ ಬುದ್ಧಿಮತ್ತೆ, ಎನ್ನುವುದು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುವ ಕಂಪ್ಯೂಟರ್ ಅಥವಾ ರೊಬೋಟ್‌ಗೆ ಮಾನವರು ಮಾಡುವ ಕಾರ್ಯಗಳನ್ನು ಮಾಡಲು ಮಾನವ ಬುದ್ಧಿವಂತಿಕೆ ಮತ್ತು ವಿವೇಚನೆಯ ಅಗತ್ಯವಿರುವ ಸಾಮರ್ಥ್ಯವಾಗಿದೆ.
ಕೃತಕ ಬುದ್ಧಿಮತ್ತೆಯು ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಎಲ್ಲ ಕ್ಷೇತ್ರಗಳಂತೆ ಸದ್ಯ ವೈದ್ಯಕೀಯ ಕ್ಷೇತ್ರದಲ್ಲಿಯೂ ‘ಎಐ’ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಈಗ ಅದೇ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ‘ಎಐ’ ಬಳಕೆಯು ಹಲವು ರೀತಿಯ ಚಿಕಿತ್ಸೆಗಳಿಗೆ ಪ್ರಮುಖ ಬೆಂಬಲಿಗನಂತೆ ಸಹಾಯ ಮಾಡುತ್ತಿರುವುದು ಆಶ್ಚರ್ಯಕರವಾಗಿ ಉಳಿದಿಲ್ಲ.
ವೈದ್ಯಕೀಯ ಕ್ಷೇತ್ರವು ಹಿಂದೆ ರೋಗಗಳ ವಿರುದ್ಧ ಪ್ರತಿರೋಧಗಳನ್ನು ಒಡ್ಡಲು ಹೊಸ ಲಸಿಕೆಗಳು, ರೋಗ ಯಾವುದೆಂದು ಕಂಡುಹಿಡಿಯಲು ಹೊಸ ತಂತ್ರಜ್ಞಾನಗಳು, ಕಾಯಿಲೆಗಳನ್ನು ವಾಸಿ ಮಾಡಲು ಮತ್ತು ಚೇತರಿಸಿಕೊಳ್ಳಲು ಅಗತ್ಯವಿರುವ ಸಮಯವನ್ನು ಕಡಿಮೆ ಮಾಡಲು ಹೊಸ ಶಸ್ತ್ರಚಿಕಿತ್ಸೆಯ ತಂತ್ರಗಳು ಸೇರಿದಂತೆ ಅಸಂಖ್ಯಾತ ಆವಿಷ್ಕಾರಗಳನ್ನು ಕಾಲದಿಂದ ಕಾಲಕ್ಕೆ ಕೈಗೊಳ್ಳುತ್ತ ಬರುತ್ತಿದೆ. ಮುಂದುವರಿದ ಭಾಗದಂತೆ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾಗುತ್ತಿದೆ.
‘ಎಐ’ನಿಂದ ಯಾರಿಗೆಲ್ಲ ಪ್ರಯೋಜನವೇನು?
ಈಗ ‘ಎಐ’ ವೈದ್ಯಕೀಯ ಕ್ಷೇತ್ರಕ್ಕೆ, ವೈದ್ಯರು ಮತ್ತು ರೋಗಿಗಳ ಸಮಯ ಉಳಿತಾಯ ಹಾಗೂ ಹಣವನ್ನು ಉಳಿಸಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೂರದ ಹಳ್ಳಿಗಳಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆಯೆಂದು ಆರೋಗ್ಯ ಪರೀಕ್ಷಿಸಿಕೊಳ್ಳಲು ತಜ್ಞರನ್ನು ಭೇಟಿ ಮಾಡಲು ನಗರಕ್ಕೆ ಅಥವಾ ದೂರದ ಊರಿಗೆ ಪ್ರಯಾಣಿಸಬೇಕಾಗಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಪರೀಕ್ಷೆಗಳಿಗೆ ಮನೆಯಲ್ಲಿಯೇ ಕುಳಿತು ವೈದ್ಯರ ಮೂಲಕ ಚಿಕಿತ್ಸೆ ಪಡೆದುಕೊಳ್ಳಬಹುದು.
ವೈದ್ಯರು, ತಂತ್ರಜ್ಞರು ಮುಂತಾದ ಆರೋಗ್ಯ ಸೇವೆಯ ಸಿಬ್ಬಂದಿ ಕೂಡ ದೂರದಿಂದಲೇ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಪ್ರಯೋಗಾಲಯದ ತಂತ್ರಜ್ಞರು ಕೂಡ ರೋಗಿಗಳ ‘ಸಿಟಿ’ ‘ಎಂಆರ್‌ಐ’ ಮುಂತಾದ ಪರೀಕ್ಷೆಗಳನ್ನು ತನ್ನ ಸ್ಥಳದಿಂದಲೇ ಮಾಡಿ ಬೇರೆ ನಗರದಲ್ಲಿರುವ ವೈದ್ಯರಿಗೆ ಕಳುಹಿಸಬಹುದು. ವೈದ್ಯರು ಕೃತಕ ಬುದ್ಧಿಮತ್ತೆಯ ನೆರವಿನಿಂದ ರೋಗ ನಿರ್ಧಾರ ಕೈಗೊಂಡು ತಂತ್ರಜ್ಞರಿಗೆ ಕಳುಹಿಸಬಹುದು. ಇದರಿಂದ ರೋಗಿಗೆ ಪ್ರಯಾಣದ ಹಣ ಹಾಗೂ ಸಮಯ ಎರಡೂ ಉಳಿತಾಯವಾಗುತ್ತದೆ. ವೈದ್ಯರಿಗೂ ಕೂಡ ಹೆಚ್ಚು ರೋಗಿಗಳನ್ನು ಪರೀಕ್ಷಿಸಲು ಸಮಯವಾಗುತ್ತದೆ.
ಶಸ್ತ್ರಚಿಕಿತ್ಸೆ ಕೊಠಡಿಯಿಂದ ವಾರ್ಡ್‌ಗಳವರೆಗೆ, ಹೃದ್ರೋಗದಿಂದ ಮೂಳೆಚಿಕಿತ್ಸೆ ವಿಭಾಗದವರೆಗೆ ಎಐ ಸಾಧನಗಳನ್ನು ದೇಶದಾದ್ಯಂತ ಪ್ರಮುಖ ಆಸ್ಪತ್ರೆಗಳಲ್ಲಿ ಹಲವು ಕಾರ್ಯಗಳಿಗಾಗಿ ಸಂಯೋಜಿಸಲಾಗಿದೆ. ಈ ರೀತಿಯ ಉನ್ನತ ಮಟ್ಟದ ವೈದ್ಯಕೀಯ ಸೌಕರ್ಯಗಳ ಕೇಂದ್ರವು ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿದೆ.
ಈ ಸುದ್ದಿ ಓದಿದ್ದೀರಾ? ಬಂಡಾಯ ನನಗೆ ಹೊಸದಲ್ಲ, ಮತ್ತೆ ಪಕ್ಷ ಸಂಘಟಿಸುತ್ತೇನೆ; ಅಜಿತ್ ನಡೆಗೆ ಶರದ್ ಪವಾರ್ ಪ್ರತಿಕ್ರಿಯೆ
ವೈದ್ಯರಂಗವನ್ನು ಬದಲಿಸುವುದಿಲ್ಲ, ಆದರೆ ಮಾರ್ಗದರ್ಶಿ
“ಎಐ” ಖಂಡಿತವಾಗಿಯೂ ವೈದ್ಯರಿಗೆ ಉತ್ತಮ ಸಹಾಯಕವಾಗಿರುತ್ತದೆ. ಆದರೆ ಇದು ವೈದ್ಯರನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಮಾನವ ಸಂವಹನವು ನಿರ್ಣಾಯಕವಾಗಿಸುವ ಮಾರ್ಗದರ್ಶಿ ಸಾಧನವಾಗಿದೆ. ಬೇಗನೆ ನಿರ್ಧಾರ ತೆಗೆದುಕೊಳ್ಳಬಹುದು ಮತ್ತು ಹೆಚ್ಚು ನಿಖರವಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಹೆಚ್ಚು ಸಮಯವಿರುವ ಪರೀಕ್ಷೆಗಳಿಗೆ ಹೋಗದೆ ಆರೈಕೆಯ ವೆಚ್ಚವನ್ನು ಕಡಿಮೆಯಾಗಬಹುದು ಎನ್ನುತ್ತಾರೆ ವೈದ್ಯ ಪರಿಣಿತರು.
“ನಮ್ಮ ಆಸ್ಪತ್ರೆಯು ಕಳೆದ ನಾಲ್ಕು ವರ್ಷಗಳಿಂದ ಮೂತ್ರಶಾಸ್ತ್ರದಿಂದ ಮೂಳೆಚಿಕಿತ್ಸೆಯವರೆಗಿನ ವಿಭಾಗಗಳಲ್ಲಿ ಹೊಸ ಎಐ ಪರಿಕರಗಳನ್ನು ಬಳಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ದೂರದಲ್ಲಿರುವ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಅವುಗಳನ್ನು ವಿಸ್ತರಿಸಲಾಗುತ್ತಿದೆ. ಹಾಗೆಯೆ ಹಿಂದೆ, ವೈದ್ಯರು ಬುದ್ಧಿಮಾಂದ್ಯತೆಯ ತೀವ್ರತೆಯನ್ನು ತಿಳಿಯಲು ಹಾಗೂ ಮೆದುಳಿನ ನಿರ್ದಿಷ್ಟ ಪ್ರದೇಶವನ್ನು (ಹಿಪ್ಪೊಕ್ಯಾಂಪಸ್) ಅಳೆಯಲು ಸಾಂಪ್ರದಾಯಿಕ ಎಂಆರ್‌ಐ ಸ್ಕ್ಯಾನ್ ಪರೀಕ್ಷೆಗಳಿಗೆ ಒಡ್ಡಿಕೊಳ್ಳಬೇಕಿತ್ತು. ಇದು ಕಷ್ಟದ ಕೆಲಸದ ಜೊತೆ ಹೆಚ್ಚು ಸಮಯ ಹಿಡಿಯುತ್ತಿತ್ತು. ಆದರೆ ಈಗ ಹೊಸ ಎಐ ಉಪಕರಣಗಳೊಂದಿಗೆ ವೈದ್ಯರು ಮೆದುಳಿನ ಪ್ರದೇಶದ ಎರಡೂ ಬದಿಗಳನ್ನು ಸುಲಭವಾಗಿ ಅಳೆಯಬಹುದು” ಎನ್ನುತ್ತಾರೆ ಚೆನ್ನೈನ ಪ್ರಮುಖ ಆಸ್ಪತ್ರೆಯಾದ ಕಾವೇರಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಮುಖ್ಯ ವಿಕಿರಣಶಾಸ್ತ್ರಜ್ಞ ಡಾ. ಐಯಪ್ಪನ್ ಪೊನ್ನುಸ್ವಾಮಿ.
ಚಾಟ್‌ಜಿಪಿಟಿ ಕೃತಕ ಬುದ್ಧಿಮತ್ತೆಯ ಒಂದು ಸಾಧನ
ಚಾಟ್‌ಜಿಪಿಟಿ ಕೂಡ ಮತ್ತೊಂದು ಎಐ ಸಾಧನವಾಗಿದ್ದು, ಇದನ್ನು ಚಿಕಿತ್ಸೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಳಸಲಾಗುತ್ತದೆ. ಇದು ರೋಗಿಗಳ ಎಲ್ಲ ವೈದ್ಯಕೀಯ ವರದಿಗಳನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಚಿಕಿತ್ಸೆ ಮತ್ತು ರೋಗನಿರ್ಣಯದ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ರೋಗಿಗೆ ಅಗತ್ಯವಿರುವ ವಿಶೇಷ ಆರೈಕೆಯನ್ನು ನಿರ್ಧರಿಸಲು ಇದು ವೈದ್ಯರಿಗೆ ಸಹಾಯ ಮಾಡುತ್ತದೆ.
ಇವೆರಡು ಸಾಧನಗಳ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯು ಶೇ 80 ರಿಂದ 90ರಷ್ಟು ನಿಖರವಾಗಿದೆ. ಈ ಸಾಧನಗಳನ್ನು ಮಾರ್ಗದರ್ಶಿಯಾಗಿ ಮಾತ್ರ ಬಳಸಬೇಕು. ಏಕೆಂದರೆ ಇವೆರಡು ತಂತ್ರಜ್ಞಾನಗಳು ರೋಗಗಳನ್ನು ತಪ್ಪಾಗಿ ಊಹಿಸುವ ಸಾಧ್ಯತೆಯಿದೆ. ಪ್ರಸ್ತುತ, ಇವೆರಡು ತಂತ್ರಜ್ಞಾನದ ಅಲ್ಗಾರಿದಮ್‌ಗಳು ನಿಖರವಾದ ಫಲಿತಾಂಶಗಳನ್ನು ನೀಡಲು ಅಷ್ಟು ಪ್ರಬಲವಾಗಿಲ್ಲ. ಸ್ವಯಂಚಾಲಿತ ಕ್ಷ-ಕಿರಣಗಳು ಮತ್ತು ಎಂಆರ್‌ಐಗಳೊಂದಿಗೆ ಇವು ಕೇವಲ ಶೇ 88 ರಷ್ಟು ನಿಖರತೆ ಹೊಂದಿವೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಈ ಸುದ್ದಿ ಓದಿದ್ದೀರಾ? ಪುಟಿನ್ ಬಾಣಸಿಗ ಪ್ರಿಗೋಷಿನ್ ಯಾರು? ಪುಟಿನ್ ವಿರುದ್ಧವೇ ಬಂಡಾಯವೆದ್ದಿದ್ದೇಕೆ?
ಉದ್ಯೋಗ ಸೃಷ್ಟಿಗೆ 2 ದಶಕ ಬೇಕು
ಇ-ಕಾಮರ್ಸ್ ಅಥವಾ ಬ್ಯಾಂಕಿಂಗ್ ಕ್ಷೇತ್ರಕ್ಕೆ ‘ಎಐ’ ನೀಡುವಷ್ಟು ಅನುಕೂಲದ ವೇಗತೆ ಆರೋಗ್ಯ ಸೇವೆಗಳಿಗೆ ದೊರಕುತ್ತಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ‘ಎಐ’ ಮೂಲಕ ಉದ್ಯೋಗ ಸೃಷ್ಟಿಸಿಕೊಳ್ಳಬೇಕಾದರೆ ಕನಿಷ್ಠ 2 ದಶಕಗಳಾದರೂ ಬೇಕಾಗುತ್ತದೆ. ಸದ್ಯ ಆಸ್ಪತ್ರೆಗಳು ‘ಎಐ’ಅನ್ನು ಮಾರ್ಗದರ್ಶಿ ಸಾಧನವಾಗಿ ಮಾತ್ರ ಬಳಸುತ್ತದೆ ಮತ್ತು ಅದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ.
‘ಎಐ’ ಉಪಕರಣಗಳು ಕೆಲಸವನ್ನು ಸುಲಭಗೊಳಿಸಿದರೂ, ವೈದ್ಯರು ಜಾಗರೂಕರಾಗಿರುತ್ತಾರೆ. ಏಕೆಂದರೆ ಅಂತಿಮವಾಗಿ ರೋಗನಿರ್ಣಯವನ್ನು ವೈದ್ಯರು ನಿರ್ಧರಿಸುತ್ತಾರೆ. ಕಂಪ್ಯೂಟೆಡ್ ಇಮೇಜ್‌ಗಳನ್ನು ವೈದ್ಯರು ನೋಡಿದ ನಂತರ ಅಂತಿಮ ವರದಿಯನ್ನು ಸಿದ್ಧಪಡಿಸುವ ಮೊದಲು ಕೃತಕ ಬುದ್ಧಿಮತ್ತೆ ಮೂಲಕ ವಿಮರ್ಶಿಸಿ ರೋಗಗಳ ನಿರ್ಧಾರಕ್ಕೆ ಬರುತ್ತಾರೆ.
ಆಂಕೊಲಜಿ, ನ್ಯೂರಾಲಜಿ, ಕಾರ್ಡಿಯಾಲಜಿ, ಹಿಸ್ಟೋಪಾಥಾಲಜಿ ಮತ್ತು ವಿಕಿರಣಶಾಸ್ತ್ರದ ಕೆಲವು ವಿಭಾಗಗಳು ಕೃತಕ ಬುದ್ಧಿಮತ್ತೆ ಮೂಲಕ ಡೇಟಾವನ್ನು ರೆಕಾರ್ಡ್ ಮಾಡಲು ಮತ್ತು ಆಡಳಿತಾತ್ಮಕ ಕಾರ್ಯಗಳಲ್ಲಿ ಸಹಾಯ ಮಾಡಲು ತಿಂಗಳಲ್ಲಿ ಒಂದಷ್ಟು ಸಮಯವನ್ನು ಉಳಿಸುತ್ತದೆ.
ಎಐ ಪರಿಹಾರವಲ್ಲ, ವೈದ್ಯರೆ ಅಂತಿಮ
ಈಗ ಅನೇಕ ಸಂಕೀರ್ಣ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸಕರಿಗೆ ರೊಬೋಟ್‌ಗಳು ಸಹಾಯ ಮಾಡುತ್ತಿವೆ. ಈ ರೊಬೋಟ್‌ಗಳಿಗೆ ಕೃತಕ ಬುದ್ಧಿಮತ್ತೆ ಬೆಂಬಲ ನೀಡುತ್ತಿದೆ. ಆದಾಗ್ಯೂ, ಎಲ್ಲ ರೋಗಿಗಳು ಶಸ್ತ್ರಚಿಕಿತ್ಸೆಯಂತಹ ಚಿಕಿತ್ಸೆಗಳಲ್ಲಿ ‘ಎಐ’ ಅನ್ನು ಬಳಸಲು ಒಪ್ಪುವುದಿಲ್ಲ. ಕೃತಕ ಬುದ್ಧಿಮತ್ತೆ ಬೆಂಬಲದ ರೊಬೋಟಿಕ್ ಶಸ್ತ್ರಚಿಕಿತ್ಸೆ ಬಹುತೇಕ ಉತ್ತಮ ಫಲಿತಾಂಶ ನೀಡಿದರೂ ಕೆಲವೊಮ್ಮೆ ಅಡ್ಡ ಪರಿಣಾಮವಾಗುವ ಸಾಧ್ಯತೆಗಳಿವೆ.
ಪ್ರಪಂಚವು ವಿಕಿರಣಶಾಸ್ತ್ರಜ್ಞರ ಕೊರತೆಯನ್ನು ಎದುರಿಸುತ್ತಿರುವ ಕಾರಣದಿಂದ ಭವಿಷ್ಯದಲ್ಲಿ, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‌ಗಳನ್ನು ಬದಲಾಯಿಸಬಹುದು. ಇದಕ್ಕೆ ‘ಎಐ’ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹಾಗೆಯೇ ಸಮಯವನ್ನು ಉಳಿಸಲು ಕೃತಕ ಬುದ್ಧಿಮತ್ತೆ ಸಹಾಯ ಮಾಡುವುದರಿಂದ ಒಬ್ಬ ವೈದ್ಯರು 10 ವೈದ್ಯರ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಈ ತಂತ್ರಜ್ಞಾನವು ಸಣ್ಣಪುಟ್ಟ ರೋಗಗಳಿಗೆ ಪರಿಹಾರ ಸೂಚಿಸಬಹುದು ಆದರೆ ಸಂಕೀರ್ಣ ಪರಿಸ್ಥಿತಿಗಳಿಗೆ ‘ಎಐ’ ಜೊತೆಗೆ ಮಾನವ ಹಸ್ತಕ್ಷೇಪದ ಅಗತ್ಯವಿದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.
ಈ ಸುದ್ದಿ ಓದಿದ್ದೀರಾ? ಶರದ್ ಪವಾರ್‌ಗೆ ಕೈಕೊಟ್ಟು ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಪಟ್ಟ ಅಲಂಕರಿಸಿದ ಅಜಿತ್ ಪವಾರ್
‘ಎಐ’ಗಾಗಿ ಭಾರತದಲ್ಲಿ 12 ಬಿಲಿಯನ್ ಡಾಲರ್ ಹೂಡಿಕೆ
ಭಾರತೀಯ ಎಐ ಹೆಲ್ತ್‌ಕೇರ್ ಮಾರುಕಟ್ಟೆ ವರದಿಯ ಪ್ರಕಾರ, ದೊಡ್ಡ ತಂತ್ರಜ್ಞಾನ ಕಂಪನಿಗಳು ಕೃತಕ ಬುದ್ಧಿಮತ್ತೆ ಹೆಲ್ತ್‌ಕೇರ್ ಆವಿಷ್ಕಾರಗಳಿಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಹೂಡಲು ಯೋಜಿಸಿವೆ. ಭಾರತದಲ್ಲಿ 2025ರ ವೇಳೆಗೆ 11.78 ಶತಕೋಟಿ ಡಾಲರ್ ಹೂಡಿಕೆ ಮಾಡಲಿವೆ. ಇದು 2035ರ ವೇಳೆಗೆ ದೇಶದ ಜಿಡಿಪಿಯನ್ನು 1 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುತ್ತದೆ ಎಂದು ವರದಿ ಹೇಳುತ್ತದೆ.
30 ಕೋಟಿ ಉದ್ಯೋಗಿಗಳಿಗೆ ಆಪತ್ತು
ಕೃತಕ ಬುದ್ಧಿಮತ್ತೆ ಕೆಲಸವನ್ನು ಸುಲಭಗೊಳಿಸುವುದು ಮಾತ್ರವಲ್ಲ ಮುಂದಿನ ದಿನಗಳಲ್ಲಿ 30 ಕೋಟಿ ಪೂರ್ಣ ಸಮಯದ ಉದ್ಯೋಗಗಳಿಗೆ ಕತ್ತರಿ ಹಾಕಲಿದೆ. ಭವಿಷ್ಯದಲ್ಲಿ ವಿಶ್ವದಾದ್ಯಂತ ಕೋಟ್ಯಂತರ ಜನರು ಕೆಲಸ ಕಳೆದುಕೊಳ್ಳುತ್ತಾರೆ. ಇವರ ಜಾಗದಲ್ಲಿ ಎಐ ಆವರಿಸಲಿದೆ. ಅಮೆರಿಕ ಮತ್ತು ಯೂರೋಪ್‌ನಲ್ಲಿನ ಶೇ.25ರಷ್ಟು ಉದ್ಯೋಗಿಗಳ ಕೆಲಸವನ್ನು ಎಐ ಬದಲಿಸಬಹುದು. ಆದಾಗ್ಯೂ, ಹೊಸ ಉದ್ಯೋಗಗಳು ಮತ್ತು ಉತ್ಪಾದಕತೆಯ ವೇಗ ಹೆಚ್ಚುತ್ತದೆ.
ಎಐ ಅಳವಡಿಕೆಗೆ ಐಸಿಎಂಆರ್ನಿಂದ ನೀತಿಸಂಹಿತೆ
ದೇಶದ ಜೈವಿಕ ವೈದ್ಯಕೀಯ (ಬಯೊಮೆಡಿಕಲ್) ಸಂಶೋಧನೆ ಮತ್ತು ಆರೋಗ್ಯಸೇವೆ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ ವಿಚಾರವಾಗಿ ಇದೇ ಮೊದಲ ಬಾರಿಗೆ ನೀತಿಸಂಹಿತೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊರಡಿಸಿದೆ. ಆರೋಗ್ಯ ಸಂಶೋಧನಾ ವಿಭಾಗ ಮತ್ತು ಐಸಿಎಂಆರ್‌ನ ‘ಕೃತಕ ಬುದ್ಧಿಮತ್ತೆ’ ಘಟಕವು ಈ ನೀತಿಸಂಹಿತೆಯನ್ನು ರೂಪಿಸಿವೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಉಪಕರಣಗಳನ್ನು ಅಭಿವೃದ್ಧಿಪಡಿಸಲು ನೈತಿಕ ಚೌಕಟ್ಟನ್ನು ರೂಪಿಸಲಾಗಿದೆ
ಆರೋಗ್ಯ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ ಅಳವಡಿಕೆಯು ಜನರ ಪಾಲ್ಗೊಳ್ಳುವಿಕೆಯ ಮೂಲಕ ದೊರೆಯುವ ದತ್ತಾಂಶದ ಮೇಲೆ ಅವಲಂಭಿಸಿದೆ. ಜೊತೆಗೆ, ಸಂಭಾವ್ಯ ಪಕ್ಷಪಾತಿ ಧೋರಣೆ, ದತ್ತಾಂಶ ನಿರ್ವಹಣೆ, ಸ್ವಾಯತ್ತತೆ, ದುಷ್ಪರಿಣಾಮ ತಗ್ಗಿಸುವಿಕೆ, ವೃತ್ತಿಪರತೆ, ದತ್ತಾಂಶ ಹಂಚಿಕೊಳ್ಳುವಿಕೆ ಮತ್ತು ಗೌಪ್ಯತೆಯಂಥ ಸಮಸ್ಯೆಗಳೂ ತಲೆದೂರುತ್ತವೆ. ಹೀಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿ ನೀತಿಸಂಹಿತೆ ಹೊಂದುವುದು ಅತ್ಯಗತ್ಯ ಎಂದು ಐಸಿಎಂಆರ್ ತಿಳಿಸಿದೆ.
ಬಳಕೆಯಲ್ಲಿರುವ ಕೆಲವು ಎಐ ಸಾಧನಗಳು
- Urologiq: ನಿಖರವಾದ ಗಾತ್ರ, ಮೂತ್ರಪಿಂಡದ ಕಲ್ಲುಗಳ ಸ್ಥಳವನ್ನು ಪತ್ತೆಹಚ್ಚುತ್ತದೆ
- CAD: ದೇಹದಲ್ಲಿ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಕಂಪ್ಯೂಟರ್ ಸಹಾಯದ ಸಾಧನಗಳು
- ಬೋನ್ ಲೇಬಲಿಂಗ್ ‘ಎಐ’ ಟೂಲ್: ಬಹು ಮೂಳೆ ಮುರಿತಗಳ ಸಂದರ್ಭದಲ್ಲಿ ನಿಖರವಾದ ಮೂಳೆಗಳನ್ನು ಗುರುತಿಸುತ್ತದೆ
- ಲಾಂಗ್ವೇಜ್ ಲರ್ನಿಂಗ್ ಮಾಡಲ್: ರೋಗ ನಿರ್ಣಯದ ವೈದ್ಯಕೀಯ ನಿರ್ಧಾರ ಕೈಗೊಳ್ಳುವಿಕೆಗೆ ಸಹಾಯ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ನೀಡುತ್ತದೆ
- ಎಐ ಕ್ಯಾಮೆರಾ: ಕ್ಯಾಮೆರಾ ರೋಗಿಯನ್ನು ಬಹು ಕೋನಗಳಲ್ಲಿ ಸ್ಕ್ಯಾನ್ ಮಾಡುತ್ತದೆ