ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ 2 ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

Date:

ದಕ್ಷಿಣ ಇರಾನ್‌ನ ಲಾರಕ್ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ಜೋರ್ಡಾನ್‌ನಲ್ಲಿರುವ ಎರಡು ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ದಾಳಿಯನ್ನು ‘ಆಕ್ರಮಣಕಾರನಿಗೆ ಶಿಕ್ಷೆ’ ಎಂದು ಕರೆದಿದೆ.

- Advertisement -

ಭಾನುವಾರ ನಡೆದ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ದಾಳಿ ನಡೆಸಿದೆ ಎಂದು IRGC ತಿಳಿಸಿದೆ. ಜೋರ್ಡಾನ್‌ನ ಕಿಂಗ್ ಹುಸೇನ್ ಮತ್ತು ಅಲ್ ಅಝ್ರಾಕ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಹಾಗೂ ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯಲ್ಲಿ ಸೇನಾ ನೆಲೆಗಳಲ್ಲಿದ್ದ ತಾಂತ್ರಿಕ ಮತ್ತು ದುರಸ್ತಿ ಮೂಲಸೌಕರ್ಯ ಹಾಗೂ ಯುದ್ಧವಿಮಾನಗಳ ನಿಯೋಜನಾ ಪ್ರದೇಶಗಳು ನಾಶವಾಗಿದ್ದು, ಗಮನಾರ್ಹ ಹಾನಿ ಸಂಭವಿಸಿದೆ ಎಂದು IRGC ಹೇಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಆದರೆ, ಇರಾನ್ ದಾಳಿ ಘೋಷಿಸಿದ ಕೆಲವೇ ಹೊತ್ತಿನಲ್ಲಿ ಜೋರ್ಡಾನ್‌ ತನ್ನ ವಾಯುಪ್ರದೇಶ ಪ್ರವೇಶಿಸಿದ್ದ ಎಂಟು ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆ ಮೂಲಕ ಹೊಡೆದುರುಳಿಸಿರುವುದಾಗಿ ತಿಳಿಸಿದೆ. ಎರಡೂ ಸೇನಾ ನೆಲೆಗಳಲ್ಲಿ ಯಾವುದೇ ಗಾಯಾಳುಗಳಾಗಿಲ್ಲ ಎಂದು ಜೋರ್ಡಾನ್‌ ಸೇನೆ ಹೇಳಿದೆ.

ಇದರ ಬೆನ್ನಲ್ಲೇ ಸೋಮವಾರ ಮತ್ತೊಂದು ಬೆಳವಣಿಗೆ ನಡೆದಿದ್ದು, ಹಾರ್ಮುಜ್ ಜಲಸಂಧಿಯ ಮೇಲೆ ಅಮೆರಿಕದ MQ-9 ರೀಪರ್ ಡ್ರೋನ್‌ನ್ನು ಹೊಡೆದುರುಳಿಸಿರುವುದಾಗಿ ಹಾಗೂ ಇರಾನ್‌ನ ಫಾರ್ಸ್ ಮತ್ತು ಮೆಹರ್ ಸುದ್ದಿಸಂಸ್ಥೆಗಳು ವರದಿ ಮಾಡಿರುವಂತೆ, ದೀರ್ಘಶ್ರೇಣಿಯ ಅಮೆರಿಕದ MQ-9 ಡ್ರೋನ್‌ನ್ನು ಇರಾನ್‌ನ ವಾಯು ರಕ್ಷಣಾ ಪಡೆಗಳು ತಡೆದಿದ್ದು, ಬಳಿಕ ಅದು ಕೊಲ್ಲಿಯಲ್ಲಿ ಪತನಗೊಂಡಿದೆ ಎಂದು IRGC ಹೇಳಿದೆ.

ಲಾರಕ್ ದ್ವೀಪದ ಮೇಲಿನ ಅಮೆರಿಕದ ದಾಳಿಯ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಇರಾನ್‌ಗೆ ಯುದ್ಧದ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. “ನಾವು ಯುದ್ಧವನ್ನು ಹುಡುಕುತ್ತಿಲ್ಲ. ಆದರೆ ಯಾವುದೇ ಆಕ್ರಮಣದ ಎದುರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ” ಎಂಬ ಸಂದೇಶ ರವಾನಿಸಿದ್ದಾರೆ.

ಶಾಂಘೈ ಸಹಕಾರ ಸಂಘಟನೆ (SCO) ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ಗೆ ತೆರಳುವ ವೇಳೆ ಪೆಜೆಶ್ಕಿಯನ್ ಈ ಹೇಳಿಕೆ ನೀಡಿದ್ದಾರೆ. ಲಾರಕ್ ದ್ವೀಪದ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರ ತೀರಿಸುವುದಾಗಿ ಇರಾನ್ ಈಗಾಗಲೇ ಎಚ್ಚರಿಕೆ ನೀಡಿತ್ತು.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಬಾಂಬ್ ದಾಳಿ ನಡೆದಂತೆ ತೋರಿಸುವ AI-ಸೃಷ್ಟಿತ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ವಿಮಾನಗಳ ಮೇಲಿನಿಂದ ನೋಡುತ್ತಿರುವ ದೃಶ್ಯದಲ್ಲಿ ತೈಲ ಸಂಗ್ರಹಣಾ ಟ್ಯಾಂಕ್ ಮತ್ತು ತೈಲ ಸಾಗಣೆ ಹಡಗು ಸ್ಫೋಟಗೊಳ್ಳುತ್ತಿರುವಂತೆ ತೋರಿಸಲಾಗಿದೆ. “ಖಾರ್ಗ್ ದ್ವೀಪವನ್ನು ಚೂರುಚೂರು ಮಾಡಲಾಗುತ್ತಿದೆ!!!” ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಆದರೆ ಖಾರ್ಗ್ ದ್ವೀಪದ ಮೇಲೆ ವಾಸ್ತವವಾಗಿ ದಾಳಿ ನಡೆದಿರುವುದಕ್ಕೆ ಯಾವುದೇ ಸ್ವತಂತ್ರ ಪುರಾವೆ ಲಭ್ಯವಾಗಿಲ್ಲ.

ಯುದ್ಧ ಆರಂಭಕ್ಕೂ ಮುನ್ನ ಖಾರ್ಗ್ ದ್ವೀಪವು ಇರಾನ್‌ನ ಬಹುತೇಕ ಕಚ್ಚಾ ತೈಲ ರಫ್ತಿನ ಪ್ರಮುಖ ಕೇಂದ್ರವಾಗಿತ್ತು. ಹೀಗಾಗಿ ಅದು ಇರಾನ್‌ನ ಆರ್ಥಿಕತೆಗೆ ಅತ್ಯಂತ ಮಹತ್ವದ ತಾಣವಾಗಿದೆ. ಯುದ್ಧ ಆರಂಭವಾದ ಬಳಿಕದಿಂದಲೇ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಅಥವಾ ನಾಶಪಡಿಸುವ ಬೆದರಿಕೆಯನ್ನು ಟ್ರಂಪ್ ಹಲವು ಬಾರಿ ಹಾಕಿದ್ದಾರೆ.

ಲಾರಕ್ ದ್ವೀಪದ ಮೇಲಿನ ಅಮೆರಿಕದ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಇರಾನ್ ನಡೆಸಿರುವ ಕ್ಷಿಪಣಿ ದಾಳಿಗಳು ಎರಡೂ ದೇಶಗಳ ನಡುವಿನ ಸೇನಾ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕವನ್ನು ಹೆಚ್ಚಿಸಿವೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಭಾನುವಾರದ ದಾಳಿಯನ್ನು ‘ಆಕ್ರಮಣಕಾರಿ ಕೃತ್ಯ’ ಅಲ್ಲ, ಸೀಮಿತ ಮತ್ತು ನಿಖರ ಕಾರ್ಯಾಚರಣೆ ಎಂದು ಸಮರ್ಥಿಸಿಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಸಮುದ್ರ ಗಣಿಗಳನ್ನು ಅಳವಡಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಹೇಳಿದೆ.

ಆದರೆ ಇರಾನ್‌ನ ಫಾರ್ಸ್ ಸುದ್ದಿಸಂಸ್ಥೆ, “ಅಮೆರಿಕ-ಝಿಯೋನಿಸ್ಟ್ ಶತ್ರು” ನಡೆಸಿದ ದಾಳಿಯಲ್ಲಿ ಇರಾನ್ ಸೈನಿಕರು ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಆದರೆ ನಿಖರ ಸಂಖ್ಯೆಯನ್ನು ನೀಡಿಲ್ಲ. ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವೇ ಎರಡೂ ದೇಶಗಳ ನಡುವಿನ ಸಂಘರ್ಷದ ಪ್ರಮುಖ ಕೇಂದ್ರವಾಗಿದೆ. ಈ ಜಲಮಾರ್ಗದ ಮೂಲಕ ಪ್ರತಿದಿನ ಅಪಾರ ಪ್ರಮಾಣದ ತೈಲ ಸಾಗಣೆಯಾಗುತ್ತದೆ. ಅಮೆರಿಕ, ತನ್ನ ಸೇನೆಯ ರಕ್ಷಣೆಯಲ್ಲಿ ಲಕ್ಷಾಂತರ ಬ್ಯಾರೆಲ್ ತೈಲ ಜಲಸಂಧಿಯ ಮೂಲಕ ಸಾಗುತ್ತಿದೆ ಎಂದು ಹೇಳುತ್ತಿದ್ದರೆ, ಇರಾನ್ ಜಲಮಾರ್ಗವನ್ನು ತಾನು ಮುಚ್ಚಿರುವುದಾಗಿ ಹೇಳಿಕೊಂಡಿದೆ. ಇದೇ ವೇಳೆ ಜಲಸಂಧಿಯಲ್ಲಿ ಹಡಗುಗಳ ಮೇಲೆ ಬಹುತೇಕ ಪ್ರತಿದಿನ ದಾಳಿ ನಡೆಯುತ್ತಿರುವ ವರದಿಗಳೂ ಬಂದಿವೆ.

ಇದನ್ನೂ ಓದಿ: ಇರಾನ್-ಅಮೆರಿಕ ದಾಳಿ, ಪ್ರತಿದಾಳಿ: ಶಾಂತಿ ಮರೀಚಿಕೆ; ಕದನ ವಿರಾಮ ತತ್ತರ!

ಇರಾನ್ ಮೇಲೆ ಆರ್ಥಿಕ ಒತ್ತಡ ಹೆಚ್ಚಿಸಲು ಟ್ರಂಪ್ ಆಡಳಿತ ಇತ್ತೀಚೆಗೆ ಹೊಸ ಕ್ರಮಗಳನ್ನು ಘೋಷಿಸಿದೆ. ಇರಾನ್‌ನೊಂದಿಗೆ ವ್ಯಾಪಾರ ನಡೆಸುವ ದೇಶಗಳು ಮತ್ತು ಕಂಪನಿಗಳ ಮೇಲೂ ದ್ವಿತೀಯ ಹಂತದ ನಿರ್ಬಂಧಗಳನ್ನು (Secondary Sanctions) ವಿಧಿಸುವ ಮೂಲಕ ಇರಾನ್ ಅನ್ನು ಜಾಗತಿಕ ಆರ್ಥಿಕ ವ್ಯವಸ್ಥೆಯಿಂದ ಪ್ರತ್ಯೇಕಿಸುವ ಪ್ರಯತ್ನವನ್ನು ಅಮೆರಿಕ ಆರಂಭಿಸಿದೆ. ಆದರೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಅಗತ್ಯಬಿದ್ದರೆ ಇರಾನ್ ವಿರುದ್ಧ ಸೇನಾ ಬಲ ಬಳಸಲು ಅಮೆರಿಕ ಸಿದ್ಧವಿದೆ ಎಂದು ಎಚ್ಚರಿಸಿದ್ದಾರೆ.

ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದೆ ಮತ್ತು ಅಮೆರಿಕದ ನಿರ್ಬಂಧಗಳು ಹಾಗೂ ನೌಕಾಪಡೆಯ ದಿಗ್ಬಂಧನದಿಂದ ದೇಶ ಆರ್ಥಿಕ ಕುಸಿತದ ಅಂಚಿನಲ್ಲಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಳ್ಳಿಹಾಕಿದ್ದಾರೆ. ಹಾರ್ಮುಜ್ ಮೂಲಕ ಹೆಚ್ಚಿನ ಪ್ರಮಾಣದ ತೈಲ ಸಾಗಣೆಯಾಗುತ್ತಿದೆ ಎಂಬ ಅಮೆರಿಕದ ಹೇಳಿಕೆಗಳು ಇಂಧನ ಮಾರುಕಟ್ಟೆಯನ್ನು ಪ್ರಭಾವಿಸಲು ನಡೆಸುತ್ತಿರುವ ಪ್ರಯತ್ನ ಎಂದು ಅವರು ಆರೋಪಿಸಿದ್ದಾರೆ.

ಈ ಬೆಳವಣಿಗೆಗಳ ನಡುವೆಯೂ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಪೂರೈಕೆ ಕುರಿತ ಅನಿಶ್ಚಿತತೆ ಮುಂದುವರಿದಿದ್ದು, ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗಿಂತ ಹೆಚ್ಚಾಗಿದೆ. ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧ ಆರಂಭಿಸಿದಾಗ ಇದು 3 ಡಾಲರ್‌ಗಿಂತ ಕಡಿಮೆಯಿತ್ತು. ತೈಲ ಬೆಲೆ ಏರಿಕೆಯಿಂದ ಅಮೆರಿಕದಲ್ಲಿ ಹಣದುಬ್ಬರದ ಒತ್ತಡ ಹೆಚ್ಚಾಗುತ್ತಿದ್ದು, ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಮೇಲೆ ಇದು ರಾಜಕೀಯ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...

ಔರಾದ್‌ | ನೀರು, ಆರೋಗ್ಯ ಸೇವೆ ಪರಿಶೀಲನೆ; ಕಾರ್ಮಿಕರ ಸಮಸ್ಯೆ ಆಲಿಸಿದ ಸಿಇಒ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಸೇವೆ ಹಾಗೂ ಅಭಿವೃದ್ಧಿ...

ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ತೀವ್ರ ಮಳೆ ಕೊರತೆಯಿಂದ ಕೂಡಿದ್ದ ಮುಂಗಾರು ಹಂಗಾಮು ಕೊನೆಗೊಂಡಿದೆ. ಹಿಂಗಾರು ಆರಂಭವಾಗಿದೆ....