ಅಲ್ಲಮನ ಅನನ್ಯ ಪದಪ್ರಯೋಗಗಳು | ಸಂಗಸುಖ

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸಂಗಸುಖ
ಲಿಂಗವನರಿಯದೆ
ಏನನರಿದಡೆಯೂ ಫಲವಿಲ್ಲ,
ಲಿಂಗವನರಿದ ಬಳಿಕ
ಮತ್ತೇನನರಿದಡೆಯೂ ಫಲವಿಲ್ಲ.
ಸರ್ವಕಾರಣ ಲಿಂಗವಾಗಿ,
ಲಿಂಗವನೆ ಅರಿದರಿದು
ಲಿಂಗಸಂಗವನೆ ಮಾಡುವೆ.
ಸಂಗಸುಖದೊಳು ಓಲಾಡುವೆ
ಗುಹೇಶ್ವರಾ.

- Advertisement -

ವಚನಾರ್ಥ:
ತನಗೂ ಲಿಂಗಕ್ಕೂ ಇರುವ ಸಂಗ ಸಂಬಂಧದ ಬಗ್ಗೆ ಅಲ್ಲಮನು ಹೇಳಿಕೊಳ್ಳುವ ಸ್ವಗತದಂತ ಸಾಲುಗಳಿವು. ಲಿಂಗವನ್ನು ಅರಿಯದೆ ಬೇರೆ ಏನನ್ನು ಅರಿದರೂ ಫಲವಿಲ್ಲ, ಲಿಂಗವನ್ನು ಅರಿದ ಬಳಿಕ ಬೇರೆ ಏನನ್ನು ಅರಿದರೂ ಫಲವಿಲ್ಲ ಎಂದು ಅಲ್ಲಮ ಹೇಳುವಲ್ಲಿ ಒಂದು ತರಹದ ತರ್ಕವಿದೆ. ಪದ ಚಮತ್ಕಾರವಿದೆ. ದೈವ ಸಾಕ್ಷಾತ್ಕಾರ ಆಗದೆ ಯಾವ ತರಹದ ಜ್ಞಾನವನ್ನು ಗಳಿಸಿದರೂ ಅದರಿಂದ ಪ್ರಯೋಜನವಿಲ್ಲ. ದೈವ ಸಾಕ್ಷಾತ್ಕಾರ ಆದ ನಂತರ ಬೇರೆ ಯಾವ ತರಹದ ಜ್ಞಾನವನ್ನು ಗಳಿಸಿದರೂ ಪ್ರಯೋಜನವಿಲ್ಲ. ಹಾಗಾಗಿ “ಒಲವೇ ಜೀವನ ಸಾಕ್ಷಾತ್ಕಾರ” ಎಂಬಂತೆ ಲಿಂಗವೇ ಜೀವನ ಸಾಕ್ಷಾತ್ಕಾರ. ಲಿಂಗವೇ  ಸರ್ವಕಾರ್ಯಕಾರಣ. ಆದ್ದರಿಂದ ಲಿಂಗವನ್ನೇ ಅರಿದು ಅರಿದು ಸದಾ ಲಿಂಗಸಂಗವನ್ನೇ ಮಾಡುತ್ತೇನೆ ಎಂದು ಅಲ್ಲಮನ ಸ್ಪಷ್ಟ ಹೇಳಿಕೆ. ಲಿಂಗಸಂಗ ಎಂದರೆ ಲಿಂಗದೊಡನೆ ಸಹವಾಸ, ಸ್ನೇಹ, ಸಾಮರಸ್ಯ, ಸಹಜೀವನ, ಸಾಕ್ಷಾತ್ಕಾರ. ಲಿಂಗಸಂಗದ ಫಲಾಫಲವೇ ಸಂಗಸುಖ. ಅಂತಹ ಸಂಗಸುಖದಲ್ಲಿ ಶರಣ ತೇಲಾಡುತ್ತಾನೆ ಓಲಾಡುತ್ತಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೌಢ್ಯತೆಯೊಳಗೆ ನಾ ಕಂಡ ಭಾರತ

ಭಾರತವು ಏಕತೆಯಲ್ಲಿ ವೈವಿಧ್ಯತೆಯನ್ನು ಕಂಡ ದೇಶ. ಹಲವು ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಆಚರಣೆಗಳು ಇಲ್ಲಿನ ಸಾಮಾಜಿಕ ಬದುಕಿನ ವೈಶಿಷ್ಟ್ಯ. ಈ ವೈವಿಧ್ಯತೆಯೇ ಭಾರತದ ಶಕ್ತಿ. ಆದರೆ, ವೈವಿಧ್ಯತೆಯನ್ನು...

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಪದಪ್ರಯೋಗಾರ್ಥ:
ಇಡೀ ವಚನದ ಆಶಯ ಸಂಗಸುಖ ಎಂಬ ಪದದಲ್ಲಿ ವ್ಯಕ್ತವಾಗಿದೆ. ಸಂಗಸುಖ ಎಂಬ ಪದವೇ ಅತ್ಯಂತ ಸೊಗಸಾದದ್ದು ಮತ್ತು ರೋಚಕವಾದದ್ದು. ಸಂಗಸುಖವನ್ನು ಸನಿಹ ಸುಖ ಎಂದು ಅರ್ಥ ಮಾಡಿಕೊಳ್ಳಬಹುದು. ಸಂಗಸುಖದಲ್ಲಿ ದೊರಕುವ ಸುಖ ಅಪ್ರತಿಮವಾದದ್ದು. ಒಬ್ಬ ವ್ಯಕ್ತಿಯ ಸನಿಹದಲ್ಲಿ ಅಥವಾ ಸಾನಿಧ್ಯದಲ್ಲಿ ಮನಸ್ಸು ಕಂಡುಕೊಳ್ಳುವ ಸುಖವೇ ಸಂಗಸುಖ. ಸನಿಹದಲ್ಲಿ ಉಂಟಾಗುವ ಸಂಗಸುಖ ಪ್ರಣಯ ಪ್ರಸಂಗದಲ್ಲೂ, ಸಾನಿಧ್ಯದಲ್ಲಿ ಸಾಕಾರಗೊಳ್ಳುವ ಸಂಗಸುಖವನ್ನು ಆದ್ಯಾತ್ಮಿಕ ಸನ್ನಿವೇಶಗಳಲ್ಲೂ ಕಾಣಬಹುದು. ಇಲ್ಲಿ ಅಲ್ಲಮ ಪ್ರಸ್ತಾಪಿಸಿರುವ ಸಂಗಸುಖ ಎರಡನೇ ಬಗೆಯದು. ಸಂಗಸುಖದೊಳು ಓಲಾಡುವೆ ಗುಹೇಶ್ವರಾ! ಇಷ್ಟದೈವದೊಂದಿಗೆ ಸಂಗಸುಖ ಸಾಧಿಸಿದ್ದ ಶರಣರು, ಸಂತರು, ಹರಿದಾಸರು ತಾಳ ತಂಬೂರಿ ನುಡಿಸುತ್ತ ಪರವಶರಾಗಿ ನರ್ತಿಸುತ್ತ ಓಲಾಡುತ್ತಿದ್ದರೆಂದು ಕಥೆಗಳಿವೆ. ಕುಂಬಾರ ಗುಂಡಯ್ಯ ಎಂಬ ಶರಣ ಮಡಕೆಯ ಕಾಯಕ ಮಾಡುತ್ತಲೇ ಭಕ್ತಿ ಪರವಶನಾಗಿ ಮಡಕೆಗಳನ್ನು ಕುಟ್ಟಿ ಘಟವಾದನ ಮಾಡುತ್ತ ಸಂಗಸುಖದಲ್ಲಿ ಓಲಾಡುತ್ತ ಕುಣಿಯುತ್ತಿದ್ದರೆ ಕೈಲಾಸದಲ್ಲಿದ್ದ ಶಿವನು ಧಿಗ್ಗನೇ ಎದ್ದು ತಾನೂ ನಾಟ್ಯಗೈಯ್ಯುತ್ತಿದ್ದನಂತೆ! ಸಂಗಸುಖ ಅಲ್ಲಮ ಅನ್ವೇಷಿಸಿರುವ ಅಪರೂಪದ ಅನನ್ಯ ಪದ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾತೆಂಬುದು ಜ್ಯೋತಿರ್ಲಿಂಗ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಅವಳ ಕಣ್ಣೋಟ | ಡೊರೊಥಿ- ಸ್ವೀಕಾರದಾಚೆಗೆ, ಒಳಗೊಳ್ಳುವಿಕೆಯ ಕಡೆಗೆ…

ಇದೊಂದು ಪರಿಪೂರ್ಣ ಸಿನಿಮಾ ಅಲ್ಲ. ಕೆಲವು ತಿರುವುಗಳು ಸರಳವಾಗಿವೆ. ಕೆಲವು ಪಾತ್ರಗಳು...

ಅಲ್ಲಮನ ಅನನ್ಯ ಪದಪ್ರಯೋಗಗಳು | ತಂದೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಅವಳ ಕಣ್ಣೋಟ | ಲಿಪ್‌ಸ್ಟಿಕ್‌ನ ಬಣ್ಣದ ಕೆಳಗೆ ಹುದುಗಿದ ಕನಸುಗಳು

ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ...