ಈ ದಿನ ಸಂಪಾದಕೀಯ | ‘ಜನ ಗಣ ಮನ’ಕ್ಕೆ ಬಿಜೆಪಿ ತಿರಸ್ಕಾರ; ರವೀಂದ್ರನಾಥ ಟ್ಯಾಗೋರ್‌ಗೆ ಅಪಚಾರ!

Date:

ʼಜನ ಗಣ ಮನʼ ವನ್ನು ದೇಶವೇ ರಾಷ್ಟ್ರಗೀತೆಯನ್ನಾಗಿ ಒಪ್ಪಿರುವಾಗ ,ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲೂ ಹಾಡುತ್ತಿರುವಾಗ, ಅದನ್ನು ಒಪ್ಪದ ಸಂಘಿ ಮನಸ್ಥಿತಿಯ ಸಂಸದ ಕಾಗೇರಿ ಸಾರ್ವಜನಿಕ ವೇದಿಕೆಯಲ್ಲಿ ಇಂತಹ ರಾಷ್ಟ್ರವಿರೋಧಿ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ. ಸುಳ್ಳು ಹಬ್ಬಿಸುವ ಬಿಜೆಪಿಯ ಪ್ರೊಪಗಾಂಡದ ಭಾಗವಾಗಿಯೇ ಇದನ್ನು ನೋಡಬೇಕಿದೆ

- Advertisement -

ಕವಿ- ಕಾದಂಬರಿಕಾರ ಬಂಕಿಮ್‌ ಚಂದ್ರ ಚಟರ್ಜಿ ʼವಂದೇ ಮಾತರಂʼ ಗೀತೆ ರಚನೆ ಮಾಡಿದ 150ನೆಯ ವರ್ಷಾಚರಣೆ ಪ್ರಯುಕ್ತ ಇಂದು ದೇಶದಾದ್ಯಂತ ಬಿಜೆಪಿ ಕಚೇರಿಗಳಲ್ಲಿ ಸಮೂಹ ಗಾಯನ ಆಯೋಜಿಸಿದೆ. ಎರಡು ದಿನಗಳ ಹಿಂದೆ ಶಿರಸಿಯ ಆರೆಸ್ಸೆಸ್‌ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಷ್ಟ್ರಗೀತೆ ‘ಜನಗಣಮನ’ವನ್ನು ಅವಮಾನಿಸಿದ್ದು ಮಾತ್ರವಲ್ಲ,  ಶ್ರೇಷ್ಠ ಕವಿ, ಮಾನವತಾವಾದಿ ಗುರುದೇವ ಎಂದೇ ಕರೆಸಿಕೊಂಡಿದ್ದ ರವೀಂದ್ರನಾಥ ಟ್ಯಾಗೋರ್‌ ಅವರನ್ನೂ ಅಪಮಾನಕ್ಕೆ ಗುರಿಪಡಿಸಿರುವುದು ಅತ್ಯಂತ ಖಂಡನೀಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ವಂದೇ ಮಾತರಂ ಗೀತೆಯೇ ರಾಷ್ಟ್ರಗೀತೆಯಾಗಬೇಕಿತ್ತು ಎಂದು ಆಗ್ರಹಿಸಿರುವ ‘ಜನ ಗಣ ಮನ’ವು ಬ್ರಿಟಿಷ್‌ ಅಧಿಕಾರಿಯ ಸ್ವಾಗತಕ್ಕಾಗಿ ಬರೆದ ಗೀತೆಯಾಗಿತ್ತು ಎಂದು ಕಾಗೇರಿ ಟೀಕಿಸಿದ್ದಾರೆ. ಕಾಗೇರಿಯವರು ತಮ್ಮ ಅಜ್ಞಾನದಿಂದ ಈ ಮಾತು ಹೇಳಿದರೋ ಅಥವಾ ಗೊತ್ತಿದ್ದೂ ಸುಳ್ಳು ಹಬ್ಬಿಸುವ ಬಿಜೆಪಿ-ಆರೆಸ್ಸಿಸ್ಸಿಗರ ಚಟವಾಗಿ ಈ ಮಾತು ಹೇಳಿದರೋ ತಿಳಿಯದು.  ಆದರೆ ಆರೆಸ್ಸೆಸ್‌, ಬಿಜೆಪಿಯವರು ಈ ದೇಶದ ರಾಷ್ಟ್ರಧ್ವಜವನ್ನು ಒಪ್ಪಿಲ್ಲ, ಎಲ್ಲರನ್ನೂ ಒಳಗೊಳ್ಳುವ ರಾಷ್ಟ್ರಗೀತೆಯನ್ನೂ ಒಪ್ಪಿಲ್ಲ. ದೇಶದ ಪವಿತ್ರ ಗ್ರಂಥ ಸಂವಿಧಾನವನ್ನೂ ಒಪ್ಪಿಲ್ಲ ಎಂಬುದು ಪುರಾವೆಗಳೊಂದಿಗೆ ಸಾಬೀತಾಗಿರುವ ನಿಷ್ಠುರ ಸತ್ಯಗಳು.

ಸ್ವಾತಂತ್ರ್ಯ ಬಂದು 79 ವರ್ಷ ಕಳೆದ ಮೇಲೂ, ಜನಗಣಮನವನ್ನು ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲೂ ರಾಷ್ಟ್ರಗೀತೆಯಾಗಿ ಹಾಡುತ್ತಿರುವಾಗಲೂ,  ಅದನ್ನು ಒಪ್ಪದ ಸಂಘಿ ಮನಸ್ಥಿತಿಯ ಕಾಗೇರಿಯವರು, ತಾವು ಸಂಸದ ಎಂಬುದನ್ನೂ ಮರೆತು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ರಾಷ್ಟ್ರವಿರೋಧಿ ಹೇಳಿಕೆ ನೀಡುತ್ತಿರುವುದು ದೇಶದ್ರೋಹದ ಕೃತ್ಯ. ಇಂತಹ ಸುಳ್ಳು, ಪ್ರೊಪಗಾಂಡವನ್ನು ಮುಂದಿನ ತಲೆಮಾರಿಗೆ ದಾಟಿಸುವ ಹುನ್ನಾರದ ಭಾಗ ಕಾಗೇರಿಯವರ ಈ ಹೇಳಿಕೆ ಎಂದೇ ಪರಿಗಣಿಸಬೇಕಿದೆ.

‘ವಂದೇಮಾತರಂ’ ಹಾಡು ಇರುವ ʼಆನಂದ ಮಠʼ ಕಾದಂಬರಿಯು ಹಿಂದೂ ರಾಷ್ಟ್ರದ ಆಶಯ ಹೊಂದಿರುವ ಮುಸ್ಲಿಂ ದ್ವೇಷವೇ ಸಾರಸರ್ವಸ್ವ ಆಗಿರುವ ಕೃತಿ. ಇದೇ ಕಾರಣಕ್ಕಾಗಿ, ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಬಹಳ ಮಹತ್ವದ ಹಾಡಾಗಿದೆ. ಈ ಕಾರಣದಿಂದಲೇ 1937ರ ಅಕ್ಟೊಬರ್ ನಲ್ಲಿ ಹಿಂದೂ ಮಹಾಸಭಾ ಕೂಡ ‘ವಂದೇ ಮಾತರಂ ದಿನ’ ಆಚರಿಸಲು ಕರೆ ನೀಡಿತ್ತು. ಅದನ್ನು ಮೋದಿ ಮುಂದುವರಿಸಿದ್ದಾರೆ. ಮೋದಿಯವರ ಮುಸ್ಲಿಂ ದ್ವೇಷದ ಮಾತುಗಳಿಗೆ ಅವರ ಚುನಾವಣಾ ಭಾಷಣಗಳು ನೂರಾರು ಪುರಾವೆಗಳನ್ನು ಒದಗಿಸುತ್ತವೆ. ನಿನ್ನೆ ಬಿಹಾರದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವಾಗ ಮೋದಿಯವರು ಮುಸ್ಲಿಂ ದ್ವೇಷ ಕಾರಿದ್ದಾರೆ. “ವೋಟ್‌ ಬ್ಯಾಂಕ್‌ (ಮುಸ್ಲಿಮರು)ಗಾಗಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ರಾಮನ ದ್ವೇಷ ಮಾಡುತ್ತಿದೆ” ಎಂದಿದ್ದಾರೆ.

ರಾಷ್ಟ್ರಧ್ವಜಕ್ಕಿಂತ ಭಗವಾಧ್ವಜವೇ ಮುಖ್ಯ ಎಂದುಕೊಂಡಿರುವ ಬಿಜೆಪಿ ಅದನ್ನು ಆಗು ಮಾಡಲು ಯತ್ನಿಸುತ್ತಿದೆ. ಬ್ರಿಟಿಷರ ಜೊತೆ ಕೈಜೋಡಿಸಿದ್ದ ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ನಿಲ್ಲಿಸಿದೆ. ಅದಕ್ಕಾಗಿ ನೆಹರೂ ಅವರನ್ನೇ ಅಪ್ರಸ್ತುತ ಮಾಡಲು ಹೆಣಗಾಡಿರುವ ಕೀಳು ಕೆಲಸಕ್ಕೆ ದೇಶವೇ ಸಾಕ್ಷಿಯಾಗಿದೆ. ಕಾಂಗ್ರೆಸ್‌ ಮತ್ತು ಸ್ವಾತಂತ್ರ್ಯ ಸೇನಾನಿಗಳು ಈ ದೇಶಕ್ಕೆ ನೀಡಿದ ಎಲ್ಲ ಜಾತ್ಯತೀತ ಸಂಕೇತಗಳನ್ನು ನಿರ್ನಾಮ ಮಾಡುವುದು ಆರೆಸ್ಸೆಸ್‌ಗೆ ನೂರು ವರ್ಷ ತುಂಬಿದ ಸಂದರ್ಭದ ಶಪಥದಂತೆ ಕಾಣುತ್ತಿದೆ. ಹಿಂದೂ ರಾಷ್ಟ್ರ ಮಾಡುವುದು ಬಿಜೆಪಿಯ ಅಂತಿಮ ಗುರಿ, ಅದಕ್ಕಾಗಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಪಿತ ಎಲ್ಲವನ್ನೂ ಅವಮಾನಿಸುವುದು, ವಿಕೃತಿ ಮೆರೆಯುವುದಕ್ಕೆ ಯಾವ ಪದವಿಯಲ್ಲಿದ್ದರೂ ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.

ಬಂಕಿಮ ಚಂದ್ರರ ‘ಆನಂದ ಮಠ’ ಕಾದಂಬರಿಯ ಕಥಾವಸ್ತು, ಬ್ರಿಟಿಷರು ಜಾರಿಗೆ ತಂದ ಕೃಷಿ ನೀತಿಯಿಂದಾಗಿ ಬಂಗಾಳ ತೀವ್ರ ಬರಗಾಲಕ್ಕೆ ತುತ್ತಾದ ಕತೆಯಿಂದ ಶುರುವಾದರೂ ಬಹುಬೇಗೇನೆ ಮುಸ್ಲಿಂ ದ್ವೇಷಕ್ಕೆ ತಿರುಗಿ ಅದೇ ದಾರಿಯಲ್ಲಿ ಕೊನೆಯಾಗುತ್ತದೆ. ಯಾಕೆಂದರೆ ಕೃಷಿ ನೀತಿಯನ್ನು ರೂಪಿಸಿದವರು ಮುಘಲರು. ಈ ಕಾರಣದಿಂದ  ಈ ದೇಶದ ಮುಸ್ಲಿಮರನ್ನು ಕೊಂದು ಹಾಕಿ ದೇಶವನ್ನು ಮುಸ್ಲಿಮರಿಂದ ವಿಮೋಚನೆ ಮಾಡುವ ಪ್ರತಿಜ್ಞೆಯನ್ನು ಕಥಾ ನಾಯಕ ಮಾಡುತ್ತಾನೆ. ಭಾರತಾಂಬೆಯ ಮುಂದೆ ಈ ಹಾಡು ಹೇಳುತ್ತಾ ಮುಸ್ಲಿಮರ ಮಾರಣ ಹೋಮ ಮಾಡುವುದು, ಮುಸ್ಲಿಮರು ದೇವರ ಶತ್ರುಗಳು, ಎಲ್ಲ ಮುಸ್ಲಿಮರನ್ನು ಕೊಂದುಹಾಕಬೇಕು, ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿ ಎಂಬ ಸಂದೇಶವಿರುವ ಕಾದಂಬರಿ ಆನಂದಮಠ. ಅಷ್ಟೇ ಅಲ್ಲ, ಬ್ರಿಟಿಷ್ ಆಡಳಿತವನ್ನು ಬೆಂಬಲಿಸುವ ನಿಚ್ಚಳ ನಿಲುವನ್ನು ಹೊಂದಿರುವ ಕಾದಂಬರಿ. ಭಾರತದ ಅಸಲಿ ಶತ್ರುಗಳು ಮುಘಲರೇ ವಿನಾ ಬ್ರಿಟಿಷರಲ್ಲ ಎಂದಿತ್ತು ಆನಂದಮಠ. ಬ್ರಿಟಿಷರನ್ನು ಬೆಂಬಲಿಸಿದ್ದಕ್ಕಾಗಿ ಬಂಕಿಮಚಂದ್ರ ಅವರಿಗೆ ದೊಡ್ಡ ಸರ್ಕಾರಿ ಹುದ್ದೆಯನ್ನು ನೀಡಿ ಸಮ್ಮಾನಿಸಿದ್ದರು ಬ್ರಿಟಿಷರು.

ಬಂಕಿಮಚಂದ್ರರ ಬಂಗಾಳಿ ನೆಲದಿಂದಲೇ ಬಂದ ಸುಪ್ರಸಿದ್ಧ‌ ನೊಬೆಲ್‌ ಪುರಸ್ಕೃತ ಕವಿ ಗುರುದೇವ ರವೀಂದ್ರ ನಾಥ ಟ್ಯಾಗೋರರು ‘ಜನಗಣಮನ’ ಹಾಡನ್ನು 1911ರಲ್ಲಿ  ಬ್ರಿಟಿಷ್‌ ಅಧಿಕಾರಿ ಕಿಂಗ್‌ ಜಾರ್ಜ್‌ 5 ಅವರ ಸ್ವಾಗತಕ್ಕೆ ಬರೆದ ಕವಿತೆ ಎಂಬ ಆರೋಪ ಟ್ಯಾಗೋರರ ಜೀವಿತಾವಧಿಯಲ್ಲೇ ಬಂದಿತ್ತು. ಟ್ಯಾಗೋರ್‌ ಖುದ್ದಾಗಿ ಅದಕ್ಕೆ ಉತ್ತರಿಸಿದ್ದರು. ಸಾಮ್ರಾಜ್ಯ ಪರವಾಗಿದ್ದ ನನ್ನ ಸ್ನೇಹಿತರು ಜಾರ್ಜ್‌ ಸ್ವಾಗತಕ್ಕೆ ಒಂದು ಹಾಡು ಹಾಡಲು ಕೇಳಿದ್ದರು. ಆ ಮಾತು ನನ್ನಲ್ಲಿ ತಳಮಳ ಉಂಟುಮಾಡಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಈ ಹಾಡು ಬರೆದಿದ್ದೆ, ಭಾರತದ ಏರಿಳಿತದಲ್ಲಿ ಕೈ ಹಿಡಿದಿದ್ದು ಸಾಮ್ರಾಟರಲ್ಲ, ಭಾಗ್ಯವಿಧಾತ ನಡೆಸುತ್ತಿದ್ದಾನೆ ಎಂಬ ಅರ್ಥದಲ್ಲಿ ಬರೆದಿರುವುದಾಗಿ ಸ್ಪಷ್ಟನೆ ನೀಡಿದ್ದರು. ಈ ತರದ ಪ್ರಶ್ನೆಗೆ ಉತ್ತರಿಸುವುದೇ ನನಗೆ ನಾನೇ ಮಾಡಿಕೊಳ್ಳುತ್ತಿರುವ ಅವಮಾನ ಎಂದೂ ನೊಂದಿದ್ದರು. ಆದರೆ, ಬಲಪಂಥೀಯರು ಈ ಹಸಿ ಸುಳ್ಳು ಹರಡುವುದನ್ನು ಈಗಲೂ ನಿಲ್ಲಿಸಿಲ್ಲ.

ಟ್ಯಾಗೋರರನ್ನು ಈ ಪರಿ ಅವಮಾನಿಸುವುದೇ ಆಗಿದ್ದಲ್ಲೇ, ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟ್ಯಾಗೋರರಂತೆ ನೀಳ ಗಡ್ಡ ಬಿಟ್ಟು, ಅವರಂತೆಯೇ ಶಾಲು ಹೊದ್ದು ಬಂಗಾಳಿಗಳನ್ನು ಮೆಚ್ಚಿಸಲು ಹೊರಟಿದ್ದರಲ್ಲ ಮೋದಿ, ಅದರ ಅರ್ಥವಾದರೂ ಏನು? ಅಪ್ಪಟ ಅವಕಾಶವಾದೀ ಆಷಾಢಭೂತಿತನ ಅಲ್ಲವೇ?

ಈ ದೇಶದ ಪ್ರಧಾನಿಯಾಗಿ ಮೋದಿ ನಿಜವಾಗಿಯೂ ಸಂವಿಧಾನದ ಮೌಲ್ಯವನ್ನು ಗೌರವಿಸುವವರಾಗಿದ್ದರೆ ಈ ರೀತಿ ರಾಷ್ಟ್ರಗೀತೆಯನ್ನು ಅವಮಾನಿಸುವವರಿಗೆ ಬುದ್ಧಿ ಹೇಳಬೇಕು. ಆದರೆ, ಮೋದಿಯವರಿಂದ ಅಂತಹುದೊಂದು ಕ್ರಮವನ್ನು ನಿರೀಕ್ಷಿಸುವುದು ವಿಕಟ ವಿನೋದವೇ ಸರಿ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...