ಈ ದಿನ ಸಂಪಾದಕೀಯ | ತಮಿಳುನಾಡು ರಾಜ್ಯಪಾಲರ ನಡೆ ಕೆಟ್ಟ ಪರಂಪರೆಯೊಂದರ ಮುಂದುವರಿಕೆ

Date:

ಹೊಸ ಸರ್ಕಾರವೊಂದು ಬಹುಮತ ಸಾಬೀತುಪಡಿಸಬೇಕಿರುವುದು ಸದನದಲ್ಲಿ ಎಂಬ ಕನಿಷ್ಠ ಜ್ಞಾನ ಇಲ್ಲದಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಕುಂಟು ನೆಪಗಳ ಈ ಉದ್ದೇಶಪೂರ್ವಕ ವಿಳಂಬವು ಚುನಾವಣೋತ್ತರ ಅಕ್ರಮಗಳಿಗೆ ಎಡೆ ಮಾಡಿಕೊಡುತ್ತಿದೆ. ತಮಿಳುನಾಡಿನ ರಾಜ್ಯಪಾಲರ ನಡೆ ನೋಡಿದರೆ ಈ ಉದ್ದೇಶಗಳನ್ನು ಪ್ರೋತ್ಸಾಹಿಸುವಂತೆಯೇ ಇದೆ.

- Advertisement -

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಗಳಿಸಿದ ಜೋಸೆಫ್‌ ವಿಜಯ್‌ ಅವರ ನೇತೃತ್ವದ ಹೊಸ ಪಕ್ಷ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ, ಸರ್ಕಾರ ರಚನೆಗೆ ಆಹ್ವಾನಿಸದಿರುವುದು ರಾಜ್ಯಪಾಲರ ಕರ್ತವ್ಯಲೋಪವೇ ಸರಿ. ಅಷ್ಟೇ ಅಲ್ಲ, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಟ್ಟಾಗಲೂ 118 ಶಾಸಕರ ಬೆಂಬಲದ ಸಹಿಯೊಂದಿಗೆ ಬನ್ನಿ ಎಂದು ಎರಡನೆಯ ಬಾರಿ ವಾಪಸು ಕಳಿಸಿರುವುದು ಜನ ಪ್ರಾತಿನಿಧ್ಯಕ್ಕೆ ಮಾಡಿರುವ ಅವಹೇಳನ. ಅನಗತ್ಯ ಹಸ್ತಕ್ಷೇಪ. ಈ ಕುರಿತು ವ್ಯಾಪಕ ಚರ್ಚೆ ನಡೆದಿದೆ. ಅಷ್ಟೇ ಅಲ್ಲ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರ ನಡವಳಿಕೆ ದೆಹಲಿಯ ಆನುಜ್ಞೆ ಆದೇಶಗಳ ಪ್ರಕಾರ ನಡೆದಿದೆ ಎಂಬುದು ಕಳೆದ 10-12 ವರ್ಷಗಳಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತ ಬಂದಿರುವ ಕಹಿ ಸತ್ಯ. ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ (ಲೆಫ್ಟಿನೆಂಟ್‌ ಗವರ್ನರ್)ಯಲ್ಲಿ ಬಿಜೆಪಿಯೇತರ ಸರ್ಕಾರಗಳ ವಿರುದ್ಧ ಮೋದಿ-ಅಮಿತ್ ಶಾ ನಿಯುಕ್ತ ರಾಜ್ಯಪಾಲರು ಬಹಿರಂಗ ಸಮರ ಸಾರಿರುವ ಅನೇಕ ಉದಾಹರಣೆಗಳುನ ನಮ್ಮ ಮುಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಹೊಸ ಸರ್ಕಾರವೊಂದು ಬಹುಮತ ಸಾಬೀತುಪಡಿಸಬೇಕಿರುವುದು ಸದನದಲ್ಲಿ ಎಂಬ ಕನಿಷ್ಠ ಜ್ಞಾನ ಇಲ್ಲದಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಕುಂಟು ನೆಪಗಳ ಈ ಉದ್ದೇಶಪೂರ್ವಕ ವಿಳಂಬವು ಚುನಾವಣೋತ್ತರ ಅಕ್ರಮಗಳಿಗೆ ಎಡೆ ಮಾಡಿಕೊಡುತ್ತಿದೆ. ತಮಿಳುನಾಡಿನ ರಾಜ್ಯಪಾಲರ ನಡೆ ನೋಡಿದರೆ ಈ ಉದ್ದೇಶಗಳನ್ನು ಪ್ರೋತ್ಸಾಹಿಸುವಂತೆಯೇ ಇದೆ. ಮೇ ನಾಲ್ಕರಂದು ಫಲಿತಾಂಶಗಳು ಹೊರಬಿದ್ದಿವೆ. ಐದು ಸ್ಥಾನ ಗಳಿಸಿರುವ ಕಾಂಗ್ರೆಸ್‌ ತಕ್ಷಣವೇ ಬೆಂಬಲ ಘೋಷಿಸಿದೆ. ಆದರೂ ರಾಜ್ಯಪಾಲರು ಸರ್ಕಾರ ರಚನೆಗೆ ಕರೆಯದಿರುವುದು ಅಕ್ರಮಗಳಿಗೆ, ಕುದುರೆ ವ್ಯಾಪಾರಕ್ಕೆ, ಕೆಡವುವ ಆಟಕ್ಕೆ ಬಾಗಿಲು ತೆರೆದಂತಾಗಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಭಿನ್ನ ಸಿದ್ಧಾಂತದ, ಬದ್ಧ ವೈರಿಗಳಂತಿರುವ ಡಿಎಂಕೆ ಮತ್ತು ಎಡಿಎಂಕೆ ಒಂದಾಗಿ ಸರ್ಕಾರ ರಚನೆ ಮಾಡುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ ಎಂಬ ವರದಿಗಳು ಬಂದಿದ್ದವು. ಇಂತಹ ಗೊಂದಲಗಳಿಗೆ ರಾಜ್ಯಪಾಲರು ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ.

ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರನ್ನು ಸರ್ಕಾರ ರಚನೆಗೆ ಕರೆಯಬೇಕಿರುವುದು ರಾಜ್ಯಪಾಲರ ಕರ್ತವ್ಯ. ಆದರೆ ಹಾಗೆ ಮಾಡದೇ ಜನಾದೇಶದ ವಿರುದ್ಧ ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವ ಬೆಳವಣಿಗೆಗಳು ಭಾರತದಲ್ಲಿ ಹೊಸದೇನಲ್ಲ. 2018ರಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಅತಿದೊಡ್ಡ ಪಕ್ಷವಾಗಿದ್ದ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜೊತೆಗೆ ಮೈತ್ರಿ ಮಾತುಕತೆಗೆ ಇಳಿಯದೇ ಇದ್ದರೂ ಅವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ನಂತರ ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೂ ಸುಮ್ಮನಿರದ ಬಿಜೆಪಿ ಮೈತ್ರಿ ಸರ್ಕಾರದ ಹದಿನಾಲ್ಕು ಶಾಸಕರನ್ನು ತನ್ನತ್ತ ಸೆಳೆದುಕೊಂಡು ಆಪರೇಷನ್‌ ಕಮಲದ ಮೂಲಕ ಅಧಿಕಾರ ಹಿಡಿದಿತ್ತು.

2017ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದಾಗ ಬಹುಮತ ಇಲ್ಲದಿದ್ದರೂ ರಾಜ್ಯಪಾಲರು ಬಹುಮತ ಸಾಬೀತಿಗೆ ಅವಕಾಶ ನೀಡಿದ್ದರು. ಬಹುಮತ ದೊರೆಯದೆ ಸರ್ಕಾರ ಉಳಿಯಲಿಲ್ಲ. ನಂತರ ಶಿವಸೇನೆ, ಕಾಂಗ್ರೆಸ್‌, ಎನ್‌ಸಿಪಿ ಮೈತ್ರಿ ಸರ್ಕಾರ ರಚನೆಯಾಯ್ತು. ಅದನ್ನೂ ಅವಧಿಗೆ ಮುನ್ನವೇ ಕೆಡವಲಾಯ್ತು.

ಇದಕ್ಕೆ ವ್ಯತಿರಿಕ್ತವಾಗಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದ ಪಕ್ಷವನ್ನು ಕಡೆಗಣಿಸಿ ಕಡಿಮೆ ಸ್ಥಾನ ಪಡೆದ ಪಕ್ಷಕ್ಕೆ ಮೊದಲು ಸರ್ಕಾರ ರಚನೆಗೆ ಅವಕಾಶ ನೀಡಿರುವ ಉದಾಹರಣೆಗಳೂ ಇವೆ. ಅಂತಹ ನಿರ್ಧಾರಗಳು ಬಿಜೆಪಿ ಪರವಾಗಿದ್ದವು ಎಂಬುದು ಕಾಕತಾಳೀಯವೇನಲ್ಲ.

ಆದರೆ, ಸರ್ಕಾರ ರಚನೆಯ ಬಿಕ್ಕಟ್ಟು ಅಥವಾ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಘರ್ಷಣೆ ಉದ್ಭವಿಸಿದಾಗಲೆಲ್ಲ 1989ರಲ್ಲಿ ಕರ್ನಾಟಕದಲ್ಲಿ ನಡೆದ ಬೆಳವಣಿಗೆ ಅದಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ನೆನಪಾಗುತ್ತದೆ. ಆಗ ಎಸ್‌ ಆರ್‌ ಬೊಮ್ಮಾಯಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು. ಆಗಿನ ರಾಜ್ಯಪಾಲರು, ‘ಸರ್ಕಾರ ಬಹುಮತ ಕಳೆದುಕೊಂಡಿದೆ, ಹಾಗಾಗಿ ಸರ್ಕಾರವನ್ನು ವಜಾಗೊಳಿಸಿ‘ ಎಂದು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದರು. ಬಹುಮತ ಸಾಬೀತಿಗೂ ಅವಕಾಶ ನಿರಾಕರಿಸಿದ್ದರು. ಆಗ ಸುಪ್ರೀಂ ಮೆಟ್ಟಿಲೇರಿದರು ಬೊಮ್ಮಾಯಿ. ‘ಸರ್ಕಾರಕ್ಕೆ ಬಹುಮತ ಇದೆಯೇ ಇಲ್ಲವೇ ಎಂಬುದನ್ನು ರಾಜ್ಯಪಾಲರ ವೈಯಕ್ತಿಕ ಅಂದಾಜಿನಿಂದ ನಿರ್ಧರಿಸಲು ಸಾಧ್ಯವಿಲ್ಲ. ಅದು ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಯ ಮೂಲಕ ಸಾಬೀತುಪಡಿಸಬೇಕು‘ ಎಂದು ಹೇಳಿತ್ತು. ಅದನ್ನು ತಮಿಳುನಾಡಿನ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಬೇಕಾದ ಸಂದರ್ಭ ಬಂದಿದೆ.

ರಾಜ್ಯಪಾಲರ ಆಯ್ಕೆಗಳು ರಾಜಕೀಯಪ್ರೇರಿತ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮುಖಂಡರನ್ನೇ ರಾಜ್ಯಪಾಲರನ್ನಾಗಿ ವಿವಿಧ ರಾಜ್ಯಗಳಿಗೆ ನೇಮಿಸುತ್ತಿರುವುದು ತಮ್ಮದೇ ಪಕ್ಷದ ಸರ್ಕಾರವಿದ್ದಲ್ಲಿ ಕಾನೂನು ರಚನೆಗೆ ನೆರವಾಗಲು ಮತ್ತು ಬೇರೆ ಸರ್ಕಾರಗಳಾದರೆ ಅಡ್ಡಿಪಡಿಸಲು ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಇಂತಹ ಸಂವಿಧಾನ ವಿರೋಧಿ ನಡವಳಿಕೆಗಳು ಪ್ರಜಾಪ್ರಭುತ್ವಕ್ಕೆ ಮಾರಕ.

ಜನಾದೇಶವನ್ನು ಧಿಕ್ಕರಿಸುವ, ಜನಪ್ರತಿನಿಧಿಗಳನ್ನು ಅವಮಾನಿಸುವ ನಡೆಯನ್ನು ಜನ ಬಹುಕಾಲ ಸಹಿಸುವುದಿಲ್ಲ. ಮತದಾರರ ತಾಳ್ಮೆಯನ್ನು ಕೆಣಕಬಾರದು. ದೆಹಲಿಯಿಂದ ನೇಮಕವಾಗಿರುವ ರಾಜ್ಯಪಾಲರು ಜನರಿಂದ ಆರಿಸಿ ಬಂದವರಿಗಿಂತ ದೊಡ್ಡವರಲ್ಲ. ಸಂವಿಧಾನದ ಪ್ರಕಾರ ತಮ್ಮ ಕೆಲಸವನ್ನು ಮಾಡಬೇಕೇ ವಿನಾ, ದೆಹಲಿಯ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರುವುದು ಸಲ್ಲದು. ಜನತಂತ್ರದ ಮೂಲ ಮೌಲ್ಯಗಳನ್ನು ಗಾಳಿಗೆ ತೂರುವುದು ತರವಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...