ದಕ್ಷಿಣ ಕನ್ನಡದಲ್ಲಿ ‘ಕೊರಗ’ರ ಸಂಖ್ಯೆ ಕುಸಿತ: ಸಂತಾನೋತ್ಪತ್ತಿ ಕುಸಿತವೋ? ಆರೋಗ್ಯ ಸಮಸ್ಯೆಯೋ?

Date:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಹಾಗೂ ಸಾಮಾಜಿಕ ಚಿಂತಕರನ್ನು ತೀವ್ರ ಆತಂಕಕ್ಕೀಡುಮಾಡುವಂತಹ ವರದಿಯೊಂದು ಹೊರಬಿದ್ದಿದೆ. ಕರ್ನಾಟಕದ ಅತ್ಯಂತ ಹಿಂದುಳಿದ ಹಾಗೂ ವಿಶೇಷವಾಗಿ ಆತಂಕದ ಅಂಚಿನಲ್ಲಿರುವ ಬುಡಕಟ್ಟು ಗುಂಪು (PVTG – Particularly Vulnerable Tribal Group) ಎಂದು ಗುರುತಿಸಲ್ಪಟ್ಟಿರುವ ‘ಕೊರಗ’ ಸಮುದಾಯದ ಜನಸಂಖ್ಯೆಯಲ್ಲಿ ಕಳೆದ ದಶಕದಿಂದೀಚೆಗೆ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ನಾಯಕರು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

- Advertisement -

2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ ಕೊರಗ ಸಮುದಾಯದ ಒಟ್ಟು ಜನಸಂಖ್ಯೆ 14,794 ಆಗಿತ್ತು. ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ ಗರಿಷ್ಠ ಸಂಖ್ಯೆಯ ಕೊರಗರು ನೆಲೆಸಿದ್ದಾರೆ. ಅಂದರೆ 2011ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4,800ರಿಂದ 5,200 ಕೊರಗ ಸಮುದಾಯದ ಜನರಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ...

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ –...

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ ಬೆಳವಣಿಗೆಗಳು 2027ರ ಉತ್ತರ ಪ್ರದೇಶ ಚುನಾವಣೆಗೂ ಗಂಭೀರ ಸವಾಲು ಒಡ್ಡುವಂತಿವೆ ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ...

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್ ಸರ್ಕಲ್ಸ್' (Local Circles) ನಡೆಸಿದ 32,000ಕ್ಕೂ ಹೆಚ್ಚು ಜನರ ಸಮೀಕ್ಷೆ ಬಟಾಬಯಲು ಮಾಡಿದೆ. ಸಮೀಕ್ಷೆಯ ಪ್ರಕಾರ, ಕೇವಲ ಶೇ.17ರಷ್ಟು ವರ್ತಕರು...

ಇದನ್ನೂ ಓದಿ: ಉಡುಪಿ | 25 ದಿನಗಳಿಂದ ಕೊರಗ ಸಮುದಾಯದ ಧರಣಿ ಸತ್ಯಾಗ್ರಹ , ಅಲ್ಪಸಂಖ್ಯಾತರ ವೇದಿಕೆಯಿಂದ ಬೆಂಬಲ

ಆದರೆ ಸಂಯೋಜಿತ ಬುಡಕಟ್ಟು ಅಭಿವೃದ್ಧಿ ಯೋಜನೆ (ITDP) ಮತ್ತು ಸ್ಥಳೀಯ ಸಮುದಾಯ ಆಧಾರಿತ ಸರ್ವೇಕ್ಷಣೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ 10-12 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯದ ಜನಸಂಖ್ಯೆಯಲ್ಲಿ ಶೇ. 8ರಿಂದ 12ರಷ್ಟು ಇಳಿಕೆ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ ಕೊರಗರ ಸಂಖ್ಯೆ ಪ್ರಸ್ತುತ 4,200ಕ್ಕಿಂತಲೂ ಕೆಳಗೆ ಕುಸಿದಿದೆ.

ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರು ಶೇಖರ್ ವಾಮಂಜೂರು, “ಸಾಮಾನ್ಯವಾಗಿ ನಮ್ಮ ಜೀವಕೋಶದ ಬೆಳವಣಿಗೆ ಕುಸಿತವೇ ಈ ಜನಸಂಖ್ಯೆ ಇಳಿಕೆಗೆ ಕಾರಣ ಎಂದು ಹೇಳುತ್ತಾರೆ. ಮತ್ತೆ ನಮ್ಮ ಸಮುದಾಯಕ್ಕೆ ಹಿಂದಿನಿಂದಲೂ ಪೌಷ್ಟಿಕ ಆಹಾರದ ಕೊರತೆಯಿದೆ. ಈಗಿನ ಜನರು ಕೊಂಚ ಬೆಳವಣಿಗೆ ಹೊಂದಿದ್ದಾರೆ. ಆದರೆ ಈ ಹಿಂದಿನವರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆಗಳಿವೆ” ಎಂದು ತಿಳಿಸಿದ್ದಾರೆ.

ಇಂದಿಗೂ ಕೊರಗ ಯುವಕರಿಗೆ 30-45 ಆಗುವಷ್ಟರಲ್ಲೇ ಹಲವು ಮಂದಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಈ ಹಿಂದೆ ನಮ್ಮ ಸಮುದಾಯದವು ಎಂಜಲು ಊಟ ತಿಂದೆ ಜೀವನ ಸಾಗಿಸುತ್ತಾ ಬಂದಿರುವುದು. ಅದರಿಂದ ಅದೆಷ್ಟೋ ಅಂಟು ರೋಗಗಳು ಹರಡಿದೆ ಎಂಬ ವಾದಗಳೂ ಇವೆ. ಆದ್ದರಿಂದ ನಮ್ಮ ಜನಸಂಖ್ಯೆ ಇಳಿಕೆ ಬಗ್ಗೆ ಸರಿಯಾದ ಅಧ್ಯಯನ ನಡೆಸಬೇಕು” ಎಂದು ಆಗ್ರಹಿಸಿದರು.

ಜನಸಂಖ್ಯೆ ಕ್ಷೀಣಿಸಲು ಪ್ರಮುಖ ಕಾರಣಗಳೇನು?

ಸಾಮಾಜಿಕ ಕಾರ್ಯಕರ್ತರು ಮತ್ತು ಬುಡಕಟ್ಟು ಕ್ಷೇಮಾಭಿವೃದ್ಧಿ ಅಧಿಕಾರಿಗಳ (ITDP) ಪ್ರಾಥಮಿಕ ವರದಿಗಳ ಪ್ರಕಾರ, ಜನಸಂಖ್ಯೆ ಕ್ಷೀಣಿಸಲು ಈ ಕೆಳಗಿನ ಪ್ರಮುಖ ಕಾರಣಗಳನ್ನು ಗುರುತಿಸಲಾಗಿದೆ.

ಇದನ್ನೂ ಓದಿ: ಉಡುಪಿ | ಕೊರಗ ಸಮುದಾಯಕ್ಕೆ ಸರ್ಕಾರಿ ಉದ್ಯೋಗ : ಬರೀ ಕನಸು ಮಾತ್ರ !

ಆರೋಗ್ಯ ತೊಂದರೆಗಳು ಮತ್ತು ಕಡಿಮೆ ಜೀವಿತಾವಧಿ: ಕೊರಗ ಸಮುದಾಯದ ಜನರಲ್ಲಿ ಕ್ಷಯರೋಗ (TB), ಪೌಷ್ಟಿಕಾಂಶದ ಕೊರತೆ (Nutritional Anemia) ಮತ್ತು ಯಕೃತ್ತಿನ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರಿಂದಾಗಿ ಸರಾಸರಿ ಜೀವಿತಾವಧಿ ಕಡಿಮೆಯಾಗುತ್ತಿದೆ.

ಶಿಶು ಮರಣ ಪ್ರಮಾಣ (Infant Mortality): ತಾಯಂದಿರಲ್ಲಿ ತೀವ್ರ ರಕ್ತಹೀನತೆ ಇರುವುದರಿಂದ, ಜನಿಸುವ ಮಗುವಿನ ತೂಕ ಕಡಿಮೆಯಿರುವುದು ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ಹೆಚ್ಚಿರುವುದು ಪ್ರಮುಖ ಕಾರಣ.

ಸಂತಾನೋತ್ಪತ್ತಿ ಸಾಮರ್ಥ್ಯದಲ್ಲಿ ಕುಸಿತ: ಆಹಾರ ಪದ್ಧತಿಯಲ್ಲಿ ಆದ ತೀವ್ರ ಬದಲಾವಣೆ, ದುಶ್ಚಟಗಳು ಮತ್ತು ಬದಲಾದ ಜೀವನಶೈಲಿಯಿಂದಾಗಿ ಯುವ ಪೀಳಿಗೆಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕ್ಷೀಣಿಸುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ವಲಸೆ ಹಾಗೂ ಸಾಮಾಜಿಕ ಬದಲಾವಣೆ: ಶೈಕ್ಷಣಿಕವಾಗಿ ಮತ್ತು ಉದ್ಯೋಗದೃಷ್ಟಿಯಿಂದ ಕೆಲವರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಮೂಲ ಸಮುದಾಯದ ಶೇಖರಣಾ ದತ್ತಾಂಶದಲ್ಲಿ ವ್ಯತ್ಯಾಸವಾಗುತ್ತಿದೆ.

ಏನೇ ಆದರೂ ಈ ಬಗ್ಗೆ ಶೀಘ್ರ ಅಧ್ಯಯನ ನಡೆಸಿದೆ. ಸಮುದಾಯವನ್ನು ಉಳಿಸುವ ಅಗತ್ಯವಿದೆ ಎಂದು ಕೊರಗ ಸಮುದಾಯದ ನಾಯಕರುಗಳು ಆಗ್ರಹಿಸುತ್ತಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜ: ನ್ಯಾಯಕ್ಕಾಗಿ ಹೋರಾಡಬೇಕು; ಕೋಟ ಶ್ರೀನಿವಾಸ್ ಪೂಜಾರಿ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ...

ತುಳುವಿಗೆ ಆಡಳಿತ ಭಾಷೆಯ ಮಾನ್ಯತೆ: ಕರಾವಳಿಯ ದಶಕಗಳ ಕನಸಿಗೆ ಹೊಸ ಅಧ್ಯಾಯ

ಕರಾವಳಿಯ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ...