ರಾಯಚೂರು | ರಾಘವೇಂದ್ರ ಸ್ವಾಮಿ ಜಪಕಟ್ಟೆ ಸಮೀಕ್ಷೆಗೆ ಅಡ್ಡಿ : 12 ಕ್ಕೂ ಹೆಚ್ಚು ಮಂದಿ ವಶಕ್ಕೆ

Date:

ರಾಯಚೂರು ತಾಲೂಕಿನಲ್ಲಿರುವ ಎಲೆಬಿಚ್ಚಾಲಿ ಶ್ರೀ ರಾಘವೇಂದ್ರ ಸ್ವಾಮಿಗಳು ತಪಸ್ಸು ಗೈದ ಜಪಕಟ್ಟೆ ಸಂಬಂದಿಸಿದಂತೆ 4 ಎಕರೆ ಜಮೀನಲ್ಲಿ 2 ಎಕರೆ 33 ಜಮೀನು ಸರ್ಕಾರಕ್ಕೆ ಸೇರಿದ್ದರಿಂದ ಇಂದು ಸಮೀಕ್ಷೆಗಾಗಿ ತೆರೆಳಿದ ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಯರಗೇರಾ ಪೊಲೀಸರು 12ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಘಟನೆ ಜರುಗಿದೆ.

- Advertisement -

ಕಳೆದ ಅನೇಕ ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರು ಸರ್ವೆ ಕಾರ್ಯಕ್ಕೆ ಆಕ್ಷೇಪಿಸಿ ವಿರೋಧಿಸಿದ್ದಾರೆ. ಮಂತ್ರಾಲಯ ಮಠ ಸರ್ಕಾರಕ್ಕೆ ಪತ್ರ ಬರೆದು ಮಂತ್ರಾಲಯ ಸೇರಿದ ಐತಿಹಾಸಿಕ ಸ್ಥಳ ಅಭಿವೃದ್ದಿಗೆ ಮಠದ ಸುಪರ್ದಿಗೆ ನೀಡುವಂತೆ ಪತ್ರ ಬರೆಯಲಾಗಿತ್ತು ಎಂದು ಹೇಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ರಾಯರ ಜಪಕಟ್ಟೆಯೂ ಸುಪರ್ದಿಗೆ ಪಡೆಯಲು ಮಂತ್ರಾಲಯ ಮಠ ಪ್ರಯತ್ನಿಸಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಇಂದು ಭೂ ದಾಖಲೆ ಅಧಿಕಾರಿಗಳು, ಕಂದಾಯ ಹಾಗೂ ಪೊಲೀಸ್ ಬಂದೋಬಸ್‌ನೊಂದಿಗೆ ಸರ್ವೆಗೆ ತೆರಳಿದ್ದರು. ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಗುವಿನ ವಾತಾವರಣ ತಲೆದೂರಿತ್ತು. ಉಳುಮೆ ಮಾಡುತ್ತಿರುವ ರೈತರು ಕಂದಾಯ ಇಲಾಖೆ ನೋಟಿಸ್ ನೀಡದೇ ಏಕಾಏಕಿ ತೆರವುಗೊಳಿಸಲು ಬಂದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಪರಸ್ಥಿತಿ ಕೈ ಮೀರುತ್ತಿದ್ದಂತೆ ಯರಗೇರಾ ಪೊಲೀಸರು ಜನರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಕಂದಾಯ ಇಲಾಖೆ ದಾಖಲೆಯಂತೆ ಸರ್ವೆ ನಂಬರ್‌ನಲ್ಲಿ ಸರ್ಕಾರವೆಂದು ನಮೂದಾಗಿರುವುದರಿಂದ ರೈತರಿಗೆ ನೋಟಿಸ್ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರಿಂದ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಸರ್ವೆ ಕಾರ್ಯ ಮುಂದುವರೆಸಿದ್ದು ಅಧಿಕಾರಿಗಳು ನೀಡುವ ವರದಿ ಆಧಾರದ ಮೇಲೆ ಸರ್ಕಾರ ಅಂತಿಮ ಆದೇಶ ಹೊರಡಿಸಬೇಕಿದೆ.‌

Advertisements

ಇದನ್ನೂ ಓದಿ : ಬೀದರ್‌ | ಪತ್ರಕರ್ತರ ಲೇಖನಿ ಸತ್ಯದ ಪರವಾಗಿರಲಿ : ಸಭಾಧ್ಯಕ್ಷ ಯು.ಟಿ.ಖಾದರ್

ಕಳೆದ ಅನೇಕ ವರ್ಷಗಳಿಂದ ಮಂತ್ರಾಲಯ ಮಠ ಜಪದಕಟ್ಟೆಯನ್ನು ಮಠದ ಸುಪರ್ದಿಗೆ ಪಡೆಯುವಪ್ರಯತ್ನ ನಡೆಸುತ್ತಾ ಬಂದಿತ್ತು. ಅನೇಕ ವರ್ಷಗಳಿಂದ ಜಪದ ಕಟ್ಟೆಯನ್ನು ಟ್ರಸ್ಟ್‌ನಿಂದ ನಿರ್ವಹಿಸಲಾಗತ್ತಿತ್ತು. ಆದರೆ ಒತ್ತಾಯದಿಂದ ಮಂತ್ರಾಲಯ ಮಠ ಸೇರ್ಪಡೆ ಮಾಡುವ ಪ್ರಯತ್ನದ ವಿರುದ್ದ ಟ್ರಸ್ಟ್ ಪದಾಧಿಕಾರಿಗಳು ಕೊರ್ಟ್ ಮೊರೆ ಹೋಗಿದ್ದರು. ಟ್ರಸ್ಟ್ ಸ್ವಾಧೀನದಲ್ಲಿಯೇ ಜಪಕಟ್ಟೆ ನಿರ್ವಹಣೆ ಮಾಡಲಾಗತ್ತಿದೆ. ಸರ್ಕಾರಿ ಜಮೀನು ಇರುವ ಕುರಿತು ಗೊಂದಲಗಳು ಮುಂದುವರೆದಿವೆ. ಅಧಿಕಾರಿಗಳು ಸರ್ವೆ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಶಾಲೆ ತೊರೆದ 413 ಎಸ್‌ಟಿ ವಿದ್ಯಾರ್ಥಿಗಳು; ವಿಶೇಷ ಕಾರ್ಯಪಡೆ ರಚನೆಗೆ ಒತ್ತಾಯ

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶಿಕ್ಷಣದ ಮುಖ್ಯವಾಹಿನಿಯಿಂದ ದೂರವಾಗುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ...

ರಾಯಚೂರು | ತಿಂಗಳೊಳಗೆ ಮೂವರು ದಲಿತರ ಹತ್ಯೆ: ದಲಿತಪರ ಹೋರಾಟಗಾರರ ಕಳವಳ

ರಾಯಚೂರು ಜಿಲ್ಲೆಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಮೂವರು ದಲಿತರ ಹತ್ಯೆಯಾಗಿರುವುದು ಆತಂಕಕ್ಕೆ...

ರಾಯಚೂರು | ಹೊಕ್ರಾಣಿ ಅಶ್ವಿನಿ ಛಲವಾದಿ ಅತ್ಯಾಚಾರ-ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಛಲವಾದಿ ಅತ್ಯಾಚಾರ ಕೊಲೆ ಪ್ರಕರಣದಲ್ಲಿ...