ರಾಯಚೂರು | ಹೆಣ ಹೊತ್ತು ನೀರಿಗಿಳಿವ ಗುಂಜಳ್ಳಿಗರ ಪರಿಸ್ಥಿತಿ ಕಂಡೂ, ಆಡಳಿತ ಕುರುಡು

Date:

ಬದುಕಿದ್ದಾಗ ಮಾತ್ರವಲ್ಲ, ಸಾವಿನ ನಂತರವೂ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ರಾಯಚೂರು ಗ್ರಾಮೀಣ ಭಾಗದ ಗುಂಜಳ್ಳಿ ಗ್ರಾಮದಲ್ಲಿ ಈ ಕನಿಷ್ಠ ಹಕ್ಕಿನಿಂದಲೂ ಜನರು ವಂಚಿತರಾಗಿದ್ದಾರೆ. ಸ್ಮಶಾನಕ್ಕೆ ತೆರಳಲು ವ್ಯವಸ್ಥಿತ ರಸ್ತೆ ಇಲ್ಲದ ಕಾರಣ, ನೀರಿಗಿಳಿದು ಮೃತದೇಹವನ್ನು ಹೊತ್ತುಕೊಂಡೇ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸುವ ಹೀನಾಯ ಪರಿಸ್ಥಿತಿ ಕಂಡೂ ಕಾಣದಂತೆ ಆಡಳಿತ ವ್ಯವಸ್ಥೆ ತೂಕಡಿಸುತ್ತಿದೆ.

- Advertisement -

ಸುಮಾರು 5 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗುಂಜಳ್ಳಿ ಗ್ರಾಮದಲ್ಲಿ ಎಲ್ಲ ಜಾತಿ-ಸಮುದಾಯದವರು ಒಂದೇ ರುದ್ರಭೂಮಿಯನ್ನು ಬಳಸುತ್ತಾರೆ. ಆದರೆ ಸ್ಮಶಾನಕ್ಕೆ ತೆರಳುವ ದಾರಿಯೇ ಇಲ್ಲದ ಕಾರಣ, ಮಳೆಗಾಲದಲ್ಲಿ ಬಸವೇಶ್ವರ ಕೆರೆ ತುಂಬಿ ಹರಿದಾಗ ನೀರಿನಲ್ಲೇ ನಡೆದು ಮೃತದೇಹವನ್ನು ಹೊತ್ತು ಸಾಗಿಸದೆ ಬೇರೆ ದಾರಿಯಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜೀವದ ಹಂಗು ತೊರೆದು ನೀರಿನ ಮಧ್ಯೆ ನಡೆದು ಅಂತ್ಯಕ್ರಿಯೆ ನೆರವೇರಿಸುವ ದೃಶ್ಯಗಳು ಜನರಲ್ಲಿ ನೋವು ಮತ್ತು ಆಕ್ರೋಶ ಉಂಟುಮಾಡಿವೆ. ಮುಖ್ಯರಸ್ತೆಯಿಂದ ಸ್ಮಶಾನ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿದ್ದರೂ, ರಸ್ತೆ ಅಥವಾ ಸೇತುವೆ ನಿರ್ಮಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಈದಿನ.ಕಾಮ್‌ ಜೊತೆಗೆ ಮಾತನಾಡಿದ ಹೋರಾಟಗಾರ ಬಂಗಾರಿ ನರಸಿಂಹ, “ಕಳೆದ ಮೂರು ದಶಕಗಳಿಂದ ಇದೇ ಸಮಸ್ಯೆ ಮುಂದುವರಿದಿದೆ. ಚುನಾವಣೆ ವೇಳೆ ಜನಪ್ರತಿನಿಧಿಗಳು ರಸ್ತೆ ಹಾಗೂ ಸೇತುವೆ ನಿರ್ಮಿಸುವ ಭರವಸೆ ನೀಡಿದರೂ, ಚುನಾವಣೆ ಮುಗಿದ ಬಳಿಕ ಯಾರೂ ಗ್ರಾಮದ ಸಮಸ್ಯೆಯತ್ತ ಗಮನ ಹರಿಸಿಲ್ಲ” ಎಂದು ಆರೋಪಿಸಿದ್ದಾರೆ.

“ಸ್ಮಶಾನಕ್ಕೆ ಹೋಗುವ ದಾರಿ ಸಂಪೂರ್ಣ ನೀರಿನಲ್ಲಿ ಮುಳುಗುತ್ತದೆ. ಮಳೆ ಹೆಚ್ಚಾದಾಗ ನೀರಿನ ಹರಿವು ತೀವ್ರವಾಗಿರುವುದರಿಂದ ಕೆಲವೊಮ್ಮೆ ಹರಿಗೋಲು ಮೂಲಕ ಮೃತದೇಹ ಸಾಗಿಸಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಸೇತುವೆ ನಿರ್ಮಿಸಿದರೆ ಎಲ್ಲಾ ಸಮುದಾಯದ ಜನರಿಗೆ ಅನುಕೂಲವಾಗುತ್ತದೆ” ಎಂದು ಅವರು ಹೇಳಿದರು.

ಹನುಮಂತ ಗುಂಜಳ್ಳಿ ಮಾತನಾಡಿ, “ರಾತ್ರಿ ವೇಳೆ ಅಂತ್ಯಕ್ರಿಯೆ ನಡೆಸಬೇಕಾದರೆ ಶವ ಹೊತ್ತವರು ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕು. ಕೆಲವೊಮ್ಮೆ ಕಾಲು ಜಾರಿ ಎದ್ದುತಾಗಿದೆ. ಮೃತರಿಗೆ ಗೌರವಯುತ ವಿದಾಯ ಹೇಳಬೇಕಾದ ಸ್ಥಳವೇ ಅವ್ಯವಸ್ಥೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮಳೆ ತೀವ್ರವಾಗಿರುವ ಸಂದರ್ಭಗಳಲ್ಲಿ ಶವವನ್ನು ತೆಪ್ಪದಲ್ಲಿ ಇಟ್ಟು ಸಾಗಿಸಬೇಕಾದ ಸ್ಥಿತಿಯೂ ಎದುರಾಗುತ್ತದೆ. ಕಳೆದ 20 ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ” ಎಂದು ಅವರು ದೂರಿದರು.

ಸ್ಮಶಾನಕ್ಕೆ ಕೇವಲ ಅರ್ಧ ಕಿಲೋಮೀಟರ್ ರಸ್ತೆ ನಿರ್ಮಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಆದರೆ ದಶಕಗಳಿಂದ ನಿರ್ಲಕ್ಷ್ಯ ಮುಂದುವರಿದಿರುವುದರಿಂದ, ಸಾವಿನ ನಂತರವೂ ಮಾನವೀಯ ಗೌರವಕ್ಕಾಗಿ ಹೋರಾಡಬೇಕಾದ ಸ್ಥಿತಿ ಗುಂಜಳ್ಳಿ ಗ್ರಾಮಸ್ಥರ ಪಾಲಾಗಿದೆ. ಅಭಿವೃದ್ಧಿಯ ಮಾತುಗಳ ನಡುವೆ, ಮೃತದೇಹವನ್ನು ನೀರಿನಲ್ಲೇ ಹೊತ್ತು ಸಾಗಿಸಬೇಕಾದ ಈ ದೃಶ್ಯ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆಗೆ ಗಂಭೀರ ಪ್ರಶ್ನೆಯನ್ನು ಎತ್ತಿದೆ.

ಈದಿನ್.ಕಾಮ್ ಸಮಸ್ಯೆಯನ್ನು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಗಮನಕ್ಕೆ ತರಲು ಯತ್ನಿಸಲಾಗಿ, ಶಾಸಕರಿಂದ ಕರೆ ಸ್ವೀಕರಿಸಲಿಲ್ಲ.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾಗದಿರಲಿ: ಅಶೋಕ್ ಕುಮಾರ್ ಕೊಡವೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು....

ಕುಮಟಾ | ತದಡಿ ಬಂದರಿನಲ್ಲಿ ದುರಂತ: ಮೀನು ಸಂಗ್ರಹಣಾ ಸ್ಥಳ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಸಾವು

ಕುಮಟಾ: ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ದಂಡೆಗೆ ಮರಳಿದ್ದ ಬೋಟ್‌ನ ಮೀನು ಸಂಗ್ರಹಣಾ...

ಧಾರವಾಡ | ಪಶ್ಚಿಮ ಪದವೀಧರರ ಕ್ಷೇತ್ರ: ಎರಡನೇ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ...