ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕುರಿಗಾಯಿ ಹಾಗೂ ಮೂರು ಕುರಿಗಳು ಮೃತಪಟ್ಟಿರುವ ದುರ್ಘಟನೆ ಸಿಂಧನೂರು ತಾಲ್ಲೂಕಿನ ದಡೆಸುಗೂರು ಸಮೀಪ ನಡೆದಿದೆ.
ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮದ ನಿವಾಸಿ ಶರಣಪ್ಪ ಎಂದು ಗುರುತಿಸಲಾಗಿದೆ. ಶರಣಪ್ಪ ಅವರು ಕುರಿಗಳನ್ನು ರಸ್ತೆ ಬದಿಯಲ್ಲಿ ಮೇಯಿಸಿಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಘಟನೆಯ ಪರಿಣಾಮ ಶರಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಮೂರು ಕುರಿಗಳು ಸಹ ಸಾವನ್ನಪ್ಪಿವೆ. ಮೃತಪಟ್ಟ ಕುರಿಗಳ ಅಂದಾಜು ಮೌಲ್ಯ ಸುಮಾರು ₹60 ಸಾವಿರ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ನೆಪದಲ್ಲಿ ಸರ್ಕಾರಿ ಶಾಲೆಗಳ ವಿಲೀನಕ್ಕೆ ವಿರೋಧಿಸಿ ಪ್ರತಿಭಟನೆ
ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.




