ಉಡುಪಿ | ಅಪಾಯಕ್ಕೆ ಆಹ್ವಾನಿಸುತ್ತಿವೆ, ಅನುಪಯುಕ್ತ ಸಿಗ್ನಲ್ ಕಂಬಗಳು.. !

Date:

ಉಡುಪಿ ನಗರದ ಮುಖ್ಯ ರಸ್ತೆಗಳ ಸರ್ಕಲ್ ಇರುವ ಸ್ಥಳಗಳಲ್ಲಿ ಸಿಗ್ನಲ್ ಕಂಬಗಳನ್ನು ಹತ್ತಾರು ವರ್ಷಗಳ ಹಿಂದೆ, ಜಿಲ್ಲಾಡಳಿತವು ಅಳವಡಿಸಿತ್ತು. ಕೆಲವು ತಿಂಗಳು ವಾಹನ ದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದ ಕಂಬಗಳು, ತಮ್ಮ ಕರ್ತವ್ಯಗಳನ್ನು ನಿಲ್ಲಿಸಿದವು. ಕಬ್ಬಿಣದ ಸಿಗ್ನಲ್ ಕಂಬಗಳು ತುಕ್ಕು ಹಿಡಿದು ಬೀಳುವ ಸ್ಥಿತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮಳೆ ಗಾಳಿಗೆ ಧರೆಗೆ ಉರುಳುವ ಸಾಧ್ಯತೆ ಇದೆ. ನಗರಸಭೆಯು ತಕ್ಷಣ, ನಗರದಲ್ಲಿರುವ ಅನುಪಯುಕ್ತ ಕಂಬಗಳನ್ನು ತೆರವುಗೊಳಿಸಿ ಸಂಭವನೀಯ ದುರಂತಗಳನ್ನು ತಪ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ‌ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

- Advertisement -

ಹಳೆ ತಾಲೂಕು ಕಛೇರಿ ಬಳಿ ಇರುವ, ಕೆನರಾ ಬ್ಯಾಂಕ್ ಎದುರಲ್ಲಿಯೂ ಸಿಗ್ನಲ್ ಕಂಬವೊಂದು ತುಂಡಾಗಿದ್ದು, ವಾಹನಗಳ‌, ಸಾರ್ವಜನಿಕರ ಮೇಲೆ ಬೀಳುವ ಸಾಧ್ಯತೆ ಕಂಡುಬಂದಿದೆ. ಹಳೆ ಡಯಾನಾ ಸರ್ಕಲ್ ಬಳಿಯ ಪಾದಚಾರಿ ರಸ್ತೆಯ ಮೇಲೆ ಕೆಲವು ವರ್ಷಗಳಿಂದ ಸಿಗ್ನಲ್ ಕಂಬಗಳು ಕೂಡಿಡಲಾಗಿದೆ. ಇವಾಗ ಕಂಬಗಳ ಸುತ್ತಲು ಗಿಡ ಗಂಟಿ ಬೆಳೆದುನಿಂತಿದ್ದು, ವಿಷ ಜಂತುಗಳಿಗೆ ಆಶ್ರಯವಾದಂತಾಗಿದೆ ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾಪುವಿನಲ್ಲಿ ಪ್ರಜಾಸೇವಾ ಆಂದೋಲನ: 75 ಅಹವಾಲು ಸ್ವೀಕಾರ, ಅಧಿಕಾರಿಗಳಿಂದ ಪರಿಹಾರದ ಭರವಸೆ

ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಇದ್ದಲ್ಲಿಯೇ ಮಾಡಿಕೊಡುವ ಉದ್ದೇಶದಿಂದ ಸಚಿವರು, ಜನಪ್ರತಿನಿಧಿಗಳು ಹಾಗೂ...

ವಿಜಯಪುರ | ರೇಬಿಸ್ ತಡೆಗೆ ಜಾಗೃತಿ ಮುಖ್ಯ; ಬೀದಿ ನಾಯಿ ಕಡಿತದ ಬಗ್ಗೆ ಜನರಲ್ಲಿ ಅರಿವು

ರೇಬಿಸ್ ವೈರಾಣು ಹರಡುವಿಕೆ, ನಾಯಿ ಕಡಿತದಿಂದ ಉಂಟಾಗಬಹುದಾದ ಅಪಾಯ ಹಾಗೂ ಮುನ್ನೆಚ್ಚರಿಕಾ...

ಜಮಖಂಡಿ | ಸರ್ವೆ ನಂ.71/4ರಲ್ಲೇ ಸ್ಮಶಾನಕ್ಕೆ ಜಾಗ ನೀಡುವಂತೆ ದಲಿತ ಸಮುದಾಯದ ಆಗ್ರಹ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ...

ಸಿದ್ದರಾಮಯ್ಯ ಪ್ರತಿಮೆ ತೆರವು ಖಂಡಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ

ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ...