ಉತ್ತರ ಕನ್ನಡ | ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಆರ್‌ಬಿಐ ನಿಯಮದ ಕಂಟಕ?

Date:

ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಕೆಡಿಸಿಸಿ) ಸೇರಿದಂತೆ ಸಹಕಾರಿ ಬ್ಯಾಂಕ್‌ಗಳ ಆಡಳಿತದಲ್ಲಿ ಹಲವು ವರ್ಷಗಳಿಂದ ಮುಂದುವರಿದಿರುವ ನಿರ್ದೇಶಕರ ಅವಧಿಗೆ ಸಂಬಂಧಿಸಿದ ಆರ್‌ಬಿಐ ನಿಯಮಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಇದರ ಪರಿಣಾಮ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.

- Advertisement -

ಮಾಹಿತಿಗಳ ಪ್ರಕಾರ, ನಗರ ಸಹಕಾರಿ ಬ್ಯಾಂಕ್‌ಗಳು ಮತ್ತು ಆರ್‌ಬಿಐ ನಿಯಂತ್ರಣಕ್ಕೆ ಒಳಪಡುವ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ನಿರಂತರ ಸೇವಾ ಅವಧಿಗೆ ಮಿತಿ ವಿಧಿಸುವ ನಿಯಮ ಜಾರಿಯಲ್ಲಿದೆ. ಅದರಂತೆ ಒಬ್ಬ ವ್ಯಕ್ತಿ ನಿರಂತರವಾಗಿ 10 ವರ್ಷಗಳಿಗಿಂತ ಹೆಚ್ಚು ಅವಧಿಗೆ ನಿರ್ದೇಶಕರಾಗಿ ಮುಂದುವರಿಯಲು ಅವಕಾಶ ಇರುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿನೆಮಾ ನೋಡುವುದು: ಕಲೆಯ ಆಂತರ್ಯವನ್ನು ಗ್ರಹಿಸುವ ಕ್ರಮ

ಸಿನೆಮಾ ವಿಶ್ಲೇಷಣೆ ಎಂದರೆ ಕೇವಲ ದೋಷಗಳನ್ನು ಎಣಿಸುವ ಮೇಲ್ನೋಟದ ತೀರ್ಪಲ್ಲ. ಪರದೆಯ ಮೇಲೆ ಕಾಣುವ ಒಂದೊಂದು ಕ್ಷಣದ ಹಿಂದೆಯೂ ನಿರ್ದೇಶಕ ಮತ್ತು ತಂತ್ರಜ್ಞರ ದೀರ್ಘ ಶ್ರಮ, ಆರ್ಥಿಕ ಮಿತಿಗಳು ಹಾಗೂ ತಾಂತ್ರಿಕ ಸವಾಲುಗಳಿರುತ್ತವೆ....

ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ...

ದೇಶದಲ್ಲಿ ಬಡತನ ಇಳಿಕೆಯಾಗುತ್ತಿದೆ, ಅಭಿವೃದ್ಧಿಯ ಅಂಕಿಅಂಶಗಳು ಏರುತ್ತಿವೆ. ಆದರೆ, ಆರ್ಥಿಕ ಪ್ರಗತಿಯ ನಡುವೆಯೂ ಶ್ರಮಜೀವಿಗಳ ಬದುಕಿನಲ್ಲಿ ಬಡತನ, ಜಾತಿ ತಾರತಮ್ಯ ಮತ್ತು ಅಸಮಾನತೆ ಏಕೆ ಮುಂದುವರಿದಿವೆ? ಅಭಿವೃದ್ಧಿಯ ಫಲ ಸಮಾಜದ ಕಟ್ಟಕಡೆಯ ಮನುಷ್ಯನಿಗೂ...

ಬಾಗಲಕೋಟೆ | ಸಾಕ್ಷರತೆಯಲಿ ಹಿಂದುಳಿದ ಜಿಲ್ಲೆ ʻಅಕ್ಷರ ಕ್ರಾಂತಿಗೆʼ...

ಮುಳುಗಡೆ ನಗರಿ ಬಾಗಲಕೋಟೆ ಜಿಲ್ಲೆ ಇಂದು ಕಬ್ಬಿನ ಬೆಲೆ ಹೋರಾಟದಲ್ಲಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿದೆ. ಇದೇ ಸಂಭ್ರಮ ಶಿಕ್ಷಣ ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಬೇಕಿದೆ. ಆದರೆ, ಸಾಕ್ಷರತೆ, ಶಿಕ್ಷಕರ ಕೊರತೆ ಹಾಗೂ ಡಿಜಿಟಲ್ ಸೌಲಭ್ಯಗಳ ಅಭಾವ...

ಹತ್ತು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕ ಕನಿಷ್ಠ ಮೂರು ವರ್ಷಗಳ ವಿರಾಮ ಪಡೆದ ನಂತರವೇ ಮತ್ತೆ ನಿರ್ದೇಶಕರಾಗಿ ಸ್ಪರ್ಧಿಸಲು ಅಥವಾ ನೇಮಕವಾಗಲು ಅವಕಾಶವಿರುತ್ತದೆ ಎಂಬ ನಿಯಮದ ಬಗ್ಗೆ ಸಹಕಾರಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಜಿಲ್ಲೆಯ ಕೆಲವು ಹಿರಿಯ ಸಹಕಾರಿ ನಾಯಕರು ಮತ್ತು ದೀರ್ಘಕಾಲದಿಂದ ನಿರ್ದೇಶಕರಾಗಿರುವವರ ಭವಿಷ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಚುರುಕುಗೊಂಡ ಮಳೆ; ರೈತರ ಮೊಗದಲ್ಲಿ ಮಂದಹಾಸ, ಜಲಾಶಯಗಳ ನೀರಿನ ಮಟ್ಟ ಏರಿಕೆ

ಆರ್‌ಬಿಐ ಹಾಗೂ ಕೇಂದ್ರ ಸರ್ಕಾರವು ಸಹಕಾರಿ ಬ್ಯಾಂಕ್‌ಗಳಲ್ಲಿ ಉತ್ತಮ ಆಡಳಿತ (Good Governance), ಪಾರದರ್ಶಕತೆ, ಹೊಸ ನಾಯಕತ್ವಕ್ಕೆ ಅವಕಾಶ ಹಾಗೂ ಅಧಿಕಾರದ ಕೇಂದ್ರೀಕರಣ ತಡೆಯುವ ಉದ್ದೇಶದಿಂದ ನಿರ್ದೇಶಕರ ಅವಧಿಗೆ ಮಿತಿ ವಿಧಿಸುವ ನಿಯಮಗಳನ್ನು ರೂಪಿಸಿದೆ. ಬ್ಯಾಂಕ್‌ಗಳ ಆಡಳಿತ ಮಂಡಳಿಯಲ್ಲಿ ಒಂದೇ ವ್ಯಕ್ತಿ ದೀರ್ಘಕಾಲ ಅಧಿಕಾರದಲ್ಲಿರುವುದನ್ನು ತಡೆಯುವುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ.

ಸಹಕಾರಿ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ದೀರ್ಘಕಾಲದಿಂದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕೆಲ ಪ್ರಮುಖರ ಹೆಸರುಗಳು ಮುನ್ನೆಲೆಗೆ ಬಂದಿವೆ. ಅವುಗಳಲ್ಲಿ ಶಿವರಾಮ ಹೆಬ್ಬಾರ್ (ಯಲ್ಲಾಪುರ), ಮಂಕಾಳ ವೈದ್ಯ (ಭಟ್ಕಳ), ಪ್ರಕಾಶ್ ಗುನಗಿ (ಕಾರವಾರ), ಕೃಷ್ಣ ದೇಸಾಯಿ (ಜೋಯಿಡಾ), ಎಸ್.ಎಲ್. ಫೋಟೇಕರ್ (ಹಳಿಯಾಳ), ಮೋಹನ ನಾಯಕ (ಗೋಕರ್ಣ ಅರ್ಬನ್ ಬ್ಯಾಂಕ್ ಪ್ರತಿನಿಧಿ)ಆದರೆ, ಎಲ್ಲರಿಗೂ ನಿಯಮ ಅನ್ವಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸಂಬಂಧಿತ ಸೇವಾ ದಾಖಲೆ, ನಿರಂತರ ಅವಧಿ ಹಾಗೂ ಕಾನೂನು ವ್ಯಾಖ್ಯಾನದ ಆಧಾರದ ಮೇಲೆ ಮಾತ್ರ ಸ್ಪಷ್ಟವಾಗಬೇಕಿದೆ.

ರಾಜ್ಯದ ಕೆಲವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಹಾಗೂ ಅರ್ಬನ್ ಬ್ಯಾಂಕ್‌ಗಳ ನಿರ್ದೇಶಕರು ನ್ಯಾಯಾಲಯದ ಮೊರೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಜುಲೈ 7ರಂದು ನಡೆಯಲಿರುವ ವಿಚಾರಣೆ ಮಹತ್ವ ಪಡೆದಿದ್ದು, ಅದರ ತೀರ್ಪು ರಾಜ್ಯದ ಹಲವು ಸಹಕಾರಿ ಬ್ಯಾಂಕ್‌ಗಳ ಆಡಳಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಹಕಾರಿ ಬ್ಯಾಂಕ್‌ಗಳ ಹಣಕಾಸು ಶಿಸ್ತು, ಆಡಳಿತ ವ್ಯವಸ್ಥೆ ಹಾಗೂ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆ ಆರ್‌ಬಿಐ ಮೇಲಿದ್ದು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಹಾಗೂ ಸಂಬಂಧಿತ ಮಾರ್ಗಸೂಚಿಗಳ ಅಡಿಯಲ್ಲಿ ಹಲವು ನಿರ್ದೇಶನಗಳನ್ನು ನೀಡಲಾಗುತ್ತದೆ. ಹಿಂದೆ ನಿರ್ದೇಶಕರ ಅರ್ಹತೆ, ಸಾಲ ಮರುಪಾವತಿ, ಸ್ವಾರ್ಥ ಸಂಘರ್ಷ ಹಾಗೂ ಆಡಳಿತ ಮಾನದಂಡಗಳಿಗೆ ಸಂಬಂಧಿಸಿದ ಹಲವು ನಿಯಮಗಳನ್ನು ಆರ್‌ಬಿಐ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಉದಾಹರಣೆಗಳಿವೆ.

ಒಂದು ವೇಳೆ ಈ ನಿಯಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ಹಲವು ಸಹಕಾರಿ ಸಂಸ್ಥೆಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ದೀರ್ಘಕಾಲ ಒಂದೇ ತಂಡದ ಹಿಡಿತದಲ್ಲಿದ್ದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಸಂಭವಿಸುವ ನಿರೀಕ್ಷೆಯೂ ವ್ಯಕ್ತವಾಗಿದೆ. ಮತ್ತೊಂದೆಡೆ, ಅನುಭವಿಗಳ ಸೇವೆ ಕಳೆದುಹೋಗಬಹುದು ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಸದ್ಯ ಈ ವಿಚಾರ ಸಹಕಾರಿ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದರೂ, ಅಂತಿಮ ನಿರ್ಧಾರವು ನ್ಯಾಯಾಲಯದ ತೀರ್ಪು, ಆರ್‌ಬಿಐನ ಅಧಿಕೃತ ನಿರ್ದೇಶನಗಳು ಹಾಗೂ ಸಂಬಂಧಿತ ಪ್ರಾಧಿಕಾರಗಳ ಕ್ರಮದ ಮೇಲೆ ಅವಲಂಬಿತವಾಗಿರಲಿದೆ. ಹೀಗಾಗಿ ಜುಲೈ 7ರ ಬಳಿಕ ಈ ಬೆಳವಣಿಗೆ ಯಾವ ದಿಕ್ಕು ಪಡೆಯಲಿದೆ ಎಂಬುದರತ್ತ ಜಿಲ್ಲೆಯ ಸಹಕಾರಿ ಕ್ಷೇತ್ರದ ಗಮನ ನೆಟ್ಟಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಡಿಜಿಟಲ್ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಕನ್ನಡ ಸಾಹಿತ್ಯ, ಪರಿಸರ ಸಂರಕ್ಷಣೆ ಅರಿವು ಮೂಡಿಸಿ: ಈರಣ್ಣ ಬೆಂಗಾಲಿ

ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್‌ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಆಧುನಿಕ ತಂತ್ರಜ್ಞಾನಗಳನ್ನು...

ರಾಯಚೂರು | ಯಲಗಟ್ಟ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ಸುಮಾರು 12 ಕಡೆ ಅನಧಿಕೃತವಾಗಿ ಸಾರಾಯಿ...

ಉಡುಪಿ | ಕಲ್ಯಾಣಪುರದಲ್ಲಿ ಅಪರೂಪದ ಸಂರಕ್ಷಿತ ವೀರಮಾಸ್ತಿ ಕಲ್ಲಿನ ಲೋಕಾರ್ಪಣೆ

ಆದಿಮ ಕಲಾ ಟ್ರಸ್ಟ್ ಉಡುಪಿ, ಪಡುನಾಡು ಕೂಟ ಬೆಂಗಳೂರು, ಗಜನಿ ಫೌಂಡೇಶನ್...

ಹಾಸನ | ಎಐಕೆಎಸ್ ರಾಷ್ಟ್ರ ಸಮ್ಮೇಳನದ ಪ್ರತಿನಿಧಿಯಾಗಿ ಹೆಚ್.ಆರ್. ನವೀನ್‌ಕುಮಾರ್ ಆಯ್ಕೆ

ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) 36ನೇ ರಾಷ್ಟ್ರ ಸಮ್ಮೇಳನವು ತೆಲಂಗಾಣ...