ವಿಜಯಪುರ | ಅಕ್ಕಮಹಾದೇವಿ ವಿವಿ: ವಸತಿ ಶುಲ್ಕ ರದ್ದುಗೊಳಿಸಿ, ದಾಖಲಾತಿ ನೀಡಲು ಆಗ್ರಹಿಸಿ ದವಿಪ ಪ್ರತಿಭಟನೆ

Date:

2022ರ ಶೈಕ್ಷಣಿಕ ಸಾಲಿನಲ್ಲಿ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಪದವಿ ವ್ಯಾಸಂಗಕ್ಕೆ ಸೇರಿದ ವಿದ್ಯಾರ್ಥಿನಿಯರ ವಸತಿ ಶುಲ್ಕ ರದ್ದುಗೊಳಿಸಿ ನಿರಾಕ್ಷೇಪಣಾ ಪತ್ರ (NOC) ಹಾಗೂ ಮಾರ್ಕ್ಸ್ ಕಾರ್ಡ್ ನೀಡುವಂತೆ ಆಗ್ರಹಿಸಿ‌ ದವಿಪ (ದಲಿತ ವಿದ್ಯಾರ್ಥಿ ಪರಿಷತ್) ಪ್ರತಿಭಟನೆ ನಡೆಸಿತು.

- Advertisement -

ವಿಶ್ವವಿದ್ಯಾಲಯ ಮುಖ್ಯ ದ್ವಾರದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, “2022 ರಲ್ಲಿ ಪದವಿ ವ್ಯಾಸಂಗಕ್ಕೆ ದಾಖಲಾದ ವಿದಾರ್ಥಿನಿಯರು ವಿಶ್ವ ವಿದ್ಯಾಲಯದ ವಸತಿ ನಿಲಯಕ್ಕೆ ದಾಖಲಾಗುವ ಸಂದರ್ಭದಲ್ಲಿ ವಿಶ್ವ ವಿದ್ಯಾಲಯದ ಆಡಳಿತಾಧಿಕಾರಿಗಳು ಕೇವಲ 100 ರೂಪಾಯಿ ಮಾತ್ರ ಶುಲ್ಕವಿದೆ ಎಂದು ಹೇಳಿ, ವಿದ್ಯಾರ್ಥಿಗಳಿಗೆ ವಸತಿ ನಿಲಯಕ್ಕೆ ಪ್ರವೇಶ ನೀಡಿರುತ್ತಾರೆ. ನಂತರ ಎರಡು ವರ್ಷಗಳಿಂದ ಯಾವುದೇ ಶುಲ್ಕ ಕೇಳದೇ ಕಳೆದ ವರ್ಷ ಮೇ ತಿಂಗಳಲ್ಲಿ ಏಕಾಏಕಿ ಕಳೆದ ಮೂರು ವರ್ಷದ ಶುಲ್ಕವನ್ನು ಒಟ್ಟಿಗೆ ತುಂಬಬೇಕೇಂದು ವಿದ್ಯಾರ್ಥಿನಿಯರಿಗೆ ಒತ್ತಾಯಿಸಿ ದಿನ ನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದನ್ನು ಖಂಡಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಸದರಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಅಂದು ವಿವಿ ಆಡಳಿತ ಮಂಡಳಿ ಭರವಸೆಯನ್ನೂ ನೀಡಿತ್ತು. ಇಲ್ಲಿಯವರೆಗೆ ಸದರಿ ಸಮಸ್ಯೆಯನ್ನು ಬಗೆಹರಿಸದೆ ಜೀವಂತವಾಗಿ ಇಟ್ಟ ಪರಿಣಾಮವಾಗಿ ಅದೆಷ್ಟು ಬಡ ವಿದ್ಯಾರ್ಥಿನಿಯರು ತಮ್ಮ ಮುಂದಿನ ಶಿಕ್ಷಣ ಮೊಟಕುಗೊಳಿಸಿ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಉಂಟಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ದವಿಪ ಸಹ ಸಂಚಾಲಕ ಮಹಾದೇವ ಚಲವಾದಿ, “ಅನೇಕ ವಿದ್ಯಾರ್ಥಿನಿಯರು ವಿಶ್ವ ವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮುಗಿಸಿದರೂ ಅವರ ವಿದ್ಯಾಲಯದ ವಸತಿ ನಿಲಯದ ಶುಲ್ಕ ನೀಡಿಲ್ಲ ಎಂದೇಳಿ, ಇಲ್ಲಿಯವರೆಗೆ ವಿದ್ಯಾರ್ಥಿನಿರಿಗೆ ಶೈಕ್ಷಣಿಕ ದಾಖಲೆಗಳಾದ ಮಾರ್ಕ್ ಕಾರ್ಡ್ಸ್ ಮತ್ತು NOC ನೀಡಿಲ್ಲ. ಇದರ ಪರಿಣಾಮ ಬಡ ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣ ಮುಂದುವರಿಸಲು ಆಗುತ್ತಿಲ್ಲ. ಯಾರೋ ಮಾಡಿದ ತಪ್ಪಿಗೆ ಇವತ್ತು ಬಡ ವಿದ್ಯಾರ್ಥಿನಿಯರು ಕಷ್ಟ ಅನುಭವಿಸುತ್ತಿದ್ದಾರೆ” ಎಂದರು.

ಇದನ್ನೂ ಓದಿ: ವಿಜಯಪುರ | ಮಹಿಳೆಯರ ಅವಕಾಶ ವಂಚನೆ ಇಂದಿಗೂ ಮುಂದುವರೆದಿದೆ: ಪ್ರೊ. ಬಿ ಕೆ ರವಿ

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ವಿಶ್ವ ವಿದ್ಯಾಲಯದ ಕುಲಪತಿಗಳು ಮನವಿ ಸ್ವೀಕರಿಸಿ, ಕೊಡಲೇ ವಿದ್ಯಾರ್ಥಿನಿಯರ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ದಾಖಲಾತಿ ನೀಡುವ ಜೊತೆಗೆ ವಿದ್ಯಾರ್ಥಿನಿಯರ ವಸತಿ ಶುಲ್ಕವನ್ನು ಮನ್ನಾ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರ ಪರಿಣಾಮ ವಿಧ್ಯಾರ್ಥಿನಿಯರಿಗೆ ನಿರಾಕ್ಷೇಪಣಾ ಪತ್ರವನ್ನು ವಿಶ್ವ ವಿದ್ಯಾಲಯದ ಅಧಿಕಾರಿಗಳು ನೀಡಿದರು.

ಈ ವೇಳೆ ಪ್ರತಿಭಟನೆಯಲ್ಲಿ ಪರಿಷತ್ ಮುಖಂಡರಾದ ಪ್ರೇಮಾ ಕೊಳ್ಳಿ, ದಾವೂದ್ ನಾಯ್ಕೋಡಿ, ಹುಚ್ಚಪ್ಪ ಭಾವಿಮನಿ, ವಿರೇಶ, ಭಾಗ್ಯಶ್ರೀ ನಾಯ್ಕ, ಸೋನಿ ವಡ್ಡರ, ಸಂಜನಾ ಪವಾರ್, ಶೃತಿ ತಳವಾರ, ಯಶೋದಾ ಕಾಂಬಳೆ ಇನ್ನಿತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬವಾಗದಂತೆ ಹೋರಾಟ ಸಮಿತಿ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಯಾವುದೇ ವಿಳಂಬವಿಲ್ಲದೆ...

ವಿಜಯಪುರ | ಕುಟುಂಬ ರಾಜಕಾರಣದಿಂದ ಕಾರ್ಯಕರ್ತರಿಗೆ ಅವಕಾಶ ಇಲ್ಲದಂತಾಗುತ್ತಿದೆಯೇ?: ಪ್ರದೀಪ್ ಪಾಟೀಲ

ಎಂಎಲ್‌ಎ ಹಾಗೂ ಎಂಪಿಗಳು ತಮ್ಮ ಮಕ್ಕಳನ್ನು ಮುಂದಿನ ಶಾಸಕರು, ಸಂಸದರನ್ನಾಗಿ ಮಾಡುವ...

ವಿಜಯಪುರ | ಬೆಲೆ ಏರಿಕೆ: ಲಾಭದ ನಿರೀಕ್ಷೆಯಲ್ಲಿ ರೈತ, ನೀರಾವರಿ ಪ್ರದೇಶದಲ್ಲಿ ಈರುಳ್ಳಿ ನಾಟಿ

ವಿಜಯಪುರ ಜಿಲ್ಲಾದ್ಯಂತ ಕಾಲುವೆ ನೀರು ಹರಿದು ಜಮೀನುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿರುವ...