2.98 ಲಕ್ಷ ಕಾನೂನುಬಾಹಿರ ವೆಬ್‌ಲಿಂಕ್‌ಗಳ ಡಿಲೀಟ್‌ಗೆ ಶಿಫಾರಸು: ಐ4ಸಿ, ರಾಜ್ಯ ಸರ್ಕಾರಗಳ ಕ್ರಮ

Date:

ದೇಶದಲ್ಲಿ ಸೈಬರ್ ಅಪರಾಧ, ಹಣಕಾಸು ವಂಚನೆ ಹಾಗೂ ಅಕ್ರಮ ಕಂಟೆಂಟ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಾರ್ಚ್‌ನಿಂದ ಜುಲೈವರೆಗಿನ ಅವಧಿಯಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಸುಮಾರು 2.98 ಲಕ್ಷ ಯುಆರ್‌ಎಲ್‌ಗಳನ್ನು (ವೆಬ್‌ಲಿಂಕ್‌ಗಳು) ತೆಗೆದುಹಾಕುವಂತೆ (Takedown) ವಿವಿಧ ಸರ್ಕಾರಿ ಇಲಾಖೆಗಳು ಸೂಚಿಸಿವೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (ಪಿಐಬಿ) ಫ್ಯಾಕ್ಟ್ ಚೆಕ್ ಘಟಕ ಮಾಹಿತಿ ನೀಡಿದೆ.

- Advertisement -

​ತೆಗೆದುಹಾಕಲು ನಿರ್ದೇಶಿಸಲಾದ ಒಟ್ಟು ಲಿಂಕ್‌ಗಳ ಪೈಕಿ ಶೇ 82 ರಷ್ಟನ್ನು (2.44 ಲಕ್ಷ ಯುಆರ್‌ಎಲ್‌ಗಳು) ವಿವಿಧ ರಾಜ್ಯ ಸರ್ಕಾರಗಳೇ ಗುರುತಿಸಿವೆ. ಉಳಿದ 51,000 ಲಿಂಕ್‌ಗಳನ್ನು ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ‘ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ’ (ಐ4ಸಿ – I4C) ಕಳುಹಿಸಿದೆ. ಮುಖ್ಯವಾಗಿ ಸೈಬರ್ ವಂಚನೆ, ನಕಲಿ ಮೂಲಸೌಕರ್ಯ ಯೋಜನೆಗಳು ಮತ್ತು ಷೇರು ಮಾರುಕಟ್ಟೆ ಹೂಡಿಕೆ ವಂಚನೆಗಳಿಗೆ ಸಂಬಂಧಿಸಿದ ಲಿಂಕ್‌ಗಳು ಇದರಲ್ಲಿ ಸೇರಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

​ಕಳೆದ ಎರಡು ವರ್ಷಗಳಲ್ಲಿ ಐ4ಸಿ ಗುರುತಿಸಿರುವ ಬಹುಪಾಲು ಅಕ್ರಮ ಕಂಟೆಂಟ್‌ಗಳು ಅಂತಾರಾಷ್ಟ್ರೀಯ ಆರ್ಥಿಕ ವಂಚನೆಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ದೃಶ್ಯಾವಳಿಗಳು (ಸಿಎಸ್‌ಎಎಂ – CSAM) ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧಗಳಿಗೆ ಸಂಬಂಧಿಸಿವೆ ಎಂದು ಪಿಐಬಿ ಸ್ಪಷ್ಟಪಡಿಸಿದೆ.

​3 ಗಂಟೆಗಳ ಕಟ್ಟುನಿಟ್ಟಿನ ನಿಯಮ:

ಕಾನೂನುಬಾಹಿರ ವಿಷಯಗಳನ್ನು ತ್ವರಿತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರವು 2021ರ ಐಟಿ ಮಧ್ಯವರ್ತಿ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಕಂಟೆಂಟ್ ತೆಗೆದುಹಾಕುವ ಕಾಲಮಿತಿಯನ್ನು 36 ಗಂಟೆಗಳಿಂದ ಕೇವಲ 3 ಗಂಟೆಗಳಿಗೆ ಇಳಿಸಿದೆ. ಇದೇ ವೇಳೆ, ಸರ್ಕಾರದ ಮೂರು ಗಂಟೆಗಳ ನಿಯಮವನ್ನು ಪಾಲಿಸಲು ಮೆಟಾ (ಫೇಸ್‌ಬುಕ್/ಇನ್‌ಸ್ಟಾಗ್ರಾಂ) ಸಂಸ್ಥೆಯು ವಿಷಯಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಪಿಐಬಿ ತಳ್ಳಿಹಾಕಿದ್ದು, ಮೆಟಾ ಕೋರಿಕೆಯ ಮೇರೆಗೆ 2025ರಲ್ಲೇ ಎಪಿಐ (API) ಏಕೀಕರಣ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ.

​‘ಸಹಯೋಗ್’ ಪೋರ್ಟಲ್ ಬಳಕೆ:

ಭಾರತದಲ್ಲಿ 60 ಕೋಟಿಗೂ ಅಧಿಕ ಇಂಟರ್ನೆಟ್ ಬಳಕೆದಾರರಿದ್ದು, ಪ್ರತಿ 68 ಸೆಕೆಂಡಿಗೆ ಸುಮಾರು 78,703 ಪೋಸ್ಟ್‌ಗಳು ಅಪ್‌ಲೋಡ್ ಆಗುತ್ತಿವೆ. ಇಂತಹ ಬೃಹತ್ ಜಾಲದಲ್ಲಿ ಸೈಬರ್ ಲೋಕದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವುದು ಅತ್ಯಗತ್ಯವಾಗಿದೆ. ಸಂಬಂಧಪಟ್ಟ ಸಚಿವಾಲಯ ಅಥವಾ ರಾಜ್ಯ ಸರ್ಕಾರಗಳು ಅಧಿಕೃತಗೊಳಿಸಿದ ಅಧಿಕಾರಿಗಳು ಮಾತ್ರ ‘ಸಹಯೋಗ್’ (Sahyog) ಪೋರ್ಟಲ್ ಮೂಲಕ ಅಕ್ರಮ ಲಿಂಕ್‌ಗಳನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೈವಾಹಿಕ ಅತ್ಯಾಚಾರ ಪ್ರಕರಣ: ಡಿಸೆಂಬರ್‌ನಲ್ಲಿ ಸುಪ್ರೀಂನಿಂದ ಅಂತಿಮ ವಿಚಾರಣೆ

ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ 'ವೈವಾಹಿಕ ಅತ್ಯಾಚಾರ' ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ...

GTA ಶೈಲಿಯಲ್ಲಿ ಪ್ರಗತಿ ಪಟ್ಟಿ ಹಂಚಿಕೊಂಡ ಮೋದಿ; ಜೈರಾಮ್ ರಮೇಶ್ ಟೀಕೆ

ಜಾಗತಿಕವಾಗಿ ಭಾರೀ ಕುತೂಹಲ ಮೂಡಿಸಿದ್ದ ಜನಪ್ರಿಯ ವಿಡಿಯೋ ಗೇಮ್ 'ಗ್ರ್ಯಾಂಡ್ ಥೆಫ್ಟ್...

ಬಿಲ್ಕಿಸ್‌ ಬಾನೋ ‘ಮುಸ್ಲಿಂ’ ಎಂಬ ಕಾರಣಕ್ಕೇ ಪದೇ-ಪದೇ ದೂರವಾಗುತ್ತಿದೆಯೇ ನ್ಯಾಯ?

ಅಪರಾಧಿಗಳ ಹಕ್ಕುಗಳ ಬಗ್ಗೆ ಮಾತನಾಡುವ ನ್ಯಾಯವ್ಯವಸ್ಥೆ, ಸಂತ್ರಸ್ತೆಯ ಬದುಕುವ ಹಕ್ಕು, ಸುರಕ್ಷತೆ...

BJP ಬೆಂಬಲಿಗರಿಂದ ಕಾರಿನ ಮೇಲೆ ಕಲ್ಲು, ಮೊಟ್ಟೆ ತೂರಾಟ; ಪೊಲೀಸರ ವಿರುದ್ಧವೂ ಮೊಯಿತ್ರಾ ಗಂಭೀರ ಆರೋಪ!

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಾಲಿಗಂಜ್‌ನಲ್ಲಿ ಬಿಜೆಪಿ ಬೆಂಬಲಿಗರ ಗುಂಪೊಂದು ತಮ್ಮ...