ಬಂಗಾರದ ಹುಡುಗಿಯರು ಬೀದಿಯಲ್ಲಿದ್ದರೆ, ದೇಶಕ್ಕೆ ಶೋಭೆಯೇ ?

Date:

ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದಾರೆಂದರೆ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಅವರನ್ನು ಮನೆಗೆ ಕರೆದು ಅವರೊಂದಿಗೆ ಟೀ ಕುಡಿದ ಪ್ರಧಾನಿಗೆ ಈಗ ಅವರ ನೆರವಿಗೆ ಹೋಗಬೇಕೆಂಬ ಅರಿವಿಲ್ಲವೇ? 

“ಪೊಲೀಸರು ಕುಡಿದು ಬಂದು ನಮ್ಮನ್ನು ನಿಂದಿಸಿದರು. ಇಂತಹ ದಿನ ನೋಡಲು ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ?” ಇದು ದೇಶಕ್ಕೆ ಬಂಗಾರದ ಪದಕ ಗೆದ್ದು ಕೊಟ್ಟು ವಿಶ್ವದ ಮುಂದೆ ಭಾರತದ ಕೀರ್ತಿಪತಾಕೆ ಎತ್ತರಕ್ಕೆ ಹಾರುವಂತೆ ಮಾಡಿದ್ದ ವಿನೇಶಾ ಪೋಗಟ್‍ ಅವರ ನೋವಿನ ನುಡಿ.

ಒಲಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾದ ವಿನೇಶಾ ಫೋಗಟ್, ಸಾಕ್ಷಿ ಮಲ್ಲಿಕ್, ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದವನ ವಿರುದ್ಧ ಕ್ರಮ ಜರುಗಿಸಿ ಎಂದು ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ದಿಟ್ಟತನದಿಂದ ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿದ ಈ ಆಟಗಾರ್ತಿಯರು ಇಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲಿ ರೋಡ್ ಶೋಗಳನ್ನು ಮಾಡುವುದು ಬಿಟ್ಟು ಆ ಹೆಂಗೂಸುಗಳ ಮನ್ ಕಿ ಬಾತ್ ಏನೆಂದು ಕೇಳಬಾರದೇ?

ಮಧ್ಯರಾತ್ರಿ ಬಂದ ಪೊಲೀಸರು ಬೀಸಿದ ಲಾಟಿಗಳಿಂದ ಕುಸ್ತಿ ಪಟುಗಳ ತಲೆಗೆ ಪೆಟ್ಟಾಗಿದೆ. ಈ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ದೇಶದ ಮಹಿಳೆಯರನ್ನು ಯಾವ ಸ್ಥಿತಿಗೆ ದೂಡುತ್ತಿವೆ? ಕುಡಿದು ಬಂದ ಪೊಲೀಸರು ಮಹಿಳೆಯರ ಮೇಲೆ ತೋರಿದ ದುರ್ವರ್ತನೆ ಮತ್ತು ದೌರ್ಜನ್ಯಗಳನ್ನು ಇಡೀ ದೇಶ ಖಂಡಿಸುತ್ತಿದೆ. ಈ ಕ್ರೀಡಾಪಟುಗಳು ದೂರು ನೀಡಿ ಮೂರು ತಿಂಗಳಾದರೂ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸದಿರುವ ಹಿನ್ನೆಲೆಯಲ್ಲಿ ಈಗ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದ ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.

“ಬೇಟಿ ಬಚಾವೋ ಬೇಟಿ ಪಢಾವೋ” ಎನ್ನುವ ಪ್ರಧಾನಿಗೆ ಇದು ತಿಳಿದೇ ಇಲ್ಲವೇ? ಮಹಿಳೆಯರ ಸುರಕ್ಷತೆ ಅವರ ಕರ್ತವ್ಯವಲ್ಲವೇ? ಅವರ ಪಕ್ಷ ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು, ಕೊಲೆಗಡುಕರನ್ನು ರಕ್ಷಿಸುವ ಅಡಗುತಾಣವೇ? ಧರಣಿ ನಿರತರಿಗೆ ನೈತಿಕ ಧೈರ್ಯ ತುಂಬಲು ಬಂದ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹುಡಾ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಅನ್ಯಾಯ. ಆರೋಪಿ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ನನ್ನು ಇಲ್ಲಿಯವರೆಗೂ ಯಾಕೆ ಬಂಧಿಸಿಲ್ಲ ಎಂಬುದು ಜನತೆಯ ಪ್ರಶ್ನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲಿ ಪೊಲೀಸರ ಹೊಡೆತ ತಿನ್ನುತ್ತಾರೆಂದರೆ ಇದರ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಮನೆಗೆ ಕರೆದು ಅವರೊಂದಿಗೆ ಟೀ ಕುಡಿದ ಪ್ರಧಾನಿಗೆ ಈಗ ಅವರ ನೆರವಿಗೆ ಹೋಗಬೇಕೆಂಬ ಅರಿವಿಲ್ಲವೇ?

ಕುಸ್ತಿಪಟುಗಳ ಬೆಂಬಲಕ್ಕೆ ಇಡೀ ದೇಶವೇ ನಿಂತಿದೆ. ಜೆ.ಎನ್.ಯು ವಿದ್ಯಾರ್ಥಿಗಳೂ, ರೈತರೂ ಬೆಂಬಲ ಸೂಚಿಸಿದ್ದಾರೆ. ಮೊದಲು “ಹೀಗೆ ಪ್ರತಿಭಟಿಸುವುದು ಅಶಿಸ್ತಿನ ವರ್ತನೆ” ಎಂದು ಹೇಳಿದ್ದ ಹಿರಿಯ ಅಥ್ಲೆಟ್ ಹಾಗೂ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಕೂಡ ಜಂತರ್‌ ಮಂತರ್‌ಗೆ ಹೋಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರವರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ಈ ದೇಶದ ಗೌರವಾನ್ವಿತ ಮಹಿಳೆಯರ ಘನತೆಯ ಪ್ರಶ್ನೆಯಾಗಿದೆ ಎಂದು ಸಾನಿಯಾ ಹೇಳಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ ಏಳು ಕ್ರೀಡಾಳುಗಳಲ್ಲಿ ಒಬ್ಬ ಅಪ್ರಾಪ್ತ ಹುಡುಗಿಯೂ ಇದ್ದಾಳೆ!

ನಮಗೆ ನಮ್ಮ ಸಂವಿಧಾನ ಮುಖ್ಯ. ಸಂವಿಧಾನ ಪರವಾದ ನಡೆ ಸರ್ಕಾರ ತೋರಿಸದಿದ್ದರೆ, ಜನರು ತಿರುಗಿ ಬೀಳುವ ದಿನಗಳು ದೂರವಿಲ್ಲ.

ಡಾ ಕೆ ಷರೀಫಾ
+ posts

ಬಂಡಾಯ ಸಾಹಿತಿ, ಕವಿ

ಪೋಸ್ಟ್ ಹಂಚಿಕೊಳ್ಳಿ:

ಡಾ ಕೆ ಷರೀಫಾ
ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...