ಎಲ್ಲ ಪಕ್ಷಗಳೂ ಹಣ ಹಂಚಿವೆ, ಆಯೋಗ ಭ್ರಷ್ಟಾಚಾರದ ಚುನಾವಣೆ ನಡೆಸಿದೆ: ವಾಟಾಳ್ ನಾಗರಾಜ್ ಕಿಡಿ

Date:

  • ಪಾರದರ್ಶಕ ಚುನಾವಣೆ ಸಲುವಾಗಿ ಮರುಚುನಾವಣೆ ನಡೆಸಿ ಎಂದ ವಾಟಾಳ್ ನಾಗರಾಜ್
  • ಭ್ರಷ್ಟಾಚಾರದಲ್ಲಿ ತೊಡಗಿದ ಜನಪ್ರತಿನಿಧಿಗಳನ್ನು ವಜಾಗೊಳಿಸಲು ನಾಗರಾಜ್ ಆಗ್ರಹ

ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ 2023ರ ಸಾಲಿನ ವಿಧಾನಸೌಧ ಚುನಾವಣೆ ರದ್ದುಗೊಳಿಸಿ, ಮರು ಚುನಾವಣೆ ನಡೆಸಬೇಕು ಎಂದು ಕನ್ನಡ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

- Advertisement -

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನು ಸೋಲಿಗೆ ಎಂದೂ ಹೆದರಿದವನಲ್ಲ. ಭ್ರಷ್ಟಾಚಾರದ ಚುನಾವಣೆ ಮಾಡಿದ ಆಯೋಗಕ್ಕೆ ನನ್ನ ಧಿಕ್ಕಾರ. ಚುನಾವಣಾ ಆಯೋಗ ಭ್ರಷ್ಟಾಚಾರದ ಚುನಾವಣೆ ನಡೆಸಿದೆ. ಇದರ ವಿರುದ್ದ ಚಳವಳಿ ನಡೆಸುತ್ತೇನೆ ಎಂದು ಅವರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು...

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ ಸಂಕೇತವಾಗಿದ್ದಾರೆ. ತಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂಬ ದೃಢ ನಂಬಿಕೆಯೊಂದಿಗೆ, ಅವರು ರೈತರಿಗೆ ಮಾರ್ಗದರ್ಶನ ನೀಡುತ್ತಾ, ಪರಿಸರವನ್ನು ರಕ್ಷಿಸುತ್ತಾ, ಮುಂದಿನ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು...

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು, ಕಾರು, ಐಟಿ, ಹೋಟೆಲ್, ವಿಮಾನಯಾನ, ಎಲೆಕ್ಟ್ರಿಕ್ ವಾಹನ, ಈಗ ಸೆಮಿಕಂಡಕ್ಟರ್‌ವರೆಗೆ ಟಾಟಾ ಸಾಮ್ರಾಜ್ಯ ವ್ಯಾಪಿಸಿದೆ. ಆದರೆ, ಈಗ ಇದೇ ಟಾಟಾ ಸಾಮ್ರಾಜ್ಯದ...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ...

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA) ಎಂದು ಕಂಡುಬಂದರೆ, ಉಳಿದ 80% ಪ್ರದೇಶ ನಗರೀಕರಣಗೊಂಡಿದ್ದರೂ ಇಡೀ ಗ್ರಾಮವನ್ನು ESA ಎಂದು ಪರಿಗಣಿಸುವ ನೀತಿಯನ್ನು ಕಸ್ತೂರಿ ರಂಗನ್ ವರದಿ...

ಎಲ್ಲ ಪಕ್ಷಗಳೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿವೆ. ಹಣ ಹಂಚಿ ಚುನಾವಣೆ ಮಾಡಿವೆ. ಈ ರೀತಿಯ ಚುನಾವಣೆಗೆ ಅವಕಾಶ ನೀಡಿದ ಆಯೋಗ ನಿಜಕ್ಕೂ ಹೊಣೆಗೇಡಿ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

ಜನರ ಒತ್ತಾಯದ ಮೇರೆಗೆ ನಾನು ಚಾಮರಾಜನಗರದಲ್ಲಿ ಕಣಕ್ಕಿಳಿದಿದ್ದೆ. ತತ್ವ ಸಿದ್ದಾಂತದ ಪರ ನಾನು ಎಂದಿಗೂ ಹೋರಾಟ ನಡೆಸಿದ್ದೆ. ಇದಕ್ಕೆ ಜನ ಮನ್ನಣೆ ಕೊಡಲಿಲ್ಲ. ಹೀಗಾಗಿ ನಾನು ಇನ್ನುಮಂದೆ ಈ ಜಿಲ್ಲೆಯಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಪಕ್ಷವೊಂದರ ಪರ ಪ್ರಚಾರ ಮಾಡಲು ಸರ್ಕಾರಿ ಆದಾಯ ವಿನಿಯೋಗ ಮಾಡಿದ್ದು, ಸಾರ್ವಜನಿಕ ಸೇವಾ ವಲಯದ ಇಲಾಖೆಗಳನ್ನ ತಮ್ಮ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಇವರ ಮೇಲೂ ಕ್ರಮ ಜರುಗಿಸುವಂತಾಗಬೇಕು ಎಂದು ಅವರು ಹೇಳಿದರು.

ಪಕ್ಷದ ಪರ ಪ್ರಚಾರ ಮಾಡಲು ಬರುವ ಇವರುಗಳು ರಾಜೀನಾಮೆ ನೀಡಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿತ್ತು ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ?:ರಾಜ್ಯದಲ್ಲಿ ಅತಂತ್ರ ಅಲ್ಲ, ಕಾಂಗ್ರೆಸ್‌ನ ಸ್ವತಂತ್ರ ಸರ್ಕಾರ: ಸಿದ್ದರಾಮಯ್ಯ–ಡಿಕೆಶಿ ವಿಶ್ವಾಸ

ಭ್ರಷ್ಟಾಚಾರಯುಕ್ತ ಚುನಾವಣೆಯನ್ನು ರದ್ದು ಮಾಡಬೇಕು. ಇದು ಭ್ರಷ್ಟಾಚಾರದ ಪರಮಾವಧಿ. ಈ ದೃಷ್ಟಿಯಿಂದ ಚುನಾವಣೆ ರದ್ದು ಮಾಡಿ ಪ್ರಾಮಾಣಿಕ ಪಾರದರ್ಶಕ ಚುನಾವಣೆ ನಡೆಸಲಿ ಎಂದು ಒತ್ತಾಯಿಸಿದರು.

ಹಿಂದೆ ಟಿ ಎನ್ ಶೇಷನ್ ಎನ್ನುವ ಚುನಾವಣಾಧಿಕಾರಿ ಇದ್ದರು. ಅವರ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಚುನಾವಣೆ ನಡೆದಿತ್ತು. ಅಂತಹ ಚುನಾವಣೆಗಳು ಈಗ ನಡೆಯುವಂತಾಗಬೇಕು. ಜನ ಮತ್ತು ಮಾಧ್ಯಮಗಳು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ವಾಟಾಳ್ ಕರೆನೀಡಿದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

12 ವರ್ಷಗಳ ಆಡಳಿತದ ಕೊಡುಗೆ: ಮೋದಿ ಜನ್ಮದಿನದಂದು ಸರ್ಕಾರಿ ಶಾಲೆ ಗಿಫ್ಟ್ ನೀಡಿದ ಸಿಜೆಪಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, 'ಕಾಕ್ರೋಚ್ ಜನತಾ...

ನಂದಿಗ್ರಾಮ ಉಪಚುನಾವಣೆ: ಮಮತಾ ಬೆಂಬಲ ಘೋಷಿಸಿದ ಗಂಟೆಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಬಂಧನ!

ಪಶ್ಚಿಮ ಬಂಗಾಳದ ಅತ್ಯಂತ ಹೈ-ಪ್ರೊಫೈಲ್ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ...

ಚಿಕ್ಕಮಗಳೂರು | ಸಿಎಂ ಭೇಟಿ ಹಿನ್ನೆಲೆ: ಸಂಚಾರ ಮಾರ್ಗ ಬದಲಾವಣೆ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಗೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾ‌ರ್...

ಅರಣ್ಯ ಸಂರಕ್ಷಣೆ ಹೆಸರಲ್ಲಿ ಜನರ ಬದುಕು ಬಲಿ ಕೊಡಬೇಡಿ: ಕಸ್ತೂರಿರಂಗನ್ ವರದಿ ವಿರುದ್ಧ ಕರವೇ ಆಕ್ರೋಶ

ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಅಗತ್ಯ. ಆದರೆ ಪರಿಸರ ಸಂರಕ್ಷಣೆಯ...