ಕೇರಳ | ಯುಡಿಎಫ್-ಎಲ್‌ಡಿಎಫ್ ಜಿದ್ದಾಜಿದ್ದಿನ ಸ್ಪರ್ಧೆ: ನಾಲ್ಕೈದು ಸ್ಥಾನ ಪಡೆಯಲೂ ಬಿಜೆಪಿ ಹರಸಾಹಸ

Date:

ಕೇರಳದ ಮತದಾರರು ಸಾಕ್ಷರತೆ ಮತ್ತು ರಾಜಕೀಯ ಪ್ರಜ್ಞೆಯಲ್ಲಿ ಮುಂದಿರುವವರು. ಧರ್ಮಕ್ಕಿಂತ ಹೆಚ್ಚಾಗಿ ಕಲ್ಯಾಣ ಯೋಜನೆಗಳು, ಕೇರಳದ ಅಸ್ಮಿತೆ ಮತ್ತು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವವರು. ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಇಲ್ಲಿ ಜನರು ಮಣೆ ಹಾಕುವುದು ಅತಿ ಕಷ್ಟ.

ನಾಳೆಯೇ ಕೇರಳ ವಿಧಾನಸಭೆ ಚುನಾವಣೆ ನಡೆಯಲಿದೆ. ಸಾಂಪ್ರದಾಯಿಕವಾಗಿಯೇ ಎದುರಾಳಿಗಳಾದ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಎಂದಿನಂತೆ ಜಿದ್ದಾಜಿದ್ದಿಯ ಸೆಣಸಾಟವಿದೆ. ಇನ್ನೊಂದೆಡೆ ಈ ಬಾರಿ ತಾನು ಮೂರನೇ ಪ್ರಬಲ ಶಕ್ತಿಯಾಗಿ ಕಾಣಿಸಿಕೊಳ್ಳಬೇಕು ಎಂದು ಬಿಜೆಪಿ ಭಗೀರಥ ಪ್ರಯತ್ನ ನಡೆಸುತ್ತಿದೆ. ಆದರೆ ನಾಲ್ಕೈದು ಸ್ಥಾನ ಪಡೆಯಲೂ ಬಿಜೆಪಿ ಹರಸಾಹಸ ಪಡುತ್ತಿದೆ.

- Advertisement -

ಕೆಲವು ಸ್ಥಾನಗಳನ್ನು ಪಡೆಯುವ ನಿರೀಕ್ಷೆಗೂ ಬಿಜೆಪಿ ಅಭ್ಯರ್ಥಿಗಳ ವಿವಾದಗಳು, ಅಪೂರ್ಣ ಅಫಿಡವಿಟ್ ತಣ್ಣೀರು ಎರಚಿದೆ. ಅಷ್ಟಕ್ಕೂ ಕೇರಳದ ರಾಜಕೀಯ ಭೂಪಟದಲ್ಲಿ ಕಮಲ ಅರಳುವುದು ಬಿಜೆಪಿ ಅಂದುಕೊಂಡಷ್ಟು ಸುಲಭವಿಲ್ಲ ಎಂಬುದು ಕಟು ಸತ್ಯ. ಅದಕ್ಕೆ ಹಲವು ಕಾರಣಗಳಿವೆ. ಕೇರಳ ಈ ಹಿಂದಿನಿಂದಲೂ ಸೌಹಾರ್ದ ನೆಲೆಬೀಡು. ಇಲ್ಲಿ ಕೋಮು ದ್ವೇಷದ ರಾಜಕೀಯ ನಡೆಸುವುದು ಇತರೆ ರಾಜ್ಯದಂತೆ ಸರಳವಲ್ಲ ಎಂಬುದು ವಾಸ್ತವ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಇದನ್ನು ಓದಿದ್ದೀರಾ? ವಿವಾದಗಳ ಗೊಚ್ಚೆಯಲ್ಲಿ ಸಿಲುಕಿರುವ ಕೇರಳ ಬಿಜೆಪಿ: ಮತ ಬ್ಯಾಂಕ್‌ಗಾಗಿ ತೊಳಲಾಟ

ಕೇರಳ ದಶಕಗಳಿಂದ ದ್ವಿಪಕ್ಷೀಯ ರಾಜಕಾರಣದ ಭದ್ರಕೋಟೆ

ಕೇರಳವು ದಶಕಗಳಿಂದ ದ್ವಿಪಕ್ಷೀಯ ರಾಜಕಾರಣದ ಭದ್ರಕೋಟೆಯಾಗಿದೆ. ಇಲ್ಲಿ ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ನೇರ ಹಣಾಹಣಿ ನಡೆಯುತ್ತಾ ಬಂದಿದೆ. ಕೇರಳದ ಜನರು ಅಧಿಕಾರದಲ್ಲಿದ್ದ ಮೈತ್ರಿಕೂಟಕ್ಕೆ ಮತ್ತೆ ಆಡಳಿತದ ಯಂತ್ರ ನೀಡಿರುವುದು ಅತಿ ವಿರಳ. ದಶಕಗಳಿಂದ ಮತದಾರರು ಈ ಎರಡು ರಂಗಗಳ ನಡುವೆ ಪರ್ಯಾಯವಾಗಿ ಅಧಿಕಾರ ಹಂಚಿಕೆ ಮಾಡುತ್ತಾ ಬಂದಿದ್ದಾರೆ. ಈ ಎರಡು ಭದ್ರಕೋಟೆಗಳನ್ನು ಭೇದಿಸಿ ಮೂರನೇ ಶಕ್ತಿಯಾಗಿ ಹೊರಹೊಮ್ಮುವುದು ಬಿಜೆಪಿಗೆ ಹಿಮಾಲಯ ಏರುವುದಕ್ಕಿಂತಲೂ ಕಷ್ಟದ ಕೆಲಸ.

ಇದರ ಜತೆಗೆ ಕೇರಳದಲ್ಲಿ ಬಿಜೆಪಿಗೆ ಸಾಮಾಜಿಕ ಮತ್ತು ಧಾರ್ಮಿಕ ಸಮೀಕರಣವೂ ಅಡ್ಡಿಯಾಗಿದೆ. ಕೇರಳದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 45% ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅಂದರೆ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯವಿದೆ. ಸಾಮಾನ್ಯವಾಗಿಯೇ ಅಲ್ಪಸಂಖ್ಯಾತರ ಮತಗಳು ಎಲ್‌ಡಿಎಫ್, ಯುಡಿಎಫ್ ನಡುವೆ ಹಂಚಿಹೋಗುತ್ತವೆ. ಬಿಜೆಪಿಯ ಹಿಂದುತ್ವ ಅಜೆಂಡಾವು ಕೇರಳದಲ್ಲಿ ಅಲ್ಪಸಂಖ್ಯಾತರನ್ನು ಮತಗಳನ್ನು ಸೆಳೆಯಲು ದೊಡ್ಡ ಸವಾಲಾಗಿದೆ. ಅಷ್ಟಿದ್ದರೂ ಕ್ರೈಸ್ತರ ಮತಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡಿದೆ. ಆದರೆ, ಆ ಎಲ್ಲ ಪ್ರಯತ್ನಕ್ಕೆ ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿಕೊಂಡ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ ತಣ್ಣೀರೆರಚಿದೆ.

ಬಿಜೆಪಿ ಹಿಂದುತ್ವ ಅಜೆಂಡಾ ಹೊಂದಿರುವ ಕಾರಣ ಹಿಂದೂಗಳ ಮತ ಬಿಜೆಪಿಗೆ ಲಭಿಸಬಹುದು ಎಂಬ ಲೆಕ್ಕಾಚಾರ ಕೇರಳದಲ್ಲಿ ಸಲ್ಲದು. ಕೇರಳದಲ್ಲಿ ಹಿಂದೂ ಮತಗಳೂ ಸಂಪೂರ್ಣವಾಗಿ ಬಿಜೆಪಿ ಬೆನ್ನಿಗಿಲ್ಲ. ಈ ಮತಗಳು ದಶಕಗಳಿಂದಲೂ ಪ್ರಮುಖವಾಗಿ ಸಿಪಿಐಎಂ ಮತ್ತು ಕಾಂಗ್ರೆಸ್ ನಡುವೆ ಹಂಚಿಹೋಗಿವೆ. ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳ ಮತಗಳು ಎಡರಂಗಕ್ಕೆ ಮೀಸಲು ಎಂಬಂತಾಗಿದೆ.

ಶೂನ್ಯದಿಂದ ಬಿಜೆಪಿ ಆರಂಭ ತಲುಪುವುದೆಲ್ಲಿ?

ಕೇರಳದಲ್ಲಿ ಬಿಜೆಪಿ ಶೂನ್ಯದಿಂದ ಆರಂಭವಾಗಿದೆ. ಇಂದಿಗೂ ಬಹುತೇಕ ಶೂನ್ಯದಲ್ಲಿಯೇ ಉಳಿದಿದೆ. 2016ರಲ್ಲಿ ಓ. ರಾಜಗೋಪಾಲ್ ಅವರ ಮೂಲಕ ಬಿಜೆಪಿ ನೇಮಂ ಕ್ಷೇತ್ರದಲ್ಲಿ ತನ್ನ ಮೊದಲ ಖಾತೆಯನ್ನು ತೆಗೆದಿದೆ. ಆದರೆ 2021ರ ಚುನಾವಣೆಯಲ್ಲಿ ಆ ಒಂದು ಸೀಟನ್ನು ಕೂಡಾ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಈಗ ಮತ್ತೆ ಶೂನ್ಯದಿಂದಲೇ ಬಿಜೆಪಿಯ ಸ್ಪರ್ಧೆ ಎಂದರೆ ತಪ್ಪಾಗಲಾರದು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಕೊಂಚ ಹುರುಪು ಕಂಡರೂ ವಿಧಾನಸಭೆ ಚುನಾವಣೆಯ ಲೆಕ್ಕಾಚಾರವೇ ಬೇರೆ.

ಆದರೆ, ಬಿಜೆಪಿಯ ಮತದಾನದ ಪ್ರಮಾಣ ಕೆಲವು ಕ್ಷೇತ್ರಗಳಲ್ಲಿ ಕೊಂಚ ಕೊಂಚವಾಗಿಯೇ ಏರಿಕೆ ಕಾಣುತ್ತಿದೆ ಎಂಬುದು ನಿಜ. ಬಿಜೆಪಿಯ ಮತದಾನದ ಪ್ರಮಾಣ ಸತತವಾಗಿ 12% ರಿಂದ 15% ರ ಆಸುಪಾಸಿನಲ್ಲಿದೆ. ಆದರೆ ಗೆಲುವು ಸಾಧಿಸಲು ಬೇಕಾದ ಕನಿಷ್ಠ 30-35% ಮತಗಳನ್ನು ಪಡೆಯುವುದು ಬಿಜೆಪಿಗೆ ಇಂದಿಗೂ ಸವಾಲೇ ಹೌದು.

ಇದನ್ನು ಓದಿದ್ದೀರಾ? ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ಕುತ್ತು ತಂದ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ

ಇವೆಲ್ಲವುದರ ನಡುವೆ ಬಿಜೆಪಿ ಕೆಲವು ಕ್ಷೇತ್ರಗಳ ಮೇಲೆ ಗುರಿಯಿಟ್ಟಿದೆ. ನಾಲ್ಕೈದು ಸೀಟುಗಳನ್ನಾದರೂ ಗೆದ್ದು ಕೇರಳದಲ್ಲಿ ಮತ್ತೆ ಬಿಜೆಪಿ ನಿಧಾನವಾಗಿ ಪುಟಿಯುತ್ತಿದೆ ಎಂದೆನಿಸಿಕೊಳ್ಳಬೇಕು ಎಂಬುದು ಬಿಜೆಪಿಯ ಹಪಾಹಪಿ. ಪಾಲಕ್ಕಾಡ್‌ನಲ್ಲಿ ಶೋಭಾ ಸುರೇಂದ್ರನ್ ಸ್ಪರ್ಧೆಗೆ ಇಳಿದಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 2024 ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್‌ನಲ್ಲಿ ಸುರೇಶ್ ಗೋಪಿ ಗೆಲುವು ಕಂಡಿದ್ದಾರೆ. ಇದರಿಂದಾಗಿ ಬಿಜೆಪಿಗೆ ತ್ರಿಶೂರ್‌ನಲ್ಲಿ ಆಶಾಭಾವನೆ ಮೂಡಿದೆ. ಇದನ್ನು ಬಿಟ್ಟರೆ ತಿರುವನಂತಪುರಂನ ನೇಮಂ, ವಟ್ಟಿಯೂರ್ಕಾವುನಲ್ಲಿ ಬಿಜೆಪಿಗೆ ಮೊದಲಿನಿಂದಲೂ ಪ್ರಬಲವಾದ ನೆಲೆಯಿದೆ. ಇನ್ನುಳಿದಂತೆ ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನ ಮಂಜೇಶ್ವರದಲ್ಲಿ ಪ್ರತಿ ಬಾರಿ ಬಿಜೆಪಿ ಅಲ್ಪ ಮತಗಳಿಂದ ಸೋಲುತ್ತಿದೆ. ಈ ಬಾರಿ ಈ ಕ್ಷೇತ್ರದಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆ ಬಿಜೆಪಿಯದ್ದು.

ಏನೇ ಆದರೂ ಸಂಘಟನಾತ್ಮಕ ಸಮಸ್ಯೆಗಳು ಕೇರಳ ಬಿಜೆಪಿಗೂ ಸವಾಲಾಗಿಯೇ ಉಳಿದಿದೆ. ಗುಂಪುಗಾರಿಕೆ, ಸ್ಥಳೀಯ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಚುನಾವಣಾ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುವ ಸೂಚನೆಗಳಿವೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರದ ಪ್ರಭಾವಿ ನಾಯಕರು ಎಷ್ಟೇ ಪ್ರಚಾರಕ್ಕಿಳಿದರೂ, ಸ್ಥಳೀಯ ಬೂತ್ ಮಟ್ಟದ ಸಂಘಟನೆ ಸಿಪಿಐಎಂ, ಕಾಂಗ್ರೆಸ್‌ಗೆ ಹೋಲಿಸಿದರೆ ಅತಿ ದುರ್ಬಲವಾಗಿದೆ.

ಒಂದೆಡೆ ಯುಡಿಎಫ್ ಭ್ರಷ್ಟಾಚಾರದ ಆರೋಪ ಮಾಡಿ ಎಲ್‌ಡಿಎಫ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಇನ್ನೊಂದೆಡೆ ಎಲ್‌ಡಿಎಫ್ ತನ್ನ ಅಭಿವೃದ್ಧಿ ಕಾರ್ಯಗಳನ್ನು ಪಠಿಸುತ್ತಾ ಪ್ರಚಾರ ನಡೆಸುತ್ತಿದೆ. ಈ ಎರಡು ಪ್ರಬಲ ಅಲೆಗಳ ನಡುವೆ ಬಿಜೆಪಿಗೆ ಯಾವ ಪ್ರಚಾರ ತಂತ್ರವೂ ಯಶಸ್ಸಾಗುತ್ತಿಲ್ಲ. ಬದಲಾವಣೆ ಎಂಬ ಪ್ರಚಾರದಿಂದ ನಾಲ್ಕೈದು ಸೀಟುಗಳನ್ನು ಪಡೆಯವುದೂ ಹರಸಾಹಸ.

ಅಷ್ಟಕ್ಕೂ ಕೇರಳದ ಮತದಾರರು ಸಾಕ್ಷರತೆ ಮತ್ತು ರಾಜಕೀಯ ಪ್ರಜ್ಞೆಯಲ್ಲಿ ಮುಂದಿರುವವರು. ಧರ್ಮಕ್ಕಿಂತ ಹೆಚ್ಚಾಗಿ ಕಲ್ಯಾಣ ಯೋಜನೆಗಳು, ಕೇರಳದ ಅಸ್ಮಿತೆ ಮತ್ತು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವವರು. ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೆ ಇಲ್ಲಿ ಜನರು ಮಣೆ ಹಾಕುವುದು ಅತಿ ಕಷ್ಟ. ಬಿಜೆಪಿಯ ರಾಷ್ಟ್ರೀಯ ಅಜೆಂಡಾಗಳು ಕೇರಳದ ಸ್ಥಳೀಯ ಸಮಸ್ಯೆಗಳ ಮುಂದೆ ಯಾವ ಪ್ರಭಾವವೂ ಹೊಂದಿಲ್ಲ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ

ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ...

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...